ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಆದೀಶ್ವರ್ ಮುಂದೆ ತನ್ನ ದುಃಖ ತೋಡಿಕೊಂಡ ತಾಂಡವ್

ಕೆಫೆ ಒಂದರಲ್ಲಿ ಭೇಟಿ ಆಗೋಣ ಎಂದು ಆದೀ ತಾಂಡವ್ಗೆ ಹೇಳಿದ್ದಾನೆ. ಅದರಂತೆ ಇಬ್ಬರೂ ಕೆಫೆ ಒಂದರಲ್ಲಿ ಪ್ರಾಜೆಕ್ಟ್ ಬಗ್ಗೆ ಮಾತನಾಡಲು ಭೇಟಿ ಆಗಿದ್ದಾರೆ. ಆದರೆ, ಇವರಿಬ್ಬರು ಇಲ್ಲಿ ಪ್ರಾಜೆಕ್ಟ್ ಬಗ್ಗೆ ಮಾತನಾಡದೆ ತಮ್ಮ ಪರ್ಸನಲ್ ಲೈಫ್ ವಿಚಾರವನ್ನು ಹಂಚಿಕೊಂಡಿದ್ದಾರೆ. ತಾಂಡವ್ ತಾನು ಕೆಲಸ ಬಿಡಲು ಆ ಒಂದು ಹೆಂಗಸು ಕಾರಣ. ಅವಳಿಂದ ನನ್ನ ಕೆಲಸ ಹೋಯಿತು ಎಂದಿದ್ದಾನೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯ ಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಲಾಗುತ್ತಿದೆ. ಟಿಆರ್​ಪಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿರುವ ಭಾಗ್ಯ ಲಕ್ಷ್ಮೀಯನ್ನು ಮೇಲೆತ್ತಲು ನಿರ್ದೇಶಕರು ಹೊಸ ಹೊಸ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಧಾರಾವಾಹಿಯ ಕಥೆಯಲ್ಲಿ ಕೆಲ ಮಹತ್ವದ ಬದಲಾವಣೆ ಆಗುತ್ತಿದೆ. ಮೊದಲಿಗೆ ಕಿಶನ್ ಪಾತ್ರವನ್ನ ಪರಿಚಯಿಸಲಾಯಿತು. ಬಳಿಕ ಆದೀಶ್ವರ್ ಕಾಮತ್, ಮೀನಾಕ್ಷಿ ಪಾತ್ರ ಕೂಡ ಬಂತು. ಸದ್ಯ ಪೂಜಾ ಹಾಗೂ ಕಿಶನ್ ಮದುವೆ ಎಪಿಸೋಡ್ ಒಂದುಕಡೆ ಸಾಗುತ್ತಿದ್ದರೆ, ಮತ್ತೊಂದೆಡೆ ಆದೀಶ್ವರ್ ಕಾಮತ್ ಹಾಗೂ ಭಾಗ್ಯ ಗಂಡ ತಾಂಡವ್​ನ ಭೇಟಿ ರೋಚಕತೆ ಸೃಷ್ಟಿಸಿದೆ.

ಹೌದು, ಒಂದು ಪ್ರಾಜೆಕ್ಟ್ ವಿಚಾರವಾಗಿ ತಾಂಡವ್-ಆದೀ ಜೊತೆಯಾಗಿದ್ದಾರೆ. ತಾಂಡವ್​ಗೆ ಆದೀ ಬಹುದೊಡ್ಡ ಆಫರ್ ಕೊಟ್ಟಿದ್ದು, ಇದರಿಂದ ದುಡ್ಡಿನ ಮಳೆ ಸುರಿಯಲಿದೆ. ಆದರೆ, ತಾಂಡವ್ ಭಾಗ್ಯಾಳ ಗಂಡ ಎಂಬ ವಿಚಾರ ಆದೀಶ್ವರ್​ಗೆ ಇನ್ನೂ ತಿಳಿದಿಲ್ಲ. ಈ ವಿಚಾರ ಗೊತ್ತಿಲ್ಲದೇ ಇಬ್ಬರೂ ಕೂಡ ಭಾಗ್ಯಾಳನ್ನು ಬೈದುಕೊಂಡಿದ್ದಾರೆ.

ಈ ಹಿಂದೆ ತಾಂಡವ್ ಕೆಲಸ ಇಲ್ಲದೆ ತನ್ನದೇ ಒಂದು ಬ್ಯುಸಿನೆಸ್ ಪ್ಲ್ಯಾನ್ ಮಾಡಿ ಪಾರ್ಟ್ನರ್​ಗಾಗಿ ಹುಡುಕುತ್ತಾ ಇದ್ದ. ಆದರೆ, ಇದು ದೊಡ್ಡ ಪ್ರಾಜೆಕ್ಟ್ ಆದ ಕಾರಣ ಇದಕ್ಕೆ ಇನ್​ವೆಸ್ಟ್ ಮಾಡಲು ತುಂಬಾ ಹಣ ಬೇಕು. ಹೀಗಾಗಿ ಯಾರೂ ಮುಂದುಬರಲಿಲ್ಲ. ಅನೇಕ ಕಡೆಗಳಲ್ಲಿ ತನ್ನ ಪ್ಲ್ಯಾನ್ ಬಗ್ಗೆ ಹೇಳಿಕೊಂಡಿದ್ದರೂ ಯಾರೂ ಈ ಸಾಹಸಕ್ಕೆ ಕೈ ಹಾಕಲಿಲ್ಲ. ಕೊನೆಯದಾಗಿ ಆದೀ ತಾಂಡವ್​ನ ಪ್ಲ್ಯಾನ್ ಕೇಳಿ ಫಿದಾ ಆಗಿ.. ನಾನು ನಿಮ್ಮಂತಹ ಇಂಟೆಲಿಜೆಂಟ್ ಪ್ಲ್ಯಾನರ್ ಅನ್ನು ಹುಡುಕುತ್ತಿದ್ದೆ ಎಂದು ಹೇಳಿ ತಾಂಡವ್​ನ ಐಡಿಯಾ ತೆಗೆದುಕೊಂಡಿದ್ದಾನೆ.

