Bhagya Lakshmi Serial: ಗುಂಡಣ್ಣ ಶೂ ಪಾಲೀಶ್ ಮಾಡೋದನ್ನು ನೋಡಿದ ತಾಂಡವ್
ಶೂ ಪಾಲೀಶ್ ಕಿಟ್ ಹಿಡಿದುಕೊಂಡು ಬಂದ ಗುಂಡಣ್ಣ, ಪಕ್ಕದ ರಸ್ತೆಗೆ ಹೋಗಿ, ಅಲ್ಲಿ ರಸ್ತೆ ಬದಿ ಕುಳಿತು ಶೂ ಪಾಲೀಶ್, ಶೂ ಪಾಲೀಶ್ ಎಂದು ಜನರನ್ನು ಕೂಗಿ ಕರೆದಿದ್ದಾನೆ. ಒಬ್ಬೊಬ್ಬರೇ ಬಂದು ಶೂ ಪಾಲೀಶ್ ಮಾಡಿಸಿಕೊಂಡು ಹೋಗಿದ್ದಾರೆ. ದುಡ್ಡು ಕೂಡ ಸಿಗುತ್ತದೆ. ಆದರೆ, ಗುಂಡಣ್ಣನ ಶರ್ಟ್ ಮೇಲೆ ಎಲ್ಲ ಪಾಲೀಶ್‌ನ ಕೊಳೆ ಆಗುತ್ತದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ( Bhagya Lakshmi Serial ) ಭಾಗ್ಯಾಳ ಕಷ್ಟಕ್ಕೆ ಮಗ ಗುಂಡನ್ನ ಜೊತೆಯಾಗಿದ್ದಾನೆ. ಒಂದರ ಹಿಂದೆ ಒಂದರಂತೆ ತೊಂದರೆಗಳು ಭಾಗ್ಯಾಳಿಗೆ ಆವರಿಸಿಕೊಂಡು ಬರುತ್ತಿದೆ. ಮನೆಯ ಲೋನ್ ಕಟ್ಟಲು ಭಾಗ್ಯಾಗೆ ಎದುರಾದ ಸಮಸ್ಯೆ ಅಷ್ಟಿಟ್ಟಲ್ಲ. ಹೀಗಿದ್ದರೂ ಹೇಗಾದರು ಮಾಡಿ ಒಂದೇ ದಿನ 40 ಸಾವಿರ ರೂಪಾಯಿಯನ್ನು ಅಡ್ಜಸ್ಟ್ ಮಾಡಿ ಸಾಲ ತೀರಿಸಿದಳು. ಈ ತಿಂಗಳ ಸಾಲ ತೀರಿತು ಎಂದು ಕೊಂಚ ನೆಮ್ಮದಿಯಲ್ಲಿರುವ ಭಾಗ್ಯಾ ಮುಂದಿನ ತಿಂಗಳ ಸಾಲ ಕಟ್ಟಲು ಪುನಃ ತನ್ನ ಹಳೆಯ ಕೆಲಸಕ್ಕೆ ಮರಳಿದ್ದಾಳೆ.
ಜೋಕರ್ ವೇಷ ತೊಟ್ಟು ಜನರನ್ನು ನಗಿಸುವ ಕೆಲಸ ಭಾಗ್ಯ ಮಾಡುತ್ತಿದದಾಳೆ. ಆದ್ರೆ, ಭಾಗ್ಯಾ ಜೋಕರ್ ವೇಷ ತೊಟ್ಟು ಹಣ ಸಂಪಾದಾನೆ ಮಾಡುತ್ತಿರುವ ವಿಚಾರ ಭಾಗ್ಯಾನ ಮಗ ಗುಂಡಣ್ಣನಿಗೆ ಗೊತ್ತಾಗಿದೆ. ತನ್ನ ಕಣ್ಣಿಂದಲೇ ಭಾಗ್ಯಾಳನ್ನು ಗುಂಡಣ್ಣ ರೆಸಾರ್ಟ್ನಲ್ಲಿ ನೋಡಿದ್ದಾನೆ. ಅಮ್ಮನ ಕಷ್ಟ ಕಂಡು ಕಣ್ಣೀರಿಟ್ಟ ಗುಂಡಣ್ಣ ಇದನ್ನ ಯಾವುದೇ ಕಾರಣಕ್ಕೂ ಮನೆಯಲ್ಲಿ ಗೊತ್ತಾಗಲು ಬಿಡಬಾರದು ಎಂದು ಅಂದುಕೊಳ್ಳುತ್ತಾನೆ. ಜೊತೆಗೆ ಅಮ್ಮನಿಗೆ ಸಹಾಯ ಮಾಡಲು, ಹಣ ಸಂಪಾದಿಸಲು ತಾನೇ ಒಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಾನೆ.
