IND vs ZIM: ಜಿಂಬಾಬ್ವೆ ಎದುರು 256 ರನ್ ಸಿಡಿಸಿ ವಿಶ್ವದಾಖಲೆ ಬರೆದ ಭಾರತ ತಂಡ!
ಜಿಂಬಾಬ್ವೆ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 4ವಿಕೆಟ್‌ಗಳ ನಷ್ಟಕ್ಕೆ 256 ರನ್ ಕಲೆ ಹಾಕಿತು. ಆ ಮೂಲಕ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ ವಿಶ್ವ ದಾಖಲೆಯನ್ನು ಬರೆದಿದೆ.
256 ರನ್ ಗಳಿಸಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ. -
ಚೆನ್ನೈ: ಜಿಂಬಾಬ್ವೆ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ (IND vs ZIM) ಭಾರತ ತಂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತು. ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಟೀಮ್ ಇಂಡಿಯಾ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 256 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ (India) ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ದಾಖಲೆಯನ್ನು ಬರೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದ ಬಳಿಕ ಭಾರತ ತಂಡಕ್ಕೆ ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಉತ್ತಮ ರನ್‌ರೇಟ್‌ನಿಂದ ಗೆಲ್ಲಲೇಬೇಕಾದ ಸನ್ನಿವೇಶ ಉಂಟಾಗಿದೆ.
ಗುರುವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದಾ ಭಾರತ ತಂಡದ ಪರ ಓಪನರ್ ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ 24 ರನ್ ಸಿಡಿಸಿ, ಅಭಿಷೇಕ್ ಶರ್ಮಾ ಮೇಲೆ ಇದ್ದ ಒತ್ತಡವನ್ನು ಕಡಿಮೆ ಮಾಡಿಸಿದರು. ಸಂಜು ವಿಕೆಟ್ ಒಪ್ಪಿಸಿದ ಬಳಿಕ ಅಭಿಷೇಕ್ ಶರ್ಮಾ ತಮ್ಮ ಫಾರ್ಮ್ ಅನ್ನು ಕಂಡುಕೊಂಡರು. ಅವರು ಆಡಿದ 30 ಎಸೆತಗಳಲ್ಲಿ 55 ರನ್‌ಗಳನ್ನು ಬಾರಿಸಿದರು. ಸತತ ಮೂರು ಬಾರಿ ಡಕ್‌ಔಟ್ ಆದ ಬಳಿಕ ಅಭಿಷೇಕ್ ಅವರ ಮೊದಲ ಅರ್ಧಶತಕ ಇದಾಗಿದೆ. ಸೂರ್ಯಕುಮಾರ್ ಯಾದವ್ ಅವರು 13 ಎಸೆತಗಳಲ್ಲಿ 33 ರನ್‌ಗಳ ಸ್ಪೋಟಕ ಇನಿಂಗ್ಸ್ ಆಡಿದರು.
SA vs WI: ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಭಾರತದ ಹಾದಿ ಸುಗಮಗೊಳಿಸಿದ ದಕ್ಷಿಣ ಆಫ್ರಿಕಾ!
ನಂತರ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಐದನೇ ವಿಕೆಟ್‌ಗೆ ಕೇವಲ 31 ಎಸೆತಗಳಲ್ಲಿ 84 ರನ್‌ಗಳ ಸ್ಪೋಟಕ ಜೊತೆಯಾಟವನ್ನು ಆಡಿದರು. ತಿಲಕ್ ವರ್ಮಾ ಕೇವಲ 16 ಎಸೆತಗಳಲ್ಲಿ 44 ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ ಅಜೇಯ 50 ರನ್ ಸಿಡಿಸಿದರು.
Innings Break!
— BCCI (@BCCI) February 26, 2026
A collective batting effort takes #TeamIndia to their highest-ever total in #T20WorldCup history 💪
Over to the bowling unit now!
Scorecard ▶️ https://t.co/p4GxtxFMLH#MenInBlue | #INDvZIM pic.twitter.com/cFua2U93ke
ವಿಶ್ವ ದಾಖಲೆ ಬರೆದ ಭಾರತ ತಂಡ
ಭಾರತ ತಂಡ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 256 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಐಸಿಸಿ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ರಾಷ್ಟ್ರೀಯ ತಂಡವೊಂದರ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ಬರೆದಿದೆ. ಆದರೆ, ಶ್ರೀಲಂಕಾ ತಂಡ 2007ರಲ್ಲಿ ಕೀನ್ಯಾ ವಿರುದ್ಧ 260 ರನ್ ಗಳಿಸಿತ್ತು. ಆದರೆ, ಕೀನ್ಯಾ ತಂಡ ಅಸೋಸಿಯೇಟ್ ರಾಷ್ಟ್ರೀಯ ತಂಡವಾಗಿದೆ.
T20 world Cup 2026: ಶ್ರೀಲಂಕಾ ತಂಡದ ವೈಫಲ್ಯದ ಬಗ್ಗೆ ಕುಮಾರ ಸಂಗಕ್ಕಾರ ದೊಡ್ಡ ಹೇಳಿಕೆ!
ಆಸಕ್ತಿದಾಯಕವಾಗಿ ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ತಂಡ ಎರಡು ಅತ್ಯಧಿಕ ಮೊತ್ತಗಳನ್ನು ಬಿಟ್ಟುಕೊಟ್ಟಿದೆ. ತಮ್ಮ ಮೊದಲ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಿಂಬಾಬ್ವೆ 254/6 ರನ್‌ಗಳ ಭಾರೀ ಮೊತ್ತವನ್ನು ನೀಡಿತ್ತು. ಹಾರ್ದಿಕ್ ಪಾಂಡ್ಯ ಅಂತಿಮ ಎರಡು ಚೆಂಡುಗಳಲ್ಲಿ ಸತತ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಭಾರತಕ್ಕೆ ಐತಿಹಾಸಿಕ ಸಾಧನೆ ಸಾಧ್ಯವಾಯಿತು. ಸ್ಟಾರ್ ಆಲ್‌ರೌಂಡರ್ ಬ್ರಾಡ್ ಎವಾನ್ಸ್ ಎಸೆದ 20ನೇ ಓವರ್‌ನ ಕೊನೆಯ ಎರಡು ಚೆಂಡುಗಳನ್ನು ಭರ್ಜರಿ ಸಿಕ್ಸರ್‌ಗಳಿಗೆ ಪರಿವರ್ತಿಸಿ ಇನಿಂಗ್ಸ್‌ಗೆ ಭರ್ಜರಿ ಅಂತ್ಯ ನೀಡಿದ್ದಾರೆ.