Karna Serial: ನಿಧಿ ಬಳಿ ಬಂದು ಕ್ಷಮೆ ಕೇಳಿದ ರಮೇಶ್: ಕರ್ಣನ ಪ್ರೀತಿಗೆ ಸಿಕ್ಕಿತು ಗ್ರೀನ್ ಸಿಗ್ನಲ್
ರಮೇಶ ಮೆಡಿಕಲ್ ಕಾಲೇಜಿಗೆ ಬಂದು, ನಿಧಿಯನ್ನು ಭೇಟಿ ಮಾಡಿದ್ದಾರೆ. ನನ್ನಿಂದ ನಿನ್ನ ಮನಸ್ಸಿಗೆ ಬೇಸರವಾಗಿದೆ ಅಂತ ಗೊತ್ತಿದೆ. ನನ್ನನ್ನು ದಯವಿಟ್ಟು ಕ್ಷಮಿಸಿಬಿಡು ಎಂದು ನಿಧಿ ಬಳಿ ರಮೇಶ್ ಹೇಳಿದ್ದಾರೆ. ಆಗ ನಿಧಿ, ನಿಮ್ಮ ಮೇಲೆ ನನಗೆ ಯಾವುದೇ ಬೇಸರವಿಲ್ಲ ಅಂತ ಹೇಳಿದ್ದಾಳೆ.

Karna Serial -

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯ (Karna Kannada Serial) ಪ್ರತಿ ಎಪಿಸೋಡ್ ರೋಚಕತೆ ಸೃಷ್ಟಿಸಿದೆ. ಇದಕ್ಕೆ ಈ ಧಾರಾವಾಹಿ ಕಿರುತೆರೆ ಲೋಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಸದ್ಯ ಧಾರಾವಾಹಿಯಲ್ಲಿ ಕರ್ಣ-ನಿಧಿ ಪ್ರೀತಿಯ ಎಪಿಸೋಡ್ ಸಾಗುತ್ತಿದೆ. ಮತ್ತಿನ ಅಮಲಿನಲ್ಲಿ ಕರ್ಣ ನಿಧಿಗೆ ಮೊದಲ ಬಾರಿ ಪ್ರಪೋಸ್ ಮಾಡಿದ್ದ. ಇದಕ್ಕಿಂತ ಮುಂಚೆಯೇ ನಿಧಿ ಕರ್ಣನಿಗೆ ಪ್ರಪೋಸ್ ಮಾಡಿದ್ದಳು. ಆದರೆ, ಇದಕ್ಕೆ ಕರ್ಣನ ಕಡೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ.
ಆ ಸಂದರ್ಭ ಕರ್ಣನ ತಂದೆ ರಮೇಶ ನಿಧಿಯ ಬಳಿ ಹೋಗಿ ಕರ್ಣನನ್ನು ಪ್ರೀತಿ ಮಾಡಿದರೆ ಜಾಗ್ರತೆ ಎಂದು ವಾರ್ನ್ ಮಾಡಿದ್ದರು. ಆದರೀಗ ರಮೇಶ ಬದಲಾಗಿರುವಂತೆ ತೋರಿಸಲಾಗುತ್ತಿದೆ. ನಿಧಿಗೆ ಪ್ರಪೋಸ್ ಮಾಡಿರುವ ವಿಚಾರವನ್ನು ಕರ್ಣ ನೆನೆಸಿಕೊಂಡು, ಅಯ್ಯೋ ಮತ್ತಿನ ಅಮಲಿನಲ್ಲಿ ಪ್ರಪೋಸ್ ಮಾಡಿದ್ದೇನೆ. ಈಗ ಪ್ರೀತಿಯನ್ನು ಒಪ್ಪುವುದೋ, ಬಿಡೋದೋ ಎಂದು ಯೋಚನೆ ಮಾಡುತ್ತಿರುತ್ತಾನೆ. ಏಕೆಂದರೆ ಈ ಹಿಂದೆ ತಾನು ಮದುವೆಯಾಗುವುದಿಲ್ಲ ಎಂದು ಕರ್ಣ ತನ್ನ ತಂದೆಗೆ ಪ್ರಾಮಿಸ್ ಮಾಡಿರುತ್ತಾನೆ.
