ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕುಸುಮಾಳಿಂದ ಕೈತುತ್ತು: ಭಾವುಕನಾದ ಆದೀಶ್ವರ್

ಆದೀಶ್ವರ್ ಎರಡು ಪ್ರತಿ ಬಟ್ಟೆ, ದಿನಕ್ಕೆ 150 ರೂಪಾಯಿ ಇಟ್ಟುಕೊಂಡು ದಿನ ಕಳೆದಿದ್ದಾನೆ. ಮಿಡಲ್ ಕ್ಲಾಸ್ ಜೀವನವನ್ನು ಎರಡೂ ಕೈಗಳಿಂದ ಬಾಚಿಕೊಂಡು ಆದೀಶ್ವರ್ ತುಂಬಾ ಇಷ್ಟಪಟ್ಟಿದ್ದಾನೆ. ಅದರಲ್ಲೂ ಕುಸುಮಾ ಕೈತುತ್ತು ನೀಡಿದ್ದು, ಆದೀ ತನ್ನ ತಾಯಿಯನ್ನು ನೆನೆದು ಭಾವುಕನಾಗಿದ್ದಾನೆ.

ಕುಸುಮಾಳಿಂದ ಕೈತುತ್ತು: ಭಾವುಕನಾದ ಆದೀಶ್ವರ್

Bhagya lakshmi serial -

Profile Vinay Bhat Aug 30, 2025 12:00 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್, ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದು, ಈ ಚಾಲೆಂಜ್ ಈಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾಗ್ಯ ಮನೆಯ ಮೇಲಿನ ರೂಮ್​ನಲ್ಲಿ ಆದೀ ಸಾಮಾನ್ಯ ಜೀವನ ನಡೆಸುತ್ತಿದ್ದಾನೆ. ಎರಡು ಪ್ರತಿ ಬಟ್ಟೆ, ದಿನಕ್ಕೆ 150 ರೂಪಾಯಿ ಇಟ್ಟುಕೊಂಡು ದಿನ ಕಳೆದಿದ್ದಾನೆ. ಮಿಡಲ್ ಕ್ಲಾಸ್ ಜೀವನವನ್ನು ಎರಡೂ ಕೈಗಳಿಂದ ಬಾಚಿಕೊಂಡು ಆದೀಶ್ವರ್ ತುಂಬಾ ಇಷ್ಟಪಟ್ಟಿದ್ದಾನೆ. ಅದರಲ್ಲೂ ಕುಸುಮಾ ಕೈತುತ್ತು ನೀಡಿದ್ದು, ಆದೀ ತನ್ನ ತಾಯಿಯನ್ನು ನೆನೆದು ಭಾವುಕನಾಗಿದ್ದಾನೆ.

ಆದೀಶ್ವರ್ ಕಾಮತ್ ಈ ಮಿಡಲ್ ಕ್ಲಾಸ್ ಜೀವನ ಚಾಲೆಂಜ್​ನಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾನೆ. ರೋಡ್ ಸೈಡ್ ಊಟ ಮಾಡಿ, ಬಸ್​ನಲ್ಲೇ ಆಫೀಸ್​ಗೆ ಹೋಗಿ, ತರಕಾರಿ ತಂದು ಅಡುಗೆ ಮಾಡಿ ಹೀಗೆ ಅನೇಕ ಸವಾಲು ಎದುರಿಸಿದ್ದಾನೆ. ಆದರೆ, ಇದನ್ನೆಲ್ಲ ಆತ ಕಷ್ಟಪಟ್ಟು ಮಾಡಿಲ್ಲ.. ತುಂಬಾನೆ ಇಷ್ಟಪಟ್ಟು ಮಾಡಿದ್ದಾನೆ. ಆರನೇ ದಿನ ರಾತ್ರಿ ಆದೀ ಮಲಗುವ ಹೊತ್ತಿಗೆ ರೂಮ್ ಹೊರಗೆ ಟ್ಯಾರೀಸ್ ಮೇಲೆ ಜೋರಾಗಿ ನಗುತ್ತ ಮಾತನಾಡುತ್ತಿರುವುದು ಕೇಳಿಸುತ್ತದೆ.

