ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಲಾಗುತ್ತಿದೆ. ಸದ್ಯ ಆದೀಶ್ವರ್ ಕಾಮತ್, ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದಾನೆ. ಅದರಂತೆ ಭಾಗ್ಯ ಮನೆಯ ಮೇಲಿನ ರೂಮ್ನಲ್ಲಿ ಸಾಮಾನ್ಯ ಜೀವನ ನಡೆಸುತ್ತಿದ್ದಾನೆ. ಕಷ್ಟವಾದರೂ ಇಷ್ಟಪಟ್ಟು ಏಳು ದಿನಗಳ ಚಾಲೆಂಜ್ ಪೂರೈಸಲೇ ಬೇಕು ಎಂದು ಪಣತೊಟ್ಟಿದ್ದಾನೆ. ಆಫೀಸ್ಗೆ ಹೋಗಲು ಕಷ್ಟವಾಗುತ್ತಿರುವ ಕಾರಣ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾನೆ. ಮೀಟಿಂಗ್ ಕೂಡ ಮನೆಯಿಂದಲೇ ಅಟೆಂಡ್ ಆಗಿದ್ದಾನೆ. ಆದರೆ, ಆದೀ ಎಲ್ಲಿದ್ದಾನೆ ಎಂದು ಕಂಡು ಹಿಡಿಯಲು ಕನ್ನಿಕಾ ಆದೀಯ ಆಫೀಸ್ ಬಾಯ್ ಒಬ್ಬನನ್ನು ಛೂ ಬಿಟ್ಟಿದ್ದಾಳೆ.
ಹೌದು, ನನಗೆ ಆದೀ ಬ್ರೋ ಮೇಲೆ ಅನುಮಾನ ಬರುತ್ತಿದೆ.. ಅದಕ್ಕಾಗಿಯೇ ಒಂದು ಪ್ಲ್ಯಾನ್ ಮಾಡಿದ್ದೇನೆ.. ಆದೀ ಆಫೀಸ್ನಲ್ಲಿ ನಮ್ಮ ಹುಡುಗ ಒಬ್ಬ ಇದ್ದಾನೆ.. ಅವನ ಹತ್ರ ಹೇಳಿ ಆದೀ ಎಲ್ಲಿದ್ದಾನೆ?, ಏನು ಮಾಡ್ತಾ ಇದ್ದಾನೆ?, ಎಲ್ಲಿಂದ ಬರ್ತಿದ್ದಾನೆ ಆಫೀಸ್ಗೆ ಎಲ್ಲ ಮಾಹಿತಿ ಕಲೆ ಹಾಕಲು ಹೇಳಿದ್ದೇನೆ.. ಅವನು ಸ್ವಲ್ಪ ಹೊತ್ತಲ್ಲಿ ಎಲ್ಲ ವಿಷಯ ತಿಳಿಸುತ್ತಾನೆ ಎಂದು ಕನ್ನಿಕಾ ಮೀನಾಕ್ಷಿ ಬಳಿ ಹೇಳಿದ್ದಾಳೆ.
ಅತ್ತ ಹಿಂದಿನ ಮೀಟಿಂಗ್ನಲ್ಲಿ ತಾಂಡವ್ ತಬ್ಬಿಬ್ಬಾಗಿ ಸರಿಯಾಗಿ ಪ್ರೆಸೆಂಟೇಷನ್ ಮಾಡದ ಕಾರಣ ಕ್ಲೈಂಟ್ಗಳು ಅಸಮಾಧಾನ ಗೊಂಡಿದ್ದರು. ಹೀಗಾಗಿ ಇನ್ನೊಮ್ಮೆ ಮೀಟಿಂಗ್ ಫಿಕ್ಸ್ ಮಾಡಿ ನಾನು ಬರುತ್ತೇನೆ ಎಂದು ಆದೀ ಹೇಳಿದ್ದ. ಅದರಂತೆ ಮೂರನೇ ದಿನ ಆದೀ ಆಫೀಸ್ಗೆ ಹೋಗಬೇಕಿದೆ. ಆದರೆ, ಆದೀ ತಾನು ಎಂದಿದ್ದ ಎರಡು ಜೊತೆ ಪ್ಯಾಂಟ್ ಅನ್ನೂ ಒಗೆಯಲು ಹಾಕಿರುತ್ತಾನೆ. ಹೀಗಾಗಿ ತಾಂಡವ್ಗೆ ಕಾಲ್ ಮಾಡಿ, ನಾನು ಆಫೀಸ್ ಬರೋಕೆ ಆಗುತ್ತಿಲ್ಲ.. ಮನೆಯಿಂದನೇ ಆನ್ಲೈನ್ನಲ್ಲಿ ಮೀಟಿಂಗ್ ಅಟೆಂಡ್ ಆಗುತ್ತೇನೆ ಎಂದು ಹೇಳಿದ್ದಾನೆ.
