Chaithra Kundapura: ಬಾಯ್ಸ್ vs ಗರ್ಲ್ಸ್ ನಲ್ಲಿ ನಾಗವಲ್ಲಿಯಾಗಿ ಬದಲಾದ ಚೈತ್ರಾ ಕುಂದಾಪುರ
ಫೈರ್‌ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಈ ವಾರ ಬಾಯ್ಸ್ vs ಗರ್ಲ್ಸ್ ನಲ್ಲಿ ಹೊಸ ರೂಪ ತಾಳಿದ್ದಾರೆ. ಚೈತ್ರಾ ಅವರು ನಾಗವಲ್ಲಿ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಈ ಎಪಿಸೋಡ್ ವೀಕೆಂಡ್ನಲ್ಲಿ ಪ್ರಸಾರ ಕಾಣಲಿದ್ದು ಧೂಳೆಬ್ಬಿಸುವುದು ಖಚಿತ.

Chaithra Kundapura

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 (Bigg Boss Kannada 11) ಕಾರ್ಯಕ್ರಮ ಮುಗಿದ ಬಳಿಕ ವೀಕೆಂಡ್ನಲ್ಲಿ ಶುರುವಾಗಿರುವ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋಗೆ ಅದ್ಭುತ ಪ್ರತಿಕ್ರಿಯೆ ಕೇಳಿಬರುತ್ತಿದೆ. ವಾರದಿಂದ ವಾರಕ್ಕೆ ಈ ಶೋ ಕಿಕ್ ಕೊಡುತ್ತಿದೆ. ಬಹುತೇಕ ಬಿಗ್ ಬಾಸ್ ಸ್ಪರ್ಧಿಗಳಿಂದಲೇ ಕೂಡಿರುವ ಈ ಶೋ ಪ್ರತಿ ವಾರ ನೋಡುಗರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಹುಡುಗರು ಹುಡುಗಿಯರಿಗೆ ಹಾಕುವ ಚಾಲೆಂಜ್ ಮತ್ತು ಹುಡುಗಿಯರು ಹುಡುಗರಿಗೆ ಹಾಕುವ ಚಾಲೆಂಜ್ ಪ್ರೇಕ್ಷಕರಿಗೆ ರೋಮಾಂಚನ ನೀಡುತ್ತದೆ.
ಈ ಶೋನಲ್ಲಿ ಬಿಗ್ ಬಾಸ್ ಮನೆಯಲ್ಲಿ ತನ್ನ ಮಾತಿನ ಮೂಲಕವೇ ನಡುಕ ಹುಟ್ಟಿಸಿದ ಚೈತ್ರಾ ಕುಂದಾಪುರ ಕೂಡ ಇದ್ದಾರೆ. ರಜತ್ ಹಾಗೂ ಚೈತ್ರಾ ಅವರ ಕೋಳಿ ಜಗಳ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಫೈರ್‌ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಈ ವಾರ ಬಾಯ್ಸ್ vs ಗರ್ಲ್ಸ್ ನಲ್ಲಿ ಹೊಸ ರೂಪ ತಾಳಿದ್ದಾರೆ. ಚೈತ್ರಾ ಅವರು ನಾಗವಲ್ಲಿ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಈ ಎಪಿಸೋಡ್ ವೀಕೆಂಡ್ನಲ್ಲಿ ಪ್ರಸಾರ ಕಾಣಲಿದ್ದು ಧೂಳೆಬ್ಬಿಸುವುದು ಖಚಿತ.
ಚೈತ್ರಾ ಕುಂದಾಪುರ ನಾಗವಲ್ಲಿ ಡ್ರೆಸ್ ಉಟ್ಟಿದ್ದರೆ ಮಂಜು ಪಾವಗಡ ಕ್ರೇಜಿಸ್ಟಾರ್ ರವಿಚಂದ್ರನ್ ಅವತಾರದಲ್ಲಿ ಮಿಂಚಿದ್ದಾರೆ. ಹನುಮಂತು ಕುರಿಗಾಹಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಜತ್ ಅವರು ದರ್ಶನ್ ಅವರಂತೆ ಮಚ್ಚು ಹಿಡಿದುಕೊಂಡು ಡೈಲಾಗ್ಸ್ ಹೊಡೆದಿದ್ದಾರೆ.
ಅನುಪಮಾ ಗೌಡ ಕಣ್ಣೀರು:
ಬಾಯ್ಸ್ ವರ್ಸ್ ಗರ್ಲ್ಸ್ ಶೋನ ನಿರೂಪಕಿ ಅನುಪಮಾ ಗೌಡ ಅವರ ಹುಟ್ಟುಹಬ್ಬವನ್ನು ವೇದಿಕೆಯಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ರೆಟ್ರೋ ಲುಕ್ ರೌಂಡ್ ಆಗಿದ್ದ ಕಾರಣ ಅನುಪಮಾ ಗೌಡ 80ರ ದಶಕದ ನಟಿಯರಂತೆ ಅಲಂಕಾರ ಮಾಡಿಕೊಂಡಿದ್ದಾರೆ. ವೇದಿಕೆಯನ್ನು ಅದ್ಧೂರಿಯಾಗಿ ಅಲಂಕಾರ ಮಾಡಿಸಿ ಕೇಕ್ ಕಟ್ ಮಾಡಿಸಿದ್ದಾರೆ. ಮನೆ ಕೆಲಸ ಮಾಡಿಕೊಂಡು ಬೆಳೆದ ಹುಡುಗಿ ಈಗ ಕರ್ನಾಟಕದ ಮನೆ ಮಗಳು ಆಗಿದ್ದೀರಾ ಎಂದು ಮಂಜು ಪಾವಗಡ ಹೇಳಿದ್ದಾರೆ. ಅಷ್ಟೇ ಅಲ್ಲದೆ ವೇದಿಕೆಗೆ ಅನುಪಮಾ ಅವರ ತಾಯಿ ಕೂಡ ಬಂದಿದ್ದಾರೆ. ಖುಷಿಯಿಂದ ಕಣ್ಣೀರಿಡುತ್ತಲೇ ಇದೇ ಮೊದಲು ನನಗೆ ಇಷ್ಟೋಂದು ಪ್ರೀತಿ ಸಿಕ್ಕಿರುವುದು ಎಂದು ಅನುಪಮಾ ಗೌಡ ಹೇಳಿದ್ದಾರೆ.
Rajath Kishan: ಹೆಂಡತಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ ರಜತ್: ಬಿಗ್ ಬಾಸ್ ಸ್ಪರ್ಧಿಗಳು ಭಾಗಿ