BBK 12: ಮುಂಜಾನೆ 4 ಗಂಟೆ ಸುಮಾರಿಗೆ ಪುನಃ ಬಿಗ್ ಬಾಸ್ ಮನೆಗೆ ಹೊಕ್ಕ ಸ್ಪರ್ಧಿಗಳು
ಮಾಲಿನ್ಯಕ್ಕೆ ಸಂಬಂಧಪಟ್ಟ ನಿಯಮಗಳನ್ನು ಪಾಲಿಸದ ಹಿನ್ನೆಲೆ ನೋಟಿಸ್ ಕೊಟ್ಟು ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿತ್ತು. ಈ ಕಾರಣದಿಂದ ಬಿಗ್ ಬಾಸ್ ಸ್ಪರ್ಧಿಗಳನ್ನು ಹಾಗೂ ಸಿಬ್ಬಂದಿಗಳನ್ನು ರಾತ್ರೋರಾತ್ರಿ ಖಾಸಗಿ ರೆಸಾರ್ಟ್ಗೆ ಶಿಫ್ಟ್ ಮಾಡಿದ್ದರು. ಇದೀಗ ಇಂದು ಬೆಳಗ್ಗೆ ಸ್ಪರ್ಧಿಗಳು ಪುನಃ ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ.

Bigg Boss Kannada 12 Cancelled -

ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಡದಿಯ ಜಾಲಿವುಡ್ ಸ್ಟುಡಿಯೋಸ್‌ಗೆ ಮಂಗಳವಾರ ಸಂಜೆ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆಯದ ಕಾರಣ ಅಧಿಕಾರಿಗಳು ಈ ಕ್ರಮ ಕೈಗೊಂಡ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಕೂಡ ಸ್ಥಗಿತಗೊಂಡಿತು. ಮಾಲಿನ್ಯಕ್ಕೆ ಸಂಬಂಧಪಟ್ಟ ನಿಯಮಗಳನ್ನು ಪಾಲಿಸದ ಹಿನ್ನೆಲೆ ನೋಟಿಸ್ ಕೊಟ್ಟು ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿತ್ತು. ಈ ಕಾರಣದಿಂದ ಸ್ಪರ್ಧಿ ಹಾಗೂ ಸಿಬ್ಬಂದಿಗಳನ್ನು ರಾತ್ರೋರಾತ್ರಿ ಖಾಸಗಿ ರೆಸಾರ್ಟ್ಗೆ ಶಿಫ್ಟ್ ಮಾಡಿದ್ದರು. ಇದೀಗ ಇಂದು ಬೆಳಗ್ಗೆ ಸ್ಪರ್ಧಿಗಳು ಪುನಃ ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ.
ಮಂಗಳವಾರ ರಾತ್ರಿ ಇನ್ನೋವಾ ಕಾರಿನ ಮೂಲಕ ರಾಮನಗರ ತಾಲೂಕಿನ ಬಿಡದಿ ಪಕ್ಕದಲ್ಲಿರುವ ಈಗಲ್ ಟನ್ ರೆಸಾರ್ಟ್ಗೆ ಸ್ಪರ್ಧಿಗಳನ್ನು ಶಿಫ್ಟ್ ಮಾಡಲಾಗಿತ್ತು. ಇಲ್ಲಿ 12 ರೂಮ್ ಬುಕ್ ಸ್ಪರ್ಧಿಗಳಿಗೆ ಇತರೆ ಯಾವುದೇ ಕಾಂಟೆಕ್ಟ್ ಸಿಗದಂತೆ ಇರಿಸಲಾಗಿತ್ತು. ಬಳಿಕ ಬಿಗ್‌ಬಾಸ್ ಆಯೋಜಕರು, ಜಾಲಿವುಡ್ ರೆಸಾರ್ಟ್ನ ಅಧಿಕಾರಿಗಳು, ಕಿಚ್ಚ ಸುದೀಪ್ ಇನ್ನೂ ಕೆಲವರ ಸಂಘಟಿತ ಪ್ರಯತ್ನದಿಂದಾಗಿ ಬಿಗ್‌ಬಾಸ್ ಶೋ ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ.
