Lakshmi Baramma: ಲಕ್ಷ್ಮೀ ಬಾರಮ್ಮ ಕೊನೆಯ ಎಪಿಸೋಡ್ನಲ್ಲಿ ಬಿಗ್ ಟ್ವಿಸ್ಟ್; ಬೆಟ್ಟದಿಂದ ಬಿದ್ದು ಕಾವೇರಿ ಸಾವು
ಬರೋಬ್ಬರಿ 600ಕ್ಕೂ ಅಧಿಕ ಎಪಿಸೋಡ್ಗಳನ್ನು ಪೂರ್ಣಗೊಳಿಸಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯನ್ನು ಟ್ವಿಸ್ಟ್ ಮೂಲಕ ಕೊನೆಗೊಳಿಸಲು ನಿರ್ದೇಶಕರು ಮುಂದಾಗಿದ್ದಾರೆ. ಈ ಕುರಿತ ಪ್ರೊಮೋ ಕೂಡ ಬಿಡುಗಡೆ ಆಗಿದೆ. ಇಂದು ಈ ಧಾರಾವಾಹಿಯ ಅಂತಿಮ ಸಂಚಿಕೆ ಪ್ರಸಾರವಾಗಲಿದೆ.

Lakshmi Baramma Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿ ಇಂದಿ ಕೊನೆಗೊಳ್ಳಲಿದೆ. ಕಳೆದ ವಾರ ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ನೀಡಿತ್ತು. ಅದರಂತೆ ಅಂತಿಮ ಸಂಚಿಕೆಗಳು ಈ ವಾರ ಪ್ರಸಾರ ಆದವು. ಇಂದು ಫೈನಲ್ ಎಪಿಸೋಡ್ ಟೆಲಿಕಾಸ್ಟ್ ಆಗಲಿದ್ದು, ಇದರಲ್ಲಿ ದೊಡ್ಡ ಟ್ವಿಸ್ಟ್ ನೀಡಲಾಗಿದೆ. ಬರೋಬ್ಬರಿ 600ಕ್ಕೂ ಅಧಿಕ ಎಪಿಸೋಡ್ಗಳನ್ನು ಪೂರ್ಣಗೊಳಿಸಿರುವ ಈ ಧಾರಾವಾಹಿಯನ್ನು ಟ್ವಿಸ್ಟ್ ಮೂಲಕ ಕೊನೆಗೊಳಿಸಲು ನಿರ್ದೇಶಕರು ಮುಂದಾಗಿದ್ದಾರೆ. ಈ ಕುರಿತ ಪ್ರೊಮೋ ಕೂಡ ಬಿಡುಗಡೆ ಆಗಿದೆ.
ಕಾವೇರಿ ಇದುವರೆಗೂ ಮಾಡಿರುವ ಕೇಡು ಕೆಲಸಗಳು ಒಂದೆರಡಂತೂ ಅಲ್ಲ. ಕೀರ್ತಿ ಹಾಗೂ ಲಕ್ಷ್ಮೀ ಬಾಳನ್ನೇ ಹಾಳು ಮಾಡಿದ ಕಾವೇರಿ ಇಬ್ಬರನ್ನೂ ಕೊಲ್ಲೋಕೆ ಸಂಚು ರೂಪಿಸಿದ್ದಳು. ಆದರೆ, ಕರ್ಮ ಯಾರನ್ನು ಬಿಡುವುದಿಲ್ಲ ಎಂಬ ಮಾತಿನ ಪ್ರಕಾರ, ಕಾವೇರಿ ಕೊನೆಯಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾಳೆ. ತನ್ನ ಅಹಂಕಾರ ಬಿಡದ ಕಾವೇರಿ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಬೆಟ್ಟದ ಮೇಲೆ ಇಡೀ ಕುಟುಂಬದ ಮುಂದೆ ಕಾವೇರಿಯ ಮುಖವಾಡ ಕಳಚಿ ಬಿತ್ತು. ಕುಡಿದ ನಶೆಯಲ್ಲಿ ಸುಬ್ಬಿ ಅಲಿಯಾಸ್ ಚಿಂಗಾರಿ ಮುಂದೆ ಕಾವೇರಿ ತಾನು ಮಾಡಿದ ಎಲ್ಲಾ ಕೇಡು ಕೆಲಸಗಳನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದಳು. ಅದನ್ನೆಲ್ಲಾ ಕೇಳಿಸಿಕೊಂಡ ವೈಷ್ಣವ್‌ಗೆ ಸತ್ಯದ ಅನಾವರಣವಾಗುತ್ತದೆ.