ಅದರಂತೆ ಶರ್ಟ್ ಮೇಲೆ ಕೋಟ್ ಹಾಕಿಕೊಂಡು ಹಾಗೂ ಪ್ಯಾಂಟ್ ಇಲ್ಲದ ಕಾರಣ ಲುಂಗಿ ಸುತ್ತಿಕೊಂಡೇ ಮೀಟಿಂಗ್ ಅಟೆಂಡ್ ಆಗಿದ್ದಾನೆ. ಹೀಗೆ ಮೀಟಿಂಗ್ ನಡೆಯುತ್ತಿರುವಾಗ ಆದೀ ರೂಮ್ ಬಳಿ ಕುಸುಮಾ ಬಂದಿದ್ದಾಳೆ. ಹಾಯ್ ಫ್ರೆಂಡ್ ಎಂದು ಜೋರಾಗಿ ಹೇಳಿದ್ದಾಳೆ.. ಆದೀಯ ಅವತಾರ ಕಂಡು ಜೋರಾಗಿ ನಕ್ಕಿದ್ದಾಳೆ. ಇದು ಮೀಟಿಂಗ್ನಲ್ಲಿರುವವರಿಗೆ ಕೇಳಿಸಿದೆ. ಹಾಗೆಯೆ ಈ ಮೀಟಿಂಗ್ ಹಾಲ್ನಲ್ಲಿ ಕನ್ನಿಕಾಳ ಸ್ಪೈ ಕೂಡ ಇದ್ದಾನೆ. ಬಳಿಕ ತಾಂಡವ್ ಹೇಗೋ ಮ್ಯಾನೇಜ್ ಮಾಡಿ ಮೀಟಿಂಗ್ ಅಲ್ಲಿಗೆ ಮುಗಿಸಿದ್ದಾನೆ.
ಮೀಟಿಂಗ್ ಮುಗಿದ ತಕ್ಷಣ ಸ್ಪೈ ಕನ್ನಿಕಾಗೆ ಕಾಲ್ ಮಾಡಿ, ಆದೀಶ್ವರ್ ಆಫೀಸ್ಗೆ ಬಂದಿಲ್ಲ.. ಆನ್ಲೈನ್ನಲ್ಲಿ ಮೀಟಿಂಗ್ ಅಟೆಂಡ್ ಆಗಿದ್ದರು.. ಆದರೆ, ಅವರ ಬ್ಯಾಕ್ಗ್ರೌಂಡ್ ನೋಡಿದ್ರೆ ಅದು ಯಾವುದೊ ಒಂದು ಮನೆ ಥರಾ ಇದೇ ಎಂದು ಹೇಳಿದ್ದಾನೆ. ಆಗ ಕನ್ನಿಕಾ ಸರಿ.. ನೀನು ತಾಂಡವ್ನ ಫಾಲೋ ಮಾಡು.. ಅವನಿಗೆ ಆದೀ ಎಲ್ಲಿದ್ದಾನೆ ಅಂತ ಖಂಡಿತಾ ಗೊತ್ತಿರುತ್ತೆ ಎಂದು ಹೇಳಿದ್ದಾಳೆ. ಇದೇವೇಳೆ ತಾಂಡವ್ ಆಫೀಸ್ನಿಂದ ಹೊರಟಿದ್ದಾನೆ. ಆ ಸ್ಪೈ ತಾಂಡವ್ನ ಫಾಲೋ ಮಾಡಲು ಶುರುಮಾಡಿದ್ದಾನೆ.