ಮನೆಯಿಂದ ಶೂ ಪಾಲೀಶ್ ಕಿಟ್ ತೆಗೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಪಾಲೀಶ್ ಮಾಡಿ ಅದರಿಂದ ಸ್ವಲ್ಪ ಹಣ ಸಂಪಾದನೆ ಮಾಡೋಣ ಅಂದುಕೊಳ್ಳುತ್ತಾನೆ ಗುಂಡಣ್ಣ. ಗುಂಡಣ್ಣನಿಗೆ ರಸ್ತೆ ಬದಿ ಶೂ ಪಾಲೀಶ್ ಮಾಡುವವ ಕಾಣಿಸುತ್ತಾನೆ, ಅವನ ಬಳಿ ಹೋಗಿ, ನನಗೆ ಶಾಲೆಯಲ್ಲಿ ಕ್ರಾಫ್ಟ್ ಮಾಡಲಿಕ್ಕಿದೆ, ಹೀಗಾಗಿ ನಿಮ್ಮ ಶೂ ಪಾಲೀಶ್ ಕಿಟ್ ಕೊಡಬಹುದೇ ಎಂದು ಕೇಳುತ್ತಾನೆ, ಶಾಲೆಯಲ್ಲಿ ಕ್ರಾಫ್ಟ್ ಕೆಲಸ ಇರಬಹುದು ಎಂದು ಪಾಲೀಶ್ ಅಂಗಡಿಯವ ಕಿಟ್ ಕೊಡುತ್ತಾನೆ.
ಶೂ ಪಾಲೀಶ್ ಕಿಟ್ ಹಿಡಿದುಕೊಂಡು ಬಂದ ಗುಂಡಣ್ಣ, ಪಕ್ಕದ ರಸ್ತೆಗೆ ಹೋಗಿ, ಅಲ್ಲಿ ರಸ್ತೆ ಬದಿ ಕುಳಿತು ಶೂ ಪಾಲೀಶ್, ಶೂ ಪಾಲೀಶ್ ಎಂದು ಜನರನ್ನು ಕೂಗಿ ಕರೆದಿದ್ದಾನೆ. ಒಬ್ಬೊಬ್ಬರೇ ಬಂದು ಶೂ ಪಾಲೀಶ್ ಮಾಡಿಸಿಕೊಂಡು ಹೋಗಿದ್ದಾರೆ. ದುಡ್ಡು ಕೂಡ ಸಿಗುತ್ತದೆ. ಆದರೆ, ಗುಂಡಣ್ಣನ ಶರ್ಟ್ ಮೇಲೆ ಎಲ್ಲ ಪಾಲೀಶ್‌ನ ಕೊಳೆ ಆಗುತ್ತದೆ. ಮನೆಗೆ ಬಂದ ನಂತರ ಈ ಕಲೆ ಭಾಗ್ಯಾಗೆ ಕಾಣಿಸುತ್ತದೆ. ಜತೆಗೆ ಚಡ್ಡಿಯ ಜೇಬಿನಲ್ಲಿ ಸ್ವಲ್ಪ ಹಣವೂ ಕಂಡುಬಂದಿದೆ. ಹಣದ ಬಗ್ಗೆ ವಿಚಾರಿಸಿದಾಗ ಇದು ನನ್ನ ಸ್ನೇಹಿತನ ಹಣ.. ಅವನ ಕಿಸೆ ತೂತಾಗಿತ್ತು.. ಹೀಗಾಗಿ ಆಟವಾಡುವಾಗ ನನ್ನ ಬಳಿ ಕೊಟ್ಟಿದ್ದ.. ನಾನು ಮರೆತು ಮನೆಗೆ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಾನೆ.
ಇದರ ಮಧ್ಯೆ ಗುಂಡಣ್ಣ ರಸ್ತೆ ಬದಿಯಲ್ಲಿ ಶೂ ಪಾಲೀಶ್ ಮಾಡುವಾಗ ತಾಂಡವ್ ಆ ಕಡೆ ಬಂದಿದ್ದಾನೆ. ಅಲ್ಲಿ ಗುಂಡಣ್ಣ ಕಸ್ಟಮರ್ ಒಬ್ಬರ ಶೂ ಪಾಲೀಶ್ ಮಾಡುವುದನ್ನು ನೋಡುತ್ತಾನೆ. ತಾಂಡವ್ ಕಣ್ಣಲ್ಲಿ ನೀರು ಬರುತ್ತದೆ. ಜೋರಾಗಿ ಗುಂಡಣ್ಣ ಎಂದು ಕೂಗುತ್ತಾನೆ. ತಾಂಡವ್ನನ್ನು ನೋಡಿ ಗುಂಡಣ್ಣನಿಗೆ ಶಾಕ್ ಆಗುತ್ತದೆ. ಸದ್ಯ ಇದಕ್ಕೆಲ್ಲ ತಾಂಡವ್, ಭಾಗ್ಯಾಳನ್ನೇ ಗುರಿಯಾಗಿಸುತ್ತಾನ?, ಬಾಗ್ಯ ಜೋಕರ್ ವೇಷ ತೊಟ್ಟಿರುವ ಸೀಕ್ರೆಟ್ ರಿವೀಲ್ ಆಗುತ್ತಾ? ಮತ್ತೊಂದೆಡೆ ಬಟ್ಟೆಯಲ್ಲಾದ ಕಲೆಗೆ ಗುಂಡಣ್ಣ ಏನು ಕಾರಣ ನೀಡುತ್ತಾನೆ? ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ತಿಳಿದುಬರಬೇಕಿದೆ.
Ranjith Bigg Boss: ಪ್ರೀ ವೆಡ್ಡಿಂಗ್ ಫೋಟೋ ಶೂಟ್ನಲ್ಲಿ ಮಿಂಚಿದ ಬಿಗ್ ಬಾಸ್ ರಂಜಿತ್