ಭಾರತದ ಪ್ರಸಿದ್ಧ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಕನ್ನಡ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಇದೀಗ ಬಿಗ್ ಬಾಸ್ ತೆಲುಗು ಸೀಸನ್ 9 ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಕಿಂಗ್ ಅಕ್ಕಿನೇನಿ ನಾಗಾರ್ಜುನ ಈ ಬಾರಿಯೂ ನಿರೂಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಹಿಂದೆ ನಾಗಾರ್ಜುನ ಜಾಗಕ್ಕೆ ವಿಜಯ್ ದೇವರಕೊಂಡ, ಬಾಲಯ್ಯ ಸೇರಿದಂತೆ ಕೆಲ ಸ್ಟಾರ್ಗಳ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಅಕ್ಕಿನೇನಿ ನಾಗಾರ್ಜುನ ಅವರೇ ಈ ಬಾರಿ ಸಾರಥ್ಯ ವಹಿಸಲಿದ್ದಾರೆ.
ಬಿಗ್ ಬಾಸ್ ತೆಲುಗು ಕಾರ್ಯಕ್ರಮ ಆರಂಭವಾಗಲು ಇನ್ನೂ ಒಂದೆರಡು ತಿಂಗಳು ಬಾಕಿ ಇರುವಾಗಲೇ ಕೆಲ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಸದ್ದು ಮಾಡಲು ಶುರು ಮಾಡುತ್ತವೆ. ಇದರಲ್ಲಿ ಜೋರಾಗಿ ಕೇಳಿಬರುತ್ತಿರುವ ಹೆಸರು ಮಾದಕ ನಟಿ ಜ್ಯೋತಿ ರೈ ಅವರದ್ದು. ಇವರು ಬಿಗ್ ಬಾಸ್ ಹೊಸ ಸೀಸಸ್ಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜ್ಯೋತಿ ರೈ ಬಿಗ್ ಬಾಸ್‌ಗೆ ಬರುತ್ತಾರೆಂಬ ಊಹಾಪೋಹಗಳು ಕಳೆದ ಸೀಸನ್ ಸಮಯದಲ್ಲೂ ಕೇಳಿ ಬಂದಿತ್ತು. ಆದರೆ ಜ್ಯೋತಿ ರೈ ಬಿಗ್ ಬಾಸ್‌ಗೆ ಬರಲಿಲ್ಲ. ಈ ಬಾರಿಯೂ ಮತ್ತೆ ಜ್ಯೋತಿ ರೈ ಹೆಸರು ಮುನ್ನೆಲೆಯಲ್ಲಿದೆ. ಆದರೆ ಇದನ್ನು ವಾಹಿನಿ ಆಗಲಿ, ಜ್ಯೋತಿ ರೈ ಅವರಾಗಲಿ ಖಾತರಿ ಪಡಿಸಿಲ್ಲ.
ಜ್ಯೋತಿ ರೈ ಅವರು ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಗೆಜ್ಜೆಪೂಜೆ, ಪ್ರೇರಣಾ, ಕಿನ್ನರಿ, ಮೂರು ಗಂಟು, ಕಸ್ತೂರಿ ನಿವಾಸ ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯವನ್ನೂ ಗೆದ್ದವರು. ಸದ್ಯ ಕನ್ನಡದಿಂದ ಅಂತರವನ್ನು ಕಾಪಾಡಿಕೊಂಡು ಪಕ್ಕದ ತೆಲುಗು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಇವರು ತೆಲುಗು ನಿರ್ದೇಶಕ ಸುಕು ಪೂರ್ವಜ್ ಅವರ ಜೊತೆ ಮದುವೆಯಾಗಿ ಅಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ.
ಬಹುತೇಕ ತೆಲುಗು ಕಡೆ ವಾಲಿರುವ ಜ್ಯೋತಿ ಸದ್ಯ ಬಿಗ್ ಬಾಸ್ ತೆಲುಗು ಸೀಸನ್ 9 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಇವರ ಜೊತೆಗೆ ತೇಜಸ್ವಿನಿ, ಕಲ್ಪಿಕಾ ಗಣೇಶ್, ಕಾವ್ಯ, ಟಿವಿ ಕಲಾವಿದೆ ನವ್ಯ ಸ್ವಾಮಿ, ಟಾಲಿವುಡ್ ನಟ ಛತ್ರಪತಿ ಶೇಖರ್, ಕಿರುತೆರೆ ನಟ ಮುಖೇಶ್ ಗೌಡ, ಸಾಯಿಕಿರಣ್, ಯೂಟ್ಯೂಬರ್ ಶ್ರಾವಣಿ ವರ್ಮ, ಆರ್‌ಜೆ ರಾಜ್ ಮುಂತಾದವರು ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ ಎಂಬ ಪ್ರಚಾರ ನಡೆಯುತ್ತಿದೆ. ಆಗಸ್ಟ್ ಕೊನೆಯ ವಾರದಲ್ಲಿ ಬಿಗ್ ಬಾಸ್ ಪ್ರಾರಂಭವಾಗುವ ಸಾಧ್ಯತೆಯಿದೆ. ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ಪ್ರೇಕ್ಷಕರನ್ನು ಆಕರ್ಷಿಸುವ ರೀತಿಯಲ್ಲಿ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದೆ.
Bhagya Lakshmi Serial: ನಾಳೆ ಕಿಶನ್-ಪೂಜಾ ಎಂಗೇಜ್ಮೆಂಟ್: ಭಾಗ್ಯ ಮನೆಗೆ ಬಂದು ಸೀರೆ ಕೊಟ್ಟೋದ ಆದೀ-ಕನ್ನಿಕಾ