ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಬಾಸ್ ಮುಖಕ್ಕೆ ರೆಸಿಗ್ನೇಷನ್ ಲೆಟರ್ ಬಿಸಾಕಿದ ತಾಂಡವ್: ಭಾಗ್ಯ ಮನೆಗೆ ಬಂದು ಅವಾಜ್

ಭಾಗ್ಯ ಕೊಡಿಸಿರುವ ಕೆಲಸ ನಾನು ಮಾಡಲ್ಲ ಅಂತ ಬಾಸ್ ಮುಖದ ಮೇಲೆ ರೆಸಿಗ್ನೇಷನ್ ಲೆಟರ್ ಬಿಸಾಕಿ ಬಂದಿದ್ದೇನೆ ಎಂದು ಭಾಗ್ಯ ಬಳಿ ಹೇಳಿದ್ದಾನೆ. ಅಷ್ಟೇ ಅಲ್ಲದೆ, ನಂದೆ ಆದ ಒಂದು ಹೊಸ ಬ್ಯುಸಿನೆಸ್ ಸ್ಟಾರ್ಟ್ ಮಾಡ್ತೇನೆ.. ಒಂದಲ್ಲ ಒಂದು ದಿನ ನೀನೆ ಬಂದು ನನ್ನ ಕಾಲು ಹಿಡ್ಕೊಂಡು ಸಹಾಯ ಮಾಡು ಅಂತ ಕೇಳ್ತೀಯ ನೋಡು ಎಂದು ಭಾಗ್ಯಾಗೆ ತಾಂಡವ್ ಹೇಳಿದ್ದಾನೆ.

ಬಾಸ್ ಮುಖಕ್ಕೆ ರೆಸಿಗ್ನೇಷನ್ ಲೆಟರ್ ಬಿಸಾಕಿದ ತಾಂಡವ್

Bhagya Lakshmi Serial

Profile Vinay Bhat Jun 6, 2025 11:49 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಇಂಟ್ರೆಸ್ಟಿಂಗ್ ಎಪಿಸೋಡ್​ಗಳು ಪ್ರಸಾರ ಕಾಣುತ್ತಿದೆ. ಒಂದೆಡೆ ಭಾಗ್ಯಾ ಹಾಗೂ ಆದೀಶ್ವರ್​ನ ಜುಗಲ್​ಬಂದಿ ಸಾಗುತ್ತಿದೆ. ಮತ್ತೊಂದೆಡೆ ತಾಂಡವ್-ಭಾಗ್ಯ ಜಗಳ ಕೂಡ ಶುರುವಾಗಿದೆ. ಒಟ್ಟಾರೆಯಾಗಿ ಕಥಾನಾಯಕಿ ಭಾಗ್ಯಾಗೆ ಒಂದಲ್ಲ ಎರಡೆರಡು ಸಮಸ್ಯೆ ಎದುರಾಗಿದೆ. ಭಾಗ್ಯ ರಾಮ್​ದಾಸ್ ಮನೆಗೆ ಬಂದಾಗ ಆದೀ ಕಿಶನ್​ನ ಅಣ್ಣ ಎಂಬ ಸತ್ಯ ಗೊತ್ತಾಗಿದೆ. ಬಳಿಕ ಈ ಹಿಂದೆ ನಡೆದ ಘಟನೆಗೆಲ್ಲ ಕ್ಷಮೆ ಕೇಳಿದ್ದಾಳೆ. ಆದರೆ, ಆದೀ ಸಿಟ್ಟು ಇಲ್ಲಿಂದ ದುಪ್ಪಟ್ಟಾಗಿದೆ. ಆದೀ ಭಾಗ್ಯ ಕೆಟ್ಟವಳೆಂದು ಪ್ರೂವ್ ಮಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾನೆ. ಅತ್ತ ತಾಂಡವ್ ಬಾಸ್ ಮುಖಕ್ಕೆ ರೆಸಿಗ್ನೇಷನ್ ಲೆಟರ್ ಬಿಸಾಕಿ ಭಾಗ್ಯ ಮನೆಗೆ ಬಂದು ವಾರ್ನ್ ಮಾಡಿದ್ದಾನೆ.

