ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir-Aishwarya: ವೀಡಿಯೊ ಆಯ್ತು ಈಗ ಜೊತೆಯಾಗಿ ಫೋಟೋಶೂಟ್ ಮಾಡಿಸಿಕೊಂಡ ಶಿಶಿರ್-ಐಶ್ವರ್ಯಾ

ಮೊನ್ನೆಯಷ್ಟೆ ಹೋಳಿ ಹಬ್ಬದ ದಿನ ಐಶ್ವರ್ಯಾ ಸಿಂಧೋಗಿ, ಶಿಶಿರ್ ಶಾಸ್ತ್ರೀ ಜೋಡಿ ಭರ್ಜರಿ ಆಗಿ ವೀಡಿಯೊ ಶೂಟ್ ಮಾಡಿಸಿಕೊಂಡಿದ್ದರು. ಇದೀಗ ಈ ಜೋಡಿ ಇದೇ ಡ್ರೆಸ್ನಲ್ಲಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ವೀಡಿಯೊ ಆಯ್ತು ಈಗ ಫೋಟೋಶೂಟ್ ಮಾಡಿಸಿಕೊಂಡ ಶಿಶಿರ್-ಐಶ್ವರ್ಯಾ

Shishir Shastry and Aishwarya Shindogi

Profile Vinay Bhat Mar 17, 2025 7:26 AM

ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ (Bigg Boss Kannada 11) ಬರುವ ಮುನ್ನ ಬೆಳ್ಳಿ ತೆರೆ ಮತ್ತು ಕಿರುತೆರೆಯಲ್ಲಿ ಸಣ್ಣ-ಪುಟ್ಟ ಪಾತ್ರದ ಮೂಲಕ ಗುರುತಿಸಿಕೊಂಡ ಐಶ್ವರ್ಯಾ ಸಿಂಧೋಗಿ ದೊಡ್ಮನೆಯಿಂದ ಹೊರಬಂದ ಬಳಿಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ದೊಡ್ಡ ದೊಡ್ಡ ಆಫರ್​ಗಳು ಇವರಿಗೆ ಬರುತ್ತಿದೆ. ಸೀಸನ್ 11 ರಲ್ಲಿ ಬಿಗ್ ಬಾಸ್ ಮನೆಗೆ ಬಂದ ಗರ್ಲ್ಸ್ ಬ್ಯೂಟಿಯಲ್ಲಿ ಇವರ ಮೇಲೆ ಎಲ್ಲರ ಕಣ್ಣಿತ್ತು. 90 ದಿನಗಳ ಕಾಲ ದೊಡ್ಮನೆಯಲ್ಲಿದ್ದ ಇವರ ಜೊತೆ ಶಿಶಿರ್ ಶಾಸ್ತ್ರೀ ಹೆಸರು ತಳುಕಿ ಹಾಕಿಕೊಂಡಿತ್ತು. ಇವರಿಬ್ಬರು ಲವ್​ನಲ್ಲಿ ಬಿದ್ದಿದ್ದಾರೆ ಎಂಬ ಟಾಕ್ ಜೋರಾಗಿತ್ತು.

ಬಿಗ್ ಬಾಸ್ ಮನೆಯಲ್ಲಿರುವಾಗ ಐಶ್ವರ್ಯಾ ಹಾಗೂ ಶಿಶಿರ್ ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿರುವ ದೃಶ್ಯ ವೈರಲ್ ಆಗಿತ್ತು. ಹೊರಬಂದ ಬಳಿಕ ಕೂಡ ಇವರಿಬ್ಬರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕೆಲ ಸಂದರ್ಶನದಲ್ಲಿ ಇವರ ಬಗ್ಗೆ ಕೇಳಿದ ಪ್ರಶ್ನೆಗೆ ನಾಚಿ ನೀರಾಗಿದ್ದೂ ಉಂಟು. ಆದ್ರೆ ಇಬ್ಬರೂ ನಾವಿಬ್ರು ಒಳ್ಳೆಯ ಫ್ರೆಂಡ್ಸ್, ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹದ ಬಾಂಧವ್ಯ ಇದೆ ಎಂದಷ್ಟೆ ಹೇಳಿಕೊಂಡು ಬಂದಿದ್ದಾರೆ.

ಆದರೆ, ಎಲ್ಲೇ ಹೋದರು ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೆ ಹೋಳಿ ಹಬ್ಬದ ದಿನ ಈ ಜೋಡಿ ಭರ್ಜರಿ ಆಗಿ ವೀಡಿಯೊ ಶೂಟ್ ಮಾಡಿಸಿಕೊಂಡಿದ್ದರು. ನೀಲಿ ಬಣ್ಣದ ಗೌನ್​ನಲ್ಲಿ ರಾಣಿಯಂತೆ ಐಶೂ- ಕಪ್ಪು ಹಾಗೂ ಹಳದಿ ಬಣ್ಣದ ಡ್ರೆಸ್‌ನಲ್ಲಿ ಶಿಶಿರ್ ರಾಜನಂತೆ ಕಂಗೊಳಿಸಿದ್ದರು. ಅಲ್ಲದೆ ಈ ವಿಡಿಯೋದಲ್ಲಿ ಶಿಶಿರ್​ ಅವರ ಕೆನ್ನೆಗೆ ಐಶ್ವರ್ಯಾ ಮುತ್ತು ಕೊಟ್ಟಿದ್ದರು. ಇದೀಗ ಈ ಜೋಡಿ ಇದೇ ಡ್ರೆಸ್​ನಲ್ಲಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ಐಶ್ವರ್ಯಾ ಸಿಂಧೋಗಿ, ಶಿಶಿರ್‌ ಶಾಸ್ತ್ರೀ ಫೋಟೋಶೂಟ್‌ ನೋಡಿದರೆ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ರೀತಿ ಅದ್ದೂರಿ ಆಗಿದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಐಶ್ವರ್ಯಾ ಸಿಂಧೋಗಿ, ಶಿಶಿರ್ ಶಾಸ್ತ್ರಿ ಹಾಗೂ ಮೋಕ್ಷಿತಾ ಪೈ ಅವರು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ದರ್ಶನ ಪಡೆದಿದ್ದರು. ಅಲ್ಲಿಂದ ಕುಕ್ಕೆ ಸುಬ್ರಮಣ್ಯಕ್ಕೂ ಜೊತೆಯಾಗಿ ತೆರಳಿ ಕರಾವಳಿ ಪ್ರವಾಸವನ್ನು ಎಂಜಾಯ್ ಮಾಡಿದ್ದರು.

Kiran Raj: ಹೊಸ ಸೀರಿಯಲ್ ಬೆನ್ನಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡಿದ ಕಿರಣ್ ರಾಜ್