Hanumantha BBK 11: ಬಿಗ್ ಬಾಸ್ನಲ್ಲಿ ಸಿಕ್ಕಿದ 50 ಲಕ್ಷವನ್ನು ಹನುಮಂತ ಏನು ಮಾಡ್ತಾರಂತೆ ಗೊತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 11 ಗೆದ್ದ ಬಳಿಕ ಹನುಮಂತ ಅವರು ದಿಢೀರ್ ಆಗಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ. ಇವರಿಗೆ ತ್ರಿವಿಕ್ರಮ್ ಹಾಗೂ ರಜತ್ ಕಿಶನ್ ಕೂಡ ಸಾಥ್ ನೀಡಿದರು.
ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ (Bigg Boss Kannada 11) ತೆರೆಬಿದ್ದಿದೆ. ಹಳ್ಳಿ ಹೈದ ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ತ್ರಿವಿಕ್ರಮ್ ರನ್ನರ್-ಅಪ್ ಆಗಿದ್ದಾರೆ. ಹನುಮಂತನಿಗೆ ಬರೋಬ್ಬರಿ 5 ಕೋಟಿ 23 ಲಕ್ಷದ 89 ಸಾವಿರದ 318 (5,23,89,318) ವೋಟ್ಸ್ ಬಂದಿದೆ. ತ್ರಿವಿಕ್ರಮ್ ಅವರು 2 ಕೋಟಿಗೂ ಹೆಚ್ಚು ವೋಟ್ ಪಡೆದಿದ್ದಾರೆ. ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿದ ಬಳಿಕ ಹನುಮಂತ ಎಲ್ಲೂ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಆದರೆ, ಒಂದು ದಿನ ಆದ ಬಳಿಕ ದಿಢೀರ್ ಆಗಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ. ಇವರಿಗೆ ತ್ರಿವಿಕ್ರಮ್ ಹಾಗೂ ರಜತ್ ಕಿಶನ್ ಕೂಡ ಸಾಥ್ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹನುಮಂತ ಅವರು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಬಿಗ್ ಬಾಸ್ ವಿನ್ನರ್ ಆಗಿ ಸಿಕ್ಕ 50 ಲಕ್ಷ ರೂಪಾಯಿಯನ್ನು ಏನು ಮಾಡುತ್ತೇನೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮೊದಲಿಗೆ ನಾನು ವಿನ್ ಆದ ಬಳಿಕ ಎಲ್ಲಿ ಹೋದೆ, ಏನು ಮಾಡ್ತಿದ್ದೆ ಎಂಬ ಬಗ್ಗೆ ಮಾತನಾಡಿದರು. ನಾನು ಎಲ್ಲಿ ಹೋದೆ ಎಲ್ಲೋದ್ದೆ ಅಂತಾ ಹುಡುಕ್ತಿದ್ರಿ, ನಾನು ಮಲಗಿದ್ದೆ. ಇವಾಗ ಎದ್ದು ಬಂದೀನಿ ಎಂದು ಹನುಮಂತ ಹೇಳಿದ್ದಾರೆ. ಬಿಗ್ ಬಾಸ್ ಫಿನಾಲೆ ಮುಗಿದ ಮೇಲೆ ಮಲಗಿದ್ದು, ಲೇಟ್ ಆಗಿ ಎದ್ದಿದ್ದೀನಿ. ಹೀಗಾಗಿ ಇದುವರೆಗೂ ಯಾರಿಗೂ ನಾನು ಸಿಗಲಿಲ್ಲ ಅಷ್ಟೇ. ಸ್ವಾರಿ ಯಾರು ಬೇಜಾರ್ ಮಾಡಿಕೊಳ್ಳಬೇಡಿ ಎಂದರು.
ಮಾತು ಮುಂದುವರಿಸಿದ ಹನುಮಂತು ನಾನು ಬಿಗ್ ಬಾಸ್ ಕಪ್ ಗೆಲ್ಲುವ ನಂಬಿಕೆ ನನಗೆ ಇರಲಿಲ್ಲ. ನಮ್ಮ ಸ್ನೇಹಿತರು ಸುದೀಪ್ ಸಾರ್ ಇರೋದ್ರೊಳಗೆ ಬಿಗ್ ಬಾಸ್ ಮನೆಗೆ ಹೋಗು ಅಂತ ಹೇಳಿದ್ರು. ಹಾಗಾಗಿ ಈ ಸೀಸನ್‌ಗೆ ನಾನು ಬಂದೆ ಎಂದಿದ್ದಾರೆ. ಕಪ್ ಗೆಲ್ತೀನಿ ಅಂತ ಅನ್ಕೊಂಡಿರಲಿಲ್ಲ. ಹೋಗಿ ಮಜಾ ಮಾಡೋಣ ಅಂತ ಬಂದಿದ್ದೆ ಎಂದರು.
ಇದೇ ವೇಳೆ ಟ್ರೋಫಿ ಗೆದ್ದ ಜೊತೆಗೆ ಬಂದ ಬಹುಮಾನದ ಹಣದಲ್ಲಿ ಏನು ಮಾಡುತ್ತೇನೆ ಎಂಬ ಪ್ರಶ್ನೆಗೂ ಉತ್ತರಿಸಿದ ಹನುಮ, ಬಿಗ್ ಬಾಸ್‌ನಿಂದ ಬಂದ ಹಣದಿಂದ ಈಗ ಇರುವ ತಗಡಿನ ಮನೆಯನ್ನ ರಿಪೇರಿ ಮಾಡಿಸುತ್ತೇನೆ. ಆಮೇಲೆ ಮದುವೆ ಆಗುತ್ತೇನೆ. ಈ 2 ಆಸೆ ನನಗಿದೆ ಎಂದು ಹನುಮಂತು ಹೇಳಿದರು.
ಹನುಮಂತನಿಗೆ 50 ಲಕ್ಷ ರೂಪಾಯಿ ಹಣ ಸಿಕ್ಕಿದೆ ನಿಜ. ಆದರೆ, ಅವರ ಖಾತೆಗೆ ಅಷ್ಟೂ ಮೊತ್ತ ಸಿಗುವುದಿಲ್ಲ. ರಿಯಾಲಿಟಿ ಶೋನಲ್ಲಿ ಗೆದ್ದ ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಹನುಮಂತಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ.
Ugramm Manju: ಮಂಜು ವಿನ್ ಆಗದಿರಲು ಗೌತಮಿ ಜೊತೆಗಿನ ಸ್ನೇಹವೇ ಕಾರಣ?: ತಂದೆ ಹೇಳಿದ್ದೇನು?