Amrutha Gowda: ಅಬ್ಬಾ.. ಡಿಸ್ಟಿಂಕ್ಷನ್ ಪಡೆದ ಭಾಗ್ಯಲಕ್ಷ್ಮೀ ಧಾರಾವಾಹಿ ತನ್ವಿಯ ಮುಂದಿನ ಕನಸೇನು ಗೊತ್ತೇ?
ಶೂಟಿಂಗ್ ಬ್ಯುಸಿ ಶೆಡ್ಯೂಲ್ ಮಧ್ಯೆ, ಚೆನ್ನಾಗಿ ಓದಿ, ಡಿಸ್ಟಿಂಕ್ಷನ್ ಪಡೆದಿರುವ ತನ್ವಿ ಆಲಿಯಾಸ್ ಅಮೃತಾ ಗೌಡರನ್ನು ವೀಕ್ಷಕರು ಮೆಚ್ಚಿಕೊಂಡಿದ್ದು ಶುಭಾಶಯ ತಿಳಿಸಿದ್ದಾರೆ. ಇದೀಗ ಅಮೃತಾ ಅವರು, ನನಗೆ ಬಿಸಿಎ ಮಾಡಿ ಎಂಸಿಎ ಮಾಡುವ ಆಸೆ ಇದೆ. ಜೊತೆಗೆ ಹೀರೋಯಿನ್ ಆಗುವ ಆಸೆ ತುಂಬಾ ಇದೆ ಎಂದಿದ್ದಾರೆ.

Amrutha Gowda Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯ ಲಕ್ಷ್ಮೀ ಧಾರಾವಾಹಿಗೆ (bhagyalakshmi kannada serial) ಭಾರೀ ಸಂಖ್ಯೆ ವೀಕ್ಷಕರಿದ್ದಾರೆ. ಕಲರ್ಸ್ನ ಧಾರಾವಾಹಿ ಲಿಸ್ಟ್ನಲ್ಲಿ ಭಾಗ್ಯ ಲಕ್ಷ್ಮೀ ನಂಬರ್ ಒನ್ ಸ್ಥಾನದಲ್ಲಿದೆ. ಈ ಧಾರಾವಾಹಿಯಲ್ಲಿ ಭಾಗ್ಯಾಳ ಮಗಳ ಪಾತ್ರ ಮಾಡುತ್ತಿರುವ ತನ್ವಿ ಕಳೆದ ಎರಡು ದಿನಗಳಿಂದ ಭರ್ಜರಿ ಸುದ್ದಿಯಲ್ಲಿದ್ದಾರೆ. ಸೀರಿಯಲ್ನಲ್ಲಿ ತನ್ವಿಯಾಗಿ ಮಿಂಚುತ್ತಿರುವ ಇವರ ನಿಜವಾದ ಹೆಸರು ಅಮೃತ ಗೌಡ. ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆ. 600ಕ್ಕೆ 543 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ.
ಅಮೃತಾ ಗೌಡ ಅವರು ಕಾಮರ್ಸ್ ವಿಷಯದಲ್ಲಿ ಪಿಯುಸಿ ಮಾಡುತ್ತಿದ್ದರು. ಅವರಿಗೆ 600ಕ್ಕೆ 543 ಮಾರ್ಸ್ ಸಿಕ್ಕಿದ್ದು, ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಕನ್ನಡದಲ್ಲಿ 100ಕ್ಕೆ 97 ಅಂಕ ಪಡೆದಿರುವ ಅಮೃತಾ ಗೌಡ, ಇಂಗ್ಲಿಷ್‌ನಲ್ಲಿ 81, ಎಕನಾಮಿಕ್ಸ್‌ನಲ್ಲಿ 93, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 83, ಅಕೌಂಟೆನ್ಸಿಯಲ್ಲಿ 94, ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕಗಳನ್ನು ಅಮೃತಾ ಗೌಡ ಪಡೆದುಕೊಂಡಿದ್ದಾರೆ. ಆ ಮೂಲಕ ಒಟ್ಟು 543 ಅಂಕಗಳನ್ನು ಪಡೆದು 91ಶೇಕಡ ಪಡೆದು ಡಿಸ್ಟಿಂಕ್ಷನ್ ನಲ್ಲಿ ದ್ವಿತೀಯ ಪಿಯುಸಿ ಪಾಸ್ ಆಗಿದ್ದಾರೆ.
ಶೂಟಿಂಗ್ ಬ್ಯುಸಿ ಶೆಡ್ಯೂಲ್ ಮಧ್ಯೆ, ಚೆನ್ನಾಗಿ ಓದಿ, ಡಿಸ್ಟಿಂಕ್ಷನ್ ಪಡೆದಿರುವ ತನ್ವಿ ಆಲಿಯಾಸ್ ಅಮೃತಾ ಗೌಡರನ್ನು ವೀಕ್ಷಕರು ಮೆಚ್ಚಿಕೊಂಡಿದ್ದು ಶುಭಾಶಯ ತಿಳಿಸಿದ್ದಾರೆ. ಇದೀಗ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮೃತಾ ಅವರು ತನ್ನ ಮುಂದಿನ ಡ್ರೀಮ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನನಗೆ ಬಿಸಿಎ ಮಾಡಿ ಎಂಸಿಎ ಮಾಡುವ ಆಸೆ ಇದೆ, ಇದರ ಜೊತೆಗೆ ಎಲ್ಲ ನಟ-ನಟಿಯರಂತೆ ನನಗೂ ಹೀರೋಯಿನ್ ಆಗುವ ಆಸೆ ತುಂಬಾ ಇದೆ ಎಂದಿದ್ದಾರೆ.
Lakshmi Baramma: ಲಕ್ಷ್ಮೀ ಬಾರಮ್ಮ ಕೊನೆಯ ಎಪಿಸೋಡ್ನಲ್ಲಿ ಬಿಗ್ ಟ್ವಿಸ್ಟ್; ಬೆಟ್ಟದಿಂದ ಬಿದ್ದು ಕಾವೇರಿ ಸಾವು
ಅಮೃತಾ ಅವರ ಅಮ್ಮ ಮಾತನಾಡಿ, ತಮಗೆ ಮಗಳು ಸಿಎ ಆಗುವ ಆಸೆ ಇದೆ. ಆದರೆ ಅದು ಅವಳಿಗೆ ಬಿಟ್ಟದ್ದು. ಅವಳಿಗೆ ಏನು ಆಸೆ ಇದೆಯೊ ಅದೇ ನಮ್ಮದು. ಅವಳು ಏನೇ ಮಾಡಿದರೂ ಯೋಚನೆ ಮಾಡಿ ಮಾಡುತ್ತಾಳೆ, ಜಯಶಾಲಿ ಆಗ್ತಾಳೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ. ಅಮೃತಾ ಕೂಡ ತನ್ನ ಅಪ್ಪ-ಅಮ್ಮ ನನಗೆ ತುಂಬಾ ಸಪೋರ್ಟಿವ್ ಆಗಿರುವುದಾಗಿ ಹೇಳಿದ್ದಾರೆ. ನಾನು ನಟಿಯಾಗುವುದಾದರೂ ಅವರು ಓಕೆ ಅನ್ನುತ್ತಾರೆ, ನನಗೆ ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾರೆ. ನಾನು ಏನೇ ಆಗುವ ಆಸೆ ಹೊಂದಿದರೂ ಅವರು ಜೈ ಎನ್ನುತ್ತಾರೆ ಎಂದು ಖುಷಿಯಲ್ಲಿ ಹೇಳಿದ್ದಾರೆ.