ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಒಬ್ಬೊಬ್ಬರಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೊನ್ನೆಯಷ್ಟೆ ಚೈತ್ರಾ ಕುಂದಾಪುರ (Chaithra Kundapura) ಅವರು 15 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಅವರೊಂದೊಗೆ ಸಪ್ತಪದಿ ತುಳಿದರು. ಇದೀಗ ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿ ಮದುವೆ ಆಗಿದ್ದಾರೆ. ರಂಜಿತ್ ಕುಮಾರ್ ಅವರು ಇತ್ತೀಚೆಗಷ್ಟೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೆಲ ಆಪ್ತರನ್ನು ಮಾತ್ರ ಕರೆದು ಮಾರ್ಚ್ನಲ್ಲಿ ತಾನು ಪ್ರೀತಿಸಿದ ಹುಡುಗಿಯ ಜೊತೆ ಎಂಗೇಜ್ ಆಗಿದ್ದರು. ಇದೀಗ ಇವರ ಮದುವೆ ಅದ್ಧೂರಿಯಾಗಿ ನೆರವೇರಿದೆ.
ಗುರು-ಹಿರಿಯರ ಸಮ್ಮುಖದಲ್ಲಿಯೇ ಶಾಸ್ತ್ರೋಕ್ತವಾಗಿಯೇ ರಂಜಿತ್- ಮಾನಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೊಡ್ಡಬಳ್ಳಾಪುರದ ಮೇನ್ ರೋಡ್, ಹೊನ್ನೇನಹಳ್ಳಿಯಲ್ಲಿ ರಂಜಿತ್ ಮತ್ತು ಮಾನಸ ಗೌಡ ಅವರ ಮದುವೆ ನಡೆದಿದೆ. ಕೊರಳಿಗೆ ತಾಳಿ ಬೀಳುತ್ತಿದ್ದಂತೆ ಮಾನಸ ಸಖತ್ ಎಮೋಷನಲ್ ಕೂಡ ಆಗಿದ್ದಾರೆ. ನವಜೋಡಿಗೆ ಶುಭ ಹಾರೈಸಲು ಬಿಗ್ ಬಾಸ್ ಸ್ಪರ್ಧಿಗಳಾದ ತುಕಾಲಿ ಸಂತೋಷ್ ಮತ್ತು ಮಾನಸ, ಅನುಷಾ ರೈ, ಗೋಲ್ಡ್ ಸುರೇಶ್, ಲಾಯರ್ ಜಗದೀಶ್, ಯಮುನಾ, ರಜತ್, ನಟ ರಂಗಾಯಣ ರಘು ಹಾಗೂ ಶೋಭರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ರಂಜಿತ್ ಪತ್ನಿ ಮಾನಸಾ ಗೌಡ ಅವರು ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಾಡೆಲ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇವರದ್ದೇ ಆದ ಬ್ಯೂಟಿಕ್ ಕೂಡ ಇದೆ. ಒಟ್ಟಿನಲ್ಲಿ ಇವರು ಉದ್ಯಮಿ ಕೂಡ ಹೌದು. ಮಾನಸ ಗೌಡ, ದಿ ಫ್ಯಾಷನ್ ಸ್ಟೇಟ್‌ಮೆಂಟ್ ಎಂಬ ಹೆಸರಿನ ಫ್ಯಾಷನ್ ಸ್ಟುಡಿಯೋ ನಡೆಸುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಕಂಟೆಸ್ಟೆಂಟ್ ಮತ್ತು ನಟ ರಂಜಿತ್ ದೊಡ್ಮನೆಯಲ್ಲಿ ನಡೆದ ಜಗಳದಿಂದಾಗಿ 3ನೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದರು. ಟಫ್ ಕಂಟೆಸ್ಟೆಂಟ್‌ಗಳ ಲಿಸ್ಟ್‌ನಲ್ಲಿ ರಂಜಿತ್ ಕೂಡ ಒಬ್ಬರಾಗಿ ಚೆನ್ನಾಗಿ ಆಟ ಆಡುತ್ತಿದ್ದರು. ಆದರೆ ಅವರು ಮನೆಯಿಂದ ಹೊರಗೆ ಬರಲೇ ಬೇಕಾದ ಸಂದರ್ಭ ಸೃಷ್ಟಿಯಾಗಿತ್ತು. ಕಿರುತೆರೆಯಲ್ಲಿ ಶನಿ ಧಾರಾವಾಹಿಯಲ್ಲಿ ಸೂರ್ಯ ದೇವನ ಪಾತ್ರದಲ್ಲಿ ನಟಿಸಿ ರಂಜಿತ್ ಕನ್ನಡ ಸೀರಿಯಲ್ ಪ್ರೇಮಿಗಳ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದರು. ಆ ಬಳಿಕ ಸೀತಾ ರಾಮ ಕಲ್ಯಾಣ, ಭರಾಟೆ, ಶಿವಾರ್ಜುನ, ಜೇಮ್ಸ್ ಮುಂತಾದ ಸಿನಿಮಾಗಳಲ್ಲಿಯೂ ರಂಜಿತ್ ನಟಿಸಿದ್ದಾರೆ.
Chaithra Kundapura Marriage: ಮದುವೆಯ ಬಳಿಕ ಚೈತ್ರಾ ಕುಂದಾಪುರ ಮೊದಲ ಪ್ರತಿಕ್ರಿಯೆ: ಏನೆಲ್ಲ ಹೇಳಿದ್ರು ನೋಡಿ