ನಿವೇದಿತಾ ಗೌಡ ಅವರಿಂದ ದೂರವಾದ ಬಳಿಕ ಚಂದನ್ ಶೆಟ್ಟಿ (Chandan Shetty) ಸದಾ ಸುದ್ದಿಯಲ್ಲಿದ್ದಾರೆ, ಸಿನಿಮಾ ವಿಚಾರವಾಗಿ ಹಾಗೂ ವೈಯಕ್ತಿಕ ವಿಷಯಗಳ ಬಗ್ಗೆಯೂ ಗಾಸಿಪ್ ಹರಿದಾಡುತ್ತಿದೆ. ಇತ್ತೀಚೆಗಷ್ಟೆ ಸಲಗ ಸುಂದರಿ ಸಂಜನಾ ಆನಂದ್ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ ಆಗ್ತಾರೆ ಎಂದು ಹೇಳಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಅನೇಕ ಪೋಸ್ಟ್ಗಳು ಹರಿದಾಡಿದವು. ಬಳಿಕ ಇತ್ತೀಚೆಗಷ್ಟೆ ಈ ಗಾಳಿ ಸುದ್ದಿಗಳಿಗೆ ಒಂದೇ ವೇದಿಕೆಯಲ್ಲಿ ನಿಂತು ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ಸ್ಪಷ್ಟನೆ ಕೊಟ್ಟರು.
ಇದಾದ ಬಳಿಕ ಚಂದನ್ ಶೆಟ್ಟಿ ಒಂದರ ಹಿಂದೆ ಒಂದರಂತೆ ಸಂದರ್ಶನ ನೀಡುತ್ತಿದ್ದು, ತಮ್ಮ ವೈಯಕ್ತಿಕ ಜೀವನದ ಕುರಿತು ನೇರವಾಗಿ ಮಾತನಾಡುತ್ತಿದ್ದಾರೆ. ಇದೀಗ ಖಾಸಗಿ ಯೂಟ್ಯೂಬ್ ಚಾನೆಲ್ವೊಂದರ ಸಂದರ್ಶನದಲ್ಲಿ ಡಿವೋರ್ಸ್ ನಂತರದ ಬದುಕಿನ ಬಗ್ಗೆ ಮೌನ ಮುರಿದಿದ್ದಾರೆ. ಬಿಗ್ ಬಾಸ್‌ನಿಂದ ಹೊರಗಡೆ ಬಂದಾಗ, ನಿಮ್ಮಬ್ಬರ ಜೋಡಿ ಚೆನ್ನಾಗಿದೆ, ಕ್ಯೂಟ್ ಕಪಲ್, ಇಬ್ಬರು ಮದುವೆಯಾಗಿ ಈ ರೀತಿಯಾದ ಕಾಮೆಂಟ್ಸ್‌ಗಳು ಬರುತ್ತಿದ್ದವು. ನಮ್ಮ ಪೇರ್‌ನ ಪಬ್ಲಿಕ್ ಇಷ್ಟೊಂದು ಇಷ್ಟ ಪಡುತ್ತಿದ್ದಾರೆ ಅಂತ ಸ್ವಲ್ಪ ಜಾರಿಬಿಟ್ಟೆ ಅಂತೆನಿಸುತ್ತೆ ಎಂದಿದ್ದಾರೆ.
ಬ್ಯೂಟಿನೇ ಎಲ್ಲವೂ ಅಲ್ಲ. ಆಂತರಿಕ ಸೌಂದರ್ಯ ಮುಖ್ಯ. ಬಾಹ್ಯ ಸೌಂದರ್ಯಕ್ಕಿಂತ ಅವರ ಮನಸ್ಸನ್ನು ಪ್ರೀತಿಸಿಬೇಕು. ವ್ಯಕ್ತಿಯನ್ನು ಪ್ರೀತಿಸುವುದಕ್ಕಿಂತ ವ್ಯಕ್ತಿತ್ವವನ್ನು ಪ್ರೀತಿಸೋದು ತುಂಬಾ ಒಳ್ಳೆಯದು. ಲುಕ್ಸ್ ಮ್ಯಾಟರ್ ಆಗಲ್ಲ. ಮನುಷ್ಯನಿಗೆ ಇರೋದು ಒಂದೇ ಜೀವನ. ಒಂದೇ ಹುಟ್ಟು ಒಂದೇ ಸಾವು. ಇದರ ಮಧ್ಯದಲ್ಲಿ ಯಾರ ಜೊತೆಯೂ ಹಿಂಸೆ ಇಂದ ಇರಬಾರದು. ಇನ್ನೊಬ್ಬರನ್ನು ಕಂಟ್ರೋಲ್ ಮಾಡೋಕೆ ನಾವ್ಯಾರು ಅಲ್ಲ ಎಂಬುದು ಚಂದನ್ ಶೆಟ್ಟಿ ಅಭಿಪ್ರಾಯ.
Kannada Serial TRP: ಕರ್ಣನ ಅಬ್ಬರ ತಗ್ಗಿತೇ?: ಇಲ್ಲಿದೆ ಧಾರಾವಾಹಿಗಳ ಟಿಆರ್ಪಿ
ಸುಮಾರು ನಾಲ್ಕು ವರ್ಷ ನಾನು ಹಾಗೂ ನಿವೇದಿತಾ ಜೊತೆಯಲ್ಲಿ ಇದ್ದೆವು. ನಾನು ತುಂಬಾ ಇಷ್ಟ ಪಟ್ಟು ಮದುವೆಯಾಗಿದ್ದೆ. ಲವ್ ಈಸ್ ಬ್ಲೈಂಡ್ ಅಂತಾರಲ್ಲ, ಹಾಗೆ.. ನನಗೆ ಬೇರೆ ಏನೂ ಗೊತ್ತಾಗುತ್ತಿರಲಿಲ್ಲ, ನಾಲ್ಕು ವರ್ಷಗಳ ನಂತರ ಅದು ವರ್ಕ್ ಆಗಲಿಲ್ಲ. ನಾನು ಅಮ್ಮನನ್ನು ಆದಷ್ಟು ಸಮಾಧಾನ ಪಡಿಸ್ತೇನೆ. ನಾನು ಮದುವೆ ಆಗೋದಿಲ್ಲ ಅಂತ ಹೇಳ್ತಿಲ್ಲ. ಅವರು ನನಗೆ ಒಳ್ಳೆಯ ಪಾರ್ಟ್‌ನರ್ ಅಂತ ಅನಿಸಬೇಕು ಆಗ ಮದುವೆ ಆಗ್ತೀನಿ. ಈಗಾಗಲೇ ಒಂದು ಸಲ ಎಡವಿದ್ದೇನೆ. ಎರಡನೇ ಬಾರಿ ಆ ರೀತಿ ಯಾವುದೇ ಅವಕಾಶವನ್ನು ಪಡೆಯಲು ನಾನು ಬಯಸುವುದಿಲ್ಲ ಎಂದಿದ್ದಾರೆ.