Smriti Irani: ಒಂದು ಎಪಿಸೋಡ್ಗೆ ಸ್ಮೃತಿ ಇರಾನಿ ಪಡೆಯುವ ಸಂಭಾವನೆ ಎಷ್ಟು ಲಕ್ಷ ಗೊತ್ತೇ?
ಬಹುಸಮಯದ ಬಳಿಕ ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಕಿರುತೆರೆಗೆ ಕಂಬ್ಯಾಕ್ ಆಗಿದ್ದು ವೀಕ್ಷಕರನ್ನು ರಂಜಿಸಲಿದ್ದಾರೆ. ಮೊನ್ನೆಯಷ್ಟೆ ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥೀ ಧಾರವಾಹಿಯ ಫಸ್ಟ್ ಲುಕ್ ಕೂಡ ರಿಲೀಸ್ ಆಗಿತ್ತು. ಕ್ಯೂಂಕಿ ಸಾಸ್ ಭೀ ಕಭಿ ಬಹು ಥೀ ಸೀಸನ್ 2 ಧಾರವಾಹಿ ಜುಲೈ 29 ರಿಂದ ರಾತ್ರಿ 10.30ಕ್ಕೆ ಸ್ಟಾರ್ ಪ್ಲಸ್ನಲ್ಲಿ ಪ್ರಸಾರವಾಗಲಿದೆ.

smriti irani serial

ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ (Smriti Irani) ಅವರು ರಾಜಕೀಯ ಮಾತ್ರವಲ್ಲದೆ ಕಿರುತೆರೆ ಹಿರಿತೆರೆಯಲ್ಲಿಯೂ ಸಾಕಷ್ಟು ಪ್ರಸಿದ್ಧಿಯನ್ನು ಪಡೆದವರು. ಒಂದು ಕಾಲದಲ್ಲಿ ಸಿನಿಮಾ ಹಾಗೂ ಧಾರವಾಹಿಯಲ್ಲಿ ಬಹುಬೇಡಿಕೆ ಹೊಂದಿದ್ದ ಇವರು ರಾಜಕೀಯಕ್ಕೆ ಬಂದ ಬಳಿಕ ನಟನೆಯಿಂದ ದೂರ ಉಳಿದರು. ಆದರೆ ಈಗ ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥೀ ಸೀಸನ್ 2 ಧಾರವಾಹಿ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ.
ಬಹುಸಮಯದ ಬಳಿಕ ಸ್ಮೃತಿ ಕಿರುತೆರೆಗೆ ಕಂಬ್ಯಾಕ್ ಆಗಿದ್ದು ವೀಕ್ಷಕರನ್ನು ರಂಜಿಸಲಿದ್ದಾರೆ. ಮೊನ್ನೆಯಷ್ಟೆ ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥೀ ಧಾರವಾಹಿಯ ಫಸ್ಟ್ ಲುಕ್ ಕೂಡ ರಿಲೀಸ್ ಆಗಿತ್ತು. ಕ್ಯೂಂಕಿ ಸಾಸ್ ಭೀ ಕಭಿ ಬಹು ಥೀ ಸೀಸನ್ 2 ಧಾರವಾಹಿ ಜುಲೈ 29 ರಿಂದ ರಾತ್ರಿ 10.30ಕ್ಕೆ ಸ್ಟಾರ್ ಪ್ಲಸ್ನಲ್ಲಿ ಪ್ರಸಾರವಾಗಲಿದೆ.
ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥೀ ಧಾರವಾಹಿ 2000 ನೇ ವರ್ಷದಲ್ಲಿ ಆರಂಭವಾಗಿದ್ದು ಇದೇ ಧಾರಾವಾಹಿಯಲ್ಲಿ ಸ್ಮೃತಿ ಇರಾನಿ ಅವರು ತುಳಸಿ ವೀರ್ವಾನಿ ಪಾತ್ರದಲ್ಲಿ ಅಭಿನಯಿಸಿ ಜನ ಮನಗೆದ್ದಿದ್ದರು. ಸತತ 7ವರ್ಷ ಈ ಧಾರವಾಹಿ ನಂಬರ್ ಒನ್ ಎಂಬ ಖ್ಯಾತಿ ಪಡೆದು 2008ರಲ್ಲಿ ಮುಕ್ತಾಯ ಗೊಂಡಿತು.
Bhagya Lakshmi Serial: ನೋವಿನಿಂದ ಮನೆಬಿಟ್ಟು ಬಂದ ಕಿಶನ್: ಭಾಗ್ಯ ಮನೆಯಲ್ಲೇ ವಾಸ?
ಕೆಲವು ದಿನಗಳ ಹಿಂದಷ್ಟೇ ಸ್ಮೃತಿ ಇರಾನಿ ಅವರು ಈ ಧಾರಾವಾಹಿಯ 25ನೇ ವರ್ಷವನ್ನು ಸಂಭ್ರಮಿಸಿ ಪೋಸ್ಟ್ ಹಂಚಿಕೊಂಡಿದ್ದರು. ಇದೀಗ ಅದೇ ಧಾರವಾಹಿ ಸೀಸನ್ 2 ಬರುತ್ತಿದೆ. ಇದರ ಬೆನ್ನಲ್ಲೇ ಈ ಧಾರಾವಾಹಿಗೆ ಸ್ಮೃತಿ ಇರಾನಿ ಅವರ ಸಂಭಾವನೆ ಎಷ್ಟು ಎಂಬ ಚರ್ಚೆ ಕೂಡ ನಡೆಯುತ್ತಿದೆ.
2000ನೇ ಇಸವಿಯಲ್ಲಿ ಸ್ಮೃತಿ ಇರಾನಿ ಅವರು ಒಂದು ಎಪಿಸೋಡ್ ನಟನೆಗೆ 1,800 ರೂಪಾಯಿ ಪಡೆಯುತ್ತಿದ್ದರು. ಈಗ 2025ರಲ್ಲಿ ಅದೇ ಧಾರಾವಾಹಿಯಲ್ಲಿ ಒಂದು ಎಪಿಸೋಡ್ ನಟನೆಗೆ ಬರೋಬ್ಬರಿ 14 ಲಕ್ಷ ರೂಪಾಯಿ ಹಣವನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮದಲ್ಲಿ ವರದಿ ಆಗಿದೆ.