ತಾಂಡವ್​ಗೆ ತನ್ನ ಆಫೀಸ್​ನಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಎಲ್ಲಿಹೋದರು ಭಾಗ್ಯಾಳ ಹೆಸರೇ ಕೇಳಿಸುತ್ತಿದೆ. ಮೊನ್ನೆಯಷ್ಟೆ ಆಫೀಸ್​ನಲ್ಲಿ ಒಂದು ಕೆಲಸ ಆಗಿಲ್ಲ ಎಂದು ತನ್ನ ಅಸಿಸ್ಟೆಂಟ್ ಬಳಿ ತಾಂಡವ್ ಜಗಳ ಆಡುತ್ತ ಇರುತ್ತಾನೆ. ಆದರೆ, ಆತ ಈಗ ಈ ಕೆಲಸ ಮಾಡೋಕೆ ಆಗಲ್ಲ.. ಬಾಸ್ ನನ್ನ ಬಳಿ ಬೇರೆ ಕೆಲಸ ಹೇಳಿದ್ದಾರೆ.. ನಾನು ಅವರು ಹೇಳಿದ ಕೆಲಸ ಮಾಡಿಲ್ಲ ಎಂದರೆ ನನ್ನ ಕೆಲಸ ಹೋಗುತ್ತದೆ.. ಎಲ್ಲಾದರು ಕೆಲಸ ಹೋದರೆ ಮತ್ತೆ ನನ್ಗೆ ಕೆಲಸ ತೆಗೆದಿಕೊಡಲು ಭಾಗ್ಯ ಮೇಡಂ ಅಂತವರು ಯಾರೂ ಇಲ್ಲ.. ನಿಮ್ಗೆ ಈ ಹಿಂದೆ ಕೆಲಸ ಹೋದಾಗ ಪುನಃ ಭಾಗ್ಯ ಮೇಡಣ ಕೆಲಸ ತೆಗೆಸಿಕೊಟ್ಟಿದ್ದರು.. ಆದರೆ ನನಗೆ ಆರೀತಿ ಯಾರೂ ಇಲ್ಲ ಎಂದಿದ್ದಾನೆ.

ಇದು ತಾಂಡವ್​ಗೆ ಮತ್ತಷ್ಟು ಪಿತ್ತ ನೆತ್ತಿಗೇರಿಸಿದೆ. ತನ್ನ ಅಸಿಸ್ಟೆಂಟ್​ನ ಕೆನ್ನೆಗೆ ತಾಂಡವ್ ಜೋರಾಗಿ ಬಾರಿಸಿದ್ದಾನೆ. ಅಲ್ಲದೆ ಮನೆಗೆ ಬಂದಮೇಲೂ ಶ್ರೇಷ್ಠಾ ಜೊತೆ ಜಗಳ ಆಡಿದ್ದಾನೆ. ಇದನ್ನೆಲ್ಲ ಸಹಿಸಲಾಗದೆ ತಾಂಡವ್ ಬಾಸ್​ಗೆ ಅವಮಾನ ಮಾಡಿ ರಾಜೀನಾಮೆ ನೀಡಿದ್ದಾನೆ. ಆಫೀಸ್​ಗೆ ಡೋಲು ಬಡಿಯುವವರನ್ನು ಕರೆಸಿ ಬಾಸ್ ಮುಂದೆ ಡ್ಯಾನ್ಸ್ ಮಾಡಿ ರೆಸಿಗ್ನೇಷನ್ ಲೆಟರ್ ಬಿಸಾಕಿದ್ದಾನೆ. ಇಲ್ಲಿಂದ ತಾಂಡವ್ ನೇರವಾಗಿ ಭಾಗ್ಯ ಮನೆಗೆ ತೆರಳಿದ್ದಾನೆ.



