ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ತೊಟ್ಟಿಲು ಚಾರಿಟೆಬಲ್ ಟ್ರಸ್ಟ್ನ ಎಂಡಿ ಆಗಿ ಆಯ್ಕೆ ಆಗಿದ್ದಾಳೆ. ತನ್ನದೇ ಶೈಲಿಯಲ್ಲಿ ಇಂಟರ್ವ್ಯೂ ಅಟೆಂಡ್ ಆಗಿ ಪಾಸ್ ಆಗಿರುವ ಭಾಗ್ಯಾಗೆ ಈಗ ದೊಡ್ಡ ಹುದ್ದೆ ಸಿಕ್ಕಿದೆ. ಎಂಡಿ ಆಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಭಾಗ್ಯ ತನ್ನ ಕೆಲಸ ಶುರುಮಾಡಿದ್ದಾಳೆ. ಇದನ್ನ ಕಂಡು ಆಫೀಸ್ನಲ್ಲಿರುವವರು ಶಾಕ್ ಆಗಿದ್ದಾರೆ. ಅತ್ತ ತಾಂಡವ್ ಕೆಲಸ ಮಾಡುವ ಆಫೀಸ್ನಲ್ಲೇ ಭಾಗ್ಯ ಕೆಲಸಕ್ಕೆ ಸೇರಿರುವ ವಿಷಯ ಶ್ರೇಷ್ಠಾಗೆ ಗೊತ್ತಾಗಿದ್ದು, ಮನೆಯಲ್ಲಿ ರಂಪಾ ಮಾಡಿದ್ದಾಳೆ.
ಭಾಗ್ಯ ಇಂಟರ್ವ್ಯೂನಲ್ಲಿ ಪಾಸ್ ಆಗಿದ್ದೇ ಒಂದು ರೋಚಕ ಸಂಗತಿ. ಇತರೆ ಕ್ಯಾಂಡಿಡೇಟ್ಸ್ಗಳ ಉತ್ತರಕ್ಕೆ ವಿರುದ್ಧವಾಗಿ ಭಾಗ್ಯ ತನ್ನದೇ ಶೈಲಿಯಲ್ಲಿ ಉತ್ತರ ಕೊಟ್ಟು ಪಾಸ್ ಆಗಿದ್ದಾಳೆ. ‘ನಿಮ್ಮ ಹತ್ರ ತುಂಬಾ ಕಡಿಮೆ ಜನ ಇರುತ್ತಾರೆ.. ಆಗ ತುಂಬಾ ದೊಡ್ಡ ಪ್ರಾಬ್ಲಂ ಬರುತ್ತೆ ಅದನ್ನ ನೀವು ಹೇಗೆ ಮ್ಯಾನೇಜ್ ಮಾಡುತ್ತೀರಾ’ ಎಂದು ಇಂಟರ್ವ್ಯೂ ಮಾಡುವವರು ಕೇಳುತ್ತಾರೆ. ಈ ಪ್ರಶ್ನೆಗೆ ಭಾಗ್ಯ ಕೊಟ್ಟ ಉತ್ತರ ನೋಡಿ ಎಲ್ಲರೂ ಫಿದಾ ಆಗುತ್ತಾರೆ. ಭಾಗ್ಯ ಒಂದು ಕ್ಯಾಂಟೀನ್ ನಡೆಸಿಕೊಂಡು ಹೋಗ್ತಾ ಇದ್ದಾಳೆ. ಇಲ್ಲಿ ಇಂಟರ್ವ್ಯೂ ಅವರು ಕೇಳಿದ ಪ್ರಶ್ನೆಗೆ ಆ ಕ್ಯಾಂಟೀನ್ ಅನ್ನು ಉದಾಹರಣೆಯಾಗಿ ಇಟ್ಟುಕೊಂಡು ಉತ್ತರ ಕೊಟ್ಟಿದ್ದಾರೆ. ನಾನು ಕ್ಯಾಂಟೀನ್ನಲ್ಲಿ ಒಂದು ದಿನ 50 ಜನಕ್ಕೆ ಊಟ ರೆಡಿ ಮಾಡಿದ್ದೆ. ಆದರೆ 100 ಆರ್ಡರ್ ಬಂತು. ಯೋಚನೆ ಮಾಡಿ 50 ಜನಕ್ಕೆ ಊಟ ರೆಡಿ ಮಾಡುವ ಬದಲು ಅಕ್ಕಿಯಿದ್ದರಿಂದ ಪುಳಿಯೊಗರೆ ಮತ್ತು ರೈಸ್ ಬಾತ್ ಮಾಡಿದೆ.. ಅಲ್ಲಿಂದಲ್ಲಿಗೆ ಅದು ಸರಿ ಹೋಯಿತು. 100 ಜನಕ್ಕೆ ಹೊಟ್ಟೆ ತುಂಬಿತು ಎಂದಿದ್ದಾಳೆ.
