ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Devarakonda Bigg Boss: ಬಿಗ್ ಬಾಸ್ ನಿರೂಪಣೆಗೆ ವಿಜಯ್ ದೇವರಕೊಂಡ ಕೇಳಿದ ಸಂಭಾವನೆ ಎಷ್ಟು ಕೋಟಿ ಗೊತ್ತೇ?

ವರದಿಯ ಪ್ರಕಾರ, ನಿರ್ಮಾಪಕರು ಕಾರ್ಯಕ್ರಮವನ್ನು ಮುನ್ನಡೆಸಲು ಹೊಸ ಮುಖವನ್ನು ಹುಡುಕುತ್ತಿದ್ದಾರೆ. ಯುವ ಪ್ರೇಕ್ಷಕರಲ್ಲಿ ವಿಜಯ್ ದೇವರಕೊಂಡ ಅವರ ಜನಪ್ರಿಯತೆಯು ಅವರ ನಿರ್ಧಾರಕ್ಕೆ ಪ್ರಮುಖ ಅಂಶವಾಗಿರಬಹುದು. ಏಳು ಸೀಸನ್‌ಗಳಿಂದ ಈ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿರುವ ನಾಗಾರ್ಜುನ ಬದಲಿಗೆ ಅರ್ಜುನ್ ರೆಡ್ಡಿ ತಾರೆಯನ್ನು ಸೇರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಬಿಗ್ ಬಾಸ್: ವಿಜಯ್ ದೇವರಕೊಂಡ ಕೇಳಿದ ಸಂಭಾವನೆ ಎಷ್ಟು ಕೋಟಿ?

vijay deverakonda bigg boss

Profile Vinay Bhat Mar 12, 2025 7:12 AM

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ತೆಲುಗು (Bigg Boss Telugu) ಭಾಷೆಯ ಮುಂಬರುವ ಒಂಬತ್ತನೇ ಸೀಸನ್‌ನಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಈ ಹಿಂದೆ ಇದ್ದ ನಿರೂಪಕ ಬದಲಾಗಲಿದ್ದು, ಯುವ ತಾರೆಯೊಬ್ಬರು ಅವರ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಮುಂದಿನ ಸೀಸನ್‌ಗೆ ನಾಗಾರ್ಜುನ ಬದಲಿಗೆ ನಟ ವಿಜಯ್ ದೇವರಕೊಂಡ ಅವರು ನಿರೂಪಕರಾಗಿ ಆಯ್ಕೆಯಾಗಲು ಮಾತುಕತೆ ನಡೆದಿದೆ. 2017ರಲ್ಲಿ ಬಿಗ್‌ ಬಾಸ್‌ ತೆಲುಗು ಮೊದಲ ಸೀಸನ್‌ ಆರಂಭವಾಗಿತ್ತು. ಜೂ. ಎನ್‌ಟಿಆರ್‌ ಫಸ್ಟ್‌ ಸೀಸನ್‌ ನಡೆಸಿಕೊಟ್ಟಿದ್ದರು. ಎರಡನೇ ಸೀಸನ್‌ನಲ್ಲಿ ನಾನಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಮೂರನೇ ಸೀಸನ್‌ನಿಂದ ನಾಗರ್ಜುನ್‌ ಶೋ ನಡೆಸಿಕೊಟ್ಟಿದ್ದರು.

ಸಿನಿಮಾ ಸೇರಿದಂತೆ ಇತರ ಕಾರಣಗಳಿಂದ ಮುಂದಿನ ಬಿಗ್ ಬಾಸ್ ಶೋ ನಿರೂಪಕಣೆ ಮಾಡಲು ನಾಗಾರ್ಜುನಗೆ ಸಾಧ್ಯವಾಗುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ನಾಗಾರ್ಜುನ್ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ವಿಜಯ ದೇವರಕೊಂಡ ಜೊತೆ ಮೊದಲ ಸುತ್ತಿನ ಮಾತುಕತೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ನಿರ್ಮಾಪಕರು ಕಾರ್ಯಕ್ರಮವನ್ನು ಮುನ್ನಡೆಸಲು ಹೊಸ ಮುಖವನ್ನು ಹುಡುಕುತ್ತಿದ್ದಾರೆ. ಯುವ ಪ್ರೇಕ್ಷಕರಲ್ಲಿ ವಿಜಯ್ ದೇವರಕೊಂಡ ಅವರ ಜನಪ್ರಿಯತೆಯು ಅವರ ನಿರ್ಧಾರಕ್ಕೆ ಪ್ರಮುಖ ಅಂಶವಾಗಿರಬಹುದು. ಏಳು ಸೀಸನ್‌ಗಳಿಂದ ಈ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿರುವ ನಾಗಾರ್ಜುನ ಬದಲಿಗೆ ಅರ್ಜುನ್ ರೆಡ್ಡಿ ತಾರೆಯನ್ನು ಸೇರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಈ ಗುಸು-ಗುಸು ಬೆನ್ನಲ್ಲೇ ಬಿಗ್ ಬಾಸ್ ಹೋಸ್ಟಿಂಗ್ ಮಾಡಬೇಕು ಅಂದ್ರೆ ಕೆಲವು ಕಂಡೀಷನ್ಸ್ ಹಾಕಿದ್ದಾರಂತೆತೆ ವಿಜಯ್ ದೇವರಕೊಂಡ. ತಾನು ಯಾವ ಕಂಟೆಸ್ಟೆಂಟ್​ಗೂ ಫೇವರ್ ಆಗಿ ಇರಲ್ಲ, ಎಪಿಸೋಡ್ಸ್, ಟ್ಯಾಲೆಂಟ್, ಅಲ್ಲಿ ನಡೆಯೋದು ನೋಡಿ ಮಾತ್ರ ಹೋಸ್ಟಿಂಗ್ ಮಾಡ್ತೀನಿ ಅಂತ ವಿಜಯ್ ಹೇಳಿದ್ದಾರಂತೆ. ಅಷ್ಟೇ ಅಲ್ಲ ಫಲಾನ್ ಕಂಟೆಸ್ಟೆಂಟ್ ಕಡೆ ಇರಬೇಕು ಅಂತ ನನ್ನನ್ನ ಪ್ರೆಷರ್ ಮಾಡಬೇಡಿ ಎಂದಿದ್ದಾರಂತೆ. ಇನ್ನು ಸೀಸನ್​ಗೆ ಟೋಟಲ್​ ಆಗಿ 15 ಕೋಟಿ ಸಂಭಾವನೆ ವಿಜಯ್ ಡಿಮ್ಯಾಂಡ್ ಮಾಡಿದ್ದಾರೆ ಎಂದು ವರದಿ ಆಗಿದೆ.