‘ನಾನು ಏನು ನಡೆಯಬಾರದು ಎಂದುಕೊಂಡಿದ್ದೆನೋ ಅದೇ ನಡೆದು ಹೋಯಿತು. ನನ್ನ ಮಗ ನನ್ನ ಕೈಯಿಂದ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ನಿನ್ನ ನನ್ನ ಸೊಸೆ ಮಾಡಿಕೊಂಡೆ. ಆದರೆ, ನೀನೇನು ಮಾಡಿದೆ, ನನ್ನ ಮಗನ ಕಿತ್ತುಕೊಂಡೆ. ಪುಟ್ಟ ನಿನ್ನ ಅಮ್ಮ ಯಾವಾಗಲೂ ನಿನ್ನ ಪ್ರೀತುಸತ್ತಾ ಇದ್ದಳು, ಪ್ರೀತಿಸ್ತಾನೆ ಇರ್ತಾಳೆ’ ಎಂದು ಹೇಳುತ್ತ ಕಾವೇರಿ ಪ್ರಪಾತದ ಕಡೆ ಹೋಗುತ್ತಾಳೆ.
ವೈಷ್ಣವ್, ಲಕ್ಷ್ಮೀ ಯಾರೂ ಮನವಿ ಮಾಡಿದರೂ ಕಾವೇರಿ ಮಾತು ಕೇಳಲೇ ಇಲ್ಲ. ಈ ವೇಳೆ ಕಾವೇರಿ ಆಯತಪ್ಪಿ ಕಾಲನ್ನು ಅಲ್ಲೆ ಇದ್ದ ಸಣ್ಣ ಕಲ್ಲಿನ ಮೇಲೆ ಇಡುತ್ತಾಳೆ. ಆಗ ಕಾಲು ಜಾರಿ ಬೆಟ್ಟದಿಂದ ಉರುಳುರುಳಿ ಹೋಗಿದ್ದಾಳೆ. ಈ ಮೂಲಕ ಬೆಟ್ಟದಿಂದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪುತ್ತಾಳೆ. ಅಂದು ಕೀರ್ತಿಯನ್ನ ಬೆಟ್ಟದ ಮೇಲಿಂದ ನೂಕಿ ಸಾಯಿಸಲು ಕಾವೇರಿ ಪ್ರಯತ್ನಿಸಿದ್ದಳು. ಅಂದು ಕೀರ್ತಿ ಬಿದ್ದ ಜಾಗದಲ್ಲೇ ಇಂದು ಕಾವೇರಿ ಬಿದ್ದು ಸಾವನ್ನಪ್ಪಿದ್ದಾಳೆ. ಈ ಮೂಲಕ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತ್ಯಕಂಡಿದೆ.
ಈ ಧಾರಾವಾಹಿ ಶುರುವಿನಲ್ಲಿ ಭಾಗ್ಯಲಕ್ಷ್ಮೀಯಾಗಿ ಒಂದು ಗಂಟೆ ಪ್ರಸಾರ ಕಾಣುತ್ತಿತ್ತು. ಆ ಬಳಿಕ ಅಕ್ಕ ಭಾಗ್ಯಾಳ ಕಥೆ ಬೇರೆ ಹಾಗೂ ತಂಗಿ ಲಕ್ಷ್ಮೀ ಕಥೆ ಬೇರೆ ಬೇರೆಯಾಗಿ ಮಾಡಿ ಎರಡು ಧಾರಾವಾಹಿ ಮಾಡಲಾಯಿತು. ಈಗ ಭಾಗ್ಯ ಲಕ್ಷ್ಮೀ ರಾತ್ರಿ 7 ಗಂಟೆಗೆ ಪ್ರಸಾರ ಕಾಣುತ್ತಿದ್ದರೆ, ಲಕ್ಷ್ಮೀ ಬಾರಮ್ಮ 7.30ಕ್ಕೆ ಪ್ರಸಾರ ಕಾಣುತ್ತಿದೆ. ಲಕ್ಷ್ಮೀ ಬಾರಮ್ಮ ಮುಕ್ತಾಯದ ಬಳಿಕ ಆ ಸ್ಥಾನದಲ್ಲಿ ಬಿಗ್ ಬಾಸ್ ಕನ್ನಡ 11 ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಪ್ರಸಾರ ಕಾಣಲಿದೆ.
Bhagya Lakshmi Serial: ಭಾಗ್ಯ ಲಕ್ಷ್ಮೀ ಧಾರಾವಾಹಿಗೆ ಹೊಸ ಪಾತ್ರ ಎಂಟ್ರಿ: ಹೀರೋ ಅಥವಾ ವಿಲನ್..?