Amrutha Gowda: 2nd ಪಿಯುನಲ್ಲಿ ಡಿಸ್ಟಿಂಕ್ಷನ್ ಪಡೆದ ಭಾಗ್ಯ ಮಗಳು ತನ್ವಿ: ಇಲ್ಲಿದೆ ನೋಡಿ ಮಾರ್ಕ್ ಲಿಸ್ಟ್
ಭಾಗ್ಯ ಮತ್ತು ತಾಂಡವ್ ಮುದ್ದಿನ ಮಗಳಾಗಿರುವ ತನ್ವಿ ಧಾರಾವಾಹಿಯಲ್ಲಿ ಓದುವುದರಲ್ಲಿ ಕೊಂಚ ಹಿಂದೆ. ಆದರೆ ನಿಜ ಜೀವನದಲ್ಲಿ ತಾನು ಬುದ್ಧಿವಂತೆ ಅಂತ ಪ್ರೂವ್ ಮಾಡಿದ್ದಾರೆ. ನಿಜ ಜೀವನದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 543 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ.


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯ ಲಕ್ಷ್ಮೀ ಧಾರಾವಾಹಿಗೆ (bhagyalakshmi kannada serial) ಭಾರೀ ಸಂಖ್ಯೆ ವೀಕ್ಷಕರಿದ್ದಾರೆ. ಕಲರ್ಸ್ನ ಧಾರಾವಾಹಿ ಲಿಸ್ಟ್ನಲ್ಲಿ ಭಾಗ್ಯ ಲಕ್ಷ್ಮೀ ನಂಬರ್ ಒನ್ ಸ್ಥಾನದಲ್ಲಿದೆ. ಈ ಧಾರಾವಾಹಿಯಲ್ಲಿ ಭಾಗ್ಯಾಳ ಮಗಳ ಪಾತ್ರ ಮಾಡುತ್ತಿರುವ ತನ್ವಿ ಈ ಸುದ್ದಿಯಲ್ಲಿದ್ದಾರೆ. ಸೀರಿಯಲ್ನಲ್ಲಿ ತನ್ವಿಯಾಗಿ ಮಿಂಚುತ್ತಿರುವ ಇವರ ನಿಜವಾದ ಹೆಸರು ಅಮೃತ ಗೌಡ. ಇವರೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆ.
ಭಾಗ್ಯ ಮತ್ತು ತಾಂಡವ್ ಮುದ್ದಿನ ಮಗಳಾಗಿರುವ ತನ್ವಿ ಧಾರಾವಾಹಿಯಲ್ಲಿ ಓದುವುದರಲ್ಲಿ ಕೊಂಚ ಹಿಂದೆ. ಆದರೆ ನಿಜ ಜೀವನದಲ್ಲಿ ತಾನು ಬುದ್ಧಿವಂತೆ ಅಂತ ಪ್ರೂವ್ ಮಾಡಿದ್ದಾರೆ. ಭಾಗ್ಯಲಕ್ಷ್ಮೀ ಸೀರಿಯಲ್ನಲ್ಲಿ ಈಗಷ್ಟೇ ಹತ್ತನೇ ತರಗತಿ ಓದಿ ಮುಗಿಸಿರುವ ತನ್ವಿ ನಿಜ ಜೀವನದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 543 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ. ನಿನ್ನೆ ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟವಾಗಿತ್ತು.
