Bigg Boss Telugu: ಬಿಗ್ ಸರ್ಪ್ರೈಸ್: ಬಿಗ್ ಬಾಸ್ ತೆಲುಗು ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಂಜನಾ ಗಲ್ರಾನಿ
ಬಿಗ್ ಬಾಸ್ ತೆಲುಗು ಸೀಸನ್ 9ರ 10ನೇ ಸ್ಪರ್ಧಿಯಾಗಿ ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಮದುವೆ, ಮಗು ಆದ ಮೇಲೆ ಸಂಜನಾ ತೆರೆ ಮರೆಗೆ ಸರಿದಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಆಕ್ಟಿವ್ ಆಗಿದ್ದ ಈ ನಟಿ ದಿಢೀರನೇ ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

sanjana galrani bigg boss telugu -

ಭಾರತದ ಪ್ರಸಿದ್ಧ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಹಿಂದಿ (Bigg Boss), ಮಲಯಾಳಂನಲ್ಲಿ ಈಗಾಗಲೇ ಶುರುವಾಗಿದೆ. ಕನ್ನಡದಲ್ಲಿ ಇದೇ ಸಪ್ಟೆಂಬರ್ 28ಕ್ಕೆ ಚಾಲನೆ ಸಿಗಲಿದೆ. ಇದೀಗ ಸೆಪ್ಟೆಂಬರ್ 7 ರಂದು ತೆಲುಗಿನಲ್ಲಿ ಕೂಡ ಬಿಗ್ ಬಾಸ್ ಆರಂಭವಾಗಿದೆ. ಬಿಗ್ ಬಾಸ್ ತೆಲುಗು ಸೀಸನ್ 9 ಅನ್ನು ಕಿಂಗ್ ಅಕ್ಕಿನೇನಿ ನಾಗಾರ್ಜುನ ನಿರೂಪಕರಾಗಿ ನಡೆಸಿಕೊಡುತ್ತಿದ್ದಾರೆ. ಸದ್ಯ ಈ ದೊಡ್ಮನೆಯೊಳಗೆ 15 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಎಂದರೆ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಕೂಡ ಸ್ಪರ್ಧಿಯಾಗಿ ತೆಲುಗು ಬಿಗ್ ಬಾಸ್ ಪ್ರವೇಶಿಸಿದ್ದಾರೆ.
ಹೌದು, ಬಿಗ್ ಬಾಸ್ ತೆಲುಗು ಸೀಸನ್ 9ರ 10ನೇ ಸ್ಪರ್ಧಿಯಾಗಿ ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಮದುವೆ, ಮಗು ಆದ ಮೇಲೆ ಸಂಜನಾ ತೆರೆ ಮರೆಗೆ ಸರಿದಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಆಕ್ಟಿವ್ ಆಗಿದ್ದ ಈ ನಟಿ ದಿಢೀರನೇ ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. 4 ತಿಂಗಳ ಹಸುಗೂಸು ಹಾಗೂ ಪುಟ್ಟ ಮಗನನ್ನ ಬಿಟ್ಟು ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಸಂಜನಾ ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಅವರ ತಂದೆ - ತಾಯಿ ಮನೆಯಲ್ಲಿದ್ದು ಮಗುವನ್ನ ನೋಡಿಕೊಳ್ಳುವಾಗಿ ತಿಳಿಸಿದ್ದಾರಂತೆ. ‘‘ನಾನು ಬಿಗ್ ಬಾಸ್ ಮನೆಯಲ್ಲಿ ಇರುವ ಅವಧಿಯಲ್ಲಿ ನನ್ನ ಮಕ್ಕಳನ್ನ ನೋಡಿಕೊಳ್ಳಲು ಒಟ್ಟು 13 ಜನರು ಮನೆಯಲ್ಲಿ ನೆಲೆಸುವಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದೇನೆ’’ ಎಂದು ವೇದಿಕೆ ಮೇಲೆ ಸಂಜನಾ ಹೇಳಿದರು.
