BBK 11 Final: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಕಿಚ್ಚ ಸುದೀಪ್
ಬಾದ್ ಷಾ ಕಿಚ್ಚ ಸುದೀಪರ ಬಿಗ್ ಎಂಟ್ರಿ.. ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ಶೋ ಬಿಗ್ ಬಾಸ್ನ ಅದ್ಧೂರಿ ಫಿನಾಲೆ.. ಕಿಚ್ಚ ರೆಡಿಯಾಗಾಯ್ತು.. ಕಿಚ್ಚೆಬ್ಬೊಸೊ ರಿಸಲ್ಟ್ ಮಾತ್ರ ಬಾಕಿ.. ಎಂದು ಪ್ರೊಮೋದಲ್ಲಿದೆ.
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 (Bigg Boss Kannada 11) ಶುರುವಾಗಿ ಇಂದಿಗೆ 117 ದಿನಗಳನ್ನು ಕಳೆದಿವೆ. ಸ್ವರ್ಗ-ನರಕ ಕಾನ್ಸೆಪ್ಟ್ನೊಂದಿಗೆ ಶುರುವಾದ ಬಿಗ್ ಬಾಸ್ ಕನ್ನಡ ಸೀಸನ್ 11 20 ಸ್ಪರ್ಧಿಗಳೊಂದಿಗೆ ಶುರುವಾಯಿತು. ಆ 20 ಸ್ಪರ್ಧಿಗಳಲ್ಲಿ ಈಗ ಬಿಗ್ ಬಾಸ್ ಮನೆಯಲ್ಲಿ 6 ಫೈನಲಿಸ್ಟ್ಗಳು ಇದ್ದಾರೆ. ಇಂದು ಗ್ರ್ಯಾಂಡ್ ಫಿನಾಲೇ ನಡೆಯಲಿದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಇಂದು ಬಿಬಿಕೆ 11 ಫಿನಾಲೆ ನಡೆಯಲಿದೆ. ಇದು ಸುದೀಪ್ ಅವರ ಕೊನೆಯ ಬಿಗ್ ಬಾಸ್ ಕೂಡ ಹೌದು. ಇದಕ್ಕಾಗಿ ಕಲರ್ಸ್ ಕನ್ನಡ ಅದ್ಧೂರಿ ಸೆಟ್ ನಿರ್ಮಿಸಿದೆ. ಈ ಮನಮೋಹಕ ಸೆಟ್ನಲ್ಲಿ ಕಿಚ್ಚ ಸುದೀಪ್ ಸಖತ್ ಸ್ಟೆಪ್ಸ್ ಹಾಕಿ ಮನರಂಜಿಸಿದ್ದಾರೆ.
ಹೌದು, ಕಲರ್ಸ್ ಕನ್ನಡ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆಯ ಇಂದಿನ ಪ್ರೊಮೊವನ್ನು ಅನಾವರಣ ಮಾಡಿದೆ. ಬಾದ್ ಷಾ ಕಿಚ್ಚ ಸುದೀಪರ ಬಿಗ್ ಎಂಟ್ರಿ.. ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ಶೋ ಬಿಗ್ ಬಾಸ್ನ ಅದ್ಧೂರಿ ಫಿನಾಲೆ.. ಕಿಚ್ಚ ರೆಡಿಯಾಗಾಯ್ತು.. ಕಿಚ್ಚೆಬ್ಬೊಸೊ ರಿಸಲ್ಟ್ ಮಾತ್ರ ಬಾಕಿ.. ಎಂದು ಪ್ರೊಮೋದಲ್ಲಿದೆ.
