Bhagya Lakshmi Serial: ಕೊನೆಗೂ ಸಿಕ್ಕಿತು ಕಳ್ಳತನವಾದ 25 ಲಕ್ಷ: ಭಾಗ್ಯ ಹಣವನ್ನು ಏನು ಮಾಡಿದ್ಳು ಗೊತ್ತಾ?
ಭಾಗ್ಯ ಮನೆಯ ಮೇಲೆ ಮಿಡಲ್ ಕ್ಲಾಸ್ ಜೀವನ ನಡೆಸುತ್ತಿದ್ದ ವಿಚಾರ ರಾಮ್ದಾಸ್ಗೆ ಗೊತ್ತಾಗಿ ಅವರು ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಭಾಗ್ಯ ಮನೆಯಿಂದ ಕಳ್ಳತನವಾಗಿದ್ದ 25 ಲಕ್ಷ ಕೊನೆಗೂ ಸಿಕ್ಕಿದೆ. ಅಚ್ಚರಿ ಎಂದರೆ ಈ ಹಣವನ್ನು ಭಾಗ್ಯ ತೆಗೆದುಕೊಂಡಿದ್ದಾಳೆ. ಆದರೆ, ಇದರಲ್ಲೂ ಒಂದು ಟ್ವಿಸ್ಟ್ ನೀಡಲಾಗಿದೆ.

Bhagya lakshmi serial -

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಆದೀಶ್ವರ್- ಭಾಗ್ಯ ನಡುವೆ ರೋಚಕತೆಯಿಂದ ಸಾಗುತ್ತಿದೆ. ಟಿಆರ್ಪಿಯಲ್ಲೂ ಈ ಧಾರಾವಾಹಿ ವಾರದಿಂದ ವಾರಕ್ಕೆ ಮುನ್ನುಗ್ಗುತ್ತಿದೆ. ಸದ್ಯ ಇಷ್ಟುದಿನ ಆದೀ ತನ್ನ ಮನೆಯವರಿಂದ ಮುಚ್ಚಿಟ್ಟಿದ್ದ ಬಹುದೊಡ್ಡ ಸತ್ಯ ಈಗ ಬಯಲಾಗಿದೆ. ಭಾಗ್ಯ ಮನೆಯ ಮೇಲೆ ಮಿಡಲ್ ಕ್ಲಾಸ್ ಜೀವನ ನಡೆಸುತ್ತಿದ್ದ ವಿಚಾರ ರಾಮ್ದಾಸ್ಗೆ ಗೊತ್ತಾಗಿ ಅವರು ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಭಾಗ್ಯ ಮನೆಯಿಂದ ಕಳ್ಳತನವಾಗಿದ್ದ 25 ಲಕ್ಷ ಕೊನೆಗೂ ಸಿಕ್ಕಿದೆ. ಅಚ್ಚರಿ ಎಂದರೆ ಈ ಹಣವನ್ನು ಭಾಗ್ಯ ತೆಗೆದುಕೊಂಡಿದ್ದಾಳೆ. ಆದರೆ, ಇದರಲ್ಲೂ ಒಂದು ಟ್ವಿಸ್ಟ್ ನೀಡಲಾಗಿದೆ.
ಕಳೆದ ಎಪಿಸೋಡ್ನಲ್ಲಿ, ಭಾಗ್ಯ ಮನೆಯಲ್ಲಿ ಆದೀ ಕೊಟ್ಟ 25 ಲಕ್ಷ ಹಣ ಕಳ್ಳತನವಾಗಿತ್ತು. ಪೊಲೀಸರು ಬಂದು ವಿಚಾರಿಸಿದಾಗ ಕಳ್ಳ ಅರ್ಧ ಕುಡಿದ ಬಿಯರ್ ಬಾಟಲ್ ಸಿಗುತ್ತದೆ. ಆಗ ಈ ಕಳ್ಳ ಯಾರು ಎಂಬುದು ಪೊಲೀಸರಿಗೆ ಗೊತ್ತಾಗುತ್ತದೆ. ನೀವು ಟೆನ್ಶನ್ ಮಾಡಬೇಡಿ ಈರೀತಿ ಅರ್ಧ ಕುಡಿದು ಬಾಟಲ್ ಇಡೋದು ಯಾವ ಕಳ್ಳ ಅಂತ ನಮಗೆ ಗೊತ್ತು.. ನಿಮ್ಮ ಹಣ ಸಿಗುತ್ತೆ ಎಂದು ಹೇಳಿ ಹೋಗುತ್ತಾರೆ. ಮುಂದಿನ ದಿನವೇ ಪೊಲೀಸರು ಕಳ್ಳನನ್ನು ಹಿಡಿದು ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬಳಿಕ ಪೊಲೀಸರು ಆದೀಶ್ವರ್ಗೆ ಕಾಲ್ ಮಾಡಿ ನಿಮ್ಮ ಹಣ ಸಿಕ್ಕಿದೆ.. ಬಂದು ತೆಗೆದುಕೊಂಡಿ ಹೋಗಿ ಎಂದಿದ್ದಾರೆ. ಆದೀ ಸ್ಟೇಷನ್ಗೆ ಬಂದು ಹಣ ಎಣಿಸಿ ಪುನಃ ತೆಗೆದುಕೊಂಡು ನೇರವಾಗಿ ಭಾಗ್ಯ ಮನೆಗೆ ಬಂದಿದ್ದಾನೆ. ಹಣ ಸಿಕ್ಕಿತು ಎಂದು ಹೇಳಿದ ಕೂಡಲೇ ಭಾಗ್ಯ ಮುಖದಲ್ಲಿ ಬೇಸರ ಕಾಣುತ್ತದೆ. ಆಗ ಆದೀ, ನಿಮಗೆ ಅಷ್ಟೆಲ್ಲ ತೊಂದರೆ ಕೊಟ್ಟಿರುವ ಹಣ ಪುನಃ ಮನೆಗೆ ಬಂತ ಅಂತ ನೋಡ್ತಾ ಇದ್ದೀರ.. ಇದನ್ನ ಹೇಗೆ ತೆಗೆದುಕೊಳ್ಳೋದು ಅಂತ ಯೋಚಿಸ್ತಾ ಇದ್ದೀರ.. ನಾನು ಇದನ್ನ ನಿಮ್ಮ ಹತ್ರ ತೆಗೆದುಕೊಳ್ಳಲು ಫೋರ್ಸ್ ಮಾಡಲ್ಲ.. ನಾನೇ ತೆಗೆದುಕೊಳ್ಳುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ.
ಅತ್ತ ಭಾಗ್ಯ, ಈ ದುಡ್ಡಿಂದ ಸಾಕಷ್ಟು ಸಮಸ್ಯೆ ಆಗಿದೆ.. ಮೊದಲನೇ ದಿನವೇ ನಾನು ಈ ಹಣವನ್ನು ತೆಗೆದುಕೊಂಡಿದ್ದರೆ ಇಷ್ಟೆಲ್ಲ ಸಮಸ್ಯೆ ಆಗುತ್ತಲೇ ಇರುತ್ತಿರಲಿಲ್ಲ.. ಇದರಿಂದ ನೀವು ಏಳು ದಿನ ಕಷ್ಟ ಪಡುವ ರೀತಿ ಆಯಿತು. ನಾನು ದುಡ್ಡು ತೆಗೆದುಕೊಳ್ಳಬೇಕು ಅಂತ ಒಂದೇ ಒಂದು ಕಾರಣಕ್ಕೆ ನೀವೆ ಎಷ್ಟೆಲ್ಲ ಕಷ್ಟ ಪಟ್ರಿ.. ಇದನ್ನೆಲ್ಲ ಇಲ್ಲಿಗೇ ಮುಗಿಸೋಣ ನಾನೇ ಈ ದುಡ್ಡನ್ನು ವಾಪಾಸ್ ತೆಗೆದುಕೊಳ್ಳುತ್ತೇನೆ ಎಂದು ಅಂದುಕೊಂಡಿದ್ದಾಳೆ.
