Bhagya Lakshmi Serial: ನೋವಿನಿಂದ ಮನೆಬಿಟ್ಟು ಬಂದ ಕಿಶನ್: ಭಾಗ್ಯ ಮನೆಯಲ್ಲೇ ವಾಸ?
ಸದ್ಯ ಕಿಶನ್ ಮನೆಬಿಟ್ಟು ಬಂದಿರುವುದು ಹಾಗೂ ರಾಮ್ದಾಸ್ ಕುಟುಂಬ ಒಡೆದಿರುವುದು ದೊಡ್ಡ ಸುದ್ದಿಯಾಗಿದ್ದು, ನ್ಯೂಸ್ ಚಾನೆಲ್ನಲ್ಲೆಲ್ಲ ಬಂದಿದೆ. ಕಿಶನ್ ಮುಂದಿನ ನಡೆ ಏನು?, ಆದೀಶ್ವರ್ ಕರೆದ ಎಂದು ಪುನಃ ಮನೆಗೆ ಹೋಗುತ್ತಾನ ಅಥವಾ ಭಾಗ್ಯ ಮನೆಗೆ ತೆರಳುತ್ತಾನ ಎಂಬುದು ನೋಡಬೇಕಿದೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ನಿಲ್ಲಿಸಲು ಆದೀಶ್ವರ್ ಕಾಮತ್ ಮಾಡಿದ ಪ್ಲ್ಯಾನ್ ಸಂಪೂರ್ಣ ಫೇಲ್ ಆಗಿದೆ. ಭಾಗ್ಯಗೆ ನಮ್ಮ ಆಸ್ತಿ ಮೇಲೆ ಕಣ್ಣು ಇದೆ. ಆಸ್ತಿಯನ್ನ ಕಬಳಿಸೋದಕ್ಕೆ ಭಾಗ್ಯ ಪ್ಲಾನ್ ಮಾಡ್ತಿದ್ದಾಳೆ ಅಂತ ಕನ್ನಿಕಾ ಹೇಳಿದ್ದನ್ನು ಆದೀಶ್ವರ್ ನಿಜವೆಂದು ಪರಿಗಣಿಸಿ ತಂದೆಯ ಬಳಿ ಹೇಳಿ ವಿಲ್ ಮಾಡಿಸಿದ್ದಾನೆ. ಈ ಆಸ್ತಿಯಲ್ಲಿ ಕಿಶನ್‌ಗೆ ಮದುವೆಯ ಬಳಿಕ ಕಿಂಚಿತ್ತೂ ಪಾಲು ನೀಡಲಾಗುವುದಿಲ್ಲ ಎಂದು ವಿಲ್ನಲ್ಲಿ ಬರೆದಿದ್ದಾರೆ.
ಕಿಶನ್‌ಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ಎಂದು ತಿಳಿದು ಭಾಗ್ಯ ಮನೆಯವರು ಖಂಡಿತವಾಗಿಯೂ ಈ ಮದುವೆ ಬೇಡ ಎಂದು ಹೇಳುತ್ತಾರೆ ಎಂದು ಮೀನಾಕ್ಷಿ ಮತ್ತು ಆದೀಶ್ವರ್ ಅಂದುಕೊಳ್ಳುತ್ತಾರೆ. ಆದರೆ, ಇಲ್ಲಿ ಆಗಿದ್ದೇ ಬೇರೆ. ಆಸ್ತಿಯಲ್ಲಿ ಕಿಶನ್‌ಗೆ ಪಾಲು ಸಿಗುವುದಿಲ್ಲ ಅಂತ ಗೊತ್ತಾದ್ಮೇಲೂ.. ಮದುವೆ ಮಾತುಕತೆಯನ್ನ ಭಾಗ್ಯ ಮುಂದುವರೆಸುತ್ತಾಳೆ. ನಿಮ್ಮ ಆಸ್ತಿಯನ್ನ ನೋಡಿ ನಾವು ಮದುವೆಗೆ ಒಪ್ಪಿಕೊಳ್ಳಲಿಲ್ಲ. ಅಸಲಿಗೆ, ನಿಮ್ಮ ಮಗ ಅಂತ ಗೊತ್ತಾಗೋಕೆ ಮುನ್ನವೇ ನಾವು ಮದುವೆಗೆ ಒಪ್ಪಿಕೊಂಡಿದ್ವಿ. ಕಿಶನ್ ಗುಣ ಮಾತ್ರ ನಮಗೆ ಮೆಚ್ಚುಗೆಯಾಗಿದ್ದು ಎಂದು ಭಾಗ್ಯ ಹೇಳುತ್ತಾಳೆ. ಕುಸುಮಾ ಸಹ ಆಸ್ತಿ ವಿಚಾರಕ್ಕೆ ಮಹತ್ವ ಕೊಡುವುದಿಲ್ಲ.