ನಟಿ ಅಮೃತಾ ಗೌಡ ಅವರು ಕಾಮರ್ಸ್ ವಿಷಯದಲ್ಲಿ ಪಿಯುಸಿ ಮಾಡುತ್ತಿದ್ದರು. ಅವರಿಗೆ 600ಕ್ಕೆ 543 ಮಾರ್ಸ್ ಸಿಕ್ಕಿದ್ದು, ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಮತ್ತೊಂದು ಇಂಟರೆಸ್ಟಿಂಗ್ ವಿಷಯವೆಂದರೆ, ಅಮೃತಾ ಗೌಡ ಅವರ ನಿಜವಾದ ಹೆಸರು ಅಮೃತಾ ವರ್ಷಿಣಿ ಕೆ ಎಂದು. ಕನ್ನಡದಲ್ಲಿ 100ಕ್ಕೆ 97 ಅಂಕ ಪಡೆದಿರುವ ಅಮೃತಾ ಗೌಡ, ಇಂಗ್ಲಿಷ್‌ನಲ್ಲಿ 81, ಎಕನಾಮಿಕ್ಸ್‌ನಲ್ಲಿ 93, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 83, ಅಕೌಂಟೆನ್ಸಿಯಲ್ಲಿ 94, ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕಗಳನ್ನು ಅಮೃತಾ ಗೌಡ ಪಡೆದುಕೊಂಡಿದ್ದಾರೆ.
ಆ ಮೂಲಕ ಒಟ್ಟು 543 ಅಂಕಗಳನ್ನು ಪಡೆದು 91ಶೇಕಡ ಪಡೆದು ಡಿಸ್ಟಿಂಕ್ಷನ್ ನಲ್ಲಿ ದ್ವಿತೀಯ ಪಿಯುಸಿ ಪಾಸ್ ಆಗಿದ್ದಾರೆ. ಶೂಟಿಂಗ್ ಬ್ಯುಸಿ ಶೆಡ್ಯೂಲ್ ಮಧ್ಯೆ, ಚೆನ್ನಾಗಿ ಓದಿ, ಡಿಸ್ಟಿಂಕ್ಷನ್ ಪಡೆದಿರುವ ತನ್ವಿ ಆಲಿಯಾಸ್ ಅಮೃತಾ ಗೌಡರನ್ನು ವೀಕ್ಷಕರು ಮೆಚ್ಚಿಕೊಂಡಿದ್ದು ಶುಭಾಶಯ ತಿಳಿಸಿದ್ದಾರೆ.
ಧಾರಾವಾಹಿ ವಿಚಾರಕ್ಕೆ ಬಂದರೆ, ಇತ್ತೀಚೆಗಷ್ಟೇ ತನ್ವಿ ಅಮ್ಮ, ಅಪ್ಪ ಹೇಳಿದ ಮಾತನ್ನು ತಿರಸ್ಕರಿಸಿ, ಫ್ರೆಂಡ್ಸ್ ಜೊತೆ ರೆಸಾರ್ಟ್ ಗೆ ತೆರಳಿ, ಅಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಳು. ಬಳಿಕ ಭಾಗ್ಯಾಗೆ ಕರೆ ಮಾಡಿ, ಭಾಗ್ಯ ಅಲ್ಲಿಗೆ ಬಂದು ಪೊಲೀಸರ ಬಳಿ ಮಾತನಾಡಿ ಕರೆದುಕೊಂಡು ಬಂದಿದ್ದಳು. ಹಿಂದೊಮ್ಮೆ ಕಾಲೇಜಿನಿಂದ ಸಸ್ಪೆಂಡ್ ಆದಾಗಲೂ ತನ್ವಿ ಸಹಾಯಕ್ಕೆ ತಾಯಿ ಭಾಗ್ಯ ಬಂದಿದ್ದಳು. ಧಾರಾವಾಹಿಯಲ್ಲಿ ಸಾಕಷ್ಟು ತಿರುವುಗಳಿಗೂ ತನ್ವಿ ಪಾತ್ರ ಕಾರಣವಾಗಿದ್ದು, ವೀಕ್ಷಕರನ್ನು ಈ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.
Bhagya Lakshmi Serial: ಶ್ರೇಷ್ಠಾ ಕೆನ್ನೆಗೆ ಮನಬಂದಂತೆ ಬಾರಿಸಿದ ಭಾಗ್ಯ: ವೀಕ್ಷಕರು ಫುಲ್ ಶಾಕ್