Bhagya Lakshmi Serial: ಭಾಗ್ಯಾಳಿಗೆ ಗೊತ್ತಾಯಿತು ಗುಂಡಣ್ಣ ಶೂ ಪಾಲೀಶ್ ಮಾಡುವ ವಿಚಾರ: ರೊಚ್ಚಿಗೆದ್ದ ತಾಂಡವ್
ತಾಂಡವ್, ಗುಂಡಣ್ಣನಿಗೆ ಬೈಯುತ್ತಾ ಇರುತ್ತಾನೆ. ಭಾಗ್ಯಾ ಬಂದು, ನಾನೇನು ಕಮ್ಮಿ ಮಾಡಿದ್ದೆ ನಿನ್ಗೆ.. ಯಾರು ಹೇಳಿದ್ದು ನಿನ್ಗೆ ಇದೆಲ್ಲ ಮಾಡೋಕೆ ಎಂದು ಕೇಳಿದ್ದಾಳೆ. ಅದಕ್ಕೆ ತಾಂಡವ್, ನಿನ್ನ ಪುಟ್ಗೋಸಿ ಕೆಲ್ಸದಲ್ಲಿ ಏನೂ ಮಾಡೋಕೆ ಆಗಲ್ಲ ಅಂತ ತಾನೆ ಇವನ್ನ ಶೋ ಪಾಲೀಶ್ ಮಾಡೋಕೆ ಕಳ್ಸಿದ್ದು ಎಂದು ಹೇಳುತ್ತಾನೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಳಿಗೆ ಒಂದಲ್ಲ ಒಂದು ಕಷ್ಟಗಳು ಬರುತ್ತಲೇ ಇದೆ. ಭಾಗ್ಯ ಪದೇ ಪದೇ ಅಗ್ನಿಪರೀಕ್ಷೆಯನ್ನು ಎದುರಿಸುತ್ತಳೇ ಇದ್ದಾಳೆ. ಮನೆಯ ಲೋನ್ ಕಟ್ಟಲು ಭಾಗ್ಯಾಗೆ ಎದುರಾದ ಸಮಸ್ಯೆ ಅಷ್ಟಿಟ್ಟಲ್ಲ. ಹೀಗಿದ್ದರೂ ಹೇಗಾದರು ಮಾಡಿ ಒಂದೇ ದಿನ 40 ಸಾವಿರ ರೂಪಾಯಿಯನ್ನು ಅಡ್ಜಸ್ಟ್ ಮಾಡಿ ಸಾಲ ತೀರಿಸಿದಳು. ಈ ತಿಂಗಳ ಸಾಲ ತೀರಿತು ಎಂದು ಕೊಂಚ ನೆಮ್ಮದಿಯಲ್ಲಿರುವ ಭಾಗ್ಯಾ ಮುಂದಿನ ತಿಂಗಳ ಸಾಲ ಕಟ್ಟಲು ಪುನಃ ತನ್ನ ಹಳೆಯ ಕೆಲಸಕ್ಕೆ ಮರಳಿದ್ದಾಳೆ. ಭಾಗ್ಯಾಳ ಕಷ್ಟಕ್ಕೆ ಮಗ ಗುಂಡನೂ ಜೊತೆಯಾಗಿದ್ದ.
