ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chaithra Kundapura Marriage: ಮದುವೆಯ ಬಳಿಕ ಚೈತ್ರಾ ಕುಂದಾಪುರ ಮೊದಲ ಪ್ರತಿಕ್ರಿಯೆ: ಏನೆಲ್ಲ ಹೇಳಿದ್ರು ನೋಡಿ

ಬಿಗ್ ಬಾಸ್ಗೆ ಹೋಗಿ ಬಂದ ಬಳಿಕ ಚೈತ್ರಾ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಆದರೆ, ಅವರು ಸಿಂಪಲ್ ಆಗಿ, ಹೆಚ್ಚೆನು ಸುದ್ದಿಯಿಲ್ಲದೆ ಮದುವೆ ಆಗಿದ್ದಾರೆ. ಇದೀಗ ಮೊದಲ ಬಾರಿ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿರುವ ಚೈತ್ರಾ ಕೆಲಸ ವಿಚಾರ ಹಂಚಿಕೊಂಡಿದ್ದಾರೆ.

ಮದುವೆಯ ಬಳಿಕ ಚೈತ್ರಾ ಕುಂದಾಪುರ ಮೊದಲ ಪ್ರತಿಕ್ರಿಯೆ

chaitra vasudevan marriage

Profile Vinay Bhat May 10, 2025 4:06 PM

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ, ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaithra Kundapura) ಅವರ ಮದುವೆ ಶ್ರೀಕಾಂತ್‌ ಕಶ್ಯಪ್‌ ಅವರ ಜೊತೆ ಕುಂದಾಪುರದ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿಂಪಲ್ ಆಗಿ ನಡೆದಿದೆ. ಚೈತ್ರಾ ಅವರದ್ದು ಲವ್‌ ಕಮ್ ಅರೇಂಜ್ಡ್‌ ಮ್ಯಾರೇಜ್. ಕಾಲೇಜಿನಲ್ಲಿ ಲವ್‌ ಶುರುವಾಗಿದ್ದು ಎಂಬ ವಿಚಾರವನ್ನು ಚೈತ್ರಾ ಹೇಳಿದ್ದಾರೆ. ಮದುವೆಗೆ ಧನರಾಜ್ ಆಚಾರ್, ಗೋಲ್ಡ್ ಸುರೇಶ್, ರಜತ್ ಕಿಶನ್ ಹಾಗೂ ಅವರ ಪತ್ನಿ ಹಾಜರಿದ್ದರು. ರಜತ್ ಅವರು ಅಣ್ಣನ ಸ್ಥಾನದಲ್ಲಿ ನಿಂತು ಶಾಸ್ತ್ರವನ್ನು ಮಾಡಿದರು.

ಬಿಗ್ ಬಾಸ್​ಗೆ ಹೋಗಿ ಬಂದ ಬಳಿಕ ಚೈತ್ರಾ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಆದರೆ, ಅವರು ಸಿಂಪಲ್ ಆಗಿ, ಹೆಚ್ಚೆನು ಸುದ್ದಿಯಿಲ್ಲದೆ ಮದುವೆ ಆಗಿದ್ದಾರೆ. ಇದೀಗ ಮೊದಲ ಬಾರಿ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿರುವ ಚೈತ್ರಾ ಕೆಲಸ ವಿಚಾರ ಹಂಚಿಕೊಂಡಿದ್ದಾರೆ. ‘‘ನಾವು ಮದುವೆ ಆಗುತ್ತಿರುವ ವಿಚಾರವನ್ನು ಹೆಚ್ಚಿನ ಜನರಿಗೆ ಹೇಳಿರಲಿಲ್ಲ. ತುಂಬಾ ಸೀಕ್ರೆಟ್‌ ಆಗಿ ಇಟ್ಟಿದ್ದೆವು. ಆದರೂ ಅಭಿಮಾನಿಗಳು ತುಂಬಾ ದೂರದ ಊರಿನಿಂದ ಬಂದಿದ್ದೀರಿ. ಶಾಸ್ತ್ರ, ಸಂಪ್ರದಾಯಗಳ ಜೊತೆಗೆ ನಮಗೆ ಸರಳ ವಿವಾಹ ಆಗಬೇಕು ಅನ್ನೋ ಆಸೆ ಇತ್ತು. ಆದರೆ ನಮ್ಮ ಮದುವೆಯ ವಿಚಾರ ಗೊತ್ತಾಗಿ ಸೋಶಿಯಲ್‌ ಮೀಡಿಯಾದಿಂದ ನೋಡಿ ತುಂಬಾ ದೂರದ ಊರಿನಿಂದೆಲ್ಲಾ ಅಭಿಮಾನಿಗಳು ಬಂದಿದ್ದೀರಾ. ಯಾರೆಲ್ಲಾ ದೂರದ ಊರಿನಿಂದ ಬಂದಿದ್ದೀರಿ ಅವರಿಗೆಲ್ಲಾ ತುಂಬಾ ಧನ್ಯವಾದಗಳು. ನಮ್ಮ ಮದುವೆಯನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿದ್ದೀರಿ. ಖಂಡಿತವಾಗಿಯೂ ಈ ಪ್ರೀತಿಗೆ ನಾವು ಚಿರಋಣಿ’’ ಎಂದು ಚೈತ್ರಾ ಹೇಳಿದ್ದಾರೆ.

