ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಮದುವೆ ನಿಲ್ಲಿಸುವ ಮೀನಾಕ್ಷಿ ಆಟಕ್ಕೆ ಬ್ರೇಕ್ ಹಾಕ್ತಾಳ ಲಕ್ಷ್ಮೀ?: ಕಾದು ಕುಳಿತ ವೀಕ್ಷಕರು

ಮದುವೆ ನಿಲ್ಲಿಸ ಬೇಕು ಎಂದು ಬಂದ ತಾಂಡವ್ಗೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ವೈಷ್ಣವ್ ಅಡ್ಡಲಾಗಿ ನಿಂತಿದ್ದಾನೆ. ಇದನ್ನು ಕಂಡ ವೀಕ್ಷಕರು ಲಕ್ಷ್ಮೀ ಎಲ್ಲಿದ್ದಾಳೆ?, ಮೀನಾಕ್ಷಿ, ಕನ್ನಿಕಾ ಆಟಕ್ಕೆ ಬ್ರೇಕ್ ಹಾಕಲು ಲಕ್ಷ್ಮೀ ಬರಲೇಬೇಕು ಎಂದು ಹೇಳುತ್ತಿದ್ದಾರೆ.

ಮೀನಾಕ್ಷಿ ಆಟಕ್ಕೆ ಬ್ರೇಕ್ ಹಾಕ್ತಾಳ ಲಕ್ಷ್ಮೀ?

Bhagya Lakshmi Serial

Profile Vinay Bhat Jul 12, 2025 12:13 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸದ್ಯ ಭಾಗ್ಯಾ ತಂಗಿ ಪೂಜಾ ಕಲ್ಯಾಣೋತ್ಸವ ನಡೆಯುತ್ತಿದೆ. ತಂಗಿ ಪೂಜಾ ಮದುವೆಗಾಗಿ ಭಾಗ್ಯಾ ಸಿಕ್ಕಾಪಟ್ಟೆ ಕಷ್ಟಪಡ್ತಿದ್ದಾಳೆ. ಮತ್ತೊಂದೆಡೆ ಈ ಮದುವೆ ನಿಲ್ಲಿಸಲು ಮೀನಾಕ್ಷಿ ಹಾಗೂ ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಈ ಸಾಲಿಗೆ ಭಾಗ್ಯ ಪತಿ ತಾಂಡವ್ ಕೂಡ ಸೇರಿದ್ದಾನೆ. ಆದರೆ, ಮದುವೆ ನಿಲ್ಲಿಸ ಬೇಕು ಎಂದು ಬಂದ ತಾಂಡವ್​ಗೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ವೈಷ್ಣವ್ ಅಡ್ಡಲಾಗಿ ನಿಂತಿದ್ದಾನೆ. ಇದನ್ನು ಕಂಡ ವೀಕ್ಷಕರು ಲಕ್ಷ್ಮೀ ಎಲ್ಲಿದ್ದಾಳೆ?, ಮೀನಾಕ್ಷಿ, ಕನ್ನಿಕಾ ಆಟಕ್ಕೆ ಬ್ರೇಕ್ ಹಾಕಲು ಲಕ್ಷ್ಮೀ ಬರಲೇಬೇಕು ಎಂದು ಹೇಳುತ್ತಿದ್ದಾರೆ.

