Bhavya Gowda: ರಂಜಿತ್ ಎಂಗೇಜ್ಮೆಂಟ್ನಲ್ಲಿ ಅನುಷಾ ರೈ ಬೆರಳಿಗೆ ಉಂಗುರ ತೊಡಿಸಿದ ಭವ್ಯಾ ಗೌಡ
ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ, ಅನುಷಾ ರೈ, ಭವ್ಯಾ ಗೌಡ ಸೇರಿದಂತೆ ಧಾರಾವಾಹಿ ನಟ-ನಟಿಯರು ರಂಜಿತ್ ನಿಶ್ಚಿತಾರ್ಥದಲ್ಲಿ ಭಾಗಿಯಾಗಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಇವರು ಶುಭಹಾರೈಸಿದರು. ರಂಜಿತ್- ಮಾನಸಾ ಎಂಗೇಜ್ಮೆಂಟ್ ಫೋಟೋ-ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ ಭವ್ಯಾ ಗೌಡ ಹಾಗೂ ಅನುಷಾ ರೈ ವಿಡಿಯೋ ಕೂಡ ಭರ್ಜರಿ ಆಗಿ ಹರಿದಾಡುತ್ತಿದೆ.

Bhavya Gowda Anusha Rai

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಕೆಲವೇ ದಿನಗಳಿದ್ದರೂ ಕರ್ನಟಕ ಜನತೆಯ ಅತ್ತಿರವಾದ ನಟ ರಂಜಿತ್ ಇದೀಗ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಮಾನಸ ಎಂಬುವವರ ಜೊತೆ ಉಂಗುರು ಬದಲಾಯಿಸಿಕೊಂಡು ರಂಜಿತ್ ಅವರು ಸಿಂಗಲ್ ಲೈಫ್‌ಗೆ ಗುಡ್ ಬೈ ಹೇಳಿದ್ದಾರೆ. ಕುಟುಂಬಸ್ಥರು ಮತ್ತು ಕೆಲವೇ ಕೆಲ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರ ಎಂಗೇಜ್ಮೆಂಟ್ಗೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಕೆಲ ಸ್ಪರ್ಧಿಗಳು ಕೂಡ ಬಂದಿದ್ದರು. ಇವರು ಕೂಡ ಈ ಕಾರ್ಯಕ್ರಮದಲ್ಲಿ ಮಸ್ತ್ ಮಜಾ ಮಾಡಿದ್ದಾರೆ.
ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ, ಅನುಷಾ ರೈ, ಭವ್ಯಾ ಗೌಡ ಸೇರಿದಂತೆ ಧಾರಾವಾಹಿ ನಟ-ನಟಿಯರು ರಂಜಿತ್ ನಿಶ್ಚಿತಾರ್ಥದಲ್ಲಿ ಭಾಗಿಯಾಗಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಇವರು ಶುಭಹಾರೈಸಿದರು. ರಂಜಿತ್- ಮಾನಸಾ ಎಂಗೇಜ್ಮೆಂಟ್ ಫೋಟೋ-ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ ಭವ್ಯಾ ಗೌಡ ಹಾಗೂ ಅನುಷಾ ರೈ ವಿಡಿಯೋ ಕೂಡ ಭರ್ಜರಿ ಆಗಿ ಹರಿದಾಡುತ್ತಿದೆ.
ಅನುಷಾ ಅವರಿಗೆ, ಭವ್ಯ ಗೌಡ ರಿಂಗ್ ಹಾಕಿದ್ದಾರೆ. ತಮ್ಮ ಕೈನಲ್ಲಿದ್ದ ರಿಂಗ್ ತೆಗೆದು, ದುಬಾರಿ ಬೆಲೆಯ ಡೈಮಂಡ್ ರಿಂಗ್ ಎನ್ನುತ್ತ ಅನುಷಾ ಕೈಗೆ ಭವ್ಯಾ ಹಾಕಿದ್ದಾರೆ. ಭವ್ಯಾ ಗೌಡ ಹಾಗೂ ಅನುಷಾ ಸೀರೆಯುಟ್ಟಿದ್ದು, ಒಂದು ಜೋಕಾಲಿ ಮೇಲೆ ಕುಳಿತಿದ್ದಾರೆ. ಕ್ಯಾಮೆರಾ ಹತ್ತಿರ ಬರ್ತಿದ್ದಂತೆ ಇದು ನಮ್ಮ ಪ್ರಿ ವೆಡ್ಡಿಂಗ್ ಶೂಟ್ ಅಂತ ಭವ್ಯ ಗೌಡ ಹೇಳ್ತಾರೆ. ಆ ಬಳಿಕ ಅನುಷಾ ಬೆರಳಿಗೆ ತಮ್ಮ ಬೆರಳಿನಲ್ಲಿದ್ದ ಉಂಗುರವನ್ನು ಹಾಕುತ್ತಾರೆ.
ಭವ್ಯ ಹಾಗೂ ಅನುಷಾ ಮಾಡಿದ ಈ ತಮಾಷೆಯ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ಸಮಯದಲ್ಲಿ ಅವರು ರೀಲ್ಸ್ ಕೂಡ ಮಾಡಿದ್ದಾರೆ. ಭವ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಯೂಟಿ ಜೊತೆ ಕ್ವಿಕ್ ರೀಲ್ಸ್ ಅಂತ ಶೀರ್ಷಿಕೆ ಹಾಕಿದ್ದಾರೆ. ಉದಿತ್ ನಾರಾಯಣ್ ಹಾಡಿರುವ ಓ ಆಜಾರೆ ಹಾಡಿಗೆ ಅನುಷಾ ಹಾಗೂ ಭವ್ಯ ಗೌಡ ಡಾನ್ಸ್ ಮಾಡಿದ್ದಾರೆ. ಇಬ್ಬರು ಸೀರೆಯಲ್ಲಿ ಮಿಂಚಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.
ಇನ್ನು ರಂಜಿತ್ ಎಂಗೇಜ್ಮೆಂಟ್ ಮುಗಿದ ಬಳಿಕ ರಂಜಿತ್ ಮಾಧ್ಯಮದವರ ಜೊತೆ ಮಾತನಾಡುವಾಗ ಭವ್ಯಾ ಗೌಡ ಅವರ ಮದುವೆ ಬಗ್ಗೆ ನೀಡಿದ್ದಾರೆ. ನನ್ನದು ಮಗಿಯಿತು, ಮುಂದೆ ಭವ್ಯಾ ಗೌಡ ಅವರ ಮದುವೆ. ಭವ್ಯ ಕೂಡ ರೆಡಿಯಾಗುತ್ತಿದ್ದಾರೆ. ಹುಡುಗನಿಗೂ ಕೇಳಿದ್ದೇನೆ ಎಂದಿದ್ದಾರೆ. ಈ ವೇಳೆ ಹುಡುಗ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ರಂಜಿತ್, ಇನ್ನೂ ಹುಡುಕುತ್ತಿದ್ದೇವೆ. ಇವರಿಗೆ ಹುಡುಕ ಬೇಕು ಅಂದರೆ ಅವನು ಇನ್ನೂ ನೆಕ್ಸ್ಟ್ ಲೆವೆಲ್ ರೌಡಿಯಾಗಿರಬೇಕು. ಇಬ್ಬರೂ ಹೊಡೆದಾಡಿಕೊಂಡಿರಬೇಕು ಎಂದು ರಂಜಿತ್ ಹೇಳಿದ್ದಾರೆ.
Ranjith Bigg Boss: ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ರಂಜಿತ್: ಹುಡುಗಿ ಯಾರು ನೋಡಿ