ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುವ ಧಾರಾವಾಹಿಗಳಿಗೆ ವಿಶೇಷ ಅಭಿಮಾನಿ ಬಳಗವಿದೆ. ಇತರೆ ಚಾನೆಲ್ಗಳಿಗೆ ಹೋಲಿಸಿದರೆ ಇದರಲ್ಲಿ ಪ್ರಸಾರ ಆಗುವ ಸೀರಿಯಲ್ಗಳ ಸಂಖ್ಯೆ ಕಡಿಮೆ.. ಆದರೆ, ಟೆಲಿಕಾಸ್ಟ್ ಕಾಣುವ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿದ್ದಾರೆ. ಆಸೆ, ನಿನ್ನ ಜೊತೆ ನನ್ನ ಕಥೆ, ರೇಣುಕಾ ಯಲ್ಲಮ್ಮ, ಇತ್ತೀಚೆಗಷ್ಟೆ ಶುರುವಾದ ಶಾರದೆ (Sharade Serial) ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿವೆ.
ಈ ಪೈಕಿ ಕಳೆದ ಕೆಲವು ವಾರಗಳಿಂದ ಟ್ವಿಸ್ಟ್ ಆ್ಯಂಡ್ ಟರ್ನ್ ಮೂಲಕ ಜನರಿಗೆ ಇನ್ನಷ್ಟು ಹತ್ತಿರುವಾಗಿರುವ ಶಾರದೆ ಧಾರಾವಾಹಿಯಲ್ಲಿ ಈಗ ಹೊಸ ಪಾತ್ರವೊಂದು ಎಂಟ್ರಿ ಆಗಲಿದೆ. ಶಾರದೆ ಧಾರಾವಾಹಿಯಲ್ಲಿ ಇನ್ಸ್ಪೆಕ್ಟರ್ ವಿಕ್ರಮ್ ಆಗಿ ದಿಲೀಪ್ ಶೆಟ್ಟಿ ಎಂಟ್ರಿ ಕೊಡಲಿದ್ದಾರೆ. ಇತ್ತೀಚೆಗಷ್ಟೆ ದಿಲೀಪ್ ಅಭಿನಯದ ನೀ ನಾದೆನ ಸೀರಿಯಲ್ ಮುಕ್ತಾಯಗೊಂಡಿತ್ತು. ಇದರ ಬೆನ್ನಲ್ಲೇ ಈಗ ಶಾರದೆಯಲ್ಲಿ ಪೊಲೀಸ್ ಪಾತ್ರದ ಮೂಲಕ ಬರಲು ಸಜ್ಜಾಗಿದ್ದಾರೆ.
ಸದ್ಯ ಶಾರದೆ ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಮಾಡದ ತಪ್ಪಿಗೆ ಶಾರದೆ ಪತಿ ಸಿದ್ಧಾರ್ಥ್ ಸಿಲುಕಿಕೊಂಡಿದ್ದಾನೆ. ಈ ಅಪಾಯದಿಂದ ಸಿದ್ದುವನ್ನು ಪಾರು ಮಾಡಲು ಇನ್ಸ್ಪೆಕ್ಟರ್ ವಿಕ್ರಮ್ ಆಗಿ ದಿಲೀಪ್ ಶೆಟ್ಟಿ ಬರುತ್ತಿದ್ದಾರೆ. ಸೋಮವಾರದಿಂದ ಭಾನುವಾರದ ವರೆಗೆ ಸಂಜೆ 6.30ಕ್ಕೆ ಈ ಧಾರಾವಾಹಿ ಪ್ರಸಾರ ಕಾಣಲಿದೆ.
Bhagya Lakshmi Serial: ಮದುವೆ ನಿಲ್ಲಿಸುವ ಮೀನಾಕ್ಷಿ ಆಟಕ್ಕೆ ಬ್ರೇಕ್ ಹಾಕ್ತಾಳ ಲಕ್ಷ್ಮೀ?: ಕಾದು ಕುಳಿತ ವೀಕ್ಷಕರು
ಶಾರದೆ ಸೀರಿಯಲ್‌ನ ಶಾರದ ಪಾತ್ರವನ್ನ ಚೈತ್ರಾ ಸಕ್ಕರೆ ಮಾಡುತ್ತಿದ್ದಾರೆ. ಇವರು ಈ ಹಿಂದೆ ಹಲವು ಸೀರಿಯಲ್ ಮಾಡಿದ್ದಾರೆ. ಕನ್ನಡದ ನಯನತಾರಾ ಅನ್ನೋ ಸೀರಿಯಲ್ ಅಲ್ಲೂ ಮುಖ್ಯಪಾತ್ರದಲ್ಲಿಯೇ ಅಭಿನಯಿಸಿದ್ದರು. ಈ ಸೀರಿಯಲ್ ಆದ್ಮೇಲೆ ತಮಿಳು ಸೀರಿಯಲ್ ಗಳಲ್ಲಿಯೇ ಹೆಚ್ಚಾಗಿ ಬ್ಯುಸಿ ಅಗಿದ್ದರು. ಬಳಿಕ ಕನ್ನಡದ ಶಾರದೆ ಸೀರಿಯಲ್ ಮಾಡುತ್ತಿದ್ದಾರೆ. ಸೂರಜ್ ಹೊಳಲು ನಾಯಕನಾಗಿದ್ದಾರೆ.