ಎಂಗೇಜ್‌ಮೆಂಟ್‌ನಲ್ಲೇ ಈ ಮದುವೆ ನಿಲ್ಲಿಸಬೇಕು ಎಂದು ಕನ್ನಿಕಾ-ಮೀನಾಕ್ಷಿ ಅಂದುಕೊಂಡಿದ್ದರು. ಆದರೀಗ, ಮದುವೆ ಮಂಟಪದವರೆಗೂ ಬಂದುಬಿಟ್ಟಿದೆ. ಹೇಗಾದರೂ ಮಾಡಿ ಈ ಮದುವೆ ನಿಲ್ಲಿಸಬೇಕು. ಇಲ್ಲಾಂದ್ರೆ ಪೂಜಾ ಸೊಸೆಯಾಗಿ ಬಂದುಬಿಡ್ತಾಳೆ ಎಂದು ಮೀನಾಕ್ಷಿ - ಕನ್ನಿಕಾ ಮಾತನಾಡಿಕೊಂಡಿದ್ದಾರೆ. ಏನಾದರೂ ಪ್ಲಾನ್ ಮಾಡು ಆದಿ ಅಂತ ಮೀನಾಕ್ಷಿ ಕೇಳಿದಾಗ ಆದೀಶ್ವರ್ ಕೈಕೊಟ್ಟಿದ್ದಾರೆ, ಭಾಗ್ಯಳನ್ನ ಜಡ್ಜ್ ಮಾಡೋಕೆ ಆಗ್ತಿಲ್ಲ. ದುಡ್ಡಿಗೆ ಭಾಗ್ಯ ಆಸೆ ಪಡುವ ಹಾಗಿದ್ದರೆ, ಆಸ್ತಿಯಲ್ಲಿ ಪಾಲು ಸಿಗೋದಿಲ್ಲ ಅಂದಾಗಲೇ ಮದುವೆ ಕ್ಯಾನ್ಸಲ್‌ ಆಗಬೇಕಿತ್ತು. ಆದರೆ, ಹಾಗಾಲಿಲ್ಲ ಅಂತ ಆದೀಶ್ವರ್‌ ಹೇಳಿದ್ದಾನೆ.

ಆದೀಯ ಮಾತು ಕೇಳಿ ಕನ್ನಿಕಾ, ಇದೆಲ್ಲಾ ಅವಳ ಪ್ಲಾನ್. ಮದುವೆಯಾದ್ಮೇಲೆ ಹೇಗಾದರೂ ಮಾಡಿ ಆಸ್ತಿಯನ್ನ ನಮ್ಮಿಂದ ಕಿತ್ತುಕೊಳ್ತಾಳೆ. ನಮ್ಮ ಫ್ಯಾಮಿಲಿಯನ್ನ ಒಡೆಯುತ್ತಾಳೆ ಎಂದಿದ್ದಾಳೆ. ಆದರೆ, ಆದೀಶ್ವರ್, ನನಗೆ ಹಾಗನಿಸುತ್ತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪೂಜಾ-ಕಿಶನ್ ಮದುವೆ ನಿಲ್ಲಿಸುವ ಪ್ಲ್ಯಾನ್​ನಿಂದ ಆದೀಶ್ವರ್ ಹಿಂದೆ ಸರಿದಿದ್ದಾನೆ.



ಮತ್ತೊಂದೆಡೆ ಈ ಮದುವೆಗೆ ತಾಂಡವ್ ನನ್ನು ಇನ್ವೈಟ್ ಮಾಡಲು ಭಾಗ್ಯಾ ಮುಂದಾಗಿದ್ದಳು. ಆದ್ರೆ ಕುಸುಮಾ ಇದಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿ, ಈ ಮದುವೆಗೆ ಆತನನ್ನು ಕರೆಯೋದು ಬೇಡ ಎಂದಿದ್ದಳು. ಆದರೆ, ಇನ್ವಿಟೇಷನ್ ಇರದೆಯೂ ಈ ಮದುವೆಗೆ ತಾಂಡವ್ ಎಂಟ್ರಿಯಾಗಿದೆ. ಮದುವೆ ನಿಲ್ಲಿಸ್ತೇನೆ ಅಂತ ತಾಂಡವ್ ಪಣ ತೊಟ್ಟಿದ್ದಾನೆ.

