ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chaithra Kundapura: ವೇದಿಕೆ ಮೇಲೆ ಚೈತ್ರಾಳನ್ನು ಎತ್ತಿ ಗರಗರನೆ ತಿರುಗಿಸಿದ ರಜತ್ ಕಿಶನ್: ವಿಡಿಯೋ ನೋಡಿ

ಬಿಗ್ ಬಾಸ್ ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿದ್ದ ಚೈತ್ರಾ- ರಜತ್ ಹೊರಬಂದ ಬಳಿಕ ಮತ್ತೊಮ್ಮೆ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಮೂಲಕ ಮನರಂಜನೆ ನೀಡುತ್ತಿದ್ದಾರೆ. ರಜತ್- ಚೈತ್ರಾ ಕುಂದಾಪುರ ತುಂಟ ತುಂಟ ಸಾಂಗ್ಗೆ ಡ್ಯಾನ್ಸ್ ಮಾಡಿ ಸಖತ್ ಮಿಂಚಿದ್ದಾರೆ.

ವೇದಿಕೆ ಮೇಲೆ ಚೈತ್ರಾಳನ್ನು ಎತ್ತಿ ಗರಗರನೆ ತಿರುಗಿಸಿದ ರಜತ್

Rajath and Chaithra Kundapura

Profile Vinay Bhat Mar 18, 2025 7:24 AM

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 (Bigg Boss Kannada 11) ಕಾರ್ಯಕ್ರಮ ಮುಗಿದ ಬಳಿಕ ವೀಕೆಂಡ್​ನಲ್ಲಿ ಶುರುವಾಗಿರುವ ಬಾಯ್ಸ್ vs ಗರ್ಲ್ಸ್​ ರಿಯಾಲಿಟಿ ಶೋಗೆ ಅದ್ಭುತ ಪ್ರತಿಕ್ರಿಯೆ ಕೇಳಿಬರುತ್ತಿದೆ. ವಾರದಿಂದ ವಾರಕ್ಕೆ ಈ ಶೋ ಕಿಕ್ ಕೊಡುತ್ತಿದೆ. ಬಹುತೇಕ ಬಿಗ್ ಬಾಸ್ ಸ್ಪರ್ಧಿಗಳಿಂದಲೇ ಕೂಡಿರುವ ಈ ಶೋ ಪ್ರತಿ ವಾರ ನೋಡುಗರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಹುಡುಗರು ಹುಡುಗಿಯರಿಗೆ ಹಾಕುವ ಚಾಲೆಂಜ್ ಮತ್ತು ಹುಡುಗಿಯರು ಹುಡುಗರಿಗೆ ಹಾಕುವ ಚಾಲೆಂಜ್ ಪ್ರೇಕ್ಷಕರಿಗೆ ರೋಮಾಂಚನ ನೀಡುತ್ತದೆ.

ಬಿಗ್ ಬಾಸ್ ಮನೆಯಲ್ಲಿ ಸದಾ ಕಿತ್ತಾಡುತ್ತಿದ್ದ ರಜತ್ ಕಿಶನ್ ಮತ್ತು ಚೈತ್ರಾ ಕುಂದಾಪುರ ಈ ರಿಯಾಲಿಟಿ ಶೋನಲ್ಲಿದ್ದು, ಇಲ್ಲೂ ಅದೇ ಇವರ ಕೋಳಿ ಜಗಳ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಫೈರ್‌ಬ್ರ್ಯಾಂಡ್‌ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ಜೋರು ದನಿಯಿಂದಲೇ ಹೆಸರು ಮಾಡಿದರು. ಯಾವುದೇ ಸಂದರ್ಭದಲ್ಲಿ ಇವರು ಬಿಟ್ಟುಕೊಡುತ್ತಿರಲಿಲ್ಲ. ಮಾತಿನ ಮೂಲಕವೇ ಎಲ್ಲ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ್ದರು. ಇತ್ತ ವೈಲ್ಡ್‌ಕಾರ್ಡ್‌ ಮೂಲಕ ದಿಢೀರ್ ಎಂಟ್ರಿ ಕೊಟ್ಟ ರಜತ್‌ ಕಿಶನ್ ಕೂಡ ಕಡಿಮೆಯೇನಿರಲಿಲ್ಲ. ತಮ್ಮ ನೇರ ಮಾತು ಹಾಗೂ ಫಿಲ್ಟರ್ ಇಲ್ಲದೆ ಕೊಡುವಂತಹ ಕೌಂಟರ್​ಗಳಿಗೆ ಎದುರಾಳಿ ನಡುಗುತ್ತಿದ್ದರು.