ಆಗ ಆದೀಶ್ವರ್ ಹೊರಗೆ ಬಂದು ಏನೆಂದು ನೋಡಿದಾಗ ಭಾಗ್ಯಾಳ ಇಡೀ ಕುಟುಂಬ ವೃತ್ತಾಕಾರದಲ್ಲಿ ಕೂತು ಕೈತುತ್ತು ತಿನ್ನಲು ತಯಾರಾಗಿರುತ್ತಾರೆ. ಚಂದಿರನ ಅಡಿಯಲ್ಲಿ ಕುಸುಮಾ ಎಲ್ಲರಿಗೂ ಕೈತುತ್ತು ಕೊಡುತ್ತ ಇರುತ್ತಾರೆ. ಇದನ್ನು ಕಂಡು ಆದೀಗೆ ಆಶ್ಚರ್ಯ ಆಗುತ್ತದೆ. ಕುಸುಮಾ ಅವರು ಆದೀಯನ್ನು ಕುಡ ಕರೆದು ಬಾ ಕುಳುತುಕೊಳ್ಳು ಎಂದಿದ್ದಾರೆ. ಅದರಂತೆ ಆದೀಗೆ ಕೈತುತ್ತು ಕೊಡುತ್ತಾರೆ. ಆಗ ಆದೀಶ್ವರ್ ಭಾವುಕನಾಗಿದ್ದಾನೆ.

ನನಗೆ ಖುಷಿ ಪಡಬೇಕಾ ಅಥವಾ ಬೇಜಾರು ಮಾಡಬೇಕ ಅಂತ ಗೊತ್ತಾಗುತ್ತಿಲ್ಲ.. ಒಂದುಕಡೆ ನಾನು ಹಾಕಿದ ಸವಾಲನ್ನು ನಾನು ಗೆಲ್ಲುತ್ತಿದ್ದೇನೆ ಎಂಬ ಖುಷಿ ಇದೆ.. ಆದರೆ ಮತ್ತೊಂದೆಡೆ ಈ ಮಿಡಲ್ ಕ್ಲಾಸ್ ನಾಳೆಗೆ ಕೊನೆಯಾಗುತ್ತಿದೆ ಅಂತ ಬೇಜಾರಿದೆ. ಈ ಆರು ದಿನ ನನ್ನ ಲೈಫ್​ನಲ್ಲೇ ನಾನು ಕಳೆದ ಬೆಸ್ಟ್ ದಿನ.. ಇದೊಂತರ ಹೊಸ ಜಗತ್ತು ಅನಿಸಿತು. ನಾನು ಇಲ್ಲಿಗೆ ಬರುವ ಮುಂಚೆ ಪೂಜಾ ಬಳಿ ಈ ಲೈಫ್ ಬಗ್ಗೆ ಕೇಳಿದ್ದೆ.. ಆಗ ನಿಜಕ್ಕೂ ಹೀಗೆಲ್ಲ ಇರೋಕೆ ಸಾಧ್ಯವಾ ಎಂಬ ಅನುಮಾನ ಇತ್ತು.. ಆದರೆ ಈಗ ಅದನ್ನು ಜೀವಿಸಿದ ನಂತರ ಗೊತ್ತಾಗಿದೆ ಎಂದಿದ್ದಾನೆ.



ಸದ್ಯ ಈ ಸವಾಲಿನಲ್ಲಿ ಆದೀಶ್ವರ್ ಗೆಲ್ಲೋದು ಖಚಿತವಾಗಿದೆ. ಹಾಗೆ ಗೆದ್ದರೆ ಆದೀ ಕೊಟ್ಟ 25 ಲಕ್ಷ ಹಣವನ್ನು ಭಾಗ್ಯ ಪಡೆದುಕೊಳ್ಳಬೇಕು. ಆದರೆ, ಕೊನೆಯ ದಿನ ಆದೀಗೆ ಭಾಗ್ಯ ಹಣ ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಮನವರಿಕೆ ಆದಂತಿದೆ. ಕೊನೆಯ ದಿನ ಆದೀ ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಓರ್ವ ಶ್ರೀಮಂತ ಮಹಿಳೆಯ ಕಾರಿಗೆ ಹತ್ತುವಾಗ ಕೆಳ ಬಿದ್ದಿದೆ. ಇದನ್ನು ಆದೀ ಗಮನಿಸುತ್ತಾನೆ. ಅವರ ಬಳಿ ಹೇಳೋಣ ಎನ್ನುವಷ್ಟರಲ್ಲಿ ಆ ಮಹಿಳೆ ಕಾರಿನಲ್ಲಿ ತೆರಳಿ ಆಗಿದೆ.

