Bhagya Lakshmi Serial: ಭಾಗ್ಯಾಳ ಗುಟ್ಟು ರಟ್ಟು ಮಾಡಿದ ತಾಂಡವ್: ಮನೆಯವರಿಗೆ ಗೊತ್ತಾಯಿತು ಎಲ್ಲ ಸತ್ಯ
ತಾಂಡವ್, ಭಾಗ್ಯ ಮನೆಗೆ ಬಂದು, ಮನೆಯ ಹೊರಗಡೆ ನಿಂತು ಜೋರಾಗಿ ಅರಚುತ್ತಾ ಎಲ್ಲ ಸತ್ಯವನ್ನು ಬಹಿರಂಗ ಪಡಿಸಿದ್ದಾನೆ. ಭಾಗ್ಯ ಕಂಡ ಕಂಡಲ್ಲಿ ಕುಣಿದು ಕೆಲಸ ಮಾಡಿ ಹಣ ಸಂಪಾದಿಸಿ, ನಮ್ಮ ಮರ್ಯಾದೆ ತೆಗೆಯುತ್ತಿದ್ದಾಳೆ.. ತಾನು ಬೀದಿ ಬೀದಿ ಅಲಿದಿದ್ದು ಸಾಕು ಅಂತ ಈಗ ತನ್ನ ಮಗನನ್ನು ಬೀದಿಗೆ ಹಾಕಿದ್ದಾಳೆ ಎಂದು ಹೇಳುತ್ತಾನೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi) ಇಷ್ಟು ದಿನ ಭಾಗ್ಯ ಯಾರಿಗೂ ತಿಳಿಯದಂತೆ ಕಾಪಾಡಿಕೊಂಡು ಬಂದಿದ್ದ ಗುಟ್ಟು ರಟ್ಟಾಗಿದೆ. ತಾಂಡವ್ ಎಲ್ಲ ವಿಚಾರವನ್ನು ಮನೆಯವರ ಮುಂದೆ ಹೇಳಿಬಿಟ್ಟಿದ್ದಾನೆ. ಇದರಿಂದ ಭಾಗ್ಯಾಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ. ಅಷ್ಟೇ ಅಲ್ಲದೆ ಗುಂಡಣ್ಣ ಶೂ ಪಾಲೀಶ್ ಮಾಡುತ್ತಿದ್ದ ವಿಚಾರವನ್ನು ತಾಂಡವ್ ಎಲ್ಲರ ಎದುರು ಹೇಳಿದ್ದಾನೆ. ಮನೆಯವರು ಭಾಗ್ಯಾಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ.
ಅಮ್ಮನಿಗೆ ಸಹಾಯ ಮಾಡಲು, ಹಣ ಸಂಪಾದಿಸಲು ಗುಂಡಣ್ಣ ರಸ್ತೆ ಬದಲಿಯಲ್ಲಿ ಶೂ ಪಾಲೀಶ್ ಮಾಡಿ ಅದರಿಂದ ಸ್ವಲ್ಪ ಹಣ ಸಂಪಾದನೆ ಮಾಡಲು ಮುಂದಾಗಿದ್ದ. ಆದರೆ, ಈ ವಿಚಾರ ತಾಂಡವ್-ಭಾಗ್ಯ ಇಬ್ಬರಿಗೂ ಗೊತ್ತಾಗಿತ್ತು. ತಾಂಡವ್ ಕೂಡಲೇ ಅವನು ಭಾಗ್ಯಗೆ ಫೋನ್ ಮಾಡಿ ಗುಂಡಣ್ಣ ಇರುವಲ್ಲಿಗೆ ಬಾ ಎಂದು ಹೇಳಿದ್ದಾನೆ. ಕೆಲಸದ ಮೇಲಿದ್ದ ಭಾಗ್ಯ ಮೊದಲಿಗೆ ಫೋನ್ ರಿಸೀವ್ ಮಾಡಿಲ್ಲ, ಆದರೆ ತಾಂಡವ್ ಮೊದಲಿಗೆ ಪದೇ ಪದೇ ಫೋನ್ ಮಾಡಿದಾಗ ಕರೆ ಸ್ವೀಕರಿಸಿದ್ದಾಳೆ. ಕೊನೆಗೆ ಭಾಗ್ಯ ಬೇರೆ ದಾರಿಯಿಲ್ಲದೆ ಕೆಲಸವನ್ನು ಅರ್ಧದಲ್ಲೇ ಬಿಟ್ಟು ಬಂದಿದ್ದಾಳೆ.
