ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karna Serial: ಕರ್ಣನಿಗೆ ಜೋಡಿಯಾದ ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ: ಲೀಕ್ ಆಯ್ತು ಪ್ರೊಮೋ ಶೂಟ್

ಕರ್ಣ ಧಾರಾವಾಹಿಗೆ ನಾಯಕಿ ಯಾರು ಎಂಬುದು ರಿವೀಲ್ ಆಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅವರು ಬೇರೆ ಯಾರು ಅಲ್ಲ, ಅಭಿಮಾನಿಗಳ ಆಶಯಂತೆ ಭವ್ಯಾ ಗೌಡ ಈ ಧಾರಾವಾಹಿ ಮೂಲಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ.

ಕರ್ಣನಿಗೆ ಜೋಡಿಯಾದ ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ

Karna Serial Bhavya Gowda

Profile Vinay Bhat Apr 5, 2025 7:15 AM

ಝೀ ಕನ್ನಡ ವಾಹಿನಿಯಲ್ಲಿ ಕರ್ಣ (Karna Serial) ಎಂಬ ಹೊಸ ಧಾರಾವಾಹಿಯೊಂದನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ. ಕಿರಣ್ ರಾಜ್ ಈ ಧಾರಾವಾಹಿಯ ನಾಯಕನಾಗಿದ್ದಾರೆ. ಡಾಕ್ಟರ್​ ಕರ್ಣ ಆಗಿ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಕಿರಣ್ ರಾಜ್ ಬರುತ್ತಿದ್ದಾರೆ. ಈಗಾಗಲೇ ಕರ್ಣ ಧಾರಾವಾಹಿಯ ಮೊದಲ ಪ್ರೋಮೋ ಎಲ್ಲೆಡೆ ವೈರಲ್‌ ಆಗಿದ್ದು, ಧಾರಾವಾಹಿಯ ಒನ್‌ ಲೈನ್‌ ಕಥೆ ಏನು ಎನ್ನುವುದು ಪ್ರೇಕ್ಷಕರಿಗೆ ತಿಳಿದು ಹೋಗಿದೆ. ಆದರೆ, ಈ ಧಾರಾವಾಹಿಯ ಹೀರೋಯಿನ್ ಯಾರೂ ಎಂಬುದು ಈವರೆಗೆ ರಿವೀಲ್ ಆಗಿರಲಿಲ್ಲ. ಆದರೀಗ ಕರ್ಣನಿಗೆ ಜೋಡಿ ಯಾರು ಎಂಬ ವಿಚಾರ ಬಹಿರಂಗವಾಗಿದೆ.

ಈ ಹಿಂದೆ ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರುವ ಕರ್ಣ ಧಾರಾವಾಹಿಗೆ ನಾಯಕಿಯಾಗಿ ಹೊಸ ಮುಖವನ್ನು​ ಹುಡುಕುತ್ತಿದೆ ಎನ್ನಲಾಗಿತ್ತು. ನಾಯಕಿ ಇನ್ನು ಫೈನಲ್​ ಆಗಿಲ್ಲ. ನಾಯಕಿ ಪಾತ್ರಕ್ಕೆ ಹೊಸ ಮುಖ ಬೇಕು ಎಂದು ಆಡಿಷನ್ ಮೇಲೆ ಆಡಿಷನ್ ಅನ್ನು ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಇದರ ಮಧ್ಯೆ ಬಿಗ್ ಬಾಸ್ ಕನ್ನಡ 11 ಸ್ಪರ್ಧಿಗಳಾದ ಮೋಕ್ಷಿತಾ ಪೈ, ಭವ್ಯಾ ಗೌಡ ಹೆಸರು ಕೂಡ ಕೇಳಿಬಂದಿತ್ತು. ಜೊತೆಗೆ ಕಿರಣ್ ರಾಜ್ ಜೊತೆ ಕನ್ನಡತಿ ಧಾರಾವಾಹಿಯಲ್ಲಿ ಜೋಡಿಯಾಗಿದ್ದ ರಂಜನಿ ರಾಘವನ್ ಹೆಸರು ಕೂಡ ತಳುಕಿ ಹಾಕಿಕೊಂಡಿತ್ತು.

