ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vasuki Vaibhav: ವಾಸುಕಿ- ಚಂದನಾ ಲವ್ ಮಾಡ್ತಾ ಇದ್ದಿದ್ದು ನಿಜಾನಾ?

ಚಂದನಾ ವಾಸುಕಿ ಮದುವೆ ಆಗ್ತಾರೆ ಎನ್ನುವ ಸುದ್ದಿ ಕೂಡ ಎಲ್ಲೆಡೆ ವೈರಲ್ ಆಯಿತು. ಇಬ್ಬರ ಪ್ರೀತಿ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು 2022ರ ದೀಪಾವಳಿಯಂದು ಇವರು ಮಾಡಿದ್ದ ಅದ್ದೂರಿ ಫೋಟೋಶೂಟ್. ಅಂದು ವಾಸುಕಿ ಮತ್ತು ಚಂದನಾ ಇಬ್ಬರೂ ಗ್ರ್ಯಾಂಡ್ ಫೋಟೋಶೂಟ್‌ನಲ್ಲಿ ಮಿಂಚಿದ್ದರು.

ವಾಸುಕಿ- ಚಂದನಾ ಲವ್ ಮಾಡ್ತಾ ಇದ್ದಿದ್ದು ನಿಜಾನಾ?

Chandana Ananthakrishna, Vasuki Vaibhav

Profile Vinay Bhat May 14, 2025 7:33 AM

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಧಾರಾವಾಹಿಯಲ್ಲಿ ಚುಕ್ಕಿ ಪಾತ್ರದಿಂದ ಪ್ರಸಿದ್ಧಿ ಪಡೆದ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಬಿಗ್ ಬಾಸ್ 7ರಲ್ಲಿ ಭಾಗವಹಿಸಿ ಜನರಿಗೆ ಇನ್ನಷ್ಟು ಹತ್ತಿರವಾದವರು. ಇದೇ ಸೀಸನ್​ನಲ್ಲಿ ವಾಸುಕಿ ವೈಭವ್ ಜೊತೆ ಚಂದನಾ ಆತ್ಮೀಯರಾಗಿದ್ದರು. ಅಲ್ಲದೇ ಇವರಿಬ್ಬರು ಪ್ರೀತಿ ಮಾಡುತ್ತಾ ಇದ್ದಾರೆ. ಮದುವೆ ಆಗ್ತಾರೆ ಎನ್ನುವ ಸುದ್ದಿ ಕೂಡ ಎಲ್ಲೆಡೆ ವೈರಲ್ ಆಯಿತು. ಇಬ್ಬರ ಪ್ರೀತಿ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು 2022ರ ದೀಪಾವಳಿಯಂದು ಇವರು ಮಾಡಿದ್ದ ಅದ್ದೂರಿ ಫೋಟೋಶೂಟ್.

ಅಂದು ವಾಸುಕಿ ಮತ್ತು ಚಂದನಾ ಇಬ್ಬರೂ ಗ್ರ್ಯಾಂಡ್ ಫೋಟೋಶೂಟ್‌ನಲ್ಲಿ ಮಿಂಚಿದ್ದರು. ಚಂದನಾ ಲೆಹಂಗಾ ಧರಿಸಿದ್ದರು ವಾಸುಕಿ ಶೇರ್ವಾರಿಯಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರೂ ಮದುವೆಗೆ ರೆಡಿಯಾಗುವ ಹಾಗೆ ಕಂಗೊಳಿಸಿದ್ದರು. ಇಬ್ಬರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರು ಲವ್ ಮಾಡ್ತಾ ಇರೋದು ಪಕ್ಕ.. ಎಂಗೇಜ್ಮೆಂಟ್ ಆಗಿದೆ ಎಂಬ ಸುದ್ದಿ ಎಲ್ಲ ಹರಿದಾಡಿತು. ನಟಿ ರಮ್ಯಾ ಕೂಡ ಪ್ರತಿಕ್ರಿಯೆ ನೀಡಿ ನಿಶ್ಚಿತಾರ್ಥ ಫೋಟೋ ಎಂದುಕೊಂಡೆ ಎಂದಿದ್ದರು. ಇದೀಗ ಈ ಎಲ್ಲ ವಿಚಾರದ ಬಗ್ಗೆ ಸ್ವತಃ ಚಂದನಾ ಮಾತನಾಡಿದ್ದಾರೆ.

‘‘ನನ್ನ ಹಾಗೂ ವಾಸುಕಿ ಕುರಿತ ಸುದ್ದಿ ವೈರಲ್ ಆಗುತ್ತಿದ್ದಾಗ ನಾನು ಸಿಂಗಲ್‌ ಆಗಿದ್ದೆ. ಆದರೆ ಪಾಪ ವಾಸುಕಿ ವೈಭವ್‌ ಅವರ ಗರ್ಲ್​ಫ್ರೆಂಡ್ ಜೊತೆ ಡೇಟ್‌ ಮಾಡುತ್ತಿದ್ದರು. ಅವರು ಎಲ್ಲೇ ಹೋದರೂ ನನ್ನ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಎಷ್ಟೋ ಜನ ಕಂಗ್ರ್ಯಾಜುಲೇಶನ್ಸ್‌, ನಿಮ್ಮದು ಮದುವೆ ಆಯ್ತಂತೆ ಮದುವೆ ಫಿಕ್ಸ್‌ ಆಯ್ತಂತೆ ಎಂಗೇಜ್‌ಮೆಂಟ್‌ ಆಯ್ತಂತೆ ಅಂತೆಲ್ಲಾ ಹೇಳುತ್ತಿದ್ದರು. ನನ್ನ ಅಮ್ಮನಿಗೂ ಎಷ್ಟೋ ಜನ ಫೋನ್‌ ಮಾಡಿ ನಮಗೆ ಹೇಳದೇ ಕೇಳದೇ ವಾಸುಕಿ ವೈಭವ್‌ ಜೊತೆಗೆ ನಿನ್ನ ಮಗಳಿಗೆ ಎಂಗೇಜ್‌ಮೆಂಟ್‌ ಮಾಡಿಬಿಟ್ಟಿದ್ದೀಯಾ ಅಂತೆಲ್ಲಾ ಕೇಳುತ್ತಿದ್ದರು’’ ಎಂದು ಚಂದನಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Rakesh Poojary: ಕಾಮಿಡಿ ಕಿಲಾಡಿಗಳು ಗೆದ್ದಾಗ ಸಿಕ್ಕಿದ 8 ಲಕ್ಷವನ್ನು ರಾಕೇಶ್ ಏನು ಮಾಡಿಡ್ರು ಗೊತ್ತೇ?

ಇಬ್ಬರೂ ಜೊತೆಯಾಗಿ ಫೋಟೋಶೂಟ್ ಮಾಡಿಸಿಕೊಂಡ ಬಗ್ಗೆ ಮಾತನಾಡಿದ ಚಂದನಾ, ‘‘ಈಗ ಎಲ್ಲರೂ ಮಾಡಿಸುವ ರೀತಿ ನಾವು ಕೂಡ ಫೋಟೋಶೂಟ್‌ ಮಾಡಿಸಿದ್ದೆವು ಅಷ್ಟೇ. ಆದರೆ ಆ ಮಟ್ಟಕ್ಕೆಲ್ಲಾ ಸುದ್ದಿಯಾಗುತ್ತದೆ ಅಂತ ನಾವು ಅಂದುಕೊಂಡಿರಲಿಲ್ಲ. ಆದರೆ ನಾವು ಇಂದಿಗೂ ಒಳ್ಳೆಯ ಸ್ನೇಹಿತರು. ಅವರಿಗೂ ಮದುವೆ ಆಗಿದೆ. ನನಗೂ ಮದುವೆ ಆಗಿದೆ. ಇದೆಲ್ಲವೂ ಟ್ರೋಲ್‌ ಆಗುತ್ತಿದ್ದಾಗ, ಅಮ್ಮ ಬಂದು ನೋಡು ಈ ರೀತಿ ಯಾರೋ ನನಗೆ ಕೇಳುತ್ತಿದ್ದಾರೆ ಅಂದಾಗ ನನಗೆ ತಲೆ ತಿನ್ನಬೇಡ ಅಮ್ಮ ಅಂತ ಹೇಳುತ್ತಿದ್ದೆ. ಅಮ್ಮ ನೀನು ನೋಡುವ ಹುಡುಗನನ್ನೇ ಮದುವೆ ಆಗುತ್ತೇನೆ ಸುಮ್ಮನಿರು ಅಂತೆಲ್ಲಾ ಹೇಳುತ್ತಿದ್ದೆ’’ ಎಂದಿದ್ದಾರೆ ಚಂದನಾ.