ಮಗ ಶೂ ಪಾಲೀಶ್ ಕೆಲಸ ಮಾಡುತ್ತಿರುವುದನ್ನು ಕಂಡು ಭಾಗ್ಯಾಗೆ ಶಾಕ್ ಆಗಿದೆ. ಇದರ ಮಧ್ಯೆ ಅತ್ತ ಸ್ಕೂಲ್‌ನಿಂದ ಭಾಗ್ಯಗೆ ಕರೆ ಬಂದಿದ್ದು, ತನ್ಮಯ್ ಎರಡು ದಿನಗಳಿಂದ ಸ್ಕೂಲ್‌ಗೆ ಬಂದಿಲ್ಲ, ಅವನಿಗೆ ಏನಾಗಿದೆ ಎಂದು ಕೇಳಿದ್ದಾರೆ. ಭಾಗ್ಯಾ ಗುಂಡಣ್ಣ ಇರುವಲ್ಲಿಗೆ ಬಂದು, ನಾನೇನು ಕಮ್ಮಿ ಮಾಡಿದ್ದೆ ನಿನ್ಗೆ.. ಯಾರು ಹೇಳಿದ್ದು ನಿನ್ಗೆ ಇದೆಲ್ಲ ಮಾಡೋಕೆ ಎಂದು ಕೇಳಿದ್ದಾಳೆ. ಅದಕ್ಕೆ ತಾಂಡವ್, ನಿನ್ನ ಪುಟ್ಗೋಸಿ ಕೆಲ್ಸದಲ್ಲಿ ಏನೂ ಮಾಡೋಕೆ ಆಗಲ್ಲ ಅಂತ ತಾನೆ ಇವನ್ನ ಶೋ ಪಾಲೀಶ್ ಮಾಡೋಕೆ ಕಳ್ಸಿದ್ದು ಎಂದು ಹೇಳುತ್ತಾನೆ. ಶಾಲೆಯ ಫೀಸ್ ಕಟ್ಟಲು ಬಹಳಷ್ಟು ಹಣ ಬೇಕಾಗುತ್ತದೆ. ಅದಕ್ಕಾಗಿ ಈ ಕೆಲಸ ಮಾಡುತ್ತಿದ್ದೇನೆ, ನೀನು ಕಷ್ಟ ಪಡುವುದನ್ನು ನೋಡಲು ನನ್ನಿಂದ ಆಗಲಿಲ್ಲ ಎಂದು ಗುಂಡಣ್ಣ ಹೇಳಿದಾಗ ಭಾಗ್ಯ ಕಣ್ಣಲ್ಲಿ ನೀರು ಬರುತ್ತದೆ.
ಅತ್ತ ಭಾಗ್ಯ ಏನು ಕೆಲಸ ಮಾಡುತ್ತಾಳೆ ಎಂದು ರಹಸ್ಯವಾಗಿ ಅರಿಯಲು ಬಂದ ತಾಂಡವ್ಗೆ, ಭಾಗ್ಯ ರೆಸಾರ್ಟ್‌ನಲ್ಲಿ ಜೋಕರ್ ವೇಷ ತೊಟ್ಟು ಕುಣಿಯುವ ಕೆಲಸ ಮಾಡುತ್ತಿರುವುದು ಎಂಬುದು ಗೊತ್ತಾಗಿದೆ. ನೀನು ಹೇಳಿಯೇ ಅವನಲ್ಲಿ ಕೆಲಸ ಮಾಡಿಸುತ್ತಿದ್ದಿ, ಅಲ್ಲದೇ, ನೀನು ಹಾಗೂ ಹೀಗೂ ಕುಣಿದು ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದೀ, ನಿನ್ನಲ್ಲಿ ಫೀಸ್ ಕಟ್ಟಲೂ ದುಡ್ಡಿಲ್ಲ, ಆದರೆ ಈ ಬೂಟಾಟಿಕೆ ಮಾತ್ರ ನಿಂತಿಲ್ಲ ಎಂದು ಹೀಯಾಳಿಸುತ್ತಾನೆ. ತಾಂಡವ್ ಮಾತಿಗೆ ಭಾಗ್ಯ, ನಾನು ಕಷ್ಟಪಟ್ಟು ಕೆಲಸ ಮಾಡಿ ಸಂಸಾರವನ್ನು, ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ, ಆದರೆ ನೀನು ಅಂದುಕೊಂಡಂತೆ ಮನೆ, ಜವಾಬ್ದಾರಿ ಬಿಟ್ಟು ಓಡಿ ಹೋಗಿಲ್ಲ. ಅದರ ಬದಲು ನಾನು ಧೈರ್ಯದಿಂದ ಎಲ್ಲವನ್ನೂ ನಿಭಾಯಿಸುತ್ತಿದ್ದೇನೆ, ನಿನ್ನ ಉಪದೇಶ ನನಗೆ ಬೇಕಾಗಿಲ್ಲ ಎಂದು ನೇರವಾಗಿ ಹೇಳಿದ್ದಾಳೆ.
ಗುಂಡಣ್ಣನ ಈ ಸ್ಥಿತಿಗೆ ಭಾಗ್ಯಾಳೆ ಕಾರಣ ಎಂದು ಅಂದುಕೊಂಡು ತನ್ಮಯ್‌ನನ್ನು ನಾನು ಕರೆದೊಯ್ಯುತ್ತೇನೆ, ನನ್ನ ಮಕ್ಕಳನ್ನು ನಾನು ಸಾಕುತ್ತೇನೆ ಎಂದು ತಾಂಡವ್ ಹೇಳುತ್ತಾನೆ. ಆದರೆ, ಇದಕ್ಕೆ ಗುಂಡಣ್ಣನೇ ವಿರೋಧ ವ್ಯಕ್ತಪಡಿಸುತ್ತಾನೆ. ನಾನು ನಿಮ್ಮ ಜೊತೆ ಬರೋದಿಲ್ಲ.. ಅಮ್ಮನ ಜೊತೆಯೇ ಇರುತ್ತೇನೆ ಎಂದು ಕೈ ಬಿಡಿಸಿಕೊಂಡು ಬರುತ್ತಾನೆ. ಬಳಿಕ ಭಾಗ್ಯ-ಗುಂಡಣ್ಣ ಮನೆಗೆ ತೆರಳುತ್ತಾರೆ. ಇವರು ಮನೆಗೆ ತಲುಪುವುದಕ್ಕು ಮುನ್ನವೇ ತಾಂಡವ್, ಭಾಗ್ಯ ಮನೆಗೆ ಬಂದು, ಮನೆಯ ಹೊರಗಡೆ ನಿಂತು ಜೋರಾಗಿ ಅರಚುತ್ತಾ ಎಲ್ಲ ಸತ್ಯವನ್ನು ಬಹಿರಂಗ ಪಡಿಸಿದ್ದಾನೆ. ಭಾಗ್ಯ ಕಂಡ ಕಂಡಲ್ಲಿ ಕುಣಿದು ಕೆಲಸ ಮಾಡಿ ಹಣ ಸಂಪಾದಿಸಿ, ನಮ್ಮ ಮರ್ಯಾದೆ ತೆಗೆಯುತ್ತಿದ್ದಾಳೆ.. ತಾನು ಬೀದಿ ಬೀದಿ ಅಲಿದಿದ್ದು ಸಾಕು ಅಂತ ಈಗ ತನ್ನ ಮಗನನ್ನು ಬೀದಿಗೆ ಹಾಕಿದ್ದಾಳೆ ಎಂದು ಹೇಳುತ್ತಾನೆ.
ಸದ್ಯ ಮನೆಗೆ ಬಂದ ಭಾಗ್ಯಾ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೆ?, ಮನೆಯವರಿಗೆ ಹೇಗೆ ಕನ್ವೆನ್ಸ್ ಮಾಡುತ್ತಾಳೆ ಅಲ್ಲದೆ ನಾಳೆಯಿಂದ ಯಾವ ಕೆಲಸಕ್ಕೆ ಹೋಗುತ್ತಾಳೆ ಎಂಬುದು ನೋಡಬೇಕಿದೆ.
Chaithra Kundapura: ವೇದಿಕೆ ಮೇಲೆ ಚೈತ್ರಾಳನ್ನು ಎತ್ತಿ ಗರಗರನೆ ತಿರುಗಿಸಿದ ರಜತ್ ಕಿಶನ್: ವಿಡಿಯೋ ನೋಡಿ