Kannada Bigg Boss 11 Grand Finale Voting: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತು ವಿನ್ ಆಗಬೇಕಾದ್ರೆ ವೋಟ್ ಮಾಡೋದು ಹೇಗೆ?
ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರದಲ್ಲಿ ಮೋಕ್ಷಿತಾ ಪೈ, ತ್ರಿವಿಕ್ರಮ್, ಹನುಮಂತ, ಉಗ್ರಂ ಮಂಜು, ಭವ್ಯಾ ಗೌಡ, ರಜತ್ ಉಳಿದುಕೊಂಡಿದ್ದಾರೆ. ಇವರಲ್ಲಿ ವಿಜೇತ ಯಾರಾಗಲಿದ್ದಾರೆ ಎಂಬುದನ್ನು ನಿಮ್ಮ ಮತಗಳು ನಿರ್ಧಾರ ಮಾಡುತ್ತವೆ. ಹಾಘದರೆ ವೋಟ್ ಮೋಡೋದು ಹೇಗೆ?.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇನ್ನೇನು ಮೂರು ದಿನಗಳಲ್ಲಿ ಶೋ ಮುಕ್ತಾಯಗೊಳ್ಳಲಿದ್ದು, ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಸದ್ಯ ಮನೆಯಲ್ಲಿ ಆರು ಮಂದಿ ಇದ್ದಾರಷ್ಟೆ. ಫಿನಾಲೆ ವಾರ ಆಗಿರುವುದರಿಂದ ಮನೆಯೊಳಗಿರುವ ಸ್ಪರ್ಧಿಗಳಿಗೆ ದೊಡ್ಡ ಟಾಸ್ಕ್ ಏನು ನೀಡಲಾಗುತ್ತಿಲ್ಲ. ಬದಲಾಗಿ ಮನೆಯೊಳಗೆ ಕಲರ್ಸ್ ಕನ್ನಡ ಫ್ಯಾಮಿಲಿ ಮೆಂಬರ್ಸ್ ಬರುತ್ತಿದ್ದಾರೆ.
ಯಜಮಾನ ಸೀರಿಯಲ್ ತಂಡದ ಮುಖ್ಯ ಪಾತ್ರಧಾರಿಗಳು, ಮಜಾ ಟಾಕೀಸ್ ತಂಡ ಹಾಗೂ ವಧು ಧಾರಾವಾಹಿ ತಂಡದ ವಧು ಮತ್ತು ಸಾರ್ಥಕ್ ದೊಡ್ಮನೆಗೆ ಬಂದಿ ಹೋಗಿದ್ದಾರೆ. ಇವರನ್ನು ಕಂಡು ಸ್ಪರ್ಧಿಗಳು ಫುಲ್ ಖುಷಿ ಆಗಿದ್ದು, ಸಖತ್ ಎಂಜಾಯ್ ಮಾಡಿದ್ದಾರೆ. ಮನೆಯೊಳಗಡೆ ಸ್ಪರ್ಧಿಗಳು ಫಿನಾಲೇ ವೀಕ್ನ ಟೆನ್ಶನ್ನಲ್ಲಿದ್ದರೆ ಇತ್ತ ಹೊರಗಡೆ ಬಿಗ್ ಬಾಸ್ ಸೀಸನ್ 11 ರಲ್ಲಿ ಯಾರು ಗೆಲ್ಲಬೇಕು ಎಂದು ವೋಟಿಂಗ್ ಲೈನ್ ಆರಂಭವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರದಲ್ಲಿ ಮೋಕ್ಷಿತಾ ಪೈ, ತ್ರಿವಿಕ್ರಮ್, ಹನುಮಂತ, ಉಗ್ರಂ ಮಂಜು, ಭವ್ಯಾ ಗೌಡ, ರಜತ್ ಉಳಿದುಕೊಂಡಿದ್ದಾರೆ. ಇವರಲ್ಲಿ ಒಬ್ಬರಷ್ಟೆ ವಿಜೇತರಾಗಿ ಹೊರಹೊಮ್ಮಲಿದ್ದಾರೆ. ಆ ವಿಜೇತ ಯಾರಾಗಲಿದ್ದಾರೆ ಎಂಬುದನ್ನು ಜನರ ಮತಗಳು ನಿರ್ಧಾರ ಮಾಡುತ್ತವೆ. ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ನೀವು ಅಮೂಲ್ಯ ಮತದಾನ ಮಾಡಬೇಕು. ಮೊದಲಿಗೆ ಮೊಬೈಲ್‌ನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ವೋಟ್ ಮಾಡಬೇಕು.