ಇದನ್ನ ಗಮನಿಸಿದ ಕುಸುಮಾ, ತಾಂಡವ್​ನನ್ನು ಎಳೆದುಕೊಂಡು ಬಂದು ಹೊರಟು ಹೋಗು ಇಲ್ಲಿಂದ ಎಂದಿದ್ದಾಳೆ. ಆದ್ರೆ, ಇದಕ್ಕೆ ಒಪ್ಪದ ತಾಂಡವ್, ನೀನು ಇವತ್ತು ಎಷ್ಟೇ ಕಷ್ಟ ಪಟ್ಟರೂ ನಾನು ಈ ಮದುವೆಯನ್ನ ನಿಲ್ಲಿಸಿಯೇ ನಿಲ್ಲಿಸುತ್ತೇನೆ ಎಂದು ಹೊರಡುತ್ತಾನೆ. ಹೀಗೆ ಮದುವೆ ನಿಲ್ಲಿಸಲು ಹೊರಟಾಗ ಅಲ್ಲಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ವೈಷ್ಣವ್ ಬಂದಿದ್ದಾನೆ. ತಾಂಡವ್​ ದಾರಿಗೆ ಅಡ್ಡಲಾಗಿ ವೈಷ್ಣವ್ ನಿಂತಿದ್ದಾನೆ. ಈ ಕುರಿತು ಪ್ರೊಮೋ ಹಂಚಿಕೊಂಡಿರುವ ಕಲರ್ಸ್ ಕನ್ನಡ, ಕೇಡು ಮಾಡುವವನ ತಡೆಯೋಕೆ ಅಪರೂಪದ ಬಂದುವೇ ಬಂದ ಎಂದು ಹೇಳಿದೆ.

Bhavya Gowda: ಕರ್ಣ ಧಾರಾವಾಹಿ ಬಗ್ಗೆ ವಿಶೇಷ ಪೋಸ್ಟ್ ಹಂಚಿಕೊಂಡ ಭವ್ಯಾ ಗೌಡ

ಸದ್ಯ ಮದುವೆ ನಿಲ್ಲಿಸಲು ಹೊರಟ ತಾಂಡವ್​ಗೆ ವೈಷ್ಣವ್ ಅಡ್ಡಲಾಗಿದ್ದಾನೆ.. ಅತ್ತ ಮೀನಾಕ್ಷಿ ಕನ್ನಿಕಾ ಪ್ಲ್ಯಾನ್ ಅನ್ನು ಲಕ್ಷ್ಮೀ ಬಂದು ಉಡೀಸ್ ಮಾಡುತ್ತಾಳೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಲಕ್ಷ್ಮೀ ಮದುವೆ ನಡೆಯುತ್ತಿದ್ದ ಹಾಗೆ, ಭಾಗ್ಯಲಕ್ಷ್ಮೀ ಸಂಸಾರ ಕಥೆ ಎರಡು ಹೋಳಾಯಿತು. ಭಾಗ್ಯ ಕಥೆ ಮಾತ್ರ ಭಾಗ್ಯಲಕ್ಷ್ಮೀ ಧಾರಾವಾಹಿಯಾಗಿ ಮುಂದುವರೆದರೆ, ಲಕ್ಷ್ಮೀ ಸಂಸಾರದ ಕಥೆ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಆಯ್ತು. ಅಂದಿನಿಂದ ಭಾಗ್ಯ - ಲಕ್ಷ್ಮೀ ಒಟ್ಟಾಗಿ ಕಾಣಿಸಿಕೊಂಡಿದ್ದು ತೀರಾ ವಿರಳ. ಲಕ್ಷ್ಮೀ ಬಾರಮ್ಮ ಕ್ಲೈಮ್ಯಾಕ್ಸ್‌ನಲ್ಲೂ ಭಾಗ್ಯ ಫ್ಯಾಮಿಲಿ ಪ್ರತ್ಯಕ್ಷವಾಗಲಿಲ್ಲ. ಲಕ್ಷ್ಮೀಗೆ ಸೀಮಂತ ನಡೆಯುವಾಗ ಭಾಗ್ಯ ಬರಲೇ ಇಲ್ಲ. ಈಗ ಪೂಜಾ ಮದುವೆಯಲ್ಲಿ ಭಾಗ್ಯ - ಲಕ್ಷ್ಮೀ ಒಟ್ಟಾಗ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಸದ್ಯ ಹೇಗಿದ್ರೂ ವೈಷ್ಣವ್ ಬಂದಿದ್ದಾನೆ.. ವೈಷ್ಣವ್ ಜೊತೆಗೆ ಲಕ್ಷ್ಮೀಯೂ ಬಂದು ಮೀನಾಕ್ಷಿ-ಕನ್ನಿಕಾ ಆಟಕ್ಕೆ ಬ್ರೇಕ್ ಹಾಕಿ ಈ ಮದುವೆ ಸುಸೂತ್ರವಾಗಿ ನಡೆಯಬೇಕು ಎಂಬುದು ವೀಕ್ಷಕರ ಆಸೆ.