ಸಂಜನಾ ಗಲ್ರಾನಿ ಕನ್ನಡಿಗರಿಗಷ್ಟೇ ಅಲ್ಲ, ತೆಲುಗು ಮಂದಿಗೂ ಪರಿಚಯವಿದೆ. ಡಾರ್ಲಿಂಗ್ ಪ್ರಭಾಸ್ ನಟಿಸಿದ್ದ ಬುಜ್ಜಿಗಾಡು ಸಿನಿಮಾದಲ್ಲಿ ಸಂಜನಾ ಗಲ್ರಾನಿ ಸೆಕೆಂಡ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದರು. ಪವನ್ ಕಲ್ಯಾಣ್ ನಟನೆಯ ಗಬ್ಬರ್ ಸಿಂಗ್, ದುಶ್ಯಾಸನ, ಯಮಹೋ ಯಮ, ಪೊಲೀಸ್ ಪೊಲೀಸ್, 2 ಕಂಟ್ರೀಸ್ ಇನ್ನೂ ಕೆಲ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕವೇ ತೆಲುಗು ಪ್ರೇಕ್ಷಕರಿಗೂ ಇಷ್ಟವಾಗಿದ್ದರು. ಕನ್ನಡ ಸೇರಿದಂತೆ ತೆಲುಗು, ತಮಿಳು, ಭಾಷೆಗಳಲ್ಲೂ ನಟಿಸಿರುವುದರಿಂದ ದಕ್ಷಿಣ ಭಾರತದ ಸಿನಿಪ್ರಿಯರಿಗೆ ಪರಿಚಯವಿದೆ. ಈ ಹಿಂದೆ ಕನ್ನಡ ಬಿಗ್ ಬಾಸ್ನ ಮೊದಲ ಸೀಸನ್ನಲ್ಲೂ ಇವರು ಭಾಗವಹಿಸಿದ್ದರು.
ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವ ಮುನ್ನ ಸಂಜನಾ ಗಲ್ರಾನಿ ಭಾವುಕರಾಗಿದ್ದರು. ತನ್ನ ವೃತ್ತಿ ಜೀವನದ ಬಗ್ಗೆ ನೆನೆದು ಸಂಜನಾ ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಮಾತಾಡಿದ್ದಾರೆ. ಡ್ರಗ್ಸ್ ಕೇಸ್‌ನಲ್ಲಿ ಸಂಜನಾ ಗಲ್ರಾನಿ ಬಂಧನವಾಗಿ ಜೈಲಿ ಸೇರಿದ್ದು, ನಂತರ ಜೀವನದ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ. ಅನಾವಶ್ಯಕವಾಗಿ ಡ್ರಗ್ಸ್ ಕೇಸ್‌ನಲ್ಲಿ ತಮ್ಮನ್ನು ಸಿಲುಕಿಸಲಾಗಿತ್ತು.. ಜೈಲು ಸೇರಿದ ವೇಳೆ ಸಾಯಬೇಕು ಅಂತ ಅನಿಸಿತು. ಅಸಲಿ ವಿಷಯ ಗೊತ್ತಿಲ್ಲದೆ ತಮ್ಮ ಬಗ್ಗೆ ವರದಿಗಳು ಪ್ರಸಾರ ಆಗಿದ್ದವು ಎಂದು ಹೇಳಿಕೊಂಡಿದ್ದಾರೆ.
Bhagya Lakshmi Serial: ಕೊನೆಗೂ ಸಿಕ್ಕಿತು ಕಳ್ಳತನವಾದ 25 ಲಕ್ಷ: ಭಾಗ್ಯ ಹಣವನ್ನು ಏನು ಮಾಡಿದ್ಳು ಗೊತ್ತಾ?
ಇನ್ನು ತೆಲುಗು ಬಿಗ್ ಬಾಸ್ನಲ್ಲಿ ಈ ಬಾರಿಯೂ ಸಾಮಾನ್ಯರನ್ನು ಮನೆಯ ಒಳಗೆ ಕಳಿಸಲಾಗಿದೆ. ತನುಜಾ ಗೌಡ, ಫ್ಲೋರಾ ಸೈನಿ, ಕಲ್ಯಾಣ್ ಪದಲ, ಜಬರ್ದಸ್ಥ್ ಎಮಾನ್ಯುಯೆಲ್, ಶಾಸ್ತ್ರಿ ವರ್ಮ, ಹರಿತ ಹರೀಷ್, ರಿತು ಚೌಧರಿ, ಭರಣಿ ಶಂಕರ್, ಡಿಮಾನ್ ಪವನ್, ಸಂಜನಾ ಗಲ್ರಾನಿ, ರಾಮು ರಾಥೋಡ್, ಶ್ರೀಜಾ ದಮ್ಮು, ಸುಮನ್ ಶೆಟ್ಟಿ, ಪ್ರಿಯಾ ಶೆಟ್ಟಿ ಹಾಗೂ ಮನೀಷ್ ಮರ್ಯಾದ ಬಿಗ್ ಬಾಸ್ ತೆಲುಗು ಸ್ಪರ್ಧಿಗಳಾಗಿದ್ದಾರೆ.