Bhagya Lakshmi Serial: ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿ ತಾಂಡವ್ಗೆ ಹಬ್ಬದೂಟ ಬಡಿಸಿದ ಶ್ರೇಷ್ಠಾ: ಗೊತ್ತಾಗುತ್ತಾ ಸತ್ಯ?
ತಾಂಡವ್-ಶ್ರೇಷ್ಠಾ ಇಬ್ಬರೂ ಜೋರಾಗಿ ಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಿದ್ದಾರೆ. ತಾಂಡವ್ ಏಳುವ ಮುನ್ನವೇ ಶ್ರೇಷ್ಠಾ ಎದ್ದು ಕಾಫಿ ತರುತ್ತಾಳೆ. ಶ್ರೇಷ್ಠಾ ಇಷ್ಟೊಂದು ಬದಲಾಗಿದ್ದಾಳೆ ಎಂದು ತಾಂಡವ್ ಖುಷಿಯಾಗುತ್ತಾನೆ. ಈ ಕಾಫಿಯನ್ನು ನಿಜಕ್ಕೂ ನೀನೇ ಮಾಡಿದ್ದಾ ಎಂದು ಕೇಳುತ್ತಾನೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾಳ ಪ್ಲ್ಯಾನ್ ಫೇಲ್ ಆಗಿದ್ದು, ತಾಂಡವ್ ಹಾಗೂ ಶ್ರೇಷ್ಠಾ ಮನೆಮಂದಿ ವಿರುದ್ಧ ತಿರುಗಿ ನಿಂತಿದ್ದಾರೆ. ಮಗನನ್ನು ಸರಿಮಾಡಲು ಹೊರಟ ಕುಸುಮಾಗೆ ಆಘಾತ ಉಂಟಾಗಿದೆ. ತಾಂಡವ್, ಶ್ರೇಷ್ಠಾ ಜೊತೆ ಮನೆಬಿಟ್ಟು ಹೊರಬಂದಿದ್ದು ಸ್ನೇಹಿತನ ಮನೆಯಲ್ಲಿ ವಾಸ ಮಾಡುತ್ತಿದ್ದಾನೆ.
ಜೊತೆಗೆ ತಾಂಡವ್-ಶ್ರೇಷ್ಠಾ, ಭಾಗ್ಯಾಗೆ ಬುದ್ದಿ ಕಲಿಸಲು ಪ್ಲ್ಯಾನ್ ಮಾಡುತ್ತಿದ್ದಾನೆ. ಅವ್ಳ ನೆಮ್ಮದಿ ಹಾಳಮಾಡಬೇಕು.. ನನ್ಗೆ ಮಾಡಿರೊ ಅವಮಾನಕ್ಕೆ ಅವಳಿಗೆ ಸರಿಯಾದ ಶಿಕ್ಷೆ ಕೊಡಬೇಕು.. ಅವ್ಳು ಮನೆ ಬಿಟ್ಟು ರೋಡ್ ರೋಡ್ ಅಲಿಬೇಕು ಅಂಥಾ ಸ್ಥಿತಿ ಬರಬೇಕು ಇದೇ ನನ್ನ ಲೈಫ್ನ ಗೋಲ್ ಎಂದು ತಾಂಡವ್ ಹೇಳಿದ್ದಾನೆ. ಆಗ ನಾನು ನಿನ್ನ ಜೊತೆ ಇರುತ್ತೇನೆ ಎಂದು ಶ್ರೇಷ್ಠಾ ಸಮಾಧಾನ ಮಾಡುತ್ತಾಳೆ.
ಇದರ ನಡುವೆ ಸಂಕ್ರಾಂತಿ ಹಬ್ಬದ ಸಂಭ್ರಮ ನಡೆಯುತ್ತಿದೆ. ತಾಂಡವ್-ಶ್ರೇಷ್ಠಾ ಇಬ್ಬರೂ ಜೋರಾಗಿ ಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಿದ್ದಾರೆ. ತಾಂಡವ್ ಏಳುವ ಮುನ್ನವೇ ಶ್ರೇಷ್ಠಾ ಎದ್ದು ಕಾಫಿ ತರುತ್ತಾಳೆ. ಶ್ರೇಷ್ಠಾ ಇಷ್ಟೊಂದು ಬದಲಾಗಿದ್ದಾಳೆ ಎಂದು ತಾಂಡವ್ ಖುಷಿಯಾಗುತ್ತಾನೆ. ಈ ಕಾಫಿಯನ್ನು ನಿಜಕ್ಕೂ ನೀನೇ ಮಾಡಿದ್ದಾ ಎಂದು ಕೇಳುತ್ತಾನೆ. ಶ್ರೇಷ್ಠಾ, ಹೌದು ಎನ್ನುತ್ತಾಳೆ. ತುಂಬಾ ಚೆನ್ನಾಗಿ ಮಾಡಿದ್ದೀಯ, ಆ ಭಾಗ್ಯಾ ಒಂದು ದಿನವೂ ನನಗೆ ಇಂಥ ಕಾಫಿ ಮಾಡಿಕೊಟ್ಟಿಲ್ಲ ಎಂದು ಶ್ರೇಷ್ಠಾಳನ್ನು ಹೊಗಳುತ್ತಾನೆ.
