Bhagya Lakshmi Serial: ಊಟದ ಆರ್ಡರ್ ಬರುತ್ತೆಂದು ಫೋನ್ ಮುಂದೆ ಕಾದು ಕುಳಿತ ಭಾಗ್ಯ
ಭಾಗ್ಯ ಮನೆ ಮನೆಗೆ ಊಟದ ಡಬ್ಬ ತಲುಪಿಸುವ ಬಗ್ಗೆ ಯೋಜನೆ ರೂಪಿಸಿದ್ದಾಳೆ. ಮನೆಯಿಂದಲೇ ಅವಳು ಅಡುಗೆ ಮಾಡಿ ಹಾಸ್ಟೆಲ್ ಹುಡುಗರಿಗೆ, ಆಫೀಸ್‌ನಲ್ಲಿದ್ದವರಿಗೆ ಬಾಕ್ಸ್ ಕಳಿಸಿಕೊಡುವ ಪ್ಲಾನ್ ಇದಾಗಿದೆ. ಅದಕ್ಕೆ ಮನೆಯವರೆಲ್ಲರೂ ಸಹಕಾರ ನೀಡಿದ್ದಾರೆ. ಭಾಗ್ಯಗೆ ಅವರ ಪ್ರೋತ್ಸಾಹ ಕಂಡು ಮತ್ತಷ್ಟು ಖುಷಿಯಾಗಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯ ಕಥಾನಾಯಕಿ ಭಾಗ್ಯಾಗೆ ಯಾವ ಕೆಲಸ ಕೂಡ ಕೈಹಿಡಿಯುತ್ತಿಲ್ಲ. ತನಗಾಗದವರು ಕೆಲಸಕ್ಕೆ ಕಲ್ಲು ಹಾಕುತ್ತಿದ್ದಾರೆ. ಮೊದಲಿಗೆ ದೊಡ್ಡ ಐವ್ ಸ್ಟಾರ್ ಹೋಟೆಲ್ನಲ್ಲಿ ಆರಾಮವಾಗಿ ಚೆಫ್ ಕೆಲಸ ಮಾಡುತ್ತಿದ್ದಳು, ಅಲ್ಲಿ ತಾಂಡವ್-ಶ್ರೇಷ್ಠಾ ಅವರು ಕನ್ನಿಕಾಳ ಸಹಾಯ ಪಡೆದು ಕೆಲಸದಿಂದ ಕಿತ್ತೆಸೆದರು. ಬಳಿಕ ಎಷ್ಟೇ ಕೆಲಸ ಹುಡುಕಿದರೂ ಯಾವುದೂ ಸಿಗಲಿಲ್ಲ. ಕೊನೆಯದಲ್ಲಿ ಯಾವುದೂ ಕೆಲಸವಿಲ್ಲದೆ ರೆಸಾರ್ಟ್ ಒಂದರಲ್ಲಿ ಜೋಕರ್ ವೇಷ ತೊಟ್ಟು ನೃತ್ಯ ಮಾಡುವ ಕೆಲಸ ಕೂಡ ಮಾಡಿದಳು. ಆದರೆ, ಇದರ ಮೇಲೂ ಶ್ರೇಷ್ಠಾ-ತಾಂಡವ್ ವಕ್ರದೃಷ್ಠಿಯಿಟ್ಟು ಕೆಲಸ ಕಳೆದುಕೊಳ್ಳುವಂತೆ ಮಾಡಿದರು. ಇದೀಗ ಭಾಗ್ಯ ಯಾರ ಹಂಗು ಬೇಡವೆಂದು ತಾನೇ ಸ್ವತಃ ಹೊಸ ಉದ್ಯಮ ಆರಂಭಿಸಲಿದ್ದಾಳೆ.
ಭಾಗ್ಯ ಮನೆ ಮನೆಗೆ ಊಟದ ಡಬ್ಬ ತಲುಪಿಸುವ ಬಗ್ಗೆ ಯೋಜನೆ ರೂಪಿಸಿದ್ದಾಳೆ. ಮನೆಯಿಂದಲೇ ಅವಳು ಅಡುಗೆ ಮಾಡಿ ಹಾಸ್ಟೆಲ್ ಹುಡುಗರಿಗೆ, ಆಫೀಸ್‌ನಲ್ಲಿದ್ದವರಿಗೆ ಬಾಕ್ಸ್ ಕಳಿಸಿಕೊಡುವ ಪ್ಲಾನ್ ಇದಾಗಿದೆ. ಅದಕ್ಕೆ ಮನೆಯವರೆಲ್ಲರೂ ಸಹಕಾರ ನೀಡಿದ್ದಾರೆ. ಭಾಗ್ಯಗೆ ಅವರ ಪ್ರೋತ್ಸಾಹ ಕಂಡು ಮತ್ತಷ್ಟು ಖುಷಿಯಾಗಿದೆ. ಹೀಗಾಗಿ ಅವಳು, ಚೆಂದದ ಒಂದು ಲೋಗೊ ಕೂಡ ರೂಪಿಸಿದ್ದಾಳೆ. ಇದಕ್ಕೆ ಕೈ ರುಚಿ ಎಂಬ ನಾಮಕರಣವೂ ಆಗಿದೆ.