ಬಳಿಕ ನಾಳೆ ಕೆಫೆ ಒಂದರಲ್ಲಿ ಭೇಟಿ ಆಗೋಣ ಎಂದು ಆದೀ ತಾಂಡವ್​ಗೆ ಹೇಳಿದ್ದಾನೆ. ಅದರಂತೆ ಇಬ್ಬರೂ ಕೆಫೆ ಒಂದರಲ್ಲಿ ಪ್ರಾಜೆಕ್ಟ್ ಬಗ್ಗೆ ಮಾತನಾಡಲು ಭೇಟಿ ಆಗಿದ್ದಾರೆ. ಆದರೆ, ಇವರಿಬ್ಬರು ಇಲ್ಲಿ ಪ್ರಾಜೆಕ್ಟ್ ಬಗ್ಗೆ ಮಾತನಾಡದೆ ತಮ್ಮ ಪರ್ಸನಲ್ ಲೈಫ್ ವಿಚಾರವನ್ನು ಹಂಚಿಕೊಂಡಿದ್ದಾರೆ. ತಾಂಡವ್​ ತಾನು ಕೆಲಸ ಬಿಡಲು ಆ ಒಂದು ಹೆಂಗಸು ಕಾರಣ. ಅವಳಿಂದ ನನ್ನ ಕೆಲಸ ಹೋಯಿತು. ಆ ಕಂಪನಿಗೋಸ್ಕರ ನಾನು ಎಷ್ಟೆಲ್ಲ ಕಷ್ಟ ಪಟ್ಟಿದ್ದೆ.. ತುಂಬಾ ಲಾಭ ತಂದುಕೊಟ್ಟಿದ್ದೆ.. ಆದರೆ ಆಕೆಯಿಂದ ಆ ಕೆಲಸ ಹೋಯಿತು. ನನ್ನ ಅಪ್ಪ-ಅಮ್ಮನಿಗೂ ನನಗಿಂತ ಆಕೆಯೇ ಮುಖ್ಯ.. ನಾನು ಅವರಿಗೆ ಲೆಕ್ಕಕ್ಕೆ ಇಲ್ಲ ಎಂದು ಆದೀಶ್ವರ್ ಬಳಿ ಹೇಳಿದ್ದಾನೆ. ಆದರೆ, ಆದೀಶ್ವರ್​ಗೆ ಇಲ್ಲಿ ತಾಂಡವ್ ಮಾತನಾಡುತ್ತಿರುವುದು ಭಾಗ್ಯ ವಿಚಾರ ಎಂಬುದು ತಿಳಿದಿಲ್ಲ.



ಮತ್ತೊಂದೆಡೆ ಪೂಜಾ-ಕಿಶನ್ ಮದುವೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವುದರಲ್ಲಿದೆ. ಸದ್ಯ ಭಾಗ್ಯ ಫ್ಯಾಮಿಲಿ ಕಿಶನ್ ತುಲಾಭಾರವನ್ನು ಯಶಸ್ವಿಯಾಗಿ ಮುಗಿಸಿದೆ. ಇದನ್ನು ಹಾಳು ಮಾಡಬೇಕು ಅಂದುಕೊಂಡಿದ್ದ ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ವಿಫಲವಾಗಿದೆ. ಇಷ್ಟಾದರೂ ಈ ಮದುವೆಯನ್ನು ನಿಲ್ಲಿಸಿಯೇ ತೀರುತ್ತೇನೆ ಎಂದು ಮೀನಾಕ್ಷಿ ಪಣತೊಟ್ಟಿದ್ದಾಳೆ. ಇವರಿಬ್ಬರು ಇನ್ನೇನು ಪ್ಲ್ಯಾನ್ ಮಾಡುತ್ತಾರೆ?, ಭಾಗ್ಯಾಳಿಗೆ ಮುಂದೆ ಎಂತಹ ಸಂಕಷ್ಟ ಕಾದಿದೆ ಎಂಬುದು ನೋಡಬೇಕಿದೆ.

Neenadhe Na Serial: ಕಿರುತೆರೆ ವೀಕ್ಷಕರಿಗೆ ಮತ್ತೊಂದು ಶಾಕ್: ಜನಮೆಚ್ಚಿದ ಈ ಧಾರಾವಾಹಿ ದಿಢೀರ್ ಮುಕ್ತಾಯ