Bhagya Lakshmi Serial: ಭಾಗ್ಯಾಳಿಂದ ಮಾವನಿಗೆ ಕಾರು ಗಿಫ್ಟ್, ಜೊತೆಯಾದ ಶ್ರೇಷ್ಠಾ-ಕನ್ನಿಕಾ: ರೋಚಕ ಘಟ್ಟದತ್ತ ಭಾಗ್ಯ ಲಕ್ಷ್ಮೀ ಧಾರಾವಾಹಿ
ಭಾಗ್ಯಾ ಅತ್ತೆ-ಮಾವನಿಗೆ ಸರ್ಪ್ರೈಸ್ ನೀಡಲು ಮುಂದಾಗಿದ್ದಾಳೆ. ಆಫೀಸ್ನಿಂದ ತನ್ನ ಮುಂದಿನ ಎರಡು ತಿಂಗಳ ಸಂಬಳವನ್ನು ಈಗಲೇ ಪಡೆದುಕೊಂಡು ಡೌನ್ಪೇಮೆಂಟ್ ಕಟ್ಟಿ ಮಾವನಿಗೆ ಹೊಸ ಕಾರು ಗಿಫ್ಟ್ ಮಾಡಲು ಮುಂದಾಗಿದ್ದಾಳೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ರೋಚಕ ಘಟ್ಟದತ್ತ ತಲುಪುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಧಾರಾವಾಹಿ ಯಶಸ್ವಿಯಾಗುತ್ತಿದೆ. ಸದ್ಯದಲ್ಲೇ ಭಾಗ್ಯಾಳ ಹೊಸ ಪಯಣ ಶುರುವಾಗಲಿದೆ. ಶ್ರೇಷ್ಠಾ-ಕನ್ನಿಕಾ ಜೊತೆ ಸೇರಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಭಾಗ್ಯಾಳಿಗೆ ದೊಡ್ಡ ತೊಂದರೆ ಬರುವುದರಲ್ಲಿದೆ. ಇದರ ಮಧ್ಯೆ ಭಾಗ್ಯಾ ತನ್ನ ಮಾವನಿಗೆ ಹೊಸ ಕಾರು ಗಿಫ್ಟ್ ನೀಡಿದ್ದಾಳೆ.
ಶ್ರೇಷ್ಠಾ ಜೊತೆ ಮನೆಬಿಟ್ಟು ಹೋಗಿದ್ದ ತಾಂಡವ್ ಮತ್ತೆ ಮನೆಗೆ ಬಂದು ಭಾಗ್ಯಾಳನ್ನು ಹೊರಹಾಕಲು ಅಪ್ಪ-ಅಮ್ಮನ ಜೊತೆ ಹೊಸ ನಾಟಕ ಶುರುಮಾಡಿರುವುದು ಗೊತ್ತೇ ಇದೆ. ಆದರೆ, ಇದು ಅಷ್ಟೊಂದು ವೇಗ ಪಡೆದುಕೊಳ್ಳುತ್ತಿಲ್ಲ. ಇದಕ್ಕಾಗಿ ಶ್ರೇಷ್ಠಾ ತನ್ನ ಸ್ನೇಹಿತೆ ಕನ್ನಿಕಾ ಜೊತೆ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದ್ದಾಳೆ. ಇಬ್ಬರು ಜೊತೆಯಾಗಿ ರೆಸ್ಟೋರೆಂಟ್ನಲ್ಲಿ ಕೂತು ಪಿತೂರಿ ನಡೆಸುತ್ತಿದ್ದಾರೆ. ಭಾಗ್ಯಾ ಯುವರ್ ಗೇಮ್ ಈಸ್ ಓವರ್.. ಆ ಭಾಗ್ಯಾ ಕೆಲಸದಿಂದ ಹೊರಬಿದ್ಲು ಅಂತನೆ ಅನ್ಕೊ ಎಂದು ಕನ್ನಿಕಾ, ಶ್ರೇಷ್ಠಾ ಬಳಿ ಹೇಳಿದ್ದಾಳೆ.
ಆದರೆ, ಇದು ಯಾವುದನ್ನೂ ಅರಿಯದ ಭಾಗ್ಯಾ ಅತ್ತ ಅತ್ತೆ-ಮಾವನಿಗೆ ಸರ್ಪ್ರೈಸ್ ನೀಡಲು ಮುಂದಾಗಿದ್ದಾಳೆ. ಎಲ್ಲ ಮನೆ ಸೊಸೆಯಂದ್ರಿಗೆ ಕನಸುಗಳಿರುತ್ತವೆ. ಆದ್ರೆ ಎಷ್ಟೊಂದು ಜನಕ್ಕೆ ಅದನ್ನು ನನಸು ಮಾಡಿಕೊಳ್ಳಲು ಆಗಲ್ಲ. ಆದ್ರೆ ನನ್ ಕನಸನ್ನೆಲ್ಲ ನನಸು ಮಾಡೋ ಅವಕಾಶ ಆ ದೇವರು ನಂಗೆ ಕೊಟ್ಟಿದ್ದಾನೆ. ಜೀವನದಲ್ಲಿ ತುಂಬಾ ಏರು-ಪೇರುಗಳನ್ನ ನೋಡಿದ್ದೇನೆ. ಆದ್ರೆ ಇವತ್ತು ಅದಕ್ಕೆಲ್ಲ ಸಾರ್ಥಕತೆ ಸಿಕ್ಕಿದೆ ಅಂತ ಅನಿಸ್ತಿದೆ. ಅತ್ತೆ-ಮಾವ ನಿಮ್ಗೆ ದೊಡ್ಡ ಸರ್ಪ್ರೈಸ್ ಕಾದಿದೆ ಎಂದು ಹೇಳುತ್ತಾಳೆ.
