BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ಹನುಮಂತನ ಹುಡುಗಿ ವಿಚಾರ ಮಾತನಾಡಿದ ಸುದೀಪ್
ಹನುಮಂತನ ವಿಚಾರಕ್ಕೆ ಬಂದ ಸುದೀಪ್, ಹನುಮಂತಣ್ಣ ಈ ಫಿನಾಲೆ ವೀಕ್ಗೆ ಬಂದು ಕೂತಿದ್ದೀರಿ ಅಲ್ವಾ ನಿಮ್ಮ ಹುಡುಗಿಗೆ ಎಷ್ಟು ಖುಷಿ ಇರಬಹುದು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಹನುಮಂತ ನಾಚಿ ನೀರಾಗಿದ್ದಾರೆ. ಬಳಿಕ ಹನುಮಂತನ ತಾಯಿ ಜೊತೆ ಮಾತನಾಡಿದ ಸುದೀಪ್.. ನಿಮಗೆ ಒಪ್ಪಿಗೆ ಇದೆಯಲ್ವಾ ಇದು ಎಂದು ಕೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಗ್ರ್ಯಾಂಡ್ ಫಿನಾಲೆ ಶುರುವಾಗಿದೆ. ಇದರ ಮೊದಲ ಕಂತು ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಸಾರ ಕಾಣಲಿದೆ. 20 ಸ್ಪರ್ಧಿಗಳೊಂದಿಗೆ- ಸ್ವರ್ಗ-ನರಕ ಕಾನ್ಸೆಪ್ಟ್ನೊಂದಿಗೆ ಶುರುವಾದ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈಗ 6 ಫೈನಲಿಸ್ಟ್ಗಳು ಇದ್ದಾರೆ. ಇಂದು ಮತ್ತು ನಾಳೆ ಗ್ರ್ಯಾಂಡ್ ಫಿನಾಲೇ ನಡೆಯಲಿದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಇಂದು ಬಿಬಿಕೆ 11 ಫಿನಾಲೆ ನಡೆಯಲಿದೆ. ಇದು ಸುದೀಪ್ ಅವರ ಕೊನೆಯ ಬಿಗ್ ಬಾಸ್ ಕೂಡ ಹೌದು. ಇದೀಗ ಕಲರ್ಸ್ ಕನ್ನಡ ಫಿನಾಲೆ ಎಪಿಸೋಡ್ನ ಸಣ್ಣ ತುಣುಕನ್ನು ಬಿಡುಗಡೆ ಮಾಡಿದೆ.
ಮತ್ತೊಂದು ಮೈಲಿಗಲ್ಲು, ಮುರಿಯಲಾಗದ ದಾಖಲೆ.. ಇದು ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆ ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್ ಕನ್ನಡ ಪ್ರೊಮೊ ಹಂಚಿಕೊಂಡಿದೆ. ಅದ್ಧೂರಿ ಸೆಟ್ನಲ್ಲಿ ಕಿಚ್ಚ ಸುದೀಪ್ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀಸನ್ ದಾಟದೆ ಇರುವಂತಹ ದಾಖಲೆಗಳೇ ಇಲ್ಲ.. ಮುಟ್ಟದೆ ಇರುವಂತಹ ಮೈಲಿಗಲ್ಲುಗಳಿಲ್ಲ.. ವೆಕ್ಕಪ್ ಟು ದಿ ಗ್ರ್ಯಾಂಡ್ ಫಿನಾಲೆ ಎಂದು ಕಿಚ್ಚ ಸುದೀಪ್ ಎಲ್ಲರನ್ನೂ ಸ್ವಾಗತ ಮಾಡಿದ್ದಾರೆ.
