ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಕನ್ನಡ ಆರಂಭಕ್ಕೆ ಡೇಟ್ ಫಿಕ್ಸ್: ಈ ದಿನಾಂಕದಂದು ಪ್ರೋಮೋ ರಿಲೀಸ್

ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನಕ್ಕಾಗಿ ಫ್ಯಾನ್ಸ್ ಕೂಡ ಕಾದಿದ್ದಾರೆ. ಈ ದಿನದಂದು ಬಿಗ್ ಬಾಸ್ ಪ್ರೋಮೋ ಬಿಡುಗಡೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ಸೆ. 2 ರಂದು ಆಯೋಜಕರು ಪ್ರೋಮೋ ರಿಲೀಸ್‌ ಮಾಡಲಿದ್ದಾರೆ.

BBK 12

ಬಿಗ್ ಬಾಸ್ ಕನ್ನಡ (Bigg Boss Kannada season 12) ಹೊಸ ಸೀಸನ್​ಗಾಗಿ ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್​ಗೆ ಈಗ ಒಂದೊಂದೆ ಗುಡ್ ನ್ಯೂಸ್ ಸಿಗುತ್ತಿದೆ. ಮೊನ್ನೆಯಷ್ಟೆ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಲೋಗೋ ಬಿಡುಗಡೆ ಮಾಡುವ ಮೂಲಕ ಸದ್ಯದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಶುರುವಾಗುವ ಸೂಚನೆ ನೀಡಿತು. ಇದೀಗ ಬಿಗ್ ಬಾಸ್ ಮೂಲಗಳಿಂದ ಮತ್ತೊಂದು ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಅದೇನೆಂದರೆ ಬಿಬಿಕೆ 12ರ ಮೊದಲ ಪ್ರೋಮೋ ಶೂಟ್ ಮುಕ್ತಾಯವಾಗಿದೆ. ಅತೀ ಶೀಘ್ರದಲ್ಲೇ ಫಸ್ಟ್ ಪ್ರೋಮೋ ರಿಲೀಸ್ ಆಗಲಿದೆ.

ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನಕ್ಕಾಗಿ ಫ್ಯಾನ್ಸ್ ಕೂಡ ಕಾದಿದ್ದಾರೆ. ಈ ದಿನದಂದು ಬಿಗ್ ಬಾಸ್ ಪ್ರೋಮೋ ಬಿಡುಗಡೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ಸೆ. 2 ರಂದು ಆಯೋಜಕರು ಪ್ರೋಮೋ ರಿಲೀಸ್‌ ಮಾಡಲಿದ್ದು, ಹೊಸ ಸೀಸನ್‌ಗೆ ತಕ್ಕಂತೆ ವಿಶೇಷ ಪ್ರೋಮೋವನ್ನು ಶೂಟ್‌ ಮಾಡಲಾಗಿದೆ ಎನ್ನಲಾಗಿದೆ.



ಹಾಗೆಯೆ ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ ಎನ್ನಲಾಗಿದೆ. 29ರಿಂದ ದೊಡ್ಮನೆ ಆಟ ಶುರುವಾಗಲಿದೆ. ಕಳೆದ ಸೀಸನ್‌ನಲ್ಲಿ ಸ್ವರ್ಗ- ನರಕ ಎನ್ನುವ ಕಾನ್ಸೆಪ್ಟ್‌ ಇತ್ತು. ಈ ಬಾರಿಯೂ ವಿಶೇಷವಾದ ಕಾನ್ಸೆಪ್ಟ್‌ ಇರಲಿದೆ ಎನ್ನಲಾಗುತ್ತಿದೆ. ಈ ಬಾರಿಯ ಥೀಮ್ ಯಾವುದು? ಮೊದಲ ಪ್ರೋಮೋದಲ್ಲೇ ಥೀಮ್ ಅನಾವರಣವಾಗುತ್ತೋ, ಇಲ್ವೋ ಎಂಬುದನ್ನ ಕಾದುನೋಡಬೇಕಿದೆ.

ಇದರ ಜೊತೆಗೆ ಬಿಗ್ ಬಾಸ್​ನಲ್ಲಿ ಜನ ಸಾಮಾನ್ಯರು ಕೂಡ ಸ್ಪರ್ಧಿಸಬಹುದು ಎಂಬ ಆಯ್ಕೆಯನ್ನು ಈ ಹಿಂದೆ ನೀಡಲಾಗಿತ್ತು. ಅದನ್ನು ಈ ಬಾರಿ ಕೊಡಲಾಗುತ್ತದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ತೆಲುಗು ಬಿಗ್​ ಬಾಸ್​ನಲ್ಲಿ ಈ ಬಾರಿ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕನ್ನಡದಲ್ಲಿ ಇರುತ್ತ ಎಂಬುದು ಪ್ರೋಮೋದಲ್ಲಿ ಮಾಹಿತಿ ಸಿಗುವ ಸಾಧ್ಯತೆ ಇದೆ.

Bhagya Lakshmi Serial: ಭಾಗ್ಯ ಮನೆಗೆ ದಿಢೀರ್ ಬಂದ ಕಿಶನ್-ಪೂಜಾ-ಕನ್ನಿಕಾ: ತಬ್ಬಿಬ್ಬಾದ ಆದೀಶ್ವರ್