ಭಾಗ್ಯಾ ಆಫೀಸ್ನಿಂದ ತನ್ನ ಮುಂದಿನ ಎರಡು ತಿಂಗಳ ಸಂಬಳವನ್ನು ಈಗಲೇ ಪಡೆದುಕೊಂಡು ಡೌನ್ಪೇಮೆಂಟ್ ಕಟ್ಟಿ ಮಾವನಿಗೆ ಹೊಸ ಕಾರು ಗಿಫ್ಟ್ ಮಾಡಲು ಮುಂದಾಗಿದ್ದಾಳೆ. ಭಾಗ್ಯಾ ಮನೆಯವರನ್ನೆಲ್ಲ ಸಡನ್ ಆಗಿ ತಯಾರಾಗಿ ಬನ್ನಿ ಎಂದು ಹೇಳುತ್ತಾಳೆ. ಬಳಿಕ ಒಂದು ಅಟೋದಲ್ಲಿ ಎಲ್ಲಿ ಎಂದು ಯಾರಿಗೂ ಹೇಳದೆ ಒಂದು ಕಡೆ ಕರೆದುಕೊಂಡು ಹೋಗುತ್ತಾಳೆ. ಅತ್ತೆ-ಮಾವ ಎಷ್ಟೆ ಕೇಳಿದರು ಹೇಳುವುದಿಲ್ಲ.
ಕೊನೆಯದಾಗಿ ಕಾರು ಶೋ ರೂಮ್ಗೆ ಇಡೀ ಫ್ಯಾಮಿಲಿಯನ್ನು ಭಾಗ್ಯಾ ಕರೆದುಕೊಂಡು ಬಂದಿದ್ದಾಳೆ. ಇಲ್ಲಿ ಮಾವನಿಗೆ ಹೊಸ ಕಾರು ಗಿಫ್ಟ್ ಮಾಡಿದ್ದಾಳೆ. ನೀವು ಆ ಸ್ಕೂಟರ್ನ ತಿಳಿದು ದೇಹ ದಂಡಿಸಿದ್ದು ಸಾಕು.. ಇನ್ನಾದ್ರು ಆರಾಮವಾಗಿ ಕಾರಲ್ಲಿ ಓಡಾಡಿ ಎಂದಿ ಕೀ ಕೊಡುತ್ತಾಳೆ. ಇದರಿಂದ ಮನೆಯವರಿಗೆಲ್ಲ ತುಂಬಾ ಖುಷಿ ಆಗುತ್ತದೆ.
ಸದ್ಯದಲ್ಲೇ ಭಾಗ್ಯಾಳ ಹೊಸ ಪಯಣ:
ಸದ್ಯದಲ್ಲೇ ಭಾಗ್ಯಾ ಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಾಳ ಹೊಸ ಪಯಣ ಶುರುವಾಗಿದೆ. ಈ ಕುರಿತು ಕಲರ್ಸ್ ಕನ್ನಡ ಹೊಸ ಪ್ರೊಮೋ ಹಂಚಿಕೊಂಡಿದೆ. ನೋವನ್ನೆಲ್ಲ ನುಂಗಿ ಮತ್ತೆ ನಗ್ತಾಳಾ ಭಾಗ್ಯಾ? ಎಂಬ ಟೈಟಲ್ ನೀಡಿದೆ. ಇದರಲ್ಲಿ ಭಾಗ್ಯಾ, ಶ್ರೇಷ್ಠಾ ನನ್ನ ಗಂಡನ ಕಸಿದುಕೊಂಡಳು, ದೇವ್ರೇ ನೀನು ನನ್ನ ಪಾಲಿಗೆ ಧೈರ್ಯವಾಗಿದ್ದ ಕೆಲಸನೂ ಕಿತ್ಕೊಂಡೆ.. ನನ್ನ ಕಣ್ಣೀರೆ ಬರಿದಾಗಿ ಬಿಡುತ್ತೇನೊ.. ನಾನಿನ್ನು ದುಃಖನ ಮುಚ್ಚಿಟ್ಟುಕೊಂಡು ಮುಖವಾಡ ತೊಡುತ್ತೇನೆ. ಸಾಯೋವಷ್ಟು ಗಾಸಿಯಾಗಿದ್ರೂ.. ಇನ್ನು ಸಾಯೋವರೆಗು ನಗ್ತೀನಿ ಎಂದು ಜೋಕರ್ ಮುಖವಾಡ ತೊಟ್ಟಿದ್ದಾಳೆ. ಇದು ನೋವು-ನಲಿವಿನ ಮೇರೆ ಮೇರಿದೆ ಭಾಗ್ಯಾಳ ಹೊಸ ಪಯಣ ಎಂದು ಹೇಳಲಾಗಿದೆ.
Hanumantha BBK 11: ಬಿಗ್ ಬಾಸ್ನಲ್ಲಿ ಸಿಕ್ಕಿದ 50 ಲಕ್ಷವನ್ನು ಹನುಮಂತ ಏನು ಮಾಡ್ತಾರಂತೆ ಗೊತ್ತಾ?