ಇದಿಷ್ಟೆ ಅಲ್ಲ, ಇವತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ತಾಂಡವ್ ಸ್ನಾನ ಮಾಡಿ ಬರುವಷ್ಟರಲ್ಲಿ ಬೆಡ್ ಮೇಲೆ ಪಂಚೆ ಶರ್ಟ್ ಎಲ್ಲ ಇಟ್ಟಿರುತ್ತಾಳೆ ಶ್ರೇಷ್ಠಾ. ಇದನ್ನು ನೋಡಿ ತಾಂಡವ್ ಖುಷಿ ಆಗುತ್ತಾನೆ. ಊಟಕ್ಕೆ ಬಾಳೆ ಎಲೆ ಇಟ್ಟು ಬಗೆಬಗೆಯ ತಿಂಡಿಗಳನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟಿರುತ್ತಾಳೆ. ತಾಂಡವ್ನ ಊಟಕ್ಕೆ ಕರೆದು ನಾನೇ ಮಾಡಿದ್ದು ಅಂತ ಬಿಲ್ಡಪ್ ತೆಗಳೋಣ ಎಂದು ಅಂದುಕೊಳ್ಳುತ್ತಾಳೆ. ಆದರೆ, ಇದೆಲ್ಲ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಊಟ ಆಗಿದೆ. ಇವನನ್ನ ಸುಲಭವಾಗಿ ಬುಟ್ಟಿಗೆ ಹಾಕಬಹುದು ಎಂದು ಅಂದುಕೊಂಡು ಇಬ್ಬರೂ ಊಟ ಮಾಡುತ್ತಾರೆ. ಊಟದ ರುಚಿ ಕಂಡು, ಶ್ರೇಷ್ಠಾ ಇದು ನಿಜವಾಗಿಯೂ ನೀನೇ ಮಾಡಿದ್ದ ಎಂದು ಪ್ರಶ್ನೆ ಮಾಡುತ್ತಾನೆ. ಸದ್ಯ ಈ ಸತ್ಯ ಗೊತ್ತಾಗುತ್ತಾ ಎಂಬುದು ಕುತೂಹಲ ಕೆರಳಿಸಿದೆ.
ಅತ್ತ ಭಾಗ್ಯಾ ಕೂಡಾ ಮನೆಯಲ್ಲಿ ಸಂಕ್ರಾಂತಿ ಆಚರಿಸುತ್ತಿದ್ದಾಳೆ. ಆದರೆ, ಗಂಡ ಮನೆಯಲ್ಲಿ ಇಲ್ಲ.. ಈ ಸಮಸ್ಯೆ ಇದೆಲ್ಲ ಬೇಕಾ ಎಂದು ಭಾಗ್ಯಾ ಅಮ್ಮ ಹೇಳುತ್ತಾಳೆ. ಇದಕ್ಕೆ ತಕ್ಕಂತೆ ಮನೆಯವರಿಗೆ ಅವಮಾನ ಕೂಡ ಆಗುತ್ತೆ. ನೆರೆಹೊರೆಯವರು ಭಾಗ್ಯಾ ಮನೆಗೆ ಬಂದು ಎಳ್ಳು ಬೆಲ್ಲ ಕೊಡುತ್ತಾರೆ. ತಾಂಡವ್ ಎಲ್ಲಿ ಕಾಣಿಸುತ್ತಿಲ್ಲ ಎಂದು ಕೇಳುತ್ತಾರೆ. ಆಗ ಮತ್ತೊಬ್ಬ ಮಹಿಳೆ, ನಿಮಗೆ ವಿಷಯ ಗೊತ್ತಿಲ್ವಾ, ತಾಂಡವ್ ಆ ಶ್ರೇಷ್ಠಾ ಜೊತೆ ಮನೆ ಬಿಟ್ಟು ಹೋಗಿದ್ದಾನೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಭಾಗ್ಯಾ ಹಾಗೂ ಮನೆಯವರಿಗೆ ಮತ್ತಷ್ಟು ದುಃಖವಾಗುತ್ತದೆ.
BBK 11: ರಜತ್ ಬಾಯಿಂದ ಪುನಃ ಬಂತು ಆ ಪದ: ಮಂಜು ವಿರುದ್ಧ ಹೊಡೆದಾಡುವ ಮಟ್ಟಕ್ಕೆ ಜಗಳ