ಭಾಗ್ಯ ಮತ್ತು ಕುಸುಮಾ ಮಾತುಗಳನ್ನ ಕೇಳಿ ಆದೀಶ್ವರ್‌ಗೆ ಶಾಕ್ ಆಗಿದೆ. ಭಾಗ್ಯ ಮುಂದೆ ಆದೀಶ್ವರ್‌ಗೆ ಮುಖಭಂಗವಾಗಿದೆ. ಪ್ರತಿಬಾರಿ ಭಾಗ್ಯ ಮನೆಯವರು ಸರಿಯಿಲ್ಲ ಎಂದು ಪ್ರೂವ್ ಮಾಡಲು ಹೊರಟಾಗ ಆದೀಗೆ ಹಿನ್ನಡೆ ಆಗಿದೆ. ಭಾಗ್ಯ ಹೋದ ಬಳಿಕ ಆದೀ ಕಿಶನ್ ಬಳಿ ಬಂದು, ಈ ಮದುವೆ ಬೇಡ ಅಂತ ಹೇಳು ನಿನಗೆ ಆಸ್ತಿ ಸಿಗೋ ಹಾಗೆ ನಾನು ಮಾಡ್ತೀನಿ ಎಂದು ಹೇಳುತ್ತಾನೆ. ಆದರೆ, ಕಿಶನ್ ಆಸ್ತಿಗೋಸ್ಕರ ನಾನು ಈ ಮದುವೆಯಂತು ಕ್ಯಾನ್ಸಲ್ ಮಾಡಲ್ಲ.. ನನ್ಗೆ ಆಸ್ತಿಯಲ್ಲಿ ಪಾಲಿಲ್ಲ ಅಂತ ಹೇಳೋಕೆ ಲಾಯರ್ನ ಕರೆಸಿ ವಿಲ್ ಮಾಡಿಸೋ ಅಗತ್ಯ ಇರಲಿಲ್ಲ.. ನನ್ನ ಕರೆದು ನಿನ್ಗೆ ಆಸ್ತಿಯಲ್ಲಿ ಏನೂ ಕೊಡಲ್ಲ ಅಂತ ಡೈರೆಕ್ಟ್ ಆಗಿ ಹೇಳಿದ್ರೆ ನಾನು ಉಟ್ಟ ಬಟ್ಟೆಯಲ್ಲೇ ಮನೆಬಿಟ್ಟು ಹೊರಡ್ತಿದ್ದೆ ಎಂದು ಹೇಳಿದ್ದಾನೆ.
ಈ ಘಟನೆ ಕಿಶನ್ ಮನಸ್ಸಿಗೆ ತುಂಬಾ ನೋವು ತರಿಸಿದೆ. ಹೀಗಾಗಿ ಮನೆಬಿಟ್ಟು ಹೋಗಿದ್ದಾನೆ. ಈ ಮನೆಗೂ ನನಗೂ ಸಂಬಂಧ ಇಲ್ಲ ಅಂತ ಗೊತ್ತಾಯಿತು.. ನಾನು ಇನ್ಮುಂದೆ ಜಿಮ್ನಲ್ಲೇ ಇರುತ್ತೇನೆ ಎಂದಿದ್ದಾನೆ. ಆಗ ಕನ್ನಿಕಾ, ಜಿಮ್ ಅಪ್ಪನ ಹೆಸರಲ್ಲಿ ಇರೋದು ನೀನು ಅಲ್ಲಿ ಇರೋ ಹಾಗಿಲ್ಲ ಎಂದು ಜಿಮ್ ಕೀ ಯನ್ನು ತೆಗೆದುಕೊಂಡಿದ್ದಾಳೆ. ಇದರಿಂದ ಕಿಶನ್‌ಗೆ ಮತ್ತಷ್ಟು ನೋವಾಗಿದೆ. ನೇರವಾಗಿ ಕಿಶನ್ ಲಗೆಜ್ ತೆಗೆದುಕೊಂಡು ಫ್ರೆಂಡ್ ಮನೆಗೆ ಹೋಗಿದ್ದಾನೆ.