Kiran Raj Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ಕಿರಣ್ ರಾಜ್: ಝೀ ಕನ್ನಡದಲ್ಲಿ ಬರುತ್ತಿದೆ ಕರ್ಣ ಧಾರಾವಾಹಿ

ಟಾಲಿವುಡ್‌ನಲ್ಲಿ ವಿಜಯ್ ದೇವರಕೊಂಡ ಹೆಚ್ಚು ಬೆಂಬಲವಿಲ್ಲದೆ ಬೆಳೆದ ನಟ. ಅರ್ಜುನ್ ರೆಡ್ಡಿ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ಪಡೆದುಕೊಂಡಿತು. ರೊಮ್ಯಾಂಟಿಕ್ ಮತ್ತು ಆಕ್ಷನ್ ಹೀರೋ ಆಗಿ ಮಿಂಚಿದ್ದ ವಿಜಯ್ ದೇವರಕೊಂಡಗೆ ಒಂದರ ನಂತರ ಒಂದರಂತೆ ಅವಕಾಶಗಳು ಬಂದವು. ವೃತ್ತಿ ಮತ್ತು ಜೀವನ ಬದಲಾಯಿತು. ಆದರೆ ಒಂದು ಹಂತದಲ್ಲಿ, ನಟ ಎಡವಿದರು.

ಬಾಲಿವುಡ್ ಚಿತ್ರ ಲೆಗರ್ ವೈಫಲ್ಯ ವಿಜಯ್ ದೇವರಕೊಂಡ ಅವರ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ಬಿದ್ದಿತು. ಹಿಂದಿ ಮಾರುಕಟ್ಟೆಯಲ್ಲಿ ಸಿನಿಮಾ ವಿಫಲವಾಗಿದ್ದರೂ, ಪ್ಯಾನ್-ಇಂಡಿಯನ್ ಆಗಿ ಬಿಡುಗಡೆಯಾದ ಲೆಗರ್ ಚಿತ್ರದ ವೈಫಲ್ಯದ ಪರಿಣಾಮ ಸಣ್ಣದಾಗಿರಲಿಲ್ಲ. ಆ ಸಿನಿಮಾ ಮತ್ತು ಅದರಲ್ಲಿನ ಪ್ರಮುಖ ಪಾತ್ರ ಟ್ರೋಲ್ ವಿಷಯವಾಯಿತು.

ಅದಾದ ನಂತರ ವಿಜಯ್ ದೇವರಕೊಂಡ ತಮ್ಮ ವೃತ್ತಿಜೀವನದಲ್ಲಿ ಮೇಲೇಳಲು ಹರಸಾಹಸ ಪಡುತ್ತಿದ್ದಾರೆ. ಖುಷಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಅವರ ಮುಂದಿನ ಬಿಡುಗಡೆಯಾದ ಫ್ಯಾಮಿಲಿ ಸ್ಟಾರ್ ವಿಫಲವಾಯಿತು. ವಿಜಯ್ ದೇವರಕೊಂಡ ಅದೇ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎಂಬ ಕಾಮೆಂಟ್‌ಗಳು ಸಹ ಬಂದವು. ಇದೀಗ ನಿರೂಪಕನಾಗಿ ಹೊಸ ಜರ್ನಿ ಶುರುಮಾಡಲಿದ್ದು, ಇದು ಇವರಿಗೆ ಯಾವರೀತಿ ಬ್ರೇಕ್ ಕೊಡುತ್ತೆ ಎಂಬುದು ನೋಡಬೇಕಿದೆ.