‘‘ನಾವಿಬ್ಬರೂ ಕೂಡ ಶಾಸ್ತ್ರ ಸಂಪ್ರದಾಯಗಳನ್ನು ನಂಬುವವರು. ನಮಗೆ ನಮ್ಮ ಮದುವೆಯಲ್ಲಿ ಇದನ್ನ ಫಾಲೋ ಮಾಡಬೇಕು, ಅದೇ ನಮಗೆ ಬಹಳ ಮುಖ್ಯ ಅಂತೆನಿಸುತ್ತು. ಹಾಗಾಗಿ ನಾವು ತುಂಬಾ ಸಿಂಪಲ್‌ ಆಗಿ ಮದುವೆಯಾಗಿದ್ದೇವೆ. ಜೊತೆಗೆ ಇದೇ ದೇವಸ್ಥಾನದಲ್ಲಿ ಮತ್ತು ನಮ್ಮ ಊರಿನಲ್ಲಿಯೇ ಮದುವೆ ಆಗಬೇಕು ಅನ್ನೋ ಆಸೆ ಇತ್ತು. ಯಾಕೆಂದರೆ ಇವತ್ತಿಗೆ ಸಂಪ್ರದಾಯಗಳು ಕಳೆದುಹೋಗುತ್ತಿವೆ. ಕಳೆದು ಹೋಗುತ್ತಿರುವ ಶಾಸ್ತ್ರಗಳನ್ನು ಮತ್ತು ಸಂಸ್ಕೃತಿಗಳ ನಡುವೆ ನಾವು ನಮ್ಮ ನೆಲ ಮೂಲದ ಸಂಪ್ರದಾಯಗಳನ್ನು ಉಳಿಸಬೇಕು, ಬೇರೆ ಬೇರೆ ಊರಿಂದ ನಮ್ಮೂರಿಗೆ ಜನ ಬರಬೇಕು ಅನ್ನೋದೆಲ್ಲಾ ಯೋಚನೆ ಇತ್ತು. ಹಾಗಾಗಿ ನಾವು ಇಲ್ಲಿ ಮದುವೆಯಾಗಿದ್ದೆವು’’ ಎಂದು ಹೇಳಿದರು.

Bhagya Lakshmi Serial: ಪಾರ್ಕ್​ನಲ್ಲಿ ತಾಂಡವ್ ಕಣ್ಣಿಗೆ ಬಿದ್ದ ಪೂಜಾ-ಕಿಶನ್: ಕಾದಿದೆ ದೊಡ್ಡ ಗಂಡಾಂತರ?

ಅಣ್ಣನ ಸ್ಥಾನದಲ್ಲಿ ನಿಂತ ರಜತ್:

ವಿಶೇಷ ಎಂದರೆ ಈ ಮದುವೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ರಜತ್ ಕಿಶನ್. ಬಿಗ್‌ ಬಾಸ್‌ ಮನೆಯಲ್ಲಿ ಅಣ್ಣ-ತಂಗಿ ಎಂದು ಬಾಸ್‌ ಎಂದು ಸಿಕ್ಕಾಪಟ್ಟೆ ಜಗಳ ಆಡಿದ್ದ ರಜತ್‌, ಚೈತ್ರಾ ಕುಂದಾಪುರ ಜುಗಲ್‌ಬಂಧಿ ನೋಡೋದೆ ಚೆಂದ ಆಗಿತ್ತು. ಈಗ ಅವರು ಚೈತ್ರಾ ಮದುವೆಗೆ ಬಂದು ಅಣ್ಣನ ಸ್ಥಾನದಲ್ಲಿ ನಿಂತು ಶಾಸ್ತ್ರವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ತಂಗಿಗೆ ಉಡುಗೊರೆ ಕೂಡ ನೀಡಿದ್ದಾರೆ. ಇದೊಂದು ಬಹಳ ಅಪರೂಪದ ಗಳಿಗೆಗೆ ಸಾಕ್ಷಿಯಾಯಿತು.

ಅಲ್ಲದೆ, ರಜತ್ ಕಾಲಿಗೆ ಬಿದ್ದು ಚೈತ್ರಾ ಕುಂದಾಪುರ ಆಶೀರ್ವಾದ ಪಡೆದುಕೊಂಡಿದ್ದು ಎಲ್ಲರ ಗಮನವನ್ನು ಸೆಳೆಯಿತು. ಬಿಗ್ ಬಾಸ್ ಮನೆಯಲ್ಲಿ ರಜತ್ ಕಿಶನ್, ಚೈತ್ರಾ ಕುಂದಾಪುರ ಅವರಿಗೆ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದರು. ಚೈತ್ರಾ ಕುಂದಾಪುರ, ರಜತ್ ಜಗಳ ವಿಕೋಪಕ್ಕೂ ಹೋಗಿತ್ತು. ಆದರೆ ರಿಯಾಲಿಟಿ ಶೋ ಮುಗಿದ ಮೇಲೆ ಆ ಘಟನೆಯನ್ನೆಲ್ಲಾ ಮರೆತಿರುವ ರಜತ್ ಕಿಶನ್ ಅವರು ಚೈತ್ರಾ ಕುಂದಾಪುರ ಅವರ ಮದುವೆಗೆ ಬಂತು ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.