ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಸ್ಕೇಟಿಂಗ್ ಕಲಿಯಲು ಮುಂದಾದ ಭಾಗ್ಯಕ್ಕ: ಸುಷ್ಮಾ ರಾವ್ ಹೊಸ ಸಾಹಸ

ಭಾಗ್ಯಕ್ಕೆ ಸ್ಕೇಟಿಂಗ್ ಹಾಕಿಕೊಂಡು ಕ್ಯಾಟ್ವಾಕ್ ಮಾಡುತ್ತಿರುವ ವಿಡಿಯೋ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ‘ಶೂಟಿಂಗ್ ಬ್ರೇಕ್ ಟೈಮ್ನಲ್ಲಿ ಲೆಗ್ ಬ್ರೇಕ್ ಮಾಡಿಕೊಳ್ಳುವ ಆ್ಯಕ್ಟಿವಿಟಿಸ್ಗೆ ಪ್ಲೀಸ್ ಕಾಂಟೆಕ್ಟ್ ಮಾಡಿ ನನ್ನ’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

Sushma K Rao

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯ ಲಕ್ಷ್ಮೀ (Bhagya Lakshmi) ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ನಾಯಕಿ ಸುಷ್ಮಾ ಕೆ ರಾವ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಧಾರಾವಾಹಿಯಲ್ಲಿ ಇವರು ಮಾಡುತ್ತಿರುವ ಪಾತ್ರ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ. ಗಂಡ ಮೋಸ ಮಾಡಿ ಬೇರೊಬ್ಬಳ ಜೊತೆ ಇದ್ದರೂ ಎಷ್ಟೇ ಕಷ್ಟ ಕೊಟ್ರು ಜಗ್ಗದೇ ಮಕ್ಕಳು, ಅತ್ತೆ ಮಾವನ ಜೊತೆ ನಿಂತು ಬದುಕನ್ನು ದಿಟ್ಟವಾಗಿ ಎದುರಿಸುತ್ತಿದ್ದಾಳೆ ಭಾಗ್ಯ. ಇದಕ್ಕಾಗಿಯೆ ಟಾಪ್​ ಲಿಸ್ಟ್​ನಲ್ಲಿ ಭಾಗ್ಯ ಲಕ್ಷ್ಮೀ ಸ್ಥಾನ ಪಡೆದುಕೊಂಡು ಮುನ್ನುಗುತ್ತಿದೆ.

ಸದ್ಯ ಧಾರಾವಾಹಿಯಲ್ಲಿ ಭಾಗ್ಯ, ಆದೀಶ್ವರ್ ಕಾಮತ್ ಹಾಗೂ ತಾಂಡವ್ ನಡುವಣ ಎಪಿಸೋಡ್ ಸಾಕಷ್ಟು ರೋಚಕತೆಯಿಂದ ಸಾಗುತ್ತಿದೆ. ಭಾಗ್ಯ/ಸುಷ್ಮಾ ಸಮಯ ಸಿಕ್ಕಾಗೆಲ್ಲ ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಸದಾ ಆ್ಯಕ್ಟಿವ್ ಆಗಿರುವ ಇವರು ತಮ್ಮ ಇನ್​ಸ್ಟಾದಲ್ಲಿ ಒಂದಲ್ಲ ಒಂದು ರೀಲ್ಸ್ ಹಂಚಿಕೊಂಡು ಸದಾ ಅಪ್ಡೇಟ್ ಕೊಡುತ್ತ ಇರುತ್ತಾರೆ. ಇದೀಗ ಶೂಟಿಂಗ್​ನಿಂದ ಬಿಡುವಿನ ಮಧ್ಯೆ ಅವರು ಸ್ಕೇಟಿಂಗ್​ ಮಾಡಿದ್ದಾರೆ.

ಭಾಗ್ಯಕ್ಕೆ ಸ್ಕೇಟಿಂಗ್​ ಹಾಕಿಕೊಂಡು ಕ್ಯಾಟ್​ವಾಕ್​ ಮಾಡುತ್ತಿರುವ ವಿಡಿಯೋ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ‘ಶೂಟಿಂಗ್ ಬ್ರೇಕ್ ಟೈಮ್​ನಲ್ಲಿ ಲೆಗ್ ಬ್ರೇಕ್ ಮಾಡಿಕೊಳ್ಳುವ ಆ್ಯಕ್ಟಿವಿಟಿಸ್​ಗೆ ಪ್ಲೀಸ್ ಕಾಂಟೆಕ್ಟ್ ಮಾಡಿ ನನ್ನ’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇದನ್ನು ನೋಡಿ ಫ್ಯಾನ್ಸ್​ ನಟಿಯ ಕಾಲೆಳೆದಿದ್ದಾರೆ. ಆದಿ ಬಂದಿರೋ ಖುಷಿಗೆ ಹೀಗೆ ರೀಲ್ಸ್​ ಮಾಡ್ತಿದ್ದೀರಾ ಎಂದು ತಮಾಷೆ ಮಾಡುತ್ತಿದ್ದಾರೆ.



ತಮ್ಮ ನಾಲ್ಕನೇ ವಯಸ್ಸಿನಿಂದಲೇ ಭರತನಾಟ್ಯ ಅಭ್ಯಾಸ ಮಾಡಲು ಸುಷ್ಮಾ ಆರಂಭಿಸಿದರು. ಗುರು ಎಸ್‌.ವಿ.ಶ್ರೀನಿವಾಸ್‌, ಶುಭಾ ಧನಂಜಯ್, ವೈಜಯಂತಿ ಕಾಶಿ, ಭಾನುಮತಿ, ಶೀಲಾ ಚಂದ್ರಶೇಖರ್‌ ಅವರ ಬಳಿ ನೃತ್ಯಾಭ್ಯಾಸ ಮಾಡಿದ್ದಾರೆ. ನೃತ್ಯದಲ್ಲಿ ಜೂನಿಯರ್ ಹಾಗೂ ಸೀನಿಯರ್‌ ಹಂತದ ಪರೀಕ್ಷೆಯನ್ನು ಸುಷ್ಮಾ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ನೃತ್ಯಕ್ಕಾಗಿ 1997ರಲ್ಲಿ ಸುಷ್ಮಾ ಕೆ ರಾವ್ ಆರ್ಯಭಟ ಪ್ರಶಸ್ತಿ, 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದರು.

ಸುಷ್ಮಾ ಅವರು ಮೂಲತಃ ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಎಸ್‌. ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Bhagya Lakshmi Serial: ಕುಸುಮಾಳಿಂದ ಕೈತುತ್ತು: ಭಾವುಕನಾದ ಆದೀಶ್ವರ್