BBH 19: ಬಿಗ್ ಬಾಸ್ ಪ್ರಿಯರಿಗೆ ಬಂಪರ್ ಸುದ್ದಿ: ಟಿವಿಗೂ ಮೊದಲು ಒಟಿಟಿಯಲ್ಲಿ ನೋಡಬಹುದು
ಬಿಗ್ ಬಾಸ್‌ನಲ್ಲಿ ಪ್ರತಿಸಲ ಒಂದಲ್ಲ ಒಂದು ಟ್ವಿಸ್ಟ್ ಇದ್ದೇ ಇರುತ್ತದೆ. ಈ ಬಾರಿಯೂ ಅಂಥಹದ್ದೇ ಒಂದು ಟ್ವಿಸ್ಟ್ ಇರಲಿದೆ. ಈ ಮೊದಲೆಲ್ಲ ಬಿಗ್ ಬಾಸ್ ಶೋ ಟಿವಿ ಹಾಗೂ ಒಟಿಟಿಯಲ್ಲಿ ಒಟ್ಟಿಗೆ ಪ್ರಸಾರ ಕಾಣುತ್ತಿತ್ತು. ಆದರೆ, ಈ ಬಾರಿ ಒಟಿಟಿಗೆ ಹೆಚ್ಚಿನ ಆದ್ಯತೆ ನೀಡಲು ಜಿಯೋ ಹಾಟ್ಸ್ಟಾರ್ನಲ್ಲಿ ಶೋ ಮೊದಲು ಪ್ರಸಾರ ಕಾಣಲಿದೆ.

Bigg Boss

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ (Bigg Boss Kannada 12) ವೇದಿಕೆ ಸಿದ್ಧವಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ದಿನಾಂಕ ಕೂಡ ರಿವೀಲ್ ಆಗಲಿದೆ. ಕನ್ನಡದ ಜೊತೆಗೆ ಇತರೆ ಭಾಷೆಗಳಲ್ಲಿ ಕೂಡ ಬಿಗ್ ಬಾಸ್ ಶುರುವಾಗುತ್ತಿದ್ದು, ತೆಲುಗು ಹಾಗೂ ಮಲಯಾಳಂನಲ್ಲಿ ಪ್ರೊಮೋ ಕೂಡ ಔಟ್ ಆಗಿದೆ. ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಮುನ್ನಡೆಸಲಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಪಂಚೆಯುಟ್ಟು ಪ್ರೊಮೋದಲ್ಲಿ ಮಿಂಚಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ನಿರೂಪಕರಾಗಿ ಮುಂದುವರೆಯಲಿದ್ದಾರೆ. ಕನ್ನಡ-ತೆಲುಗು ಜೊತೆಗೆ ಹಿಂದಿಯಲ್ಲೂ ಬಿಗ್ ಬಾಸ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ ಬಾಸ್ 19ನೇ ಸೀಸನ್ ಬಗ್ಗೆ ಇದೀಗ ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ.
ಬಿಗ್ ಬಾಸ್‌ನಲ್ಲಿ ಪ್ರತಿಸಲ ಒಂದಲ್ಲ ಒಂದು ಟ್ವಿಸ್ಟ್ ಇದ್ದೇ ಇರುತ್ತದೆ. ಈ ಬಾರಿಯೂ ಅಂಥಹದ್ದೇ ಒಂದು ಟ್ವಿಸ್ಟ್ ಇರಲಿದೆ. ಮೊನ್ನೆಯಷ್ಟೆ ಹಿಂದಿ ಬಿಗ್ ಬಾಸ್‌ನಲ್ಲಿ 16 ಮಂದಿ ಸ್ಪರ್ಧಿಗಳ ಜತೆ ಹಬುಬ್ ಡಾಲ್ (Habubu doll ) ಎಂಬ ಎಐ ರೋಬೋಟ್ ಕೂಡ ಮನೆಯೊಳಗೆ ಪ್ರವೇಶಿಸಲಿದೆ ಎನ್ನಲಾಗಿತ್ತು. ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಈ ಬಾರಿ ಹಿಂದಿ ಬಿಗ್ ಬಾಸ್ ಪ್ರಸಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿಯಾಗಿದೆ ಎನ್ನಲಾಗುತ್ತಿದೆ.
Drone Prathap: ಊರಲ್ಲಿ ಓಡಾಡಲು ಅಮ್ಮನಿಗೆ ಹೊಸ ಕಾರು ತೆಗೆದುಕೊಟ್ಟ ಡ್ರೋನ್ ಪ್ರತಾಪ್
ಈ ಮೊದಲೆಲ್ಲ ಬಿಗ್ ಬಾಸ್ ಶೋ ಟಿವಿ ಹಾಗೂ ಒಟಿಟಿಯಲ್ಲಿ ಒಟ್ಟಿಗೆ ಪ್ರಸಾರ ಕಾಣುತ್ತಿತ್ತು. ಆದರೆ, ಈ ಬಾರಿ ಒಟಿಟಿಗೆ ಹೆಚ್ಚಿನ ಆದ್ಯತೆ ನೀಡಲು ಜಿಯೋ ಹಾಟ್ಸ್ಟಾರ್ನಲ್ಲಿ ಶೋ ಮೊದಲು ಪ್ರಸಾರ ಕಾಣಲಿದೆ. ಆ ಬಳಿಕ ಟಿವಿಯಲ್ಲಿ ಬರಲಿದೆ ಎನ್ನಲಾಗಿದೆ. ಈ ಮೂಲಕ ಡಿಜಿಟಲ್ ಪ್ರೇಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡುವ ಕೆಲಸ ಆಗುತ್ತಿದೆ.
ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್‌ಗೆ ಅಪಾರ ವೀಕ್ಷಕರಿದ್ದಾರೆ. ವೀಕೆಂಡ್ ಕಾ ವಾರ್ ನೋಡಲು ವೀಕ್ಷಕರು ಕಾಯುತ್ತಿರುತ್ತಾರೆ. ಆದರೆ, ಈ ಬಾರಿ ಸಲ್ಮಾನ್ ಖಾನ್ ಜೊತೆಗೆ ಇತರೆ ಮೂವರು ಬಿಗ್ ಬಾಸ್ ಹೋಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಲದ ಬಿಗ್ ಬಾಸ್ ಐದೂವರೆ ತಿಂಗಳು ಇರುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಹೀಗಾಗಿ ಸಲ್ಮಾನ್ ಜತೆ ಇತರೆ ಮೂವರು ಕೂಡ ಹೋಸ್ಟ್ ಆಗಿ ಶೋ ಮಧ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.