ಆಗ ಆದೀ ಆ ವಸ್ತುವನ್ನು ತೆಗೆದುಕೊಂಡು ಆ ಕಾರಿನ ಹಿಂದೆ ನಿಲ್ಲಿಸಿ.. ನಿಲ್ಲಿಸಿ.. ಎಂದು ಓಡಿದ್ದಾನೆ. ಕೊಂಚ ದೂರ ಹೋದ ಬಳಿಕ ಯಾರೋ ಓಡಿ ಬರುತ್ತಿರುವುದು ಆ ಮಹಿಳೆಗೆ ಗೊತ್ತಾಗಿದೆ. ಕಾರು ನಿಲ್ಲಿಸಿ ಕೇಳಿದಾಗ ಆದೀ ಆ ವಸ್ತುವನ್ನು ಕೊಡುತ್ತಾನೆ. ಇದರಿಂದ ಆ ಮಹಿಳೆ ತುಂಬಾ ಖುಷಿಯಾಗಿ ನೀವು ದೊಡ್ಡ ಸಹಾಯ ಮಾಡಿದ್ದೀರಿ ಎಂದು 10 ಸಾವಿರ ರೂಪಾಯಿಯನ್ನು ನೀಡುತ್ತಾಳೆ. ಅದಕ್ಕೆ ಆದೀ ಇದೆಲ್ಲ ಬೇಡ ನಾಣು ಅಷ್ಟುದೊಡ್ಡ ಸಹಾಯ ಏನು ಮಾಡಿಲ್ಲ.. ಜಸ್ಟ್ ಈ ವಸ್ತು ಬಿದ್ದಿತ್ತು ಅದನ್ನು ತಂದುಕೊಟ್ಟೆ ಅಷ್ಟೆ ಎಂದಿದ್ದಾನೆ.

ಆದರೆ, ಆ ಮಹಿಳೆ ಬಿಡದೆ ಇದನ್ನು ನೀವು ತೆಗೆದುಕೊಳ್ಳಲೇ ಬೇಕು ಎಂದು ಫೋರ್ಸ್ ಮಾಡಿ 10 ಸಾವಿರ ರೂ. ಕೊಟ್ಟು ಹೋಗಿದ್ದಾಳೆ. ಆದೀ ಮನಸ್ಸಿಗೆ ಆ ಹಣ ಸ್ವೀಕರಿಸಿದ್ದು ಯಾಕೋ ಸರಿ ಎನಿಸುತ್ತಿಲ್ಲ.. ಆಗ ಭಾಗ್ಯ ನೆನಪಾಗುತ್ತದೆ.

ಭಾಗ್ಯ ಕೂಡ ಈಗ ಇದೇ ಸಂದರ್ಭದಲ್ಲಿ ಇದ್ದಾಳೆ. ಅವಳಿ ಮಾಡಿದ ಸಣ್ಣ ಸಹಾಯಕ್ಕೆ ನಾನು 25 ಲಕ್ಷ ಕೊಟ್ಟಿದ್ದೇನೆ.. ಅವಳು ಅದನ್ನು ಹೇಗೆ ಸ್ವೀಕರಿಸುತ್ತಾಳೆ ಎಂಬ ಭಾವನೆ ಆದೀ ಮನದಲ್ಲಿ ಮೂಡಿದೆ. ಸದ್ಯ ಈ ಚಾಲೆಂಜ್​ನಲ್ಲಿ ಆದೀ ಗೆಲ್ಲುವು ಪಕ್ಕ.. ಆದರೆ ನಿಯಮದಂತೆ 25 ಲಕ್ಷ ಭಾಗ್ಯ ತೆಗೆದುಕೊಳ್ಳಲೇ ಬೇಕು ಎಂದು ಆದೀ ಪಟ್ಟು ಹಿಡಿಯುತ್ತಾನ ಅಥವಾ ಈ ಘಟನೆಯಿಂದ ಮನವರಿಕೆ ಆಗುತ್ತ ಎಂಬುದು ನೋಡಬೇಕಿದೆ.

Kannada Serial TRP: ಸತತ ಎಂಟನೇ ವಾರವೂ ಕರ್ಣನೇ ನಂಬರ್ ಒನ್