ಬೆಂಗಳೂರು: ಕಲರ್ಸ್ ಕನ್ನಡ, ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕತೆಗಳ ಮೂಲಕ ಜನಪ್ರಿಯ ವಾಗಿದೆ. ನ್ಯಾಯ ಮತ್ತು ಅಧಿಕಾರದ ಮುಖಾಮುಖಿಯಾಗುವ ಹೃದಯಸ್ಪರ್ಶಿ ಕತೆ “ ‘ಭಾರ್ಗವಿ LL. B.’ (Bhargavi LLB) ಪ್ರೇಕ್ಷಕರ ಮನ ಈಗಾಗಲೇ ಗೆದ್ದಿದೆ. ಸೋಮ ವಾರದಿಂದ - ಶುಕ್ರವಾರ ರಾತ್ರಿ 8.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾ ವಾಹಿಯಲ್ಲಿ ಕನ್ನಡದ ಖ್ಯಾತ ನಟ ಉಗ್ರಂ ಮಂಜು ಗೌರವ ನಟರಾಗಿ ಕಾಣಿಸಿ ಕೊಳ್ಳಲಿದ್ದಾರೆ. ಉಗ್ರಂ ಮಂಜು ಕನ್ನಡ ಫಿಕ್ಷನ್ ಶೋದಲ್ಲಿ ಬಹಳಷ್ಟು ಸಮಯದ ನಂತರ ಹಿಂದಿರುಗಿದ್ದಾರೆ.
ಆಗಸ್ಟ್ 13,14 ರ ಸಂಚಿಕೆಯಲ್ಲಿ ಉಗ್ರಂ ಮಂಜು ಬರುತ್ತಿ ರುವುದು, ನಾಯಕ ಅರ್ಜುನ್ ಕಥಾ ನಾಯಕಿ ಭಾರ್ಗವಿಗೆ ತಾಳಿ ಕಟ್ಟುವ ಸನ್ನಿವೇಶವು ನಾಳೆಯ ಸಂಚಿಕೆಯ ಹೈಲೈಟ್ ಆಗಿದೆ. ಭಾರ್ಗವಿ LL. B.’, ತನ್ನ ತಂದೆಯ ಘನತೆಯನ್ನು ಮರಳಿ ಗಳಿಸಲು ಕಾನೂನಿನ ಪ್ರಪಂಚದಲ್ಲಿ ಎಲ್ಲ ಅಡೆತಡೆ ಗಳನ್ನು ಮೀರಿ ಬಲಿಷ್ಠ ಪ್ರಭಾವಶಾಲಿಗಳ ವಿರುದ್ಧ ಹೋರಾಡುವ ಧೀರ ಯುವತಿಯ ಸ್ಪೂರ್ತಿ ದಾಯಕ ಕತೆಯಾಗಿದೆ.
ಇದನ್ನು ಓದಿ:Bhagya Lakshmi Serial: ಭಾಗ್ಯ ಮನೆಯವರೊಂದಿಗೆ ಒಂದಾಗಿ ಹೋದ ಆದೀಶ್ವರ್ ಕಾಮತ್
ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ ಭಾರ್ಗವಿ ಮತ್ತು ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವಿನ ಸ್ವಾಭಿಮಾನದ ಮಹಾ ಸಂಘರ್ಷದ ಕತೆ ಹೇಳುತ್ತದೆ. ಕಥೆಯಲ್ಲಿ ಒಂದು ಪ್ರಮುಖ ತಿರುವಿನಲ್ಲಿ - ಅರ್ಜುನ್ ಭಾರ್ಗವಿ ಅನಿರೀಕ್ಷಿತ ವಾಗಿ ಮದುವೆಯಾಗುತ್ತಾರೆ. ಮದುವೆಯ ವಿಷಯ ತಿಳಿದ ನಂತರ ಜೆಪಿಯ ಪ್ರತಿಕ್ರಿಯೆ ಏನಾಗುತ್ತದೆ? ಬೃಂದಾ ಕೂಡಾ ಅದೇ ಮನೆ ಸೇರುವುದು ಖಂಡಿತವಾಗಿರುವ ಹಿನ್ನೆಲೆಯಲ್ಲಿ ಭಾರ್ಗವಿ ಕುಟುಂಬವು ಇದನ್ನು ಹೇಗೆ ಸ್ವೀಕರಿಸುತ್ತದೆ ?ಭಾರ್ಗವಿಯ ಮೊದಲ ಕೋರ್ಟ್ ಪ್ರಕರಣ ಅಂತಿಮ ಹಂತದಲ್ಲಿದೆ.
ವೃತ್ತಿಯಲ್ಲಿ ಭಾರ್ಗವಿ ಕೋರ್ಟ್‌ನಲ್ಲಿ ಕಠಿಣ ಹೋರಾಟ ನಡೆಸಿದ್ದು, ಜೆಪಿಯ ಶ್ರೇಯಸ್ಸಿಗೆ ಹಾನಿ ಯಾಗಿದೆ. ಅರ್ಜುನ್ ಮದುವೆಯಾದಾಗ, ಜೆಪಿ ಅವರ ಇಷ್ಟಗಳಿಗೆ ವಿರುದ್ಧವಾಗಿ ಅರ್ಜುನ್ ಹೋಗುವ ಕಾರಣ, ಜೆಪಿಯ ವೈಯಕ್ತಿಕ ಜೀವನದಲ್ಲೂ ಪೆಟ್ಟು ಕೊಟ್ಟಿದೆ. ಹೀಗಿರುವಾಗ ಜೆಪಿ ತನ್ನ ಸೊಸೆ ಭಾರ್ಗವಿಯ ವಿರುದ್ಧ ಹೂಡುವ ರಣತಂತ್ರಗಳೇನು? ಎಂಬುದನ್ನು ಭಾರ್ಗವಿ ಎಲ್ ಎಲ್ ಬಿ ಧಾರಾವಾಹಿಯಲ್ಲಿ ನೋಡಬಹುದು.