ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajath Kishan: ಕ್ಯಾನ್ಸರ್ ವಿಷಯ ತಿಳಿದು ಹರೀಶ್ ರಾಯ್ ಮನೆಗೆ ರಜತ್ ಕಿಶನ್ ದಿಢೀರ್ ಭೇಟಿ

ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಹೊಟ್ಟೆ ಹಾಗೂ ಕಾಲಿನ ಭಾಗಕ್ಕೆ ನೀರು ತುಂಬಿದೆ. ಸ್ಥಿತಿ ನೋಡಿ ಅನೇಕರು ಕಣ್ಣೀರು ಹಾಕಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನು ಕಂಡ ತಕ್ಷಣ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ನೇರವಾಗಿ ಹರೀಶ್ ರಾಯ್ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

ಹರೀಶ್ ರಾಯ್ ಮನೆಗೆ ರಜತ್ ಕಿಶನ್ ದಿಢೀರ್ ಭೇಟಿ

Harish Roy and Rajath Kishan

Profile Vinay Bhat Aug 29, 2025 7:10 AM

ಸ್ಯಾಂಡಲ್​ವುಡ್​ನ ಖ್ಯಾತ ಹಿರಿಯ ನಟ ಹರೀಶ್ ರಾಯ್ (Hareesh Roy) ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ತುಂಬಾನೇ ಹದಗೆಟ್ಟಿದೆ. ಈ ಮೊದಲು ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರಗಳ ಮೂಲಕ ಹರೀಶ್ ಗಮನ ಸೆಳೆದಿದ್ದರು. ಕೆಜಿಎಫ್ ಚಿತ್ರದಲ್ಲಿ ಚಾಚಾ ಹೆಸರಿನ ಪಾತ್ರದಲ್ಲಿ ಅವರು ಕಾಣಿಸಿಕೊಂಡು ಈ ಹೆಸರಿನಿಂದ ಮತ್ತಷ್ಟು ಫೇಮಸ್ ಆದರು. ಆದರೀಗ ಇವರು ಥೈರಾಯ್ಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಹೊಟ್ಟೆ ಹಾಗೂ ಕಾಲಿನ ಭಾಗಕ್ಕೆ ನೀರು ತುಂಬಿದೆ.

ಹರೀಶ್ ರಾಯ್ ಸ್ಥಿತಿ ನೋಡಿ ಅನೇಕರು ಕಣ್ಣೀರು ಹಾಕಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಯಶ್ ಬಳಿಯೂ ಸಹಾಯಕ್ಕಾಗಿ ಒತ್ತಾಯಿಸಿದ್ದಾರೆ. ಗೋಪಿ ಗೌಡ ಹೆಸರಿನ ವ್ಯಕ್ತಿ ಈ ಬಗ್ಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಕ್ಯಾನ್ಸರ್​ ಹೊಟ್ಟೆಗೆ ಸ್ಪ್ರೆಡ್ ಆಗಿ, ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ. ಅವರಿಗೆ ಸಹಾಯ ಮಾಡಿ’ ಎಂದು ಗೋಪಿ ಅವರು ಹೇಳಿದ್ದಾರೆ. ಈ ವೇಳೆ ಹರೀಶ್ ರಾಯ್ ಅವರು ಭಾವುಕರಾಗಿದ್ದರು. ನನ್ನನ್ನು ಉಳಿಸಿಕೊಡಿ ಎಂದು ಸಹಾಯ ಬೇಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡ ತಕ್ಷಣ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ನೇರವಾಗಿ ಹರೀಶ್ ರಾಯ್ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ತಮ್ಮ ಸ್ನೇಹಿತರ ಮನೆಗೆ ತೆರಳಿದ ರಜತ್ ಹರೀಶ್ ಅವರ ಮುಂದೆ ನಿಂತುಕೊಂಡೆ ಮಾತನಾಡಿದ್ದಾರೆ.

ಹರೀಶ್ ರಾಯ್ ಅವರು ಅನಾರೋಗ್ಯ ಕಾರಣದಿಂದ ನಟನೆಯಿಂದ ತುಸು ಕಾಲದಿಂದ ದೂರವೇ ಉಳಿದಿದ್ದು, ಹೀಗಾಗಿ ಅವರಿಗೆ ಆಸ್ಪತ್ರೆ ಖರ್ಚು ನೋಡಿಕೊಳ್ಳುವಷ್ಟು ಹಣ ಇಲ್ಲದಂತೆ ಆಗಿದೆ. ‘ನನನ್ನು ಉಳಿಸಿ’ ಎಂದು ಅವರು ಫಿಲ್ಮ್ ಚೇಂಬರ್, ನಿರ್ಮಾಪಕರು, ನಿರ್ದೇಶಕರು, ಸಹ ಕಲಾವಿದರಿಗೆ ವಿಡಿಯೋ ಮೂಲಕ ಸಹಾಯ ಕೇಳಿದ್ದಾರೆ.

‘‘ಆರೋಗ್ಯ ಸಮಸ್ಯೆ ತುಂಬಾ ಕಾಣುತ್ತಿದೆ. ಉಸಿರಾಟದ ತೊಂದರೆ ಶುರುವಾಗಿದೆ. ಟ್ರೀಟ್‌ಮೆಂಟ್‌ ಅನ್ನು ಶುರು ಮಾಡಬೇಕು. 3 ವರ್ಷದ ಹಿಂದೆ ಕೆಜಿಎಫ್‌ ಕ್ಲೈಮ್ಯಾಕ್ಸ್‌ ಟೈಮ್‌ನಲ್ಲಿ ನನಗೆ ಉಸಿರು ಕಟ್ಟುವುದು ಎಲ್ಲವೂ ಶುರುವಾಗಿತ್ತು. ಸಿನಿಮಾ ರಿಲೀಸ್‌ ಆಗಿ ಒಂದು ತಿಂಗಳಿಗೆ ಕಂಪ್ಲೀಟ್‌ ಆಗಿ ಉಸಿರಾಟದ ತೊಂದರೆ ಶುರುವಾಯಿತು. ಕುತ್ತಿಗೆಯಲ್ಲಿ ದೊಡ್ಡ ಗಡ್ಡೆ ಇತ್ತು. ಅದು ಹರಡಿ ಲಂಗ್ಸ್‌ಗೆ ಹೋಗಿದೆ. ಲಂಗ್ಸ್‌ನಲ್ಲಿ ನೀರು ತುಂಬಿಕೊಂಡು, ತುಂಬಾ ತೊಂದರೆ ಆಯ್ತು. ನಂತರ ನಾನು ಡೇಂಜರ್‌ನಲ್ಲಿದ್ದೇನೆ ಅನ್ನೋದು ಗೊತ್ತಾಯ್ತು. ತಕ್ಷಣ ಆಪರೇಷನ್‌ ಮಾಡಿದ್ದರು. ಆದರೆ ಲಂಗ್ಸ್‌ನಲ್ಲಿ ಸ್ಪ್ರೆಡ್‌ ಆಗಿರುವುದು ಹಾಗೆ ಇದೆ’’ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹರೀಶ್‌ ರಾಯ್‌ ಹೇಳಿಕೊಂಡಿದ್ದಾರೆ.

Drishti Bottu: ದೃಷ್ಟಿಬೊಟ್ಟು ಮಹಾ ಟ್ವಿಸ್ಟ್: ದತ್ತನ ಎದುರು ಬಯಲಾಯಿತು ದೃಷ್ಟಿಯ ನೈಜ ಬಣ್ಣ