ಅದರಂತೆ ಭಾಗ್ಯ, ಆದೀ ಬಳಿ ನಾನು ಈ ದುಡ್ಡನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಇದನ್ನ ಕೇಳಿ ಆದೀ ಒಮ್ಮೆ ತಳಮಳಗೊಂಡರು ನಂತರ ಖುಷಿ ಆಗಿದೆ. ಆದೀ ಭಾಗ್ಯ ಕೈಗೆ 25 ಲಕ್ಷ ಹಣ ಇರುವ ಬ್ಯಾಗ್ ಕೊಡುತ್ತಾನೆ. ಜೊತೆಗೆ ಭಾಗ್ಯ, ಈ ದುಡ್ಡು ಈಗ ಸಂಪೂರ್ಣ ನನಗೆ ಸೇರಿದ್ದು ತಾನೇ?, ನಾನು ಈ ದುಡ್ಡನ್ನು ನನಗೆ ಇಷ್ಟ ಬಂದ ಹಾಗೆ ಹೇಗೆ ಬೇಕಾದರು ಉಪಯೋಗಿಸಬಹುದಲ್ವಾ.. ಇದಕ್ಕೆ ನಿಮ್ಮ ಅಭ್ಯಂತರ ಏನು ಇಲ್ಲ ಅಲ್ವಾ ಎಂದು ಕೇಳುತ್ತಾಳೆ. ಅದಕ್ಕೆ ಆದೀ, ಇದು ನಿಮ್ಮ ದುಡ್ಡು ನೀವು ಏನು ಬೇಕಾದರು ಮಾಡಬಹುದು ಎನ್ನುತ್ತಾನೆ.
ಸರಿ ಹಾಗಿದ್ದರೆ ಈ ದುಡ್ಡನ್ನ ತೆಗೋಳಿ ಎಂದು ಪುನಃ ಆದೀ ಕೈಗೆ ಭಾಗ್ಯ ಕೊಟ್ಟಿದ್ದಾಳೆ. ನಾನು ಈ ದುಡ್ಡನ್ನು ನೀವು ಚಾರಿಟಿ ಟ್ರಸ್ಟ್ ನಡೆಸ್ತಾ ಇದ್ದೀರಿ ಅಲ್ವಾ ಅದಕ್ಕೆ ಕೊಡ್ತಾ ಇದ್ದೇನೆ ಎಂದು ಹೇಳಿದ್ದಾಳೆ. ಇದನ್ನು ಕಂಡು ಆದೀ ಶಾಕ್ ಆಗುತ್ತಾನೆ. ಇದು ಮೋಸ ಎಂದು ಹೇಳುತ್ತಾನೆ. ಇದು ನನ್ನ ದುಡ್ಡು.. ಮನಸ್ಪೂರ್ವಕವಾಗಿ ತೆಗೆದುಕೊಂಡಿದ್ದೇನೆ.. ಈಗ ಅದೇ ಖುಷಿಯಲ್ಲಿ ಚಾರಿಟಿಗೆ ಕೊಡ್ತಾ ಇದ್ದೇನೆ ಎಂದಿದ್ದಾಳೆ. ಸದ್ಯ ಇದನ್ನು ಆದೀ ಪುನಃ ತೆಗೆದುಕೊಳ್ಳುತ್ತಾನ ಎಂಬುದು ನೋಡಬೇಕಿದೆ.
BBK 12: ಈ ಬಾರಿ ಬಿಗ್ ಬಾಸ್ಗೆ ಹೋಗಲಿದ್ದಾರೆ ಕನ್ನಡದ ಎವರ್ ಗ್ರೀನ್ ನಟಿ ಸುಧಾರಾಣಿ