Rajesh Dhruva: ಶ್ರೀಗೌರಿ ಧಾರಾವಾಹಿ ದಿಢೀರ್ ನಿಂತಿದ್ದು ಏಕೆ?, ಲಕ್ಷ.. ಲಕ್ಷ ಲಾಸ್ ಆಗಿದ್ದು ಯಾರಿಗೆ?
ಆರಂಭದಲ್ಲಿ ಕಾಂತಾರ ಸಿನಿಮಾವನ್ನೇ ಹೋಲುವ ಕಂಬಳದ ಹಿನ್ನೆಲೆಯ ಪ್ರೋಮೋ ಮೂಲಕವೇ ಶ್ರೀಗೌರಿ ಧಾರಾವಾಹಿ ಗಮನ ಸೆಳೆದಿತ್ತು. ಆದರೆ, ದಿಢೀರ್ ಆಗಿ ಈ ಧಾರಾವಾಹಿ ಮುಕ್ತಾಯ ಆಗಿದ್ದು ಏಕೆ ಎಂಬ ಗುಟ್ಟು ಯಾರಿಗೂ ತಿಳಿದಿರಲಿಲ್ಲ. ಆದರೀಗ ಈ ಧಾರಾವಾಹಿಯಲ್ಲಿ ಶರಣ ಆಗಿ ನೆಗೆಟಿವ್ ಪಾತ್ರ ಮಾಡಿದ್ದ ರಾಜೇಶ್ ಧ್ರುವ ಶ್ರೀಗೌರಿ ಧಾರಾವಾಹಿ ಕುರಿತ ಕೆಲ ಇಂಟ್ರೆಸ್ಟಿಂಗ್ ವಿಚಾರ ಹೇಳಿದ್ದಾರೆ.

Shree Gowri and Rajesh Dhruva

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೈಪ್ ಕ್ರಿಯೆಟ್ ಮಾಡಿದ್ದ ಶ್ರೀಗೌರಿ ಧಾರಾವಾಹಿ (Shree Gowri Serial) ಶುರುವಾದಷ್ಟೇ ವೇಗದಲ್ಲಿ ಮುಕ್ತಾಯ ಕೂಡ ಆಯಿತು. ಜನವರಿ 29, 2024 ರಿಂದ ಪ್ರಸಾರ ಆರಂಭಿಸಿದ ಶ್ರೀಗೌರಿ ಡಿಸೆಂಬರ್ 22, 2024 ರಂದು ಕೊನೆಗೊಂಡಿತು. ಸರಿಯಾಗಿ ಒಂದು ವರ್ಷ ಕೂಡ ಈ ಧಾರಾವಾಹಿ ಪ್ರಸಾರವಾಗದೆ ಬರೀ 248 ಸಂಚಿಕೆಗಳಿಗೆ ಕೊನೆಯಾಯಿತು. ಕಮಲಿ ಸೀರಿಯಲ್ ಮೂಲಕ ಗಮನ ಸೆಳೆದ ಅಮೂಲ್ಯ ಗೌಡ ಶ್ರೀಗೌರಿಯಾಗಿ ಕಾಣಿಸಿಕೊಂಡಿದ್ದರೆ, ನಾಯಕನಾಗಿ ಕಾರ್ತಿಕ್ ಅತ್ತಾವರ್ ನಟಿಸುತ್ತಿದ್ದಾರೆ.
ಆರಂಭದಲ್ಲಿ ಕಾಂತಾರ ಸಿನಿಮಾವನ್ನೇ ಹೋಲುವ ಕಂಬಳದ ಹಿನ್ನೆಲೆಯ ಪ್ರೋಮೋ ಮೂಲಕವೇ ಈ ಧಾರಾವಾಹಿ ಗಮನ ಸೆಳೆದಿತ್ತು. ಆದರೆ, ದಿಢೀರ್ ಆಗಿ ಈ ಧಾರಾವಾಹಿ ಮುಕ್ತಾಯ ಆಗಿದ್ದು ಏಕೆ ಎಂಬ ಗುಟ್ಟು ಯಾರಿಗೂ ತಿಳಿದಿರಲಿಲ್ಲ. ಆದರೀಗ ಈ ಧಾರಾವಾಹಿಯಲ್ಲಿ ಶರಣ ಆಗಿ ನೆಗೆಟಿವ್ ಪಾತ್ರ ಮಾಡಿದ್ದ ರಾಜೇಶ್ ಧ್ರುವ ಶ್ರೀಗೌರಿ ಧಾರಾವಾಹಿ ಕುರಿತ ಕೆಲ ಇಂಟ್ರೆಸ್ಟಿಂಗ್ ವಿಚಾರ ಹೇಳಿದ್ದಾರೆ.
ರಾಜೇಶ್ ಅವರು ವಿಶ್ವವಾಣಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರಾಜೇಶ್ ಧ್ರುವ, ಧಾರಾವಾಹಿಯಲ್ಲಿ ನಾವು ನಮ್ಮ ಪಾಡಿಗೆ ಕೆಲಸ ಮಾಡುತ್ತಾ ಇರುತ್ತೇವೆ. ಆದರೆ, ಈ ಸೀರಿಯಲ್ ಮುಗಿಯುತ್ತೆ ಅನ್ನೋದು ನಮಗೆ ಗೊತ್ತಾಗೋದೇ ಇಲ್ಲ. ಈಗಲೂ ಎಷ್ಟೋ ಜನ ಕೇಳ್ತಾರೆ.. ಶ್ರೀಗೌರಿ ಚೆನ್ನಾಗಿ ಬರುತ್ತಿತ್ತು, ಯಾಕೆ ಮುಗಿಸಿದ್ರಿ ಅಂತ. ನಾವೇನೂ ಉತ್ತರ ಕೊಡೋಕೆ ಆಗಲ್ಲ. ಶ್ರೀಗೌರಿ ಮುಗಿಯುತ್ತೆ ಅಂತ ನನಗೆ ಗೊತ್ತಾಗಿದ್ದು, ಕೊನೆಯ ದಿನದ ಶೂಟಿಂಗ್‌ಗಿಂತ 2 ದಿನಗಳ ಹಿಂದೆಯಷ್ಟೇ ಎಂದು ಹೇಳಿದ್ದಾರೆ.
ಸೀರಿಯಲ್ ಮುಗಿಯೋದಕ್ಕೆ ಟಿಆರ್‌ಪಿ ಕಾರಣ ಇರಬಹುದು. ರೀಚ್ ಇಂದಲೂ ಇರಬಹುದು. 8.30ಕ್ಕೆ ಶ್ರೀಗೌರಿ ಪ್ರಸಾರವಾಗುತ್ತಿತ್ತು. ಆ ಸ್ಲಾಟ್‌ಗೆ ಪ್ರತಿಸ್ಪರ್ಧಿ ಚಾನೆಲ್‌ನಲ್ಲಿ ಇದ್ದಂತಹ ಟಾಕ್, ಟಿಆರ್‌ಪಿ ಕಂಪೇರ್ ಮಾಡಿದ್ರೆ ಶ್ರೀಗೌರಿಗೆ ಕಮ್ಮಿ ಇತ್ತು. ಎಲ್ಲೋ ಒಂದು ಕಡೆ ಡ್ರಾಬ್ಯಾಕ್ ಆಗ್ತಾ ಬಂತು. ಏಕಾಏಕಿ ಸೀರಿಯಲ್‌ಗಳು ಮುಗಿಯೋದ್ರಿಂದ ಆರ್ಟಿಸ್ಟ್‌ಗಳಿಗೆ ತುಂಬಾ ಲಾಸ್ ಆಗುತ್ತದೆ. ನನಗೆ ಪರ್ಸನಲಿ ತುಂಬಾ ಲಾಸ್ ಆಗಿದೆ. ಪ್ರೊಡಕ್ಷನ್ ಹೌಸ್‌ಗೂ ಲಾಸ್ ಆಗಿದ್ಯಂತೆ. ಲಕ್ಷ ಲಕ್ಷ ಲಾಸ್ ಆಗಿದ್ಯಂತೆ. ಅವರ ಕಷ್ಟ ಕೇಳೋರು ಯಾರು? ಎಂಬುದು ಧ್ರುವ ಮಾತು.
Muddu Sose Serial: ಕಮಾಲ್ ಮಾಡುತ್ತಿಲ್ಲ ತ್ರಿವಿಕ್ರಮ್ ನಟನೆಯ ಧಾರಾವಾಹಿ: 3ನೇ ಸ್ಥಾನಕ್ಕೆ ಕುಸಿದ ಮುದ್ದು ಸೊಸೆ