ಆ ಬಳಿಕ ಸ್ಪರ್ಧಿಗಳ ಜೊತೆ ಮಾತನಾಡಿದ ಸುದೀಪ್ ಮೊದಲಿಗೆ ರಜತ್ ಅವರ ಕಾಲೆಳೆದಿದ್ದಾರೆ. ರಜತ್ಗೆ ಸುದೀಪ್ ಅವರು ತಾಯಿ ನಾಡಿನ ಮಗ ಎಂದು ಹೇಳಿದ್ದಾರೆ. ಆಗ ಇದಕ್ಕೆ ಪ್ರತಿಕ್ರಿಯಿಸಿದ ರಜತ್ ತಾಯಿ, ತಾಯಿ ನಾಡಿನ ಮಗ ಅಂದ್ರೆ ದೇಶಕ್ಕೋಸ್ಕರ ಹೋರಾಡುವ ಮಗ ಅಂದುಕೊಂಡಿದ್ದೆ ಸರ್ ಎಂದು ಹೇಳಿದ್ದಾರೆ. ಇದನ್ನು ಕೇಳಿ ನಗುತಡೆಯಲಾಗದ ಸುದೀಪ್ ಹೋ.. ಭ್ರಮೆ ಎಂದು ಹೇಳಿದ್ದಾರೆ.
ಇನ್ನು ಹನುಮಂತನ ವಿಚಾರಕ್ಕೆ ಬಂದ ಸುದೀಪ್, ಹನುಮಂತಣ್ಣ ಈ ಫಿನಾಲೆ ವೀಕ್ಗೆ ಬಂದು ಕೂತಿದ್ದೀರಿ ಅಲ್ವಾ ನಿಮ್ಮ ಹುಡುಗಿಗೆ ಎಷ್ಟು ಖುಷಿ ಇರಬಹುದು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಹನುಮಂತ ನಾಚಿ ನೀರಾಗಿದ್ದಾರೆ. ಬಳಿಕ ಹನುಮಂತನ ತಾಯಿ ಜೊತೆ ಮಾತನಾಡಿದ ಸುದೀಪ್.. ನಿಮಗೆ ಒಪ್ಪಿಗೆ ಇದೆಯಲ್ವಾ ಇದು ಎಂದು ಕೇಳಿದ್ದಾರೆ. ಇದಕ್ಕೆ ಅವರು ಇಲ್ರೀ ಪಾ.. ಅಂದಿದ್ದಾರೆ. ಆಗ ಸುದೀಪ್ ಅವರು, ಅವ್ರು ಹೆಣ್ಣನ್ನ ನೋಡಿದ್ದಾರೆ.. ನೀವು ಹಿಂದೆ ಗಲಾಟೆ ಮಾಡಿದ್ರೆ ಮತ್ತೆ ಗಂಡುನ ನೋಡ್ತಾರೆ ಎಂದು ಕಾಲೆಳೆದಿದ್ದಾರೆ.
ಇನ್ನು ಕಿಚ್ಚ ಸುದೀಪ್ ಸ್ಟೇಜ್ ಮೇಲೆ ಬರುತ್ತಿದ್ದಂತೆ ಸಖತ್ ಸ್ಟೆಪ್ಸ್ ಹಾಕಿ ಮನರಂಜಿಸಿದ್ದಾರೆ. ಕಿಚ್ಚ ಸ್ಟೇಜ್ ಮೇಲೆ ಮಿನುಗುವ ಡ್ರೆಸ್ ತೊಟ್ಟು ಬಂದಿದ್ದು, ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಸುದೀಪ್ ಅವರು ಸಾಮಾನ್ಯವಾಗಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡೋದಿಲ್ಲ. ಹಿಂದಿನ ಸೀಸನ್ಗಳ ಉದ್ಘಾಟನೆ ಮತ್ತು ಫಿನಾಲೆ ಕಾರ್ಯಕ್ರಮದಲ್ಲಿ ಬ್ಯಾಕ್ಗ್ರೌಂಡ್ ಡ್ಯಾನ್ಸರ್ಸ್ ಮಾತ್ರ ನೃತ್ಯ ಮಾಡುತ್ತಿದ್ದರು. ಸುದೀಪ್ ಅವರ ನಡುವಲ್ಲಿ ನಿಂತಿರುತ್ತಿದ್ದರಷ್ಟೆ. ಆದರೆ, ಈ ಬಾರಿ ಮ್ಯಾಕ್ಸ್ ಸಿನಿಮಾದ ಹಾಡಿಗೆ ಕೂಲ್ ಸ್ಟೆಪ್ಸ್ ಹಾಕಿ ಮಿಂಚಿದ್ದಾರೆ.
BBK 11 Final: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಕಿಚ್ಚ ಸುದೀಪ್