ಭಾಗ್ಯ ಕೊಡಿಸಿರುವ ಕೆಲಸ ನಾನು ಮಾಡಲ್ಲ ಅಂತ ಬಾಸ್ ಮುಖದ ಮೇಲೆ ರೆಸಿಗ್ನೇಷನ್ ಲೆಟರ್ ಬಿಸಾಕಿ ಬಂದಿದ್ದೇನೆ ಎಂದು ಭಾಗ್ಯ ಬಳಿ ಹೇಳಿದ್ದಾನೆ. ಅಷ್ಟೇ ಅಲ್ಲದೆ, ನಂದೆ ಆದ ಒಂದು ಹೊಸ ಬ್ಯುಸಿನೆಸ್ ಸ್ಟಾರ್ಟ್ ಮಾಡ್ತೇನೆ.. ಒಂದಲ್ಲ ಒಂದು ದಿನ ನೀನೆ ಬಂದು ನನ್ನ ಕಾಲು ಹಿಡ್ಕೊಂಡು ಸಹಾಯ ಮಾಡು ಅಂತ ಕೇಳ್ತೀಯ ನೋಡು ಎಂದು ಭಾಗ್ಯಾಗೆ ತಾಂಡವ್ ಹೇಳಿದ್ದಾನೆ. ಇದಕ್ಕೆ ಸುಮ್ಮನಾಗದ ಭಾಗ್ಯ ಕೂಡ ಕೌಂಟರ್ ಕೊಟ್ಟಿದ್ದಾಳೆ. ತಾಂಡವ್ ಸರ್.. ಅದನ್ನೆಲ್ಲ ಕನಸು ಅಂತ ಅಂದುಕೊಂಡು ಮರೆತು ಬಿಡಿ ಎಂದು ಹೇಳಿದ್ದಾಳೆ.

ಮತ್ತೊಂದೆಡೆ ಕಿಶನ್-ಪೂಜಾ ಮದುವೆ ನಿಲ್ಲಿಸಲು ಆದೀಶ್ವರ್ ಕಾಮತ್ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಾನೆ. ಭಾಗ್ಯ ಮನೆಯವರು ಒಳ್ಳೆಯವರಲ್ಲ, ಸಂಸ್ಕಾರವಂತರಲ್ಲ ಎಂದು ಪ್ರೂವ್ ಮಾಡಲು ಹೊರಟಿದ್ದಾನೆ. ಕಿಶನ್ ಬಂದು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆದೀ ಮನಸ್ಸು ಕರಗುತ್ತಿಲ್ಲ. ಅಷ್ಟೇ ಅಲ್ಲದೆ ತಂದೆ ಜೊತೆಗೂ ಆದೀ, ಅವರು ಕೆಟ್ಟವರೆಂದು ಪ್ರೂವ್ ಮಾಡ್ತೇನೆ ಅಂತ ಚಾಲೆಂಜ್ ಮಾಡಿದ್ದಾನೆ. ಸದ್ಯ ಧಾರಾವಾಹಿಯಲ್ಲಿ ತಾಂಡವ್-ಆದೀಶ್ವರ್ ಎಪಿಸೋಡ್ ಸಖತ್ ಕುತೂಹಲ ಕೆರಳಿಸಿದೆ. ಭಾಗ್ಯ ಇದನ್ನೆಲ್ಲ ಹೇಗೆ ಸರಿಪಡಿಸುತ್ತಾಳೆ ಎಂಬುದು ನೋಡಬೇಕಿದೆ.

Karna Serial: ಬಹುನಿರೀಕ್ಷಿತ ಕರ್ಣ ಧಾರಾವಾಹಿ ಆರಂಭಕ್ಕೆ ಮುಹೂರ್ತ ಫಿಕ್ಸ್: ಈ ದಿನಾಂಕದಿಂದ ಪ್ರಸಾರ ಆರಂಭ