- ವೋಟ್ ಮಾಡಲು ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ. ಜಿಯೋ ಸಿನಿಮಾ ಈಗಾಗಲೇ ಡೌನ್‌ಲೋಡ್ ಮಾಡಿಕೊಂಡವರು ಜಿಯೋ ಸಿನಿಮಾ ಅಪ್ಲಿಕೇಷನ್ ತೆರೆಯಿರಿ.
- ಜಿಯೋ ಸಿನಿಮಾ ಅಪ್ಲಿಕೇಷನ್‌ನಲ್ಲಿ ಮೇಲ್ಬಾಗದಲ್ಲಿರುವ ಸರ್ಚ್ ಅಥವಾ ಹುಡುಕಾಟದ ಬಾಕ್ಸ್‌ನಲ್ಲಿ Bigg Boss Kannada 11 ಎಂದು ಟೈಪ್ ಮಾಡಿ ಸರ್ಚ್ ಮಾಡಿ.
- ಬಳಿಕ ಬಿಗ್ಬಾಸ್ ಕನ್ನಡದ ಕೆಲ ವಿಡಿಯೋಗಳು ತೆರೆದು ಕೊಳ್ಳುತ್ತವೆ. ಅದರಿಂದ ತುಸುವಷ್ಟೆ ಕೆಳಗೆ ಸ್ಕ್ರೋಲ್ ಮಾಡಿದರೆ ಓಟ್ ನೌ ಎಂಬ ಬ್ಯಾನರ್ ಕ್ಲಿಕ್ ಮಾಡಿ.
- ಮುಂದಿನ ಹಂತದಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಗೆ ಓಟ್ ಮಾಡಬಹುದು. ನೆನಪಿಡಿ, ಸದ್ಯ ದೊಡ್ಮನೆಯೊಳಗೆ ಹನುಮಂತ, ಮಂಜು, ಮೋಕ್ಷಿತಾ, ರಜತ್, ಭವ್ಯಾ ಮತ್ತು ತ್ರಿವಿಕ್ರಮ್ ಮಾತ್ರ ಇದ್ದಾರೆ.
ನಿಮ್ಮ ನೆಚ್ಚಿನ ಸ್ಪರ್ಧಿ ಮೇಲೆ ವೋಟ್ ಬಟನ್ ಕ್ಲಿಕ್ಕಿಸಿದಲ್ಲಿ ಅವರ ಖಾತೆಗೆ ಒಂದು ಮತ ಸೇರಿಕೊಳ್ಳುತ್ತದೆ. ಹೀಗೆ ಒಬ್ಬ ವ್ಯಕ್ತಿ ಒಂದು ದಿನದಲ್ಲಿ ನೂರು ಮತಗಳನ್ನು ಮಾಡಬಹುದಾಗಿರುತ್ತದೆ. ನೆನಪಿರಲಿ ವೋಟ್ ಮಾಡುವ ಅವಕಾಶ ಶನಿವಾರ ಮಧ್ಯಾಹ್ನದ ವರೆಗೆ ಮಾತ್ರವೇ ಇರಲಿದೆ.
BBK 11: ಚೆನ್ನಾಗಿರೊ ಹುಡುಗಿ ಜೊತೆ ಜಗಳ ಆಡಲ್ಲ: ತ್ರಿವಿಕ್ರಮ್ ಮಾತಿಗೆ ನಾಚಿ ನೀರಾದ ಮೋಕ್ಷಿತಾ