ಸದ್ಯ ಜಾಲಿವುಡ್ ಸ್ಟುಡಿಯೋ ಉಲ್ಲಂಘಿಸಿರುವ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶ ನೀಡಿದ್ದಾರೆ. ಹಾಗೂ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಜಾಲಿವುಡ್ ಸ್ಟುಡಿಯೋಕ್ಕೆ ಬೀಗ ಹಾಕಿರುವುದಕ್ಕೂ ಬಿಗ್‌ಬಾಸ್ ಶೋಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನೇತೃತ್ವದಲ್ಲಿ ಜಾಲಿವುಡ್ ಸ್ಟುಡಿಯೋದ ಸಿ ಗೇಟ್ ಓಪನ್ ಮಾಡಲಾಗಿದೆ. ಈ ಗೇಟ್ ಮೂಲಕ ಸ್ಪರ್ಧಿಗಳನ್ನು ಮನೆಯೊಳಗೆ ಬಿಡಲಾಗಿದೆ.
ಕೇವಲ ಬಿಗ್ ಬಾಸ್ ಶೋಗೆ ಮಾತ್ರವೇ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಾಲಿವುಡ್ ಸ್ಟುಡಿಯೋನಲ್ಲಿ ಇನ್ಯಾವುದೇ ಚಟುವಟಿಕೆಗೆ ಸದ್ಯಕ್ಕೆ ಅವಕಾಶ ನೀಡಲಾಗಿಲ್ಲ. ಮುಂಜಾನೆ 4 ಗಂಟೆ ಸುಮಾರಿಗೆ ರೆಸಾರ್ಟ್ನಿಂದ ಎಲ್ಲ 17 ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ತಂದು ಬಿಡಲಾಗಿದೆ. ಕಾರಿನ ಗಾಜಿಗೆ ಕಪ್ಪು ಬಟ್ಟೆ ಹಾಕಿ, ಯಾರಿಗೂ ಸ್ಪರ್ಧಿಗಳು ಕಾಣದಂತೆ ಹಾಗೂ ಸ್ಪರ್ಧಿಗಳಿಗೂ ಹೊರಗಿನದ್ದು ಏನೂ ಕಾಣದಂತೆ ಕರೆದುಕೊಂಡು ಬರಲಾಗಿದೆ. ಇದೀಗ ದೊಡ್ಮನೆಯಲ್ಲಿ ಮತ್ತೆ ಆಟ ಶುರುವಾಗಿದೆ.
ಇನ್ನು ಜಾಲಿವುಡ್ ಸ್ಟುಡಿಯೋ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಮ್ಯಾನೇಜ್ಮೆಂಟ್ ಗರಂ ಆಗಿದೆ ಎಂಬ ಮಾಹಿತಿ ಇದೆ. ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ಹಾಗೂ ಇತರೆ ವಿಚಾರಗಳನ್ನು ಗೌಪ್ಯವಾಗಿಟ್ಟಿರುವ ಜಾಲಿವುಡ್ ಆಡಳಿತ ಮಂಡಳಿ, ಎಲ್ಲಾ ಅನುಮತಿ ಇದೆ ಅಂತ ಸುಳ್ಳುಗಳನ್ನ ಹೇಳಿತ್ತು. ಇದರಿಂದ ಜಾಲಿವುಡ್ ತಂಡದ ವಿರುದ್ಧ ಬಿಗ್ ಬಾಸ್ ಆಡಳಿತ ಮಂಡಳಿ ಹರಿಹಾಯ್ದಿದೆ. ಈ ಎಲ್ಲಾ ಕಾರಣಗಳಿಂದ ಬಿಗ್ ಬಾಸ್ ಮುಂಬರುವ ಎಪಿಸೋಡ್ ಗಳಿಗೆ ತೊಂದರೆಯಾಗಿದೆ. ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಯಿತ್ತಿದೆ ಎನ್ನಲಾಗಿದೆ.