ಆದರೀಗ ಈ ಧಾರಾವಾಹಿಗೆ ನಾಯಕಿ ಯಾರು ಎಂಬುದು ರಿವೀಲ್ ಆಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅವರು ಬೇರೆ ಯಾರು ಅಲ್ಲ, ಅಭಿಮಾನಿಗಳ ಆಶಯಂತೆ ಭವ್ಯಾ ಗೌಡ ಈ ಧಾರಾವಾಹಿ ಮೂಲಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಬಿಗ್ ಬಾಸ್ ಮುಗಿದು ಎರಡು ತಿಂಗಳು ಕಳೆದರೂ ತಮ್ಮ ಮುಂದಿನ ಸೀರಿಯಲ್‌ ಬಗ್ಗೆ ಭವ್ಯಾ ರಿವೀಲ್‌ ಮಾಡಿರಲಿಲ್ಲ. ಇದೀಗ, ಅವರ ಹೊಸ ಕರ್ಣ ಸೀರಿಯಲ್‌ನ ಪ್ರೋಮೋ ಚಿತ್ರೀಕರಣದ ವಿಡಿಯೋ ಕ್ಲಿಪ್‌ವೊಂದು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿದೆ.

ಈ ಮೂಲಕ ಕಿರಣ್ ರಾಜ್​ಗೆ ಜೋಡಿಯಾಗಿ ಭವ್ಯಾ ಗೌಡ ಕರ್ಣ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣದ ಕರ್ಣ ಸೀರಿಯಲ್‌ನಲ್ಲಿ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಶ್ಯಾಮ್ ಸಿಮ್ರನ್, ವರಲಕ್ಷ್ಮೀ ಶ್ರೀನಿವಾಸ್‌ ಮುಂತಾದವರು ನಟಿಸಲಿದ್ದಾರೆ. ಈ ಧಾರಾವಾಹಿಯಲ್ಲಿ ಕರ್ಣ (ಕಿರಣ್‌ ರಾಜ್‌) ಪ್ರಶಸ್ತಿ ಪುರಸ್ಕೃತ ಸ್ತ್ರೀರೋಗ ತಜ್ಞನಾಗಿದ್ದಾನೆ. ಆದರೆ, ಈತ ತನ್ನದೇ ಮನೆಯಲ್ಲಿ ಅನಾಥನಂತೆ ಬದುಕುತ್ತಿರುತ್ತಾನೆ. ಹೊರಗಿನ ಪ್ರಪಂಚಕ್ಕೆ ಜನಪ್ರಿಯ ಡಾಕ್ಟರ್‌ ಆಗಿದ್ದರೂ ಕೂಡ ಮನೆಯಲ್ಲಿ ಮಾತ್ರ ಕೆಲಸಗಾರನಂತೆ ಇರುತ್ತಾನೆ. ಮನೆಯ ಎಲ್ಲಾ ಸದಸ್ಯರ ಕೆಲಸವನ್ನು ತಾನೇ ಮಾಡುವ ಕರ್ಣ ಅಮ್ಮ, ಅಜ್ಜಿಯ ಪಾಲಿಗೆ ಮುದ್ದಿನ ಮಗ. ಎಲ್ಲ ನೋವನ್ನು ನುಂಗುತ್ತಾ, ಕಷ್ಟಗಳನ್ನು ಎದುರಿಸುವುದೇ ಈ ಧಾರಾವಾಹಿಯ ಕಥಾ ವಸ್ತು. ಸದ್ಯ ಭವ್ಯಾ ನಾಯಕಿ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಷ್ಟೆ ಹರಿದಾಡುತ್ತಿದೆ. ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Kannada Serial TRP: ಕುಸಿದ ಅಣ್ಣಯ್ಯ ಧಾರಾವಾಹಿ ಟಿಆರ್​ಪಿ: ನಂಬರ್ 1 ಧಾರಾವಾಹಿ ಇದುವೇ ನೋಡಿ