ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kwatle Kitchen: ಮಜಾ ಟಾಕೀಸ್ ಜಾಗಕ್ಕೆ ಹೊಸ ಶೋ ಎಂಟ್ರಿ: ಬರುತ್ತಿದೆ ಕ್ವಾಟ್ಲೆ ಕಿಚನ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಶೋ ಕ್ವಾಟ್ಲೆ ಕಿಚನ್ ಸದ್ಯದಲ್ಲೇ ಶುರುವಾಗಲಿದೆ. ಹೆಸರೇ ಸೂಚಿಸುವಂತೆ ಇದೊಂದು ತಮಾಷೆಯ ಕುಕ್ಕಿಂಗ್ ಶೋ ಆಗಿದೆ. ಜೂನ್ 14 ರಿಂದ ಶನಿ-ಭಾನು ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣಲಿದೆ.

ಮಜಾ ಟಾಕೀಸ್ ಜಾಗಕ್ಕೆ ಹೊಸ ಶೋ ಎಂಟ್ರಿ: ಬರುತ್ತಿದೆ ಕ್ವಾಟ್ಲೆ ಕಿಚನ್

Kwatle Kitchen

Profile Vinay Bhat Jun 7, 2025 7:23 AM

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ವೀಕೆಂಡ್​ನಲ್ಲಿ ಶುರುವಾದ ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ (Maja Talkies) ಕಳೆದ ವೀಕೆಂಡ್ ಮುಕ್ತಾಯಗೊಂಡಿದೆ. ಕೇವಲ 32 ಎಪಿಸೋಡ್​ಗೆ ಮಜಾ ಟಾಕೀಸ್ ಎಂಡ್ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಮಜಾ ಟಾಕೀಸ್ ಪ್ರಸಾರ ಕಾಣುತ್ತಿತ್ತು. ಈ ಶೋ ಮುಗಿದ ಬಳಿಕ ಈ ಸಮಯಕ್ಕೆ ಯಾವ ಕಾರ್ಯಕ್ರಮ ಪ್ರಸಾರ ಕಾಣಲಿದೆ ಎಂಬುದು ಕುತೂಹಲ ಕೆರಳಿಸಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಶೋ ಕ್ವಾಟ್ಲೆ ಕಿಚನ್ ಸದ್ಯದಲ್ಲೇ ಶುರುವಾಗಲಿದೆ. ಹೆಸರೇ ಸೂಚಿಸುವಂತೆ ಇದೊಂದು ತಮಾಷೆಯ ಕುಕ್ಕಿಂಗ್​ ಶೋ ಆಗಿದೆ. ಮಜಾ ಟಾಕೀಸ್​ನಲ್ಲಿರುವ ಕುರಿ ಪ್ರತಾಪ್ ಹಾಗೂ ಬಾಯ್ಸ್ vs ಗರ್ಲ್ಸ್​ನ ನಿರೂಪಕಿ ಅನುಪಮ ಗೌಡ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ವಾಟ್ಲೆ ಕಿಚನ್ ಸರಣಿಯಲ್ಲಿ ಅಡುಗೆ ಬರುವವರು ಹಾಗೂ ಬರದೇ ಇರುವವರು ಎಲ್ಲರೂ ಭಾಗವಹಿಸಲಿದ್ದಾರೆ. ಜೂನ್ 14 ರಿಂದ ಶನಿ-ಭಾನು ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣಲಿದೆ.

ಕಲರ್ಸ್ ವಾಹಿನಿಯ ಹಿಂದಿ ಭಾಷೆಯಲ್ಲಿ ಫೇಮಸ್​ ಆಗಿರೋ Laughter Chefs ನ ಕನ್ನಡಕ್ಕೆ ತರಲಾಗಿದ್ದು, ಅಲ್ಲಿ ಹಾಸ್ಯ ಕಲಾವಿದೆ ಭಾರತಿ ಶೋ ನಡೆಸಿ ಕೊಡುತ್ತಿದ್ದಾರೆ. ಈ ಒಂದು ಶೋದಲ್ಲಿ ಅಡುಗೆ ಮಾಡೋದಷ್ಟೆ ಅಲ್ಲ, ಫನ್ ಕಂಟೆಂಟ್ ಕೂಡ ಇರುತ್ತದೆ. ಇದೊಂದು ಪಕ್ಕಾ ಫನ್​ ಶೋ. ಜೊತೆಗೆ ರುಚಿ.. ರುಚಿ ಅಡುಗೆಯ ಗಮ್ಮತ್ತು. ಇದೇ ಕ್ವಾಟ್ಲೆ ಕಿಚನ್​ ರೂಪದಲ್ಲಿ ನೋಡುಗರಿಗೆ ಭರ್ಜರಿ ಭೋಜನದ ಮನರಂಜನೆಯ ರಸದೌತಣ ನೀಡಲಿದೆ.

ಕ್ವಾಟ್ಲೆ ಕಿಚನ್‌ ಶೋನಲ್ಲಿ ಅನುಪಮಾ ಗೌಡ ಮತ್ತು ಕುರಿ ಪ್ರತಾಪ್ ಜೊತೆಗೆ ಹಿರಿಯ ನಟಿ ಶ್ರುತಿ ಅವರು ಕೂಡ ಪ್ರಧಾನವಾಗಿ ಇರಲಿದ್ದಾರೆ. ಹಾಗೆಯೆ ಸ್ಟಾರ್ ಸುವರ್ಣ ವಾಹಿನಿಯ ನೀನಾದೆ ನಾ ಧಾರಾವಾಹಿ ನಟ ದಿಲೀಪ್ ಶೆಟ್ಟಿ, ಸೋನಿ, ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, ಶರ್ಮಿತಾ ಶೆಟ್ಟಿ ಇವರೆಲ್ಲಾ ಈ ಶೋನಲ್ಲಿ ಇದ್ದಾರೆ. ಈ ಶೋನ ಪೋಸ್ಟರ್‌ನಲ್ಲಿ ತುಕಾಲಿ ಸಂತು, ನಿವೇದಿತಾ ಗೌಡ, ಬಿಗ್ ಬಾಸ್ ಧನರಾಜ್ ಆಚಾರ್, ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್, ವಾಣಿ ಕೂಡ ಇದ್ದಾರೆ.

Shobha Shetty: ದೀಪಿಕಾ ದಾಸ್ ಬೆನ್ನಲ್ಲೇ ಸೋಷಿಯಲ್ ಮೀಡಿಯಾಕ್ಕೆ ಗುಡ್ ಬೈ ಹೇಳಿದ ಶೋಭಾ ಶೆಟ್ಟಿ: ಏನಾಯ್ತು?