ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neenadhe Na Serial: ಕಿರುತೆರೆ ವೀಕ್ಷಕರಿಗೆ ಮತ್ತೊಂದು ಶಾಕ್: ಜನಮೆಚ್ಚಿದ ಈ ಧಾರಾವಾಹಿ ದಿಢೀರ್ ಮುಕ್ತಾಯ

ದಿಲೀಪ್ ಶೆಟ್ಟಿ ಹಾಗೂ ಖುಷಿ ಶಿವು ಮುಖ್ಯ ಭೂಮಿಕೆಯಲ್ಲಿರುವ ಧಾರಾವಾಹಿ ನೀನಾದೆ ನಾ ಕೊನೆಗೊಂಡಿದೆ. ಈ ಧಾರಾವಾಹಿ ಎರಡು ಅಧ್ಯಾಯದಲ್ಲಿ ಪ್ರಸಾರಕಂಡಿತು. ಮೊದಲ ಅಧ್ಯಾಯ ಭಾರೀ ಜನಪ್ರಿಯತೆ ಪಡೆದಿತ್ತು. ಆದರೆ, ಎರಡನೇ ಅಧ್ಯಾಯ ಅಟ್ಟರ್ ಫ್ಲಾಪ್ ಆಯಿತು.

ಕಿರುತೆರೆ ವೀಕ್ಷಕರಿಗೆ ಶಾಕ್: ಈ ಧಾರಾವಾಹಿ ದಿಢೀರ್ ಮುಕ್ತಾಯ

Star Suvarna Neenadena Serial

Profile Vinay Bhat Jul 5, 2025 7:53 AM

ಕಳೆದ ಕೆಲವು ತಿಂಗಳುಗಳಿಂದ ಕಿರುತೆರೆ ಲೋಕದಲ್ಲಿ ಮೇಜರ್ ಸರ್ಜರಿ ಆಗುತ್ತಿದೆ. ಪ್ರಸಿದ್ಧ ವಾಹಿನಿಗಳು ಟಿಆರ್​ಪಿ ಹಿಂದೆ ಬಿದ್ದಿದ್ದು ನಂಬರ್ ಒನ್ ಸ್ಥಾನಕ್ಕೆ ಪ್ರತಿ ವಾರ ಪೈಪೋಟಿ ನಡೆಸುತ್ತಿದೆ. ಇದಕ್ಕಾಗಿ ಅನಗತ್ಯವಾಗಿ ಕಥೆಯನ್ನು ಎಳೆಯುತ್ತಿರುವ ಹಾಗೂ ಟಿಆರ್​ಪಿ ಇಲ್ಲದ ಧಾರಾವಾಹಿಗಳಿಗೆ (Kannada Serial) ವಾಹಿನಿಗಳು ಗೇಟ್​ಪಾಸ್ ನೀಡುತ್ತಿದೆ. ಇತ್ತೀಚೆಗಷ್ಟೆ ಕಲರ್ಸ್ ಕನ್ನಡ ಈರೀತಿಯ ಪ್ರಯೋಗ ಮಾಡುತ್ತಿದೆ. ಈಗ ಈ ಸಾಲಿಗೆ ಸ್ಟಾರ್ ಸುವರ್ಣ ಕೂಡ ಸೇರಿದೆ. ಸ್ಟಾರ್ ಸುವರ್ಣ ಪ್ರಸಾರ ಕಾಣುತ್ತಿದ್ದ ನೀನಾದೆ ನಾ ಸೀರಿಯಲ್ ಇದೀಗ ದಿಢೀರ್ ಮುಕ್ತಾಯಗೊಂಡಿದೆ.