ಭಾಗ್ಯಾಳ ಈ ಉತ್ತರ ಕೇಳಿ ಇಂಟರ್ವ್ಯೂ ಮಾಡುವವರು ಖುಷಿ ಆಗಿದ್ದಾರೆ. ಕೊನೆಗೆ ಆದೀಶ್ವರ್ ಬಂದು ನೀವು ಇಂಟರ್ವ್ಯೂನಲ್ಲಿ ಪಾಸ್ ಆಗಿದ್ದೀರಿ ಎಂದು ಹೇಳಿದ್ದಾನೆ. ಭಾಗ್ಯ ಖುಷಿಗೆ ಪಾರವೇ ಇರಲಿಲ್ಲ.. ಭಾಗ್ಯ ಕಾಮತ್ ಮನೆಯಲ್ಲಿ ಹಾಗೂ ತನ್ನ ಮನೆಯಲ್ಲಿ ಸ್ವೀಟ್ ಹಂಚಿ ಸಂಭ್ರಮಿಸಿದ್ದಾಳೆ. ಮರುದಿನ ಆಫೀಸ್ಗೆ ಬಂದವಳೇ ತನ್ನ ಕೆಲಸ ಶುರುಹಂಚಿಕೊಂಡಿದ್ದಾಳೆ. ಆಫೀಸ್ನಲ್ಲಿ ನಡೆಯುತ್ತಿರುವ ಅಕ್ರಮವನ್ನು ಬಯಲಿಗೆಳೆಯಲು ಒಂದೊಂದೆ ಹೆಜ್ಜೆ ಇಟ್ಟಿದ್ದಾಳೆ.
ಭಾಗ್ಯ ಆಫೀಸ್ಗೆ ಬಂದ ತಕ್ಷಣ ಓರ್ವ ಲೇಡಿ ಬಂದು, ಬನ್ನಿ ಮೇಡಂ ನಮ್ಮ ಕಂಪನಿಯ ಟ್ರಸ್ಟ್ಗಳನ್ನೆಲ್ಲ ನಿಮಗೆ ಪರಿಚಯಿಸುತ್ತೇನೆ.. ಅವರ ಜೊತೆ ಒಂದು ಮೀಟಿಂಗ್ ಆಗಬೇಕು?, ಯಾವಾಗ ಇಟ್ಟುಕೊಳ್ಳೋಣ ಎಂದು ಕೇಳಿದ್ದಾಳೆ. ಆಗ ಭಾಗ್ಯ, ನೀವು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಅದರ ಬಗ್ಗೆಲ್ಲ ನಾನೇ ತಿಳಿದುಕೊಳ್ಳುತ್ತೇವೆ ಎಂದಿದ್ದಾಳೆ. ಇಲ್ಲಿ ನಾನು ಮಾಡಬೇಕಾಗಿರುವ ಕೆಲಸ ಬೇರೆನೇ ಇದೆ.. ನಮ್ಮ ಟ್ರಸ್ಟ್ಗೆ ಮೆಟಿರಿಯಲ್ಸ್ ಎಲ್ಲ ಸಪ್ಲೈ ಮಾಡ್ತಾರೆ ಅಲ್ವಾ.. ಅವರ ಬಳಿ ನಾನು ಮಾತನಾಡಬೇಕು.. ನಮ್ಮ ಟ್ರಸ್ಟ್ಗೆ ಯಾವುದೆಲ್ಲ ಪ್ರಾಡಕ್ಟ್ ಪರ್ಚೆಸ್ ಮಾಡಿದ್ದಿವೊ ಅದರ ಎಲ್ಲ ಲೆಕ್ಕ, ಆ ಕಂಪನಿ ಡಿಟೇಲ್ಸ್ ಬೇಕು.. ಅವರ ಜೊತೆ ಒಂದು ಮೀಟಿಂಗ್ ಅರೆಂಜ್ ಮಾಡಿ.. ನನಗೆ ಈ ಟ್ರಸ್ಟ್ನಲ್ಲಿ ಟಾಯ್ಲೆಟ್ ಕ್ಲೀನಿಂಗ್ ಮೆಟಿರಿಯಲ್ಸ್ನಿಂದ ಹಿಡಿದು ಮಕ್ಕಳ ಪೆನ್ಸಿಲ್, ಪೆನ್ ವರೆಗೆ ಎಲ್ಲ ಮಾಹಿತಿ ಬೇಕು ಎಂದಿದ್ದಾಳೆ.
ಆ ಲೇಡಿ ಭಾಗ್ಯ ಮಾತು ಕೇಳಿ ಗಾಬರಿಗೊಂಡಿದ್ದಾಳೆ. ಪ್ರಾಡಕ್ಟ್ ಕಂಪನಿಯವರು ಹಾಗೆ ಬನ್ನಿ ಅಂದ್ರೆ ಬರಲ್ಲ ಎಂದಿದ್ದಾಲೆ. ಅದಕ್ಕೆ ಭಾಗ್ಯ, ಯಾಕೆ ಬರಲ್ಲ ನಮ್ಮಿಂದ ಅವರಿಗೆ ಕೆಲಸ ಇರುವುದು.. ನಾವು ಅವರಿಗೆ ಕಾಂಟ್ರೆಕ್ಟ್ ಕೊಟ್ಟಿರುವುದು ಮೀಟಿಂಗ್ ಅರೆಂಜ್ ಮಾಡಿ.. ಯಾರು ಮೀಟಿಂಗ್ಗೆ ಬರಲ್ವೊ ಅವರ ಕಾಂಟ್ರೆಕ್ಟ್ ಕ್ಯಾನ್ಸಲ್ ಆಗುತ್ತೆ ಅಂತ ಹೇಳಿ ಎಂದು ಖಡಕ್ ಆಗಿ ಭಾಗ್ಯ ಹೇಳಿದ್ದಾಳೆ. ಭಾಗ್ಯ ಮಾತನ್ನೆಲ್ಲ ಕೇಳಿ ಆ ಲೇಡಿ ‘ಮೇಡಂ ಫುಲ್ ಸ್ಟ್ರಿಟ್ ಇದ್ದಾರೆ.. ತುಂಬಾ ಓದಿದ್ದಾರೆ ಅಂತ ಅನಿಸುತ್ತೆ’ ಎಂದು ಅಂದುಕೊಂಡಿದ್ದಾಳೆ.