ತಾಂಡವ್ ಆಫೀಸ್ನ ಕೆಳಗೆ ಹೋದ ತಕ್ಷಣ ಆದೀಯ ಕಾಲ್ ಬರುತ್ತದೆ. ನಾವು ಮೀಟ್ ಆಗದೆ ತುಂಬಾ ದಿನ ಆಯ್ತು ಅಲ್ವಾ.. ಬನ್ನಿ ಒಂದು ಸಲ ಭೇಟಿ ಆಗೋಣ ಎಂದು ಆದೀ ತಾಂಡವ್ಗೆ ಹೇಳಿದ್ದಾನೆ. ಅದಕ್ಕೆ ತಾಂಡವ್ ಹೌದು.. ಎಲ್ಲಿ ಬರಬೇಕು ಎಂದು ಕೇಳಿದ್ದಾನೆ. ನೀವು ಭಾಗ್ಯ ಮನೆಗೆ ಬನ್ನಿ.. ನಾನು ಅವರ ಬಿಲ್ಡಿಂಗ್ನ ಮೇಲಿನ ರೂಮ್ನಲ್ಲೇ ಇರೋದು ಎಂದು ಹೇಳಿದ್ದಾನೆ. ಇದನ್ನ ಕೇಳಿ ತಾಂಡವ್ಗೆ ಶಾಕ್ ಆಗಿದೆ. ಸರಿ ಎಂದು ಭಾಗ್ಯ ಮನೆ ಕಡೆ ಹೊರಡುತ್ತಾನೆ.
ತಾಂಡವ್ ಹೊರಟ ಕೂಡಲೇ ಅತ್ತ ಕನ್ನಿಕಾಳ ಸ್ಪೈ ಕೂಡ ಸ್ಕೂಟಿಯಲ್ಲಿ ಫಾಲೋ ಮಾಡಿಕೊಂಡು ಹೊರಟಿದ್ದಾನೆ. ಇನ್ನೇನು ಭಾಗ್ಯ ಮನೆ ಬಳಿ ತಲುಪಿತು ಎಂಬೊತ್ತಿಗೆ ಆದೀ ಕಾಲ್ ಮಾಡಿ ನಾನು ಇಲ್ಲೇ ರಸ್ತೆ ಪಕ್ಕ ಇದ್ದೇನೆ ಬಂದೆ ಅಲ್ಲಿಗೆ ಇರಿ ಎಂದಿದ್ದಾನೆ. ತಾಂಡವ್ ಕಾರು ಆದೀ ಪಕ್ಕದಲ್ಲಿ ಪಾಸ್ ಆಗುವಾಗ ಆದೀಗೆ ಅವನನ್ನು ಯಾರೋ ಫಾಲೋ ಮಾಡುತ್ತಿರುವುದು ಗೊತ್ತಾಗಿದೆ.
ತಕ್ಷಣ ತಾಂಡವ್ಗೆ ಕಾಲ್ ಮಾಡಿ, ನಿಮ್ಮನ್ನ ಯಾರೋ ಫಾಲೋ ಮಾಡುತ್ತಿರುವ ಹಾಗಿದೆ ಎಂದು ಆದೀ ಹೇಳಿದ್ದಾನೆ. ಹೌದಾ ಎಂದು ಕಾರಿನಲ್ಲಿ ಇನ್ನೂ ಸ್ವಲ್ಪ ಮುಂದೆ ಹೋಗಿ ನಿಲ್ಲಿಸುತ್ತಾನೆ.. ಆಗ ಆ ಸ್ಪೈ ಕೂಡ ಸ್ಪಲ್ಪ ಮುಂದೆ ಹೋಗಿ ಗಾಡಿ ನಿಲ್ಲಿಸಿದ್ದಾನೆ. ಆಗ ತಾಂಡವ್ ಇದು ಶ್ರೇಷ್ಠಾಳ ಕೆಲಸ.. ನಾನು ಭಾಗ್ಯ ಮನೆಗೆ ಹೋಗುತ್ತೇನ ಅಂತ ತಿಳಿಯಲು ಅವಳು ಯಾರನ್ನೂ ಛೂ ಬಿಟ್ಟಿದ್ದಾಳೆ ಎಂದು ಅಂದುಕೊಳ್ಳುತ್ತಾನೆ. ಸದ್ಯ ಇಲ್ಲಿದೆ ಸಂಚಿಕೆ ಮುಕ್ತಾಯಗೊಂಡಿದೆ. ಯಾರೋ ಫಾಲೋ ಮಾಡುತ್ತಿರುವ ವಿಚಾರ ಆದೀ-ತಾಂಡವ್ಗೆ ಗೊತ್ತಾಗಿದೆ. ಆದರೆ, ಇದು ಕನ್ನಿಕಾಳ ಕೆಲಸವೇ ಎಂಬುದು ಗೊತ್ತಾಗುತ್ತ ನೋಡಬೇಕಿದೆ.
Rajath Kishan: ಕ್ಯಾನ್ಸರ್ ವಿಷಯ ತಿಳಿದು ಹರೀಶ್ ರಾಯ್ ಮನೆಗೆ ರಜತ್ ಕಿಶನ್ ದಿಢೀರ್ ಭೇಟಿ