ಕನ್ನಡ ಕಿರುತೆರೆಯಲ್ಲಿ ಸೀರಿಯಲ್ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್ಪಿ ಮೂಲಕ ತಿಳಿಯಲಿದೆ. ಇದೀಗ 37ನೇ ವಾರದ ಟಿಆರ್ಪಿ ಹೊರಬಿದ್ದಿದ್ದು, ಕಳೆದ ಮೂರು ವಾರಗಳಿಂದ ಧೂಳೆಬ್ಬಿಸುತ್ತಿರುವ ಅಮೃತಧಾರೆ ಧಾರಾವಾಹಿ ಟಿಆರ್ಪಿ ರಾಕೆಟ್ನಂತೆ ಮೇಲೇರಿದೆ.
ಹೌದು, ಕಳೆದ ಕೆಲವು ವಾರಗಳಿಂದ ಭರ್ಜರಿ ಟ್ವಿಸ್ಟ್-ಟರ್ನ್ ಮೂಲಕ ಸಾಗುತ್ತಿರುವ ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಟಿಆರ್ಪಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಆದರೆ, ನಂಬರ್ ಸ್ಥಾನ ಮಾತ್ರ ಸಿಕ್ಕಿಲ್ಲ. ಅಮೃತಧಾರೆ ಧಾರಾವಾಹಿ 9.2 ಟಿವಿಆರ್‌ನೊಂದಿಗೆ ಸೀರಿಯಲ್ ಮೂರನೇ ಸ್ಥಾನ ಪಡೆದಿದೆ. ಸದಾ ನಂಬರ್ ಒನ್ ಸ್ಥಾನದಲ್ಲಿ ಆರ್ಭಟಿಸುತ್ತಿದ್ದ ಕರ್ಣ ಈ ಬಾರಿ ಕುಸಿದಿದ್ದಾನೆ.
ಕರ್ಣ ಶುರುವಾದಾಗಿನಿಂದ ಟಾಪ್ ಸ್ಥಾನವನ್ನೇ ಕಾಯ್ದುಕೊಂಡಿತ್ತು. ಇದೀಗ ಈ ಧಾರಾವಾಹಿ ಎರಡನೇ ಸ್ಥಾನಕ್ಕೆ ಕುಸಿದಿದೆ. 9.7 ಟಿವಿಆರ್ ದಾಖಲಿಸುವ ಮೂಲಕ ಅಣ್ಣಯ್ಯ ಧಾರಾವಾಹಿ ಮೊದಲ ಸ್ಥಾನಕ್ಕೇರಿದರೆ, 9.5 ಟಿವಿಆರ್ ಪಡೆದು ಕರ್ಣ ಸೀರಿಯಲ್ ಎರಡನೇ ಸ್ಥಾನಕ್ಕಿಳಿದಿದೆ. ಕಳೆದ ಕೆಲವು ವಾರಗಳಿಂದ ಅಣ್ಣಯ್ಯ ಧಾರಾವಾಹಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದು ಧಾರಾವಾಹಿ ಟಿಆರ್ಪಿ ಹೆಚ್ಚಲು ಕಾರಣ ಆಗಿದೆ. ಈ ಧಾರಾವಾಹಿ ಮುಂದಿನ ವಾರ ಡಬಲ್ ಡಿಜಿಟ್ ಟಿಆರ್ಪಿ ಪಡೆದರು ಅಚ್ಚರಿ ಏನಿಲ್ಲ.
BBK 12: ಬಿಗ್ ಬಾಸ್ ಆರಂಭಕ್ಕೆ ಎರಡೇ ದಿನ ಬಾಕಿ: ಫೈನಲ್ ಆಯ್ತು 18 ಕಂಟೆಸ್ಟೆಂಟ್ಗಳ ಲಿಸ್ಟ್, ಇವರೇನಾ?
ಇನ್ನು ಲಕ್ಷ್ಮೀ ನಿವಾಸ ಸೀರಿಯಲ್ 8.8 ಟಿವಿಆರ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮತ್ತೊಂದು ವಿಶೇಷ ಎಂದರೆ ಕಳೆದ ಹಲವು ತಿಂಗಳುಗಳಿಂದ 5ಕ್ಕಿಂತ ಕಡಿಮೆ ಟಿವಿಆರ್ ಪಡೆದುಕೊಳ್ಳುತ್ತಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ 367 ವಾರ 6.4 ಟಿವಿಆರ್ ಪಡೆದು ಟಾಪ್ 5 ರೊಳಗೆ ಸ್ಥಾನ ಪಡೆದಿದೆ.
ಇತ್ತ ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ನಂದಗೋಕುಲ ಧಾರಾವಾಹಿ ಟಾಪ್ನಲ್ಲಿದೆ. ಈ ಧಾರಾವಾಹಿಗೆ 5.0 ಟಿವಿಆರ್ ಲಭಿಸಿದೆ. ಭಾಗ್ಯ ಲಕ್ಷ್ಮೀ ಧಾರಾವಾಹಿ ಅರ್ಬಲ್ + ರೂರಲ್ ಮಾರ್ಕೆಟ್‌ನಲ್ಲಿ 4.8 ಟಿವಿಆರ್ ಪಡೆದು ಕಲರ್ಸ್ನ ಎರಡನೇ ಧಾರಾವಾಹಿ ಆಗಿದೆ. ಮುದ್ದು ಸೊಸೆ ಮತ್ತು ಭಾಗರ್ವಿ ಎಲ್.ಎಲ್.ಬಿ ಧಾರಾವಾಹಿಗಳು 4.7 ಟಿವಿಆರ್ ದಾಖಲಿಸಿದೆ.