ಮತ್ತೊಂದೆಡೆ ಭಾಗ್ಯ ಮನೆಯಲ್ಲಿ ಕೆಲಸ ಸಿಕ್ಕಿದ ಸೆಲೆಬ್ರೇಷನ್ ನಡೆಯುತ್ತಿರುವಾಗ ತನ್ವಿಗೆ ಶ್ರೇಷ್ಠಾಳ ಕಾಲ್ ಬಂದಿದೆ. ಆಗ ತನ್ವಿ, ಅಮ್ಮ ಇಂಟರ್ವ್ಯೂ ಪಾಸ್ ಮಾಡಿದ್ದಾಳೆ.. ಆದೀ ಅಂಕಲ್ ಕೆಲಸ ಮಾಡುವ ಕಂಪನಿಯಲ್ಲಿ ಅಮ್ಮನಿಗೆ ಕೆಲಸ ಸಿಕ್ಕಿದೆ ಎಂದು ಶ್ರೇಷ್ಠಾಗೆ ಹೇಳಿದ್ದಾಳೆ. ಆದೀ ಕೆಲಸ ಮಾಡುವ ಕಂಪನಿಯಲ್ಲೇ ತಾಂಡವ್ ಕೂಡ ಕೆಲಸ ಮಾಡುತ್ತಿದ್ದಾನೆ. ಭಾಗ್ಯಾಗೆ ಕೆಲಸ ಸಿಕ್ಕಿರುವ ವಿಚಾರ ಕೇಳಿ ಶ್ರೇಷ್ಠಾಗೆ ಎಲ್ಲಿಲ್ಲದ ಕೋಪ ಬಂದಿದೆ. ತಾಂಡವ್ ಮನೆಗೆ ಬಂದೊಡನೆ ರಂಪಾ ಮಾಡಿದ್ದಾಳೆ. ನಿನ್ನ ನಾಲಗೆ ಬಿದ್ದಿತ್ತ.. ಆ ಭಾಗ್ಯ ನಿನ್ನ ಆಫೀಸ್ನಲ್ಲೇ ಕೆಲಸ ಮಾಡುತ್ತಾಳೆ ಅಂತ ನನಗೆ ಯಾಕೆ ಹೇಳಿಲ್ಲ ಎಂದು ಕೇಳಿದ್ದಾಳೆ.. ಅಲ್ಲದೆ ನೀನು ತಕ್ಷಣ ಆ ಕೆಲಸಕ್ಕೆ ರಿಸೈನ್ ಮಾಡು ಎಂದಿದ್ದಾಳೆ.
ಕೆಲಸ ಕೈಬಿಡಲು ತಾಂಡವ್ ಒಪ್ಪಿಲ್ಲ.. ಅತ್ತ ಶ್ರೇಷ್ಠ-ತಾಂಡವ್ ಜಗಳ ಮಿತಿ ಮೀರಿ ಹೋಗಿದೆ. ಸದ್ಯ ಭಾಗ್ಯ ತನ್ನ ಕೆಲಸ ಶುರುಮಾಡಿದ್ದು, ಒಳ್ಳೆಯ ದಿನ ಶುರುವಾಗುತ್ತಿದೆ. ತಾಂಡವ್-ಶ್ರೇಷ್ಠಾಗೆ ನೆಮ್ಮದಿ ಇಲ್ಲದಂತಾಗಿದೆ. ಮತ್ತೊಂದೆಡೆ ಪೂಜಾ-ಕಿಶನ್ ಹನಿಮೂನ್ ಟೂರ್ ಯಾವುದೇ ಕಾರಣಕ್ಕೂ ನಡೆಯಬಾರದು ಎಂದು ಟ್ರಾವೆಲ್ ಏಜೆನ್ಸಿ ಜೊತೆ ಕನ್ನಿಕಾ ಮಾತನಾಡುತ್ತಿರುವುದು ಪೂಜಾ ಕೇಳಿಸಿಕೊಂಡಿದ್ದಾಲೆ. ಕನ್ನಿಕಾ-ಪೂಜಾ ನಡುವೆ ಸದ್ಯ ಯುದ್ಧ ಶುರುವಾಗಿದೆ. ಅನೇಕ ಕಾರಣದಿಂದ ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯ ಮುಂದಿನ ಎಪಿಸೋಡ್ ಕುತೂಹಲ ಮೂಡಿಸಿದೆ.
BBK 12 House: ಬಿಗ್ ಬಾಸ್ ಕನ್ನಡ 12ರ ಮನೆಯ ಫೋಟೋ ಲೀಕ್: ಹೇಗಿದೆ ನೋಡಿ