ಕಿಶನ್ ಎಲ್ಲಿದ್ದಾನೆ ಎಂದು ತಿಳಿದುಕೊಂಡು ಅಲ್ಲಿಗೆ ಭಾಗ್ಯ ಬಂದಿದ್ದಾಳೆ. ಬರುವಾಗ ಭಾಗ್ಯ ಹೋಟೆಲ್ ಊಟ ತಿಂದುಕೊಂಡು ಹೊಟ್ಟೆ ಹಾಳು ಮಾಡ್ಕೋ ಬೇಡಿ ಎಂದು ಒಂದು ದಿನಕ್ಕೆ ಆಗುವಷ್ಟು ಊಟ ಮಾಡಿಕೊಂಡು ತಂದಿದ್ದಾಳೆ. ನಾನು ಒಂದು ಬಾಡಿಗೆ ಮನೆ ನೋಡಿದ್ದೇನೆ.. ಮದುವೆ ಆದ ನಂತ್ರ ನೀವು ಮತ್ತು ಪೂಜಾ ಒಟ್ಟಿಗೆ ಅಲ್ಲೇ ಇರಬಹುದು ಎಂದು ಹೇಳಿದ್ದಾಳೆ. ಇದೇವೇಳೆ ಅಲ್ಲಿಗೆ ಆದೀಶ್ವರ್ ಕಾಮತ್ ಬಂದಿದ್ದಾನೆ. ಬಂದವನೇ ಮನೆಗೆ ಹೋಗೋಣ ಕಿಶನ್ ಎಂದು ಹೇಳಿದ್ದಾನೆ. ಆದರೆ, ಇದಕ್ಕೆ ಕಿಶನ್ ವಿರೋಧ ವ್ಯಕ್ತಪಡಿಸಿದ್ದಾನೆ. ನಾನು ಯಾವುದೇ ಕಾರಣಕ್ಕೂ ಮನೆಗೆ ಬರಲ್ಲ ಎಂದು ಹೇಳಿದ್ದಾನೆ.
ಸದ್ಯ ಕಿಶನ್ ಮನೆಬಿಟ್ಟು ಬಂದಿರುವುದು ಹಾಗೂ ರಾಮ್ದಾಸ್ ಕುಟುಂಬ ಒಡೆದಿರುವುದು ದೊಡ್ಡ ಸುದ್ದಿಯಾಗಿದ್ದು, ನ್ಯೂಸ್ ಚಾನೆಲ್ನಲ್ಲೆಲ್ಲ ಬಂದಿದೆ. ಕಿಶನ್ ಮುಂದಿನ ನಡೆ ಏನು?, ಆದೀಶ್ವರ್ ಕರೆದ ಎಂದು ಪುನಃ ಮನೆಗೆ ಹೋಗುತ್ತಾನ ಅಥವಾ ಭಾಗ್ಯ ಮನೆಗೆ ತೆರಳುತ್ತಾನ ಎಂಬುದು ನೋಡಬೇಕಿದೆ.
BBH 19: ಬಿಗ್ ಬಾಸ್ ಪ್ರಿಯರಿಗೆ ಬಂಪರ್ ಸುದ್ದಿ: ಟಿವಿಗೂ ಮೊದಲು ಒಟಿಟಿಯಲ್ಲಿ ನೋಡಬಹುದು