ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯ (Karna Kannada Serial) ಪ್ರತಿ ಎಪಿಸೋಟ್ಗಳ ಈಗ ರೋಚಕತೆ ಸೃಷ್ಟಿಸಿದೆ. ಇದಕ್ಕೆ ಈ ಧಾರಾವಾಹಿ ಕಿರುತೆರೆ ಲೋಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಸದ್ಯ ಧಾರಾವಾಹಿಯಲ್ಲಿ ಊಹಿಸಲಾಗದ ಟ್ವಿಸ್ಟ್ ನೀಡಲಾಗಿದೆ. ಕರ್ಣ-ನಿಧಿ ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ. ಇವರ ಪ್ರೀತಿಗೆ ಕರ್ಣನ ತಂದೆ ರಮೇಶ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಮುಂಬರುವ ಎಪಿಸೋಡ್ನ ಪ್ರೋಮೋವನ್ನು ಝೀ ಕನ್ನಡ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ಣ ನಿಧಿಯ ಅಕ್ಕ ನಿತ್ಯಾಳನ್ನು ಮದುವೆ ಆಗುವುದನ್ನು ತೋರಿಸಲಾಗಿದೆ.
ರಮೇಶ್ ಹಾಗೂ ನಯನತಾರಾಗೆ ಬಿಟ್ಟರೆ ಕರ್ಣ-ನಿಧಿ ಲವ್ ವಿಷಯ ಬೇರೆ ಯಾರಿಗೂ ತಿಳಿದಿರಲಿಲ್ಲ. ನಿಧಿ ತನ್ನ ಅಕ್ಕ ನಿತ್ಯಾಳಿಗೆ ಕೂಡ ಹೇಳಿರಲಿಲ್ಲ.. ನಿತ್ಯಾಳಿಗೆ ಕರ್ಣನನ್ನು ಕಂಡರೆ ಅಷ್ಟಕ್ಕಷ್ಟೆ.. ಆತನಿಂದ ನಿತ್ಯಾ ಅನೇಕ ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು. ಹೀಗಾಗಿ ನಿತ್ಯಾಳಿಗೆ ಕರ್ಣನ ಕಂಡರೆ ಆಗಲ್ಲ.. ಆದರೆ, ಇದೀಗ ಕರ್ಣನನ್ನೇ ನಿತ್ಯಾ ಮದುವೆ ಆಗಿದ್ದಾಳೆ. ಇದರಿಂದ ನಿಧಿಯ ಹೃದಯ ಒಡೆದು ಹೋಗಿದೆ.
ಈ ಟ್ವಿಸ್ಟ್ ಅನ್ನು ನಿಧಿ ಅಭಿಮಾನಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕರ್ಣ-ನಿಧಿ ಜೋಡಿ ಸ್ಕ್ರೀನ್ ಮೇಲೆ ಅದ್ಭುತವಾಗಿ ಮೂಡಿಬಂದಿತ್ತು. ಇವರಿಬ್ಬರು ಮದುವೆ ಆಗಲೇ ಬೇಕು ಎಂದು ಅನೇಕರು ಆಶಿಸಿದ್ದರು. ಅಲ್ಲದೆ ಕರ್ಣ-ನಿಧಿ ಎಂದು ದೊಡ್ಡ ಫ್ಯಾನ್ ಪೇಜ್ ಕೂಡ ಇದೆ. ಹೀಗಿರುವಾಗ ನಿಧಿಗೆ ಬೇಜಾರು ಮಾಡಿ ಕರ್ಣ- ನಿತ್ಯಾ ಮದುವೆ ಆಗುತ್ತಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನೂ ಕೆಲವರು ಒಂದು ಹಂತ ಮುಂದೊಕ್ಕೋಗಿ ನಿತ್ಯಾ ಪಾತ್ರ ಮಾಡುತ್ತಿರುವ ನಮ್ರತಾ ಗೌಡ ಅವರಿಗೆ ಅಶ್ಲೀಲ ಕಾಮೆಂಟ್ ಮಾಡಿದ್ದಾರೆ.
BBK 12: ಮುಂಜಾನೆ 4 ಗಂಟೆ ಸುಮಾರಿಗೆ ಪುನಃ ಬಿಗ್ ಬಾಸ್ ಮನೆಗೆ ಹೊಕ್ಕ ಸ್ಪರ್ಧಿಗಳು
ಕರ್ಣ ಹಾಗೂ ನಿತ್ಯಾ ಮದುವೆ ಆಗುತ್ತದೆ ಎಂದು ತಿಳಿದಾಗಿನಿಂದ ಕೆಲ ಫ್ಯಾನ್ಸ್ ತುಂಬಾ ಸಿಟ್ಟಾಗಿದ್ದಾರೆ. ನಿತ್ಯಾ ಹಾಗೂ ನಿಧಿ ಫ್ಯಾನ್ಸ್ ಪರಸ್ಪರ ಬೈದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೆ ಈ ವಿಚಾರವಾಗಿ ನಿಧಿ ಹಾಗೂ ನಿತ್ಯಾ ಪಾತ್ರಧಾರಿಗಳು ಸ್ಪಷ್ಟನೆ ನೀಡಿದ್ದರು. ಪರಸ್ಪರ ಬೈದುಕೊಳ್ಳಬಾರದು ಎಂದು ಕೋರಿದ್ದಾರೆ.
ಆದರೀಗ ಕೆಲವರು ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಅವರನ್ನ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿದ್ದಾರೆ. ನಮ್ರತಾ ಗೌಡ ತಾಯಿ ಬಗ್ಗೆಯೂ ಕೆಟ್ಟದಾಗಿ ಕಾಮೆಂಟ್ಸ್ ಹಾಕುತ್ತಿದ್ದಾರೆ. ಇದರ ಬಗ್ಗೆ ಸಿಡಿದೆದ್ದ ನಮ್ರತಾ ಗೌಡ ತಮ್ಮ ಹಾಗೂ ತಾಯಿ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದ ಸ್ಕ್ರೀನ್ ಶಾಟ್ ಅನ್ನು ಸಾಕ್ಷಿಸಮೇತವಾಗಿ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ.
BBK 12: ಬಿಗ್ ಬಾಸ್ ಸ್ಥಗಿತಗೊಳ್ಳುವ ಮುನ್ನ ಮನೆಯಲ್ಲಿ ಕಳ್ಳತನ: ಅಶ್ವಿನಿ ಗೌಡ ಆರೋಪ
‘‘ಇನ್ನೂ ಹೆಚ್ಚು ಜನರನ್ನ ಎಕ್ಸ್‌ಪೋಸ್ ಮಾಡಲಿದ್ದೇನೆ. ಧಾರಾವಾಹಿಯ ಕಥೆ ಇಷ್ಟವಾಗಿಲ್ಲ ಎಂದ ಮಾತ್ರಕ್ಕೆ ಒಬ್ಬರ ತೇಜೋವಧೆ ಮಾಡುವುದು, ಅವರ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಖಂಡಿತ ಸರಿಯಲ್ಲ. ಅಂಥವರಿಗೆ ನಾಚಿಕೆ ಆಗಬೇಕು’’ ಎಂದು ನಮ್ರತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.