ದಿಲೀಪ್​ ಶೆಟ್ಟಿ ಹಾಗೂ ಖುಷಿ ಶಿವು ಮುಖ್ಯ ಭೂಮಿಕೆಯಲ್ಲಿರುವ ಧಾರಾವಾಹಿ ನೀನಾದೆ ನಾ ಕೊನೆಗೊಂಡಿದೆ. ಈ ಧಾರಾವಾಹಿ ಎರಡು ಅಧ್ಯಾಯದಲ್ಲಿ ಪ್ರಸಾರಕಂಡಿತು. ಮೊದಲ ಅಧ್ಯಾಯ ಭಾರೀ ಜನಪ್ರಿಯತೆ ಪಡೆದಿತ್ತು. ರೌಡಿ ಅಂತಿದ್ದ ತುಂಬು ಕುಟುಂಬದ ವಿಕ್ರಮ್​ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದಳು ವೇದಾ. ವೇದಾ, ದಿಲ್​ಖುಷ್​ ಅಂತಲೇ ಈ ಜೋಡಿ ಅಪಾರ ಜನಮಣ್ಣನೆ ಪಡೆದಿತ್ತು. ಆದರೆ, ಎರಡನೇ ಅಧ್ಯಾಯ ಅಟ್ಟರ್ ಫ್ಲಾಪ್ ಆಯಿತು.

ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ ಶುರುವಾಗಿದ್ದು ಕಳೆದ ವರ್ಷವಷ್ಟೇ. ಸೆಪ್ಟೆಂಬರ್ 9, 2024 ರಿಂದ ತುಳುನಾಡಿನ ಬ್ಯಾಕ್‌ಡ್ರಾಪ್‌ನಲ್ಲಿ ವಿಕ್ರಮ್ - ವೇದಾರ ಹೊಸ ಪ್ರೇಮಕಥೆ ಆರಂಭವಾಯಿತು. ಹೊಸ ಅಧ್ಯಾಯ ಶುರುವಾಗಿ ಇನ್ನೂ ವರ್ಷ ಆಗಿಲ್ಲ. ಅಷ್ಟು ಬೇಗ ಧಾರಾವಾಹಿಯನ್ನ ವೈಂಡಪ್ ಮಾಡಲಾಗಿದೆ. 269 ಎಪಿಸೋಡ್‌ಗಳಿಗೆ ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ ಎಂಡ್‌ ಆಗಿದೆ.

Prithwi Bhat: ಆದಷ್ಟು ಬೇಗ ನಮ್ಮನ್ನು ಒಪ್ಪಿ ಮನೆಗೆ ಕರೆಸಿ: ಪೋಷಕರಲ್ಲಿ ಕೈ ಮುಗಿದು ಕೇಳಿದ ಪೃಥ್ವಿ ಭಟ್

ಎರಡನೇ ಅಧ್ಯಾಯ ಅಷ್ಟಾಗಿ ಗೆಲುವು ಕಾಣಲಿಲ್ಲ. ಹೀಗಾಗಿ ಸ್ಟೋರಿನ ಲ್ಯಾಗ್​ ಮಾಡ್ದೇ ಮುಕ್ತಾಯ ಮಾಡಿದೆ ವಾಹಿನಿ. ನೀನಾದೆ ನಾ ಮುಕ್ತಾಯದ ಬೆನ್ನಲ್ಲೆ ಹೊಸ ಧಾರಾವಾಹಿ ಎಂಟ್ರಿ ಕೊಡುತ್ತಿದೆ. ಅದುವೇ ವಾಸುದೇವ ಕುಟಂಬ. ಇದು ತಮಿಳು ಧಾರಾವಾಹಿಯ ರಿಮೇಕ್​ ಸ್ಟೋರಿ ಆಗಿದ್ದು, ನಾಲ್ವರು ಹೆಣ್ಣುಮಕ್ಕಳನ್ನ ಹೆತ್ತ ತಂದೆ ತಾಯಿ ಏನೆಲ್ಲಾ ಕಷ್ಟ ಅನುಭವಿಸ್ತಾರೆ ಎಂಬುದರ ಕುರಿತು ಕಥೆ ಸಾಗಲಿದೆ. ಧಾರಾವಾಹಿಯಲ್ಲಿ ಹಿರಿಯ ನಟ ಅವಿನಾಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೊಸ ಧಾರಾವಾಹಿ ಅನೌನ್ಸ್​ ಆದ ಬೆನ್ನಲ್ಲೆ, ಮತ್ತೊಂದು ವಿಶೇಷತೆ ಎಂದರೆ ಆಸೆ ಧಾರಾವಾಹಿ ಪ್ರತಿ ದಿನ 7 ರಿಂದ 8 ಗಂಟೆಯವರೆಗೂ 1 ಗಂಟೆ ಪ್ರಸಾರವಾಗಲಿದೆ.