ತನ್ನ ಉದ್ಯಮವನ್ನು ಭಾಗ್ಯ ಭರ್ಜರಿ ಆಗಿ ಪ್ರಚಾರ ಕೂಡ ಮಾಡುತ್ತಿದ್ದಾಳೆ. ಬೀದಿ ಬೀದಿಯಲ್ಲಿ ಕಾಗದ ಹಂಚಿ ಪಬ್ಲಿಸಿಟಿ ಮಾಡುತ್ತಿದ್ದಾಳೆ. ಬಳಿಕ ಮನೆಗೆ ಬಂದು ಒಂದಾದರು ಫೋನ್ ಕಾಲ್ ಬರುತ್ತ ಎಂದು ಕಾದು ಕುಳಿತಿದ್ದಾಳೆ. ಆದರೆ, ಭಾಗ್ಯ ಹೊಸ ಉದ್ಯಮ ನೋಡಿ ಅವಳ ತಾಯಿಗೆ ಅಷ್ಟೊಂದು ಇಷ್ಟ ಆಗ್ತಿಲ್ಲ. ಗಂಡ-ಹೆಂಡತಿ ಒಟ್ಟಿಗೆ ಜೀವನ ಮಾಡುತ್ತಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅವರು ಅಂದುಕೊಳ್ಳುತ್ತಿದ್ದಾರೆ. ಫೋನ್ ಬರುತ್ತ ಎಂದು ಫೋನ್ ಬಳಿಯೇ ಕುಳಿತುಕೊಂಡಿರುವಾಗ ಭಾಗ್ಯ ಅಮ್ಮ ಬಂದು ಯಾವ ಫೋನ್ ಕೂಡ ಬರಲ್ಲ ಎಂದು ಹೇಳುತ್ತಾರೆ. ಅಷ್ಟರಲ್ಲಿ ಫೋನ್ ರಿಂಗ್ ಆಗುತ್ತದೆ. ಇದರ ಪ್ರೊಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ.
ಮತ್ತೊಂದೆಡೆ ತಾಂಡವ್, ಶ್ರೇಷ್ಠಾ ಜೊತೆ ಸೇರಿಕೊಂಡು ಭಾಗ್ಯಳನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಪ್ರಯತ್ನ ಮಾಡುತ್ತಲೇ ಇದ್ದಾನೆ. ಅವನು ಪ್ರತಿ ಬಾರಿ ಭಾಗ್ಯಳನ್ನು ಹಳಿಯಲು ಯತ್ನಿಸಿದಾಗಲೂ, ಅವಳು ಮತ್ತೆ ಗೆಲ್ಲುತ್ತಾ ಅವನಿಗೆ ಪಾಠ ಕಲಿಸುತ್ತಿದ್ದಾಳೆ. ಹೀಗಾಗಿ ಅವನಿಗೆ ಭಾಗ್ಯ ಮೇಲಿನ ದ್ವೇಷ ಮತ್ತು ಕೋಪ ಮತ್ತಷ್ಟು ಹೆಚ್ಚಾಗಿದೆ. ಅದಕ್ಕಾಗಿ ಅವನು ಮತ್ತೊಂದು ಹೊಸ ಪ್ಲ್ಯಾನ್ ಮಾಡುತ್ತಲೇ ಇದ್ದಾನೆ. ಸದ್ಯ ತನ್ನದೇಯಾದ ಹೊಸ ಬ್ಯುಸಿನೆಸ್ ಮಾಡಲು ಹೊರಟಿರುವ ಭಾಗ್ಯಾಗೆ ಈ ಬಾರಿ ಏನು ತೊಂದರೆ ಕೊಡುತ್ತಾನೆ ಮತ್ತು ಅದನ್ನು ಭಾಗ್ಯ ಹೇಗೆ ಎದುರಿಸುತ್ತಾಳೆ ಎಂಬುದು ನೋಡಬೇಕಿದೆ.
Karna Serial: ಅಡಿಷನ್ ಮೇಲೆ ಅಡಿಷನ್: ಕರ್ಣ ಧಾರಾವಾಹಿಗೆ ಸಿಗುತ್ತಿಲ್ಲ ನಾಯಕಿ