ವಿಶೇಷ ಎಂದರೆ ಕಿಚ್ಚ ಸ್ಟೇಜ್ ಮೇಲೆ ಮಿನುಗುವ ಡ್ರೆಸ್ ತೊಟ್ಟು ಬಂದಿದ್ದು, ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಸುದೀಪ್ ಅವರು ಸಾಮಾನ್ಯವಾಗಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡೋದಿಲ್ಲ. ಹಿಂದಿನ ಸೀಸನ್ಗಳ ಉದ್ಘಾಟನೆ ಮತ್ತು ಫಿನಾಲೆ ಕಾರ್ಯಕ್ರಮದಲ್ಲಿ ಬ್ಯಾಕ್ಗ್ರೌಂಡ್ ಡ್ಯಾನ್ಸರ್ಸ್ ಮಾತ್ರ ನೃತ್ಯ ಮಾಡುತ್ತಿದ್ದರು. ಸುದೀಪ್ ಅವರ ನಡುವಲ್ಲಿ ನಿಂತಿರುದ್ದರಷ್ಟೆ. ಆದರೆ, ಈ ಬಾರಿ ಮ್ಯಾಕ್ಸ್ ಸಿನಿಮಾದ ಹಾಡಿಗೆ ಕೂಲ್ ಸ್ಟೆಪ್ಸ್ ಹಾಕಿ ಮಿಂಚಿದ್ದಾರೆ.
ಹೀಗೆ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಇಂದು ಜನವರಿ 25 ಹಾಗೂ ನಾಳೆ 26ರಂದು ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಮೂಲಗಳ ಪ್ರಕಾರ ಇಂದು ಎರಡು ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಜನವರಿ 26ರ ಭಾನುವಾರ ಬಿಗ್ ಬಾಸ್ ಸೀಸನ್ 11 ಕಪ್ ಗೆದ್ದವರು ಯಾರು ಅನ್ನೋದು ಗೊತ್ತಾಗಲಿದೆ. ಭಾನುವಾರ ಗಣರಾಜ್ಯೋತ್ಸವ ಇದೆ. ಈ ವಿಶೇಷ ದಿನದಂದೇ ವಿನ್ನರ್ ಘೋಷಣೆ ಆಗಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಫೈನಲ್ನಲ್ಲಿ ಮೋಕ್ಷಿತಾ ಪೈ, ತ್ರಿವಿಕ್ರಮ್, ಹನುಮಂತ, ಉಗ್ರಂ ಮಂಜು, ಭವ್ಯಾ ಗೌಡ, ರಜತ್ ಇದ್ದಾರೆ. ಇವರಲ್ಲಿ ಒಬ್ಬರಷ್ಟೆ ವಿಜೇತರಾಗಿ ಹೊರಹೊಮ್ಮಲಿದ್ದಾರೆ. ಆ ವಿಜೇತ ಯಾರಾಗಲಿದ್ದಾರೆ ಎಂಬುದನ್ನು ಜನರ ಮತಗಳು ನಿರ್ಧಾರ ಮಾಡುತ್ತವೆ. ಬಿಗ್ ಬಾಸ್ ಮನೆಯಲ್ಲಿ ಉಳಿದ 6 ಸ್ಪರ್ಧಿಗಳಲ್ಲಿ ಒಬ್ಬರಿಗೆ ಸೀಸನ್ 11ರ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಇದರ ಜೊತೆಗೆ ಸ್ಪಾನ್ಸರ್ಸ್ ಕಡೆಯಿಂದ ಒಂದಿಷ್ಟು ಗಿಫ್ಟ್ ಹ್ಯಾಂಪರ್ಸ್ ಮತ್ತು ಸಣ್ಣ ಮೊತ್ತ ಪಡೆಯಲಿದ್ದಾರೆ.
ಬಿಬಿಕೆ 11ನ ಪ್ರತಿ ದಿನ ಎಪಿಸೋಡ್ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿತ್ತು. ವೀಕೆಂಡ್ ಎಪಿಸೋಡ್ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತಿತ್ತು. ಆದರೆ, ಫಿನಾಲೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಯಿಂದ ಫಿನಾಲೆ ಪ್ರಸಾರ ಆರಂಭ ಆಗಲಿದೆ. ಆನ್ಲೈನ್ನಲ್ಲಿ ನೋಡಲು ಇಚ್ಚಿಸುವವರು ಜಿಯೋ ಸಿನಿಮಾದಲ್ಲಿ ಲೈವ್ ವೀಕ್ಷಿಸಬಹುದು.
BBK 11: ಇಂದು ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ: ಎಷ್ಟು ಗಂಟೆಗೆ?, ಆನ್ಲೈನ್ನಲ್ಲಿ ನೋಡೋದು ಹೇಗೆ?