ಬಿಗ್ ಬಾಸ್ ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿದ್ದ ಚೈತ್ರಾ- ರಜತ್ ಹೊರಬಂದ ಬಳಿಕ ಮತ್ತೊಮ್ಮೆ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಮೂಲಕ ಮನರಂಜನೆ ನೀಡುತ್ತಿದ್ದಾರೆ. ನಿನ್ನೆ ಈ ಶೋಗೆ ಬಿಗ್​ ಬಾಸ್​ ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ಗೋಲ್ಡ್​ ಸುರೇಶ್​ ಹಾಗೂ ಗೌತಮಿ ಜಾಧವ್​ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಆಗ ನಿರೂಪಕಿ ಅನುಪಮ ಗೌಡ ಈ ಹಿಂದೆ ಬಿಗ್ ​ಬಾಸ್​ ಮನೆಯಲ್ಲಿ ಗೌತಮಿ ಹಾಗೂ ರಜತ್​ ಅವರು ನಟಿ ತಾರಾ ಅವರ ಮುಂದೆ ತುಂಟ ತುಂಟ ಸಾಂಗ್​ಗೆ ಡ್ಯಾನ್ಸ್ ಮಾಡಿದ್ದರು. ಇದೀಗ ಮತ್ತೆ ಅದೇ ಸಾಂಗ್​ ಅನ್ನು ಬಾಯ್ಸ್ ಹಾಗೂ ಗರ್ಲ್ಸ್ ವೇದಿಕೆ ಮೇಲೆ ರೀ ಕ್ರಿಯೇಟ್ ಮಾಡುವಂತೆ ಹೇಳಿದ್ದಾರೆ.

ಅದರಂತೆ ರಜತ್-ಗೌತಮಿ ಕ್ಯೂಸ್ ಸ್ಟೆಪ್ಸ್ ಹಾಕಿದ್ದಾರೆ. ಇದಾದ ಬಳಿಕ ರಜತ್​- ಚೈತ್ರಾ ಕುಂದಾಪುರ ಇದೇ ತುಂಟ ತುಂಟ ಸಾಂಗ್​ಗೆ ಡ್ಯಾನ್ಸ್​ ಮಾಡುವಂತೆ ಅನುಪಮಾ ಗೌಡ ಹೇಳಿದ್ದಾರೆ. ಆಗ ಹಾಡು ಶುರುವಾಗುತ್ತಿದ್ದಂತೆ ರೊಚ್ಚಿಗೆದ್ದ ರಜತ್​ ಏಕಾಏಕಿ ಚೈತ್ರಾ ಅವರ ಕೈಯನ್ನು ಹಿಡಿದು ಎಳೆದಿದ್ದಾರೆ. ಅಲ್ಲದೇ ಅವರನ್ನು ಎತ್ತಿಕೊಂಡು ತಿರುಗಿಸಿದ್ದಾರೆ. ಇದನ್ನೇ ನೋಡಿದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Puneeth Rajkumar: ಅಪ್ಪು ಸಮಾಧಿಗೆ ಭೇಟಿ ನೀಡಿ ಕೈ ಮುಗಿದ ಭವ್ಯಾ ಗೌಡ-ಅನುಷಾ ರೈ