#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BBK 11: ಚೆನ್ನಾಗಿರೊ ಹುಡುಗಿ ಜೊತೆ ಜಗಳ ಆಡಲ್ಲ: ತ್ರಿವಿಕ್ರಮ್ ಮಾತಿಗೆ ನಾಚಿ ನೀರಾದ ಮೋಕ್ಷಿತಾ

ಮೋಕ್ಷಿತಾ ಹಾಗೂ ನಾನು ಚೆನ್ನಾಗಿದ್ದೀವಿ. ಆ ಗ್ಲಜ್ ಆ ತರದ್ದೆಲ್ಲ ಈಗ ಏನು ಇಲ್ಲ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಚೆನ್ನಾಗಿರೊ ಹುಡುಗಿ ಜೊತೆ ನಾನು ಜಗಳ ಆಡಲ್ಲ ಎಂದಿದ್ದಾರೆ.

ಚೆನ್ನಾಗಿರೊ ಹುಡುಗಿ ಜೊತೆ ಜಗಳ ಆಡಲ್ಲ: ತ್ರಿವಿಕ್ರಮ್ ಮಾತಿಗೆ ನಾಚಿ ನೀರಾದ ಮೋಕ್ಷಿತಾ

Trivikram and Mokshitha

Profile Vinay Bhat Jan 22, 2025 9:46 PM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟದತ್ತ ಸಾಗುತ್ತಿದೆ. ಇದೀಗ ಫಿನಾಲೆ ವೀಕ್ ಸಾಗುತ್ತಿದ್ದು ಇದೇ ಶನಿವಾರ-ಭಾನುವಾರ ಗ್ರ್ಯಾಂಡ್ ಫೈನಲ್ ನಡೆಯಲಿದೆ. ಕಳೆದ ವಾರ ನಡೆದ ಡಬಲ್ ಎಲಿಮಿನೇಷನ್​ನಿಂದಾಗಿ ಮನೆಯೊಳಗೆ ಆರು ಮಂದಿ ಇದ್ದಾರೆ. ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್​, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್​ ಫಿನಾಲೆ ವಾರದಲ್ಲಿದ್ದಾರೆ. ಘಟಾನುಘಟಿಗಳೇ ಈ ಲಿಸ್ಟ್​ನಲ್ಲಿರುವ ಕಾರಣ ಯಾರು ಗೆಲ್ಲುತ್ತಾರೆ ಎಂಬುದು ರೋಚಕತೆ ಸೃಷ್ಟಿಸಿದೆ.

ಫಿನಾಲೆ ವೀಕ್ ಆಗಿರುವ ಕಾರಣ ಸ್ಪರ್ಧಿಗಳಿಗೆ ದೊಡ್ಡ ಟಾಸ್ಕ್ ಏನನ್ನು ನೀಡಲಾಗುತ್ತಿಲ್ಲ. ಬದಲಾಗಿ ಮನೆಯೊಳಗೆ ಕಲರ್ಸ್ ಕನ್ನಡ ಫ್ಯಾಮಿಲಿ ಮೆಂಬರ್ಸ್ ಬರುತ್ತಿದ್ದಾರೆ. ನಿನ್ನೆ ಯಜಮಾನ ಸೀರಿಯಲ್ ತಂಡದ ಮುಖ್ಯ ಪಾತ್ರಧಾರಿಗಳು ಬಂದಿದ್ದರು. ಇಂದು ಮಜಾ ಟಾಕೀಸ್ ತಂಡ ಹಾಗೂ ಜನವರಿ 27 ರಿಂದ ಆರಂಭವಾಗಲಿರುವ ಹೊಸ ವಧು ಧಾರಾವಾಹಿ ತಂಡದ ವಧು ಮತ್ತು ಸಾರ್ಥಕ್ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇವರನ್ನು ಕಂಡು ಸ್ಪರ್ಧಿಗಳು ಫುಲ್ ಖುಷಿ ಆಗಿದ್ದು, ಸಖತ್ ಎಂಜಾಯ್ ಮಾಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಬೆರೆತ ಇವರು ಸಣ್ಣ ಚಟುವಟಿಕೆಯನ್ನು ನಡೆಸಿಕೊಟ್ಟಿದ್ದಾರೆ. ಮನೆಯೊಳಗಿನ ಸದಸ್ಯರ ಮಧ್ಯೆ ಇರುವ ಮನಸ್ತಾಪವನ್ನು ಸರಿ ಮಾಡಲು ಇವರು ಮುಂದಾಗಿದ್ದಾರೆ. ಈ ಸಂದರ್ಭ ತ್ರಿವಿಕ್ರಮ್ ಹಾಗೂ ಮೋಕ್ಷಿತಾ ನಡುವಣ ಮಾತುಕತೆ ಸಖತ್ ಇಂಟ್ರೆಸ್ಟಿಂಗ್ ಆಗಿತ್ತು. ಆರಂಭದಲ್ಲಿ ಬದ್ಧವೈರಿಗಳಂತಿದ್ದ ಇವರು ಈಗ ಕ್ಲೋಸ್ ಆಗಿದ್ದ ಬಗ್ಗೆ ಮಾತನಾಡಿದ್ದಾರೆ.



ಮೊದಲಿಗೆ ಮಾತನಾಡಿದ ತ್ರಿವಿಕ್ರಮ್, ನಾವಿಬ್ರೂ ಚೆನ್ನಾಗಿದ್ದೀವಿ. ಆ ಗ್ಲಜ್ ಆ ತರದ್ದೆಲ್ಲ ಈಗ ಏನು ಇಲ್ಲ ಎಂದು ಹೇಳಿದ್ದಾರೆ. ಕಂಡ್ರೆ ಆಗಲ್ಲ ಆತರದ್ದೆಲ್ಲ ಏನಿಲ್ಲ ಎಂದು ಮೋಕ್ಷಿತಾ ಹೇಳಿದ್ದಾರೆ. ಆಗ ತ್ರಿವಿಕ್ರಮ್ ಅವರು, ಚೆನ್ನಾಗಿರೊ ಹುಡುಗಿ ಜೊತೆ ನಾನು ಜಗಳ ಆಡಲ್ಲ ಎಂದಿದ್ದಾರೆ. ಆಗ ಮಧ್ಯೆ ಬಾಯಿಹಾಕಿದ ರಜತ್, ಚೆನ್ನಾಗಿರೊ ಹುಡುಗಿ ಹತ್ರ ಜಗಳ ಆಡಲ್ಲ ಒಕೆ.. ಆದ್ರೆ ಭವ್ಯಾ ಹತ್ರ ಯಾಕೆ ಯಾವಾಗ್ಲೂ ಜಗಳ ಆಡ್ತೀಯಾ ಎಂದು ತಮಾಷೆ ಮಾಡಿದ್ದಾರೆ. ಇದನ್ನು ಕೇಳಿ ಮೋಕ್ಷಿತಾ ನಾಚಿದಂತೆ ಕಂಡುಬಂತು.

BBK 11: ದೊಡ್ಮನೆ ಮಂದಿ ನಡುವೆ ರಾಜಿ ಸಂಧಾನ ಮಾಡಿಸಲು ಬಂದ್ರು ಹೊಸ ಜೋಡಿ: ಯಾರಿವರು?