ಹೀಗೆ ಗೊಂದಲದಲ್ಲಿರುವಾಗ ಅಲ್ಲಿಗೆ ಅಪ್ಪ ರಮೇಶ್ ಬಂದಿದ್ದಾನೆ. ರಮೇಶ್ ಬಳಿ ಕರ್ಣ ತಾನು ನಿಧಿಯನ್ನು ಪ್ರೀತಿ ಮಾಡುತ್ತಿರುವುದಾಗಿಯೂ, ಆದರೆ ಈಗಾಗಲೇ ಅಪ್ಪನಿಗೆ ಮಾತು ನೀಡಿರುವುದನ್ನು ಮೀರಲು ಸಾಧ್ಯವಿಲ್ಲವೆಂತಲೂ ಹೇಳುತ್ತಾನೆ. ಕರ್ಣನ ಮಾತನ್ನು ಕೇಳಿ ಅಪ್ಪ ರಮೇಶ್, ನಿನಗೆ ನಾನು ಈವಾಗ ಮಾತು ಕೊಡುತ್ತೇನೆ, ನೀವಿಬ್ಬರು ಒಂದಾಗುತ್ತೀರಿ, ಒಂದಾಗಬೇಕು ಎನ್ನುತ್ತಾ ನಿಧಿ ಮತ್ತು ಕರ್ಣನ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ.
ಇಷ್ಟೇ ಅಲ್ಲದೆ ರಮೇಶ ಮೆಡಿಕಲ್ ಕಾಲೇಜಿಗೆ ಬಂದು, ನಿಧಿಯನ್ನು ಭೇಟಿ ಮಾಡಿದ್ದಾರೆ. ನನ್ನಿಂದ ನಿನ್ನ ಮನಸ್ಸಿಗೆ ಬೇಸರವಾಗಿದೆ ಅಂತ ಗೊತ್ತಿದೆ. ನನ್ನನ್ನು ದಯವಿಟ್ಟು ಕ್ಷಮಿಸಿಬಿಡು ಎಂದು ನಿಧಿ ಬಳಿ ರಮೇಶ್ ಹೇಳಿದ್ದಾರೆ. ಆಗ ನಿಧಿ, ನಿಮ್ಮ ಮೇಲೆ ನನಗೆ ಯಾವುದೇ ಬೇಸರವಿಲ್ಲ ಅಂತ ಹೇಳಿದ್ದಾಳೆ. ಆಗ ರಮೇಶ್, ಎಷ್ಟೇ ಅಂದರೂ ನೀನು ಕರ್ಣ ಇಷ್ಟಪಟ್ಟ ಹುಡುಗಿ ಅಲ್ವಾ ಎಂದು ಹೇಳಿದ್ದಾರೆ. ಆಗ ನಿಧಿಗೆ ಕರ್ಣನಿಗೆ ನನ್ನ ಕಂಡರೆ ಇಷ್ಟ ಎನ್ನೋದು ಗೊತ್ತಾಗಿದೆ. ಕರ್ಣ ತನ್ನನ್ನು ಇಷ್ಟಪಡ್ತಿದ್ದಾನೆ ಎನ್ನೋ ವಿಷಯ ತಿಳಿದು ನಿಧಿ ಕಾಲೇಜ್ ಪೂರ್ತಿ ಕುಣಿದು ಕುಪ್ಪಳಿಸಿದ್ದಾಳೆ.
ಮತ್ತೊಂದೆಡೆ ನಿಧಿಯ ಅಕ್ಕ ನಿತ್ಯಾಳಿಗೆ ಕರ್ಣನ ಮೇಲೆ ಎಲ್ಲಿಲ್ಲದ ಕೋಪ ಬಂದಿದೆ. ಇಬ್ಬರೂ ಕಾಡಲ್ಲಿ ಅಮಲು ಬರುವಂತೆ ನಡೆದುಕೊಂಡಿದ್ದು ಹಾಗೂ ಪೊಲೀಸ್ ಕೈಗೆ ಸಿಕ್ಕಿದಾಗ ಅನಗತ್ಯವಾಗಿ ಮಾತನಾಡಿದ್ದು ಕೋಪ ತರಿಸಿದೆ. ನಿಧಿಯಿಂದ, ನಮ್ಮಿಂದ ದೂರ ಇರಿ ಎಂದು ನಿತ್ಯಾ ಕರ್ಣನಿಗೆ ವಾರ್ನಿಂಗ್ ಮಾಡಿದ್ದಾಳೆ.