ಅಮ್ಮನಿಗೆ ಸಹಾಯ ಮಾಡಲು, ಹಣ ಸಂಪಾದಿಸಲು ಗುಂಡಣ್ಣ ರಸ್ತೆ ಬದಲಿಯಲ್ಲಿ ಶೂ ಪಾಲೀಶ್ ಮಾಡಿ ಅದರಿಂದ ಸ್ವಲ್ಪ ಹಣ ಸಂಪಾದನೆ ಮಾಡಲು ಮುಂದಾಗುತ್ತಾನೆ. ಆದರೆ, ಈ ವಿಚಾರ ಈಗ ಬಹಿರಂಗವಾಗಿದೆ. ತಾಂಡವ್-ಭಾಗ್ಯ ಇಬ್ಬರಿಗೂ ಗೊತ್ತಾಗಿದೆ. ಎರಡು ದಿನಗಳಿಂದ ಗುಂಡಣ್ಣ ಶಾಲೆಗೆ ಹೋಗದೆ ಶೂ ಪಾಲೀಶ್ ಮಾಡುತ್ತಾ ಇರುತ್ತಾನೆ. ಎರಡನೇ ದಿನ ಬೆಳಗ್ಗೆ ಗುಂಡಣ್ಣನನ್ನು ಶಾಲೆಗೆ ಬಿಟ್ಟು ಭಾಗ್ಯ ಅಲ್ಲಿಂದಲೇ ಕೆಲಸಕ್ಕೆ ಹೋಗುತ್ತೇ ಅಂದು ಹೊರಡುತ್ತಾಳೆ. ಆಗ ಹೊರಗಡೆ ಅವಳಿಗೆ ಯಾವುದೇ ಅಟೋ ಸಿಕ್ಕಿಲ್ಲ. ಬಳಿಕ ಸಿಕ್ಕಿದ ಅಟೋದಲ್ಲಿ ಗುಂಡಣ್ಣನನ್ನು ಕರೆದುಕೊಂಡು ಭಾಗ್ಯ ಹೊರಟಿದ್ದಾಳೆ, ಸ್ಕೂಲ್ ಬಳಿ ಗುಂಡಣ್ಣನನ್ನು ಡ್ರಾಪ್ ಮಾಡಿ ಅವಳು ಹೋಗಿದ್ದಾಳೆ.
ಇದರ ಮಧ್ಯೆ ಭಾಗ್ಯ ಎಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಪತ್ತೆಹಚ್ಚಲು ತಾಂಡವ್ ಯತ್ನಿಸುತ್ತಿದ್ದಾನೆ. ಭಾಗ್ಯಳನ್ನು ಹಿಂಬಾಲಿಸಿ, ಅವಳ ಕೆಲಸ ತಿಳಿದುಕೊಳ್ಳಲು ಹೊರಟಿದ್ದಾನೆ. ಅದರಂತೆ ಅವಳು ಗುಂಡಣ್ಣನನ್ನು ಸ್ಕೂಲ್ ಬಳಿ ಡ್ರಾಪ್ ಮಾಡುವುದನ್ನು ನೋಡಿದ್ದಾನೆ. ಆದರೆ ಗುಂಡಣ್ಣ ಮಾತ್ರ ಹಿಂದಿನ ದಿನ ಮಾಡಿದಂತೆಯೇ, ಶೂ ಪಾಲೀಶ್ ಮಾಡುವವನ ಬಳಿ ಕಿಟ್ ತೆಗೆದುಕೊಂಡು ಹೋಗಿ, ಪಕ್ಕದ ರಸ್ತೆಯಲ್ಲಿ ಕುಳಿತುಕೊಳ್ಳುತ್ತಾನೆ. ಅದನ್ನು ಕಂಡ ತಾಂಡವ್, ಅವನನ್ನು ಹಿಂಬಾಲಿಸಿಕೊಂಡು ಬಂದು ಗುಂಡಣ್ಣನಿಗೆ ಸರಿಯಾಗಿ ಬೈದಿದ್ದಾನೆ.
ಸ್ಕೂಲ್‌ಗೆ ಹೋಗದೆ ಈ ಕೆಲ್ಸ ಮಾಡ್ಕೊಂಡು ಕೂತಿದ್ದೀಯ.. ಸ್ಕೂಲ್‌ಗೆ ಹೋಗೋಕೆ ಏನೋ ದೊಡ್ಡ ರೋಗ ನಿನ್ಗೆ.. ಹೋ ನಿಮ್ಮ ಅಮ್ಮ ಐಡಿಯಾ ಕೊಟ್ಟಿದ್ದ ಇದೆಲ್ಲ ಮಾಡು ಅಂತ.. ಮಕ್ಕಳನ್ನು ನೋಡ್ಕೊಳೋ ಯೋಗ್ಯತೆ ಇಲ್ಲ ಅಂದ್ರೆ ಬಾಯಿಬಿಟ್ಟು ಹೇಳಬೇಕು ಎಂದು ಭಾಗ್ಯಾಳನ್ನು ಬೈಯಲು ಮುಂದಾಗುತ್ತಾನೆ. ಆಗ ಗುಂಡಣ್ಣ ನೀವು ನನ್ಗೆ ಏನು ಬೇಕಾದ್ರು ಅನ್ನಿ.. ಆದ್ರೆ ಅಮ್ಮಂಗೆ ಮಾತ್ರ ಏನು ಅನ್ಬೇಡಿ.. ಅಮ್ಮಂಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಾನೆ.
ಅತ್ತ ಸ್ಕೂಲ್‌ನಿಂದ ಭಾಗ್ಯಗೆ ಕರೆ ಬಂದಿದ್ದು, ತನ್ಮಯ್ ಎರಡು ದಿನಗಳಿಂದ ಸ್ಕೂಲ್‌ಗೆ ಬಂದಿಲ್ಲ, ಅವನಿಗೆ ಏನಾಗಿದೆ ಎಂದು ಕೇಳಿದ್ದಾರೆ. ಅದನ್ನು ಕೇಳಿ ಭಾಗ್ಯಗೆ ಹೆದರಿಕೆ ಶುರುವಾಗಿದೆ. ಭಾಗ್ಯಾ ಕೂಡ ತಾಂಡವ್-ಗುಂಡಣ್ಣ ಇರುವ ಜಾಗಕ್ಕೆ ಬಂದಿದ್ದಾಳೆ. ಅಲ್ಲಿ ತಾಂಡವ್, ಗುಂಡಣ್ಣನಿಗೆ ಬೈಯುತ್ತಾ ಇರುತ್ತಾನೆ. ಭಾಗ್ಯಾ ಬಂದು, ನಾನೇನು ಕಮ್ಮಿ ಮಾಡಿದ್ದೆ ನಿನ್ಗೆ.. ಯಾರು ಹೇಳಿದ್ದು ನಿನ್ಗೆ ಇದೆಲ್ಲ ಮಾಡೋಕೆ ಎಂದು ಕೇಳಿದ್ದಾಳೆ. ಅದಕ್ಕೆ ತಾಂಡವ್, ನಿನ್ನ ಪುಟ್ಗೋಸಿ ಕೆಲ್ಸದಲ್ಲಿ ಏನೂ ಮಾಡೋಕೆ ಆಗಲ್ಲ ಅಂತ ತಾನೆ ಇವನ್ನ ಶೋ ಪಾಲೀಶ್ ಮಾಡೋಕೆ ಕಳ್ಸಿದ್ದು ಎಂದು ಹೇಳುತ್ತಾನೆ.
ಸದ್ಯ ಭಾಗ್ಯಾ ಈ ಘಟನೆಯನ್ನು ಹೇಗೆ ನಿಭಾಯಿಸುತ್ತಾಳೆ?, ಮನೆಯಲ್ಲಿ ಏನು ಹೇಳುತ್ತಾಳೆ?, ತಾಂಡವ್ ಏನು ಮಾಡುತ್ತಾನೆ ಎಂಬುದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
Shishir-Aishwarya: ವೀಡಿಯೊ ಆಯ್ತು ಈಗ ಜೊತೆಯಾಗಿ ಫೋಟೋಶೂಟ್ ಮಾಡಿಸಿಕೊಂಡ ಶಿಶಿರ್-ಐಶ್ವರ್ಯಾ