Muddu Sose Serial: ಕಮಾಲ್ ಮಾಡುತ್ತಿಲ್ಲ ತ್ರಿವಿಕ್ರಮ್ ನಟನೆಯ ಧಾರಾವಾಹಿ: 3ನೇ ಸ್ಥಾನಕ್ಕೆ ಕುಸಿದ ಮುದ್ದು ಸೊಸೆ
ಇತ್ತೀಚೆಗಷ್ಟೆ ಪ್ರಸಾರ ಶುರುವಾಗಿ 50 ಸಂಚಿಕೆ ಪೂರೈಸಿರುವ ಬಿಗ್ ಬಾಸ್ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಆರಂಭದಲ್ಲಿ ಭರ್ಜರಿ ನಂಬರ್ ಬರುತ್ತಿತ್ತು. ಕಲರ್ಸ್ ಕನ್ನಡದ ನಂಬರ್ ಒನ್ ಧಾರಾವಾಹಿ ಎಂಬ ಪಟ್ಟ ಕೂಡ ಇದು ಪಡೆದುಕೊಂಡಿತ್ತು. ಆದರೀಗ ಈ ಧಾರಾವಾಹಿಯ ವೀಕ್ಷಣೆ ನಿಧಾನವಾಗಿ ಕುಸಿಯುತ್ತಿದೆ.

Muddu Sose serial

ಕನ್ನಡ ಕಿರುತೆರೆಯಲ್ಲಿ (Kannada Serial) ಸುಮಾರು 30ಕ್ಕೂ ಅಧಿಕ ಧಾರಾವಾಹಿಗಳು ಪ್ರಸಾರ ಕಾಣುತ್ತಿದೆ. ಇವುಗಳಲ್ಲಿ ನಂಬರ್ ಒನ್ ಧಾರಾವಾಹಿ ಯಾವುದು ಮತ್ತು ಯಾವ ಸ್ಥಾನಕ್ಕೆ ಟಿಆರ್ಪಿಯೇ ಇಲ್ಲ ಎಂಬುದು ಪ್ರತಿ ವಾರ ಹೊರಬೀಳುತ್ತದೆ. ಹೊಸ ಧಾರಾವಾಹಿಯೊಂದು ಆರಂಭವಾದರೆ ಮೊದಲ ಎರಡು ವಾರ ಅದಕ್ಕೆ ಭರ್ಜರಿ ಟಿಆರ್ಪಿ ಬರುತ್ತದೆ.. ಆದರೆ ನಂತರದ ದಿನಗಳಲ್ಲಿ ಕಥೆ ಹೇಗೆ ಸಾಗುತ್ತದೆ ಎಂಬುದರ ಮೇಲೆ ವೀಕ್ಷಕರು ಆ ಧಾರಾವಾಹಿ ನೋಡಬೇಕೇ ಅಥವಾ ಬೇಡವೇ ಎಂಬುದನ್ನು ಡಿಸೈಡ್ ಮಾಡುತ್ತಾರೆ.
ಇತ್ತೀಚೆಗಷ್ಟೆ ಪ್ರಸಾರ ಶುರುವಾಗಿ 50 ಸಂಚಿಕೆ ಪೂರೈಸಿರುವ ಬಿಗ್ ಬಾಸ್ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಆರಂಭದಲ್ಲಿ ಭರ್ಜರಿ ನಂಬರ್ ಬರುತ್ತಿತ್ತು. ಕಲರ್ಸ್ ಕನ್ನಡದ ನಂಬರ್ ಒನ್ ಧಾರಾವಾಹಿ ಎಂಬ ಪಟ್ಟ ಕೂಡ ಇದು ಪಡೆದುಕೊಂಡಿತ್ತು. ಆದರೀಗ ಈ ಧಾರಾವಾಹಿಯ ವೀಕ್ಷಣೆ ನಿಧಾನವಾಗಿ ಕುಸಿಯುತ್ತಿದೆ.
ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಸಂಜೆ 7.30ಕ್ಕೆ ಪ್ರಸಾರವಾಗುತ್ತಿರುವ ಈ ಸೀರಿಯಲ್ ಇದೀಗ ಟಿಆರ್ಪಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.
Kannada Serial TRP: ನಂ. 1 ಸೀರಿಯಲ್: ಟಿಆರ್ಪಿಯಲ್ಲಿ ಮೊದಲ ವಾರವೇ ದಾಖಲೆ ಬರೆದ ಕರ್ಣ
ಹೌದು, ಆರಂಭದಲ್ಲಿ ಮುದ್ದು ಸೊಸೆ ಸೀರಿಯಲ್ ಕಲರ್ಸ್ನ ನಂಬರ್ 1 ಧಾರಾವಾಹಿ ಆಗಿತ್ತು. ಆದರೀಗ, 4.2 ಟಿವಿಆರ್ ದಾಖಲಿಸಿ ಮುದ್ದು ಸೊಸೆ ಸೀರಿಯಲ್ ಮೂರನೇ ಸ್ಥಾನಕ್ಕೆ ಕುಸಿದಿದೆ. ನಂಬರ್ 1 ಸ್ಥಾನದಲ್ಲಿ ರಾಧಾ ಭಗವತಿ ನಟನೆಯ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್ ಬಂದಿದೆ. ಇದು 4.7 ರೇಟಿಂಗ್ ಪಡೆದುಕೊಂಡು ಕಲರ್ಸ್ನ ನಂಬರ್ ಒನ್ ಧಾರಾವಾಹಿ ಆಗಿದೆ. ಕಳೆದ ವಾರ ಕೂಡ ಇದೇ ಧಾರಾವಾಹಿ ಟಾಪ್ನಲ್ಲಿತ್ತು. ಎರಡನೇ ಸ್ಥಾನದಲ್ಲಿ 4.4 ಟಿವಿಆರ್ ಪಡೆದು ನಂದಗೋಕುಲ ಧಾರಾವಾಹಿ ಇದೆ.
ಇನ್ನು ಒಟ್ಟಾರೆಯಾಗಿ ನೋಡುವುದಾದರೆ, 26ನೇ ವಾರದ ನಂಬರ್ ಧಾರಾವಾಹಿ ಕರ್ಣ ಆಗಿದೆ. ಇದು 10.2 ಟಿವಿಆರ್ ಮೂಲಕ ಟಾಪ್ನಲ್ಲಿದೆ. 9 ಟಿವಿಆರ್ ದಾಖಲಿಸುವ ಮೂಲಕ ಲಕ್ಷ್ಮೀ ನಿವಾಸ ಸೀರಿಯಲ್ ಎರಡನೇ ಸ್ಥಾನ ಗಿಟ್ಟಿಸಿದೆ. ಶ್ರಾವಣಿ ಸುಬ್ರಮಣ್ಯ ಧಾರಾವಾಹಿ 8.5 ಟಿವಿಆರ್‌ನೊಂದಿಗೆ ಮೂರನೇ ಸ್ಥಾನ, ನಾ ನಿನ್ನ ಬಿಡಲಾರೆ 8.3 ಟಿವಿಆರ್‌ನೊಂದಿಗೆ ನಾಲ್ಕನೇ ಸ್ಥಾನ ಮತ್ತು ಐದನೇ ಸ್ಥಾನದಲ್ಲಿ 8.2 ಟಿವಿಆರ್‌ನೊಂದಿಗೆ ಅಣ್ಣಯ್ಯ